* ಹಾನಗಲ್ಲ ಅಳಿಯಗೆ ಇಷ್ಟುದಿನ ಮಾವನ ಮನೆ ನೆನಪಾಗಲಿಲ್ವೇ?: ಸಿದ್ದು
* ಕಾಂಗ್ರೆಸ್‌ನದ್ದು ಯಾವಾಗಲೂ ಕೋಮುವಾದಿಗಳ ವಿರುದ್ಧ ಹೋರಾಟ
* ಬಿಜೆಪಿ ಶ್ರೀಮಂತರ ಪರ, ಬಡವರ ವಿರೋಧಿ ಪಕ್ಷ
ಹಾನಗಲ್ಲ(ಅ.24): ಯಡಿಯೂರಪ್ಪ(BS Yediyurappa)ಅವರನ್ನು ಹೆದರಿಸಿ ಹಾನಗಲ್ಲ(Hanagal) ಉಪಚುನಾವಣೆ(Byelection) ಪ್ರಚಾರಕ್ಕೆ ಕರೆತರಲಾಗಿದೆ ಎಂದು ಸಿದ್ದರಾಮಯ್ಯ(Siddaramaiah)ಆಪಾದಿಸಿದ್ದಾರೆ.
ಉಪ್ಪುಣಸಿ ಗ್ರಾಮದಲ್ಲಿ ಪ್ರಚಾರ(Campaign) ಕೈಗೊಂಡ ವೇಳೆ ಮಾತನಾಡಿ, ಯಡಿಯೂರಪ್ಪ ಅವರಿಗೆ ಈ ಚುನಾವಣೆಯಲ್ಲಿ(Election) ಕೆಲಸ ಮಾಡಬೇಕು ಅಂತ ಇಲ್ಲ. ಅವರನ್ನು ಹೆದರಿಸಿ ಕರೆದುಕೊಂಡು ಬಂದಿದ್ದಾರೆ ಎಂದರು.
ಅಕ್ಕಿಆಲೂರು ಅಳಿಯ ಅಂತ ಈಗ ವೋಟ್(Vote)ಕೇಳಲು ಬಂದಿದ್ದಾರೆ. ಇಷ್ಟುದಿನ ಮಾವನ ಮನೆ ನೆನಪಾಗಲಿಲ್ವಾ? ಅಭಿವೃದ್ಧಿ ಕೆಲಸಗಳನ್ನು ಮಾಡದೆ ಈಗ ನಾನು ಹಾನಗಲ್ಲ ಅಳಿಯ, ಮಾನ ಉಳಿಸಿ ಅಂತ ಗೋಗರೆಯುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ಕಾಂಗ್ರೆಸ್(Congress) ಯಾವಾಗಲೂ ಕೋಮುವಾದಿಗಳ(Communalist) ವಿರುದ್ಧ ಹೋರಾಟ ಮಾಡುತ್ತದೆ. ಆದರೆ, ಬಿಜೆಪಿ(BJP) ಶ್ರೀಮಂತರ ಪರವಾಗಿರುವ ಪಕ್ಷ. ಬಡವರ ವಿರೋಧಿ ಪಕ್ಷ. ಅದಕ್ಕೆ ಬಿಜೆಪಿ ವಿರುದ್ಧ ನಮ್ಮ ಹೋರಾಟ ನಿರಂತರ ಎಂದರು.
ಟೀಕೆಯನ್ನೇ ಮೆಟ್ಟಿಲಾಗಿಸಿ, ಗುರಿ ಮುಟ್ಟುತ್ತೇನೆ: ಸಿಎಂ ಬೊಮ್ಮಾಯಿ
ಎಸ್.ಟಿ. ಸೋಮಶೇಖರ್(ST Somashekhar) ನಮ್ಮಿಂದ ಗೆದ್ದು, ಅಲ್ಲಿಗೆ ಹೋದ ಗಿರಾಕಿ. ಇಲ್ಲಿ ಸೊಸೈಟಿಗಳವರನ್ನು ಹೆದರಿಸಿ ವೋಟ್ ಹಾಕಿಸಿಕೊಳ್ಳುತ್ತಿದ್ದಾನೆ. ಇನ್ನು ನೆಹರು ಓಲೇಕಾರ ಸಚಿವ ಸ್ಥಾನ ಸಿಗಲಿಲ್ಲ ಎಂದು ಮುನಿಸಿಕೊಂಡಿದ್ದಾರೆ. ಅವನ ಬಗ್ಗೆ ಮಾತನಾಡೋದು ಬೇಡ ಎಂದರು.
ಹಾನಗಲ್ ಕ್ಷೇತ್ರದಲ್ಲಿರುವ ಅಭ್ಯರ್ಥಿಗಳು:
ಅಂತಿಮ ಕಣದಲ್ಲಿರುವ ಅಭ್ಯರ್ಥಿಗಳು: ನಿಯಾಜ್ ಶೇಖ್ (ಜೆಡಿಎಶ್), ಶಿವರಾಜ ಸಜ್ಜನರ (ಬಿಜೆಪಿ), ಶ್ರೀನಿವಾಸ ಮಾನೆ (ಕಾಂಗ್ರೆಸ್), ಉಡಚಪ್ಪ ಉದ್ದನಕಾಲ (ಕರ್ನಾಟಕ ರಾಷ್ಟ್ರ ಸಮಿತಿ), ಫಕ್ಕೀರಗೌಡ ಶಂಕರಗೌಡ ಗಾಜಿಗೌಡ್ರ (ರೈತ ಭಾರತ ಪಕ್ಷ), ತಳವಾರ ಶಿವಕುಮಾರ (ಲೋಕಶಕ್ತಿ ಪಕ್ಷ), ಉಮೇಶ ಕೃಷ್ಣಪ್ಪ ದೈವಜ್ಞ (ಪಕ್ಷೇತರ), ಸಿದ್ದಪ್ಪ ಕಲ್ಲಪ್ಪ ಪೂಜಾರ (ಪಕ್ಷೇತರ), ಎಸ್ಎಸ್.ದೊಡ್ಡ ಲಿಂಗಣ್ಣನವರ (ಪಕ್ಷೇತರ), ಸೋಮಶೇಖರ ಮಹದೇವಪ್ಪ ಕೋತಂಬರಿ (ಪಕ್ಷೇತರ), ಹೊನ್ನಪ್ಪ ಹನುಮಂತಪ್ಪ ಅಕ್ಕಿವಳ್ಳಿ (ಪಕ್ಷೇತರ)
ಸಿಂದಗಿಯಲ್ಲಿ ಕ್ಷೇತ್ರದಲ್ಲಿರುವ ಅಭ್ಯರ್ಥಿಗಳು:
ಇನ್ನು ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ ಆರು ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ. ಅಶೋಕ ಮನಗೊಳಿ(ಕಾಂಗ್ರೆಸ್), ರಮೇಶ್ ಬೂಸನೂರ್(ಬಿಜೆಪಿ), ನಜಿಯಾ ಅಂಗಡಿ(ಜೆಡಿಎಸ್), ಡಾ. ಸುನಿಲ್ ಕುಮಾರ್ ಹೆಬ್ಬಿ(ಕರ್ನಾಟಕ ರಾಷ್ಟ್ರ ಸಮಿತಿ) ಹಾಗೂ ಜಿಲಾನಿ ಗುಡುಸಾಬ್ ಮುಲ್ಲಾ, ದೀಪಿಕಾ ಎಸ್. ಪಡಸಲಗಿ ಪಕ್ಷೇತರರಾಗಿ ಸ್ಪರ್ಧಿಸಿದ್ದಾರೆ. ಹಾನಗಲ್ ಹಾಗೂ ಸಿಂದಗಿ ವಿಧಾನಸಭಾ ಕ್ಷೇತ್ರಗಳಿಗೆ ಅ. 30ರಂದು ಮತದಾನ ನಡೆಯಲಿದ್ದು ನ.2ರಂದು ಫಲಿತಾಂಶ ಹೊರಬೀಳಲಿದೆ.