ಜಮೀರ್ ಅಹ್ಮದ್ ಅರಮನೆಗೆ ಸಿದ್ದರಾಮಯ್ಯ: ಶಿಷ್ಯನಿಗೆ ಮಹತ್ವದ ಸಲಹೆ ನೀಡಿದ ಗುರು

By Suvarna NewsFirst Published Aug 15, 2021, 3:47 PM IST
Highlights

* ಮಾಜಿ ಸಚಿವ ಜಮೀರ್ ಅಹಮದ್ ನಿವಾಸಕ್ಕೆ ಸಿದ್ದರಾಮಯ್ಯ ಭೇಟಿ
* ಇಡಿ ದಾಳಿ ಬಳಿಕ ಜಮೀರ್‌ನಿಂದ ಅಂತರ ಕಾಯ್ದುಕೊಂಡಿದ್ದ ಸಿದ್ದು
* ಈ ವೇಳೆ ಜಮೀರ್ ಅಹ್ಮದ್ ಖಾನ್‌ಗೆ ಸಿದ್ದರಾಂಯ್ಯ ಮಹತ್ವದ ಸಲಹೆ

ಬೆಂಗಳೂರು, (ಆ.15): ಜಾರಿ ನಿರ್ದೇಶನಾಲಯ (ಇಡಿ) ದಾಳಿ ಬಳಿಕ ಕೊಂಚ ದೂರ ಉಳಿದಿದ್ದ ಗುರು-ಶಿಷ್ಯರು ಮತ್ತೆ ಒಂದಾಗಿದ್ದಾರೆ.

ಹೌದು... ಮಾಜಿ ಸಚಿವ ಜಮೀರ್ ಅಹಮ್ಮದ್ ನಿವಾಸಕ್ಕೆ ಇಂದು (ಆ.15) ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಭೇಟಿ ನೀಡಿದ್ದಾರೆ. 

ಇ.ಡಿ. ದಾಳಿ ಬೆನ್ನಲ್ಲೇ ಸಿದ್ದರಾಮಯ್ಯ ಹಾಗೂ ಜಮೀರ್​ ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಹೀಗಾಗಿ ಸಿದ್ದರಾಮಯ್ಯರಗೆ ಜಮೀರ್​ ಮೇಲಿದ್ದ ಪ್ರೀತಿ ಕೊಂಚ ಕಮ್ಮಿಯಾಗಿದೆ ಅಂತಾ ಹೇಳಲಾಗಿತ್ತು. ಆದರೆ ಈ ಎಲ್ಲಾ ಊಹಾಪೋಹಗಳಿಗೆ ಸಿದ್ದರಾಮಯ್ಯ ತೆರೆ ಎಳೆದಿದ್ದಾರೆ.

ಜಮೀರ್ ಮನೆಗೆ ಕೆಪಿಸಿಸಿ ಅಧ್ಯಕ್ಷ: ಇದನ್ನೇ ಮಿತ್ರತ್ವಕ್ಕೆ ಅಸ್ತ್ರ ಮಾಡಿಕೊಂಡ್ರಾ ಡಿಕೆಶಿ?

ಮೊನ್ನೇ ಅಷ್ಟೇ ಮಾಧ್ಯಮಗಳ ಎದುರೇ ಜಮೀರ್ ಕರೆ ಸ್ವೀಕರಿಸಿ ಮಾತನಾಡಿದ ಸಿದ್ದರಾಮಯ್ಯ.. 'ಎಲ್ಲಿದಿಯಪ್ಪ ನೀನು, ಆಯ್ತು ಬಾ ಪಾ ಮಾತನಾಡ್ತೇನೆ. ನಾನೇಕೆ ಅನುಮಾನ ಬೀಳಲಿ, ಮನೆಗೆ ಬಾ ಮಾತನಾಡೋಣ ಎಂದಿದ್ದರು. ಆದ್ರೆ, ಇದೀಗ ಸಿದ್ದು, ಜಮೀರ್ ಮನೆಗೆ ಹೋಗಿದ್ದಾರೆ.

ಸರ್ ನಾನು ಅಸಮಾಧಾನ ಮಾಡಿಕೊಂಡಿಲ್ಲ. ನಿಮ್ಮ ಬಗ್ಗೆ ನಾನು ತಪ್ಪು ತಿಳಿದುಕೊಂಡಿಲ್ಲ. ನೀವು ಟೆನ್ಷನ್ ಲ್ಲಿ ಇರ್ತಿರಾ ಎಂದು ಕರೆ ಮಾಡಲಿಲ್ಲ. ಐಎಂಎ ಕೇಸ್ ಲ್ಲಿ ನನ್ನ ಪಾತ್ರ ಇಲ್ಲ. ನನ್ನ ಮನೆ ಕಟ್ಟಿರುವುದು ಸಹ ಐಎಂಎ ಹಣದಿಂದ ಎಂದು ಅಪಪ್ರಚಾರ ಮಾಡ್ತಿದ್ದಾರೆ ಎಂದು  ಜಮೀರ್, ಸಿದ್ದರಾಮಯ್ಯ ಮುಂದೆ ಅಲವತ್ತುಕೊಂಡರು ಎಂದು ತಿಳಿದುಬಂದಿದೆ.

ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ನಮ್ಮ ಪಕ್ಷದವರೇ ನಮ್ಮ ನಡುವೆ ಭಿನ್ನಾಭಿಪ್ರಾಯ ಇದೆ ಎಂದು ಮಾತನಾಡ್ತಾರೆ. ನಾನು ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳಲ್ಲ ಎಂದು ಜಮೀರ್‌ಗೆ ಹೇಳಿದ್ದಾರೆ.

ಇಡಿ ಪ್ರಕರಣದ ಬಗ್ಗೆ ವಕೀಲರ ಜತೆ ಚರ್ಚೆ ಮಾಡು. ಹಿರಿಯ ವಕೀಲರನ್ನ ಸಂಪರ್ಕಿಸಿ ಸಮಸ್ಯೆ ಬಗೆಹರಿಸಿಕೋ..ತಡ ಮಾಡಬೇಡ. ಬಿಜೆಪಿ ಇಡಿ ಬಳಸಿಕೊಂಡು ನಿನ್ನ ಮೇಲೆ ರೇಡ್ ಮಾಡಿಸಿದೆ. ಎಲ್ಲ ದಾಖಲೆ ಸರಿ ಮಾಡಿಕೋ ಎಂದು ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

"

click me!