ಕೋಲಾರ ಬಿಟ್ಟು ಬಾದಾಮಿ ಬಿಟ್ಟು ಇನ್ಯಾವುದು? ಕಡೂರು ಕ್ಷೇತ್ರ ಅಂತಿದ್ದಾರೆ ಸಿದ್ದರಾಮಯ್ಯ!

By Ravi JanekalFirst Published Mar 21, 2023, 9:25 AM IST
Highlights

ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದರೂ ಮಾಜಿ ಸಿಎಂ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಯಾವ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಾರೆ ಎಂಬುದೇ ದೊಡ್ಡ ಪ್ರಶ್ನೆಯಾಗಿ ಉಳಿದಿದೆ. ಕೋಲಾರದಲ್ಲಿ ಸ್ಪರ್ಧಿಸುತ್ತಾರೆ ಎಂದು ಹೇಳಲಾಗಿತ್ತು ಆದರೆ ಅಲ್ಲಿಂದ ಸ್ಪರ್ಧಿಸುವುದು ಬಹುತೇಕ ಸಂದೇಹವಿದ್ದು. ಇದೀಗ ಕಡೂರು ಕ್ಷೇತ್ರದಿಂದ ಸ್ಪರ್ಧಿಸಲು ನಿರ್ಧರಿಸಿದ್ದಾರೆಂದು ಹೇಳಲಾಗುತ್ತಿದೆ. 

ಚಿಕ್ಕಮಗಳೂರು (ಮಾ.21) : ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದರೂ ಮಾಜಿ ಸಿಎಂ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಯಾವ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಾರೆ ಎಂಬುದೇ ದೊಡ್ಡ ಪ್ರಶ್ನೆಯಾಗಿ ಉಳಿದಿದೆ. ಕೋಲಾರದಲ್ಲಿ ಸ್ಪರ್ಧಿಸುತ್ತಾರೆ ಎಂದು ಹೇಳಲಾಗಿತ್ತು. ಅದಕ್ಕಾಗಿ ಚುನಾವಣಾ ಪ್ರಚಾರ ಕಾರ್ಯ ಶುರುವಾಗಿತ್ತು. ಕೊನೆಗಳಿಗೆಯಲ್ಲಿ ಅದು ಸಿದ್ದರಾಮಯ್ಯಗೆ ಸೇಫ್ ಅಲ್ಲ ಎಂಬ ಸುಳಿವು ಸಿಗ್ತಿದ್ದಂತೆ ಕೋಲಾರ ಕಣದಿಂದ ಹಿಂದೆ ಸರಿದು ಬಾದಾಮಿಯಿಂದಲೇ ಸ್ಪರ್ಧಿಸುತ್ತಾರೆ ಎಂದು ಹೇಳಲಾಯಿತು. ಅಲ್ಲೂ ಗೊಂದಲ ಬಾದಾಮಿ ಇಲ್ಲ ಕುಷ್ಟಗಿಯಿಂದಲೇ ಸ್ಪರ್ಧಿಸುವುದು ಎಂದು ಹೇಳಲಾಯಿತು. ಆದರೆ ಇದೀಗ ಹೊಸದೊಂದು ಕ್ಷೇತ್ರದ ಹೆಸರು ಕೇಳಿ ಬರಲಾರಂಭಿಸಿದೆ. 

ವಿರೋಧಿಗಳ ತಂತ್ರ ಕುತಂತ್ರದಿಂದಾಗಿ ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಸೇಫ್ ಇರುವ ಕ್ಷೇತ್ರವೇ ಸಿಗುತ್ತಿಲ್ಲ. ಬಾದಾಮಿ ಬಿಟ್ರು, ವರುಣನೂ ಬಿಟ್ರೂ ಕೋಲಾರದಲ್ಲೂ ಗ್ಯಾರಂಟಿ ಇಲ್ಲ. ಇದೀಗ  ರಾಜ್ಯದಲ್ಲೇ 2ನೇ ಅತೀ ದೊಡ್ಡ ಕ್ಷೇತ್ರವಾಗಿರುವ ಕಡೂರು ಅನ್ನು ಆಯ್ದುಕೊಂಡರಾ ಸಿದ್ದರಾಮಯ್ಯ(Siddaramaiah)ನವರು? ಸಿದ್ದರಾಮಯ್ಯನವರಿಗೆ ಕಡೂರು ಕ್ಷೇತ್ರ ಸೇಫ್ ಎಂದು ಹೇಳಲಾಗಿದೆ ಅದಕ್ಕಾಗಿ ಮೆಗಾ ಸಮೀಕ್ಷೆ ಮಾಡಲಾಗಿದೆ. 

'ಹೆಸರನ್ನ ಅಲ್ಲೇ ಇಟಗೊಂಡು ಕುಂದ್ರಿ' : ಬಿಜೆಪಿ ಪ್ರಚಾರ ಸಮಿತಿಯಲ್ಲಿ ಸೇರಿಸಿದ್ದಕ್ಕೆ ಸ್ವಪಕ್ಷದ ವಿರುದ್ಧವೇ ಯತ್ನಾಳ್ ಗರಂ

ಕಡೂರು ಕ್ಷೇತ್ರ(Kadur assembly constituency)ದಲ್ಲಿ ಲಿಂಗಾಯತ ಸಮುದಾಯ ಪ್ರಥಮ ಸ್ಥಾನದಲ್ಲಿದ್ದರೆ,ಕುರುಬ ಸಮುದಾಯ(Kuruba community) ಎರಡನೇ ಸ್ಥಾನದಲ್ಲಿದೆ. ಅಹಿಂದ ಮತಗಳೇ ಹೆಚ್ಚಾಗಿದ್ದಾರೆ. ಹೀಗಾಗಿ ಕಡೂರು ಕ್ಷೇತ್ರವನ್ನೇ ಆಯ್ಕೆ ಮಾಡಿಕೊಂಡ್ರ ಸಿದ್ದರಾಮಯ್ಯ?

ಕಡೂರು ಕ್ಷೇತ್ರದ ಹಿನ್ನೆಲೆ ನೋಡೋದಾದರೆ ಕುರುಬ ಸಮುದಾಯದ ದಿಗವಂತ ಕೆ.ಎಂ ಕೃಷ್ಣಮೂರ್ತಿ ಸತತ ನಾಲ್ಕು ಬಾರೀ ವಿಧಾನಸಭೆಗೆ ಪ್ರವೇಶ ಮಾಡಿದ್ದರು. ಇನ್ನೊಂದು ಕಡೆ ತಮ್ಮ ಸಮುದಾಯದ ಜನಾಂಗದವರು ಕಡಿಮೆ ಇರುವ ಕ್ಷೇತ್ರದಲ್ಲಿ ಜಾತಿ ಲೆಕ್ಕಾಚಾರ ತಲೆಕೆಳಗೆ ಮಾಡಿದ್ದ ವೈಎಸ್‌ವಿ ದತ್ತಾ(YSV Datta) ಅವರು 2013ರಲ್ಲಿ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿಶಾಸಕರಾಗಿ ಆಯ್ಕೆ ಆಗಿದ್ದರು. ಇದೀಗ ಜೆಡಿಎಸ್ ಪಕ್ಷದಿಂದ ಹೊರಬಂದಿರುವ ದತ್ತಾ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಅಲ್ಲದೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಲ್ಲಿಂದ ಸ್ಪರ್ಧೆ ಮಾಡುವುದಕ್ಕೆ ಸಾಥ್ ನೀಡುತ್ತಿದ್ದಾರೆ. ಹೀಗಾಗಿ ಇಲ್ಲಿಂದ ಸ್ಪರ್ಧಿಸುವುದು ಸಿದ್ದರಾಮಯ್ಯಗೆ ಸೇಫ್ ಎಂದು ಹೇಳಲಾಗುತ್ತಿದೆ. 

 

ಸಿದ್ದರಾಮಯ್ಯ ಅವಧಿಯ ಟಿಡಿಆರ್‌ ಹಗರಣ: 9630 ಪುಟ ದಾಖಲೆ ಬಿಡುಗಡೆ ಎನ್‌ಆರ್ ರಮೇಶ

 2018ರ ಫಲಿತಾಂತ : 

ಒಟ್ಟು ಮತದಾರರು : 201840
ಚಲಾವಣೆಗೊಂಡ ಮತಗಳು:: 15,9844
ನೋಟಾ      1075
ಗೆಲುವಿನ ಅಂತರ :15372


1: ಕೆ ಎಸ್ ಆನಂದ :ಕಾಂಗ್ರೇಸ್   :( ಕುರುಬ )   46142
2: ವಿ ಎಸ್ ವಿ ದತ್ತಾ :ಜೆಡಿಎಸ್   : (ಬ್ರಾಹ್ಮಣ ) : 46860
3: ಬೆಳ್ಳಿ ಪ್ರಕಾಶ್   : ಬಿಜೆಪಿ     : (ಲಿಂಗಾಯಿತ )  : 62232


2023 ರಲ್ಲಿ ಒಟ್ಟು ಮತದಾರರು : 

 2ಲಕ್ಷದ 32 ಸಾವಿರದ 816
ಕಡೂರು  ವಿಧಾನ ಸಭೆಯಲ್ಲಿ ಬರುವ ಜಾತವಾರು ಅಂಕಿ ಅಂಶಗಳು: 

1; ಲಿಂಗಾಯುತ ; 54920
2; ಕುರುಬ; 42857,
3; ಪರಿಶಿಷ್ಟ ಜಾತಿ ,ಪರಿಶಿಷ್ಟ; 65500
4; ವೈಶ್ಯ ; 6000
5; ಉಪ್ಪಾರ; 22018,
6; ಒಕ್ಕಲಿಗ (ತೆಲುಗುಗೌಡ;12000 ,
7; ಮುಸ್ಲಿಂ ; 18864,
8; ದೇವಾಂಗ  ;5445, 
10 ; ತಮಿಳು ; 6432, 
15; ಬ್ರಾಹ್ಮಣ ; 2891,

click me!