ಸ್ವಗ್ರಾಮ ಸಿದ್ದರಾಮನಹುಂಡಿಗೆ ತೆರಳಿ, ಹಾಲಿನ ಶಿಥಲೀಕರಣ ಘಟಕ, ಟಿ. ನರಸೀಪುರ ತಾಲೂಕು ಇಂಡುವಾಳಿನಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಸಮೂದಾಯ ಭವನ ಉದ್ಘಾಟಿಸಿದ ಸಿದ್ದರಾಮಯ್ಯ
ಮೈಸೂರು(ಡಿ.10): ವಿಧಾನಸಭೆ ಪ್ರತಿಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವರುಣ ಕ್ಷೇತ್ರದಲ್ಲಿ ಸತತ ಎರಡನೇ ದಿನವಾದ ಶುಕ್ರವಾರ ಕೂಡ ಮಿಂಚಿನ ಸಂಚಾರ ನಡೆಸಿದರು. ಹುಟ್ಟೂರು ಸಿದ್ದರಾಮನಹುಂಡಿ ಸೇರಿದಂತೆ ಎಲ್ಲೆಡೆ ಭರ್ಜರಿ ಸ್ವಾಗತ ಸಿಕ್ಕಿತು.
ಗುರುವಾರ ತಾಂಡವಪುರ, ಬಸವನಪುರ, ಕೆಂಪಿಸಿದ್ದನಹುಂಡಿ, ಹಿಮ್ಮಾವು, ಬೊಕ್ಕಹಳ್ಳಿ, ಹದಿನಾರು ಮೂಲಕ ಹದಿನಾರು ಮೇಳೆ ತಲುಪಿದಾಗ ತೆರೆದ ವಾಹನದಲ್ಲಿ ಮೆರವಣಿಗೆಯಲ್ಲಿ ಕರೆದ್ಯೊಯ್ದು, ಹೂವಿನ ಮಳೆ ಸುರಿಸಲಾಗಿತ್ತು. ಆ ಗ್ರಾಮದಲ್ಲಿ ಭಗೀರಥ ಭವನ, ಮಲ್ಲರಾಜಯ್ಯನಹುಂಡಿಯಲ್ಲಿ ಕನಕ ಭವನ, ಸುತ್ತೂರಿನಲ್ಲಿ ಆರೋಗ್ಯ ಕೇಂದ್ರ ಉದ್ಘಾಟಿಸಿದ್ದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನರಾಯಣ, ಮಾಜಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಶಾಸಕರಾದ ಡಾ.ಯತೀಂದ್ರ, ಡಾ.ಡಿ. ತಿಮ್ಮಯ್ಯ ಮೊದಲಾದವರು ಸಾಥ್ ನೀಡಿದ್ದರು.
undefined
ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಮುಖಂಡರಿಂದ ಗಂಭೀರ ಆರೋಪ
ಮೈಸೂರಿನಲ್ಲಿ ವಾಸ್ತವ್ಯ ಹೂಡಿದ್ದ ಅವರು ಶುಕ್ರವಾರ ಬೆಳಗ್ಗೆ ನಂಜನಗೂಡು ತಾಲೂಕಿನ ಮರಳೂರು- ಗೊದ್ದನಪುರ ಸೇತುವೆ ಉದ್ಘಾಟಿಸಿದರು. ತಾಂಡವಪುರ ಬಳಿ ಪಟಾಕಿ ಸಿಡಿಸಿ, ಬೈಕ್ ರಾರಯಲಿಯ ಮೂಲಕ ಸ್ವಾಗತಿಸಲಾಯಿತು. ಮರಳೂರಿನಲ್ಲಿ ಒಂದು ಸಾವಿರ ಕೆಜಿ ತೂಕದ ಸೇಬಿನ ಹಾರ ಸ್ವಾಗತಿಸಿದರು.
ನಂತರ ಸ್ವಗ್ರಾಮ ಸಿದ್ದರಾಮನಹುಂಡಿಗೆ ತೆರಳಿ, ಹಾಲಿನ ಶಿಥಲೀಕರಣ ಘಟಕ, ಟಿ. ನರಸೀಪುರ ತಾಲೂಕು ಇಂಡುವಾಳಿನಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಸಮೂದಾಯ ಭವನ ಉದ್ಘಾಟಿಸಿದರು. ಇವತ್ತು ಕೂಡ ಎಲ್ಲೆಡೆ ಭರ್ಜರಿ ಸ್ವಾಗತ ಸಿಕ್ಕಿತು.
ಹುಟ್ಟೂರು ಸಿದ್ದರಾಮನಹುಂಡಿಯಲ್ಲಿ ಬೃಹತ್ ಸೇಬಿನ ಹಾರ ಹಾಕಿ, ಸ್ವಾಗತ ನೀಡಿದರು. ಎಲ್ಲರತ್ತ ಕೈಬೀಸಿ, ಕೆಲವರಿಗೆ ಕೈಕುಲಕಿ ಮೆಚ್ಚುಗೆ ಸೂಚಿಸಿದ ಸಿದ್ದರಾಮಯ್ಯ ನಂತರ ಮನೆದೇವರು ಸಿದ್ದರಾಮೇಶ್ವರ ದೇಗುಲಕ್ಕೆ ಭೇಟಿ ನೀಡಿ, ದರ್ಶನ ಪಡೆದರು. ಬಹಳ ದಿನಗಳ ನಂತರ ಊರಿನ ಮಗನ ಭೇಟಿ ಕಂಡು ಗ್ರಾಮಸ್ಥರು ಕುಣಿದು ಕುಪ್ಪಳಿಸಿದರು.
ಪುತ್ರನ ಕಾರ್ಯಕ್ಕೆ ಮೆಚ್ಚುಗೆ
ಸಿದ್ದರಾಮನಹುಂಡಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ ಬಿಜೆಪಿ ಸರ್ಕಾರ ಹೆಚ್ಚು ಅನುದಾನ ಕೊಟ್ಟಿಲ್ಲ. ಆದರೂ ಯತೀಂದ್ರ ಬಹಳ ಒಳ್ಳೆಯ ಅಭಿವೃದ್ಧಿ ಮಾಡಿದ್ದಾನೆ. ನಮ್ಮ ಸರ್ಕಾರ ಇಲ್ಲದಿದ್ದರೂ, ಸರ್ಕಾರ ಕೇಳಿದಷ್ಟುಅನುದಾನ ಕೊಡದೆ ಇದ್ದರೂ ಇರುವ ಅನುದಾನದಲ್ಲಿಯೇ ಉತ್ತಮವಾಗಿ ಕೆಲಸ ಮಾಡಿದ್ದಾನೆ ಎಂದು ವರುಣ ಕ್ಷೇತ್ರದ ಶಾಸಕರಾದ ಪುತ್ರ ಡಾ.ಯತೀಂದ್ರಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಯತೀಂದ್ರನ ಬಗ್ಗೆ ಜನರಿಗೆ ಬಹಳ ಒಳ್ಳೆಯ ಅಭಿಪ್ರಾಯ ವಿದೆ ಎಂದ ಅವರು, ಕ್ಷೇತ್ರದಲ್ಲಿ ಸುತ್ತಾಡಿ ಬಹಳ ವರ್ಷವಾಗಿತ್ತು.
Mysuru : ಆರ್ಥಿಕ ಶಕ್ತಿ ತುಂಬುವ ಮೂಲಕ ಮಠಗಳನ್ನು ಬೆಳೆಸುವ ಅಗತ್ಯವಿದೆ
ಜನರ ಪ್ರತಿಕ್ರಿಯೆ ಉತ್ತಮವಾಗಿದೆ. ಇದನ್ನು ಕಂಡು ಸಹಜವಾಗಿಯೆ ಖುಷಿಯಾಗುತ್ತದೆ. ವರುಣ ಕ್ಷೇತ್ರದಲ್ಲಿ ಹೋದ ಕಡೆಯಲ್ಲೆಲ್ಲ ಇಲ್ಲೆ ಸ್ಪರ್ಧೆ ಮಾಡಿ ಎಂದು ಕರೆಯುತ್ತಿದ್ದಾರೆ. ಬೇರೆ ಕ್ಷೇತ್ರದಿಂದಲೂ ನಿಲ್ಲುವಂತೆ ಜನ ಕೇಳುತ್ತಿದ್ದಾರೆ. ಆದರೆ ನಾನು ಎಲ್ಲಾ ನಿರ್ಧಾರವನ್ನ ಹೈಕಮಾಂಡ್ ಗೆ ಬಿಟ್ಟಿದ್ದೇನೆ ಎಂದರು.
ಮಾಂಸಾಹಾರದ ಬದಲು ಸಸ್ಯಾಹಾರ!
ಸಾಮಾನ್ಯವಾಗಿ ಸಿದ್ದರಾಮಯ್ಯ ಅವರು ಸ್ವಗ್ರಾಮಕ್ಕೆ ಆಗಮಿಸಿದರೆ ಸ್ನೇಹಿತರಾದ ಜಿಪಂ ಮಾಜಿ ಸದಸ್ಯ ಸಿ. ಕೆಂಪೀರಯ್ಯ ಅವರ ಮನೆಯಲ್ಲಿ ಮಾಂಸಾಹಾರ ಊಟ ಮಾಡುತ್ತಿದ್ದರು. ಆದರೆ ಇತ್ತೀಚೆಗೆ ಮೂಲವ್ಯಾಧಿ ಸಮಸ್ಯೆಯಿಂದ ಸಣ್ಣ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಅವರು, ತಮ್ಮ ಮನೆಯಲ್ಲಿಯೇ ಸಸ್ಯಾಹಾರ ಸವಿದರು. ರಾಗಿಮುದ್ದೆ, ಹಸಿ ಅವರೆಕಾಳಿನ ಸಾಂಬಾರ್, ಸೊಪ್ಪಿನ ಪಲ್ಯ, ಬಾಯ್ಲಡ್ ರೈಸ್, ಮಸಾಲೆ ವಡೆ, ರಸಂ ಬಡಿಸಲಾಯಿತು.