ಚರ್ಚೆಗೆ ಬರಲು ಸಿಎಂಗೆ ಧೈರ್ಯ ಇಲ್ಲ: ಸಿದ್ದರಾಮಯ್ಯ

By Kannadaprabha News  |  First Published Oct 24, 2021, 7:30 AM IST

*  ಬಿಜೆಪಿಯವರು ಅಭಿವೃದ್ಧಿ ಮಾಡದ ಕಾರಣ ಚರ್ಚೆಗೆ ಆಹ್ವಾನಿಸಿದ್ದೇನೆ
*  ಸಿಎಂಗೆ ನನ್ನ ಎದುರು ಸುಳ್ಳು ಹೇಳಲು ಆಗಲ್ಲ, ಹಾಗಾಗಿ ವೇದಿಕೆಗೆ ಬರಲ್ಲ
*  ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದು ಆರೆಸ್ಸೆಸ್‌ ಕೃಪಾಕಟಾಕ್ಷದಿಂದ
 


ಹಾನಗಲ್‌(ಅ.24):  ಅಭಿವೃದ್ಧಿ ವಿಚಾರಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ತಾವು ಚರ್ಚೆಗೆ ಬನ್ನಿ ಎಂದು ಹಾಕಿದ ಸವಾಲನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ಸಮರ್ಥಿಸಿಕೊಂಡಿದ್ದಾರೆ. ಬಿಜೆಪಿಯವರು ಯಾವುದೇ ಅಭಿವೃದ್ಧಿ ಮಾಡದ ಕಾರಣ ನಾನು ಬಹಿರಂಗ ಸವಾಲು ಹಾಕಿದ್ದೇನೆ. ಒಂದೇ ವೇದಿಕೆಗೆ ಚರ್ಚೆಗೆ ಬರುವಂತೆ ಕರೆದಿದ್ದೇನೆ. ಆದರೆ, ಮುಖ್ಯಮಂತ್ರಿ ಬೊಮ್ಮಾಯಿ(Basavaraj Bommai) ಅವರಿಗೆ ಒಂದೇ ವೇದಿಕೆಗೆ ಬರಲು ಧೈರ್ಯ ಇಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಹಾನಗಲ್‌ನಲ್ಲಿ(Hanagal) ಶನಿವಾರ ಕಾಂಗ್ರೆಸ್‌(Congress) ಅಭ್ಯರ್ಥಿ ಪರ ಅದ್ಧೂರಿ ಪ್ರಚಾರ(Campaign) ನಡೆಸಿದ ಅವರು, ಬೊಮ್ಮಾಯಿ ಅವರಿಗೆ ನನ್ನ ಎದುರು ಸುಳ್ಳು ಹೇಳಲು ಆಗುವುದಿಲ್ಲ. ಹೀಗಾಗಿ ಅವರಿಗೆ ನನ್ನ ಜತೆ ಒಂದೇ ವೇದಿಕೆಗೆ ಬರಲು ಧೈರ್ಯ ಇಲ್ಲ. ಅವರು ಬಡವರಿಗೆ(Poor) 7,400 ಮನೆ ಕೊಟ್ಟಿದ್ದಾಗಿ ಹೇಳುತ್ತಿದ್ದಾರೆ. ಅದೆಲ್ಲ ಚುನಾವಣೆಗಾಗಿ(Election) ಮಾಡಿರುವ ಆದೇಶ ಎಂದು ಸಿದ್ದರಾಮಯ್ಯ ಹೇಳಿದರು.

Tap to resize

Latest Videos

undefined

ನಾನು ಬಿಜೆಪಿ ಸೇರಿದ್ದಕ್ಕೆ ಬಿಎಸ್‌ವೈ ಕಾರಣ: ಸಿಎಂ ಬೊಮ್ಮಾಯಿ

ಆರೆಸ್ಸೆಸ್‌ನಿಂದ ಸಿಎಂ ಆದ್ರು: 

ಬಸವರಾಜ ಬೊಮ್ಮಾಯಿ ಅವರು ಚುನಾವಣೆ ಗೆದ್ದು ಮುಖ್ಯಮಂತ್ರಿ(Chief Minister) ಆಗಿದ್ದಾರಾ? ಆರ್‌ಎಸ್‌ಎಸ್‌(RSS) ಕೃಪಾಕಟಾಕ್ಷದಿಂದ ಮುಖ್ಯಮಂತ್ರಿ ಆಗಿದ್ದಾರೆ. ಅಂಥವರಿಂದ ಜನಪರ ಅಭಿವೃದ್ಧಿ ಕಾರ್ಯಕ್ರಮ ನಿರೀಕ್ಷೆ ಸಾಧ್ಯವೆ ಎಂದು ಇದೇ ವೇಳೆ ಸಿದ್ದರಾಮಯ್ಯ ಪ್ರಶ್ನಿಸಿದರು.

ಆಪರೇಶನ್‌ ಕಮಲಕ್ಕಾಗಿ ಬಿ.ಎಸ್‌.ಯಡಿಯೂರಪ್ಪ(BS Yediyurappa) ದುಡ್ಡು ಖರ್ಚು ಮಾಡಿ ಸರ್ಕಾರ ಮಾಡಿ ಮುಖ್ಯಮಂತ್ರಿ ಆಗಿದ್ದರು. ರಾಜೀನಾಮೆ ಕೊಡುವ ದಿನ ಯಡಿಯೂರಪ್ಪ ಕಣ್ಣೀರು ಹಾಕಿದರು ಎಂದ ಸಿದ್ದರಾಮಯ್ಯ, ಈಗ ಆರೆಸ್ಸೆಸ್‌ನವರ ಕೃಪಾಕಟಾಕ್ಷದಿಂದ ಮುಖ್ಯಮಂತ್ರಿ ಖುರ್ಚಿ ಮೇಲೆ ಬೊಮ್ಮಾಯಿ ಬಂದು ಕೂತಿದ್ದಾರೆ ಎಂದರು.

ಹಾನಗಲ್‌ ಅಭಿವೃದ್ಧಿ ಮಾಡಿಬಿಡುತ್ತಾರಂತೆ, ಪಕ್ಕದಲ್ಲೇ ಇದ್ದೀಯಲ್ಲಪ್ಪಾ ಮಿಸ್ಟರ್‌ ಬಸವರಾಜ್‌ ಬೊಮ್ಮಾಯಿ, ಇಷ್ಟುದಿನ ಏನು ಮಾಡಿದೆ? ಯಾಕೆ ಅಭಿವೃದ್ಧಿ ಮಾಡಲಿಲ್ಲ? ಈಗ ಅಭಿವೃದ್ಧಿ ನೆನಪಾಗಿದೆಯಾ ಎಂದು ಪ್ರಶ್ನಿಸಿದರು. ಸುಳ್ಳು ಹೇಳಲೂ ಇತಿಮಿತಿ ಬೇಕಲ್ವಾ? ಸಿದ್ದರಾಮಯ್ಯ ಜಾರಿಗೆ ತಂದ ಭಾಗ್ಯಗಳು ಜನರನ್ನು ತಲುಪಲಿಲ್ಲ ಅಂದಿದ್ದಾರೆ. ಆ ಯೋಜನೆಗಳು ನಿಮಗೆ ತಲುಪಿದ್ವಾ, ಇಲ್ವಾ?, ಈ ಬೊಮ್ಮಾಯಿಗೆ ಪಾಠ ಕಲಿಸಬೇಕಾ? ಬೇಡ್ವಾ? ಎಂದು ಇದೇ ವೇಳೆ ಸಭಿಕರನ್ನು ಪ್ರಶ್ನಿಸಿದರು.

ನಾನು ಬರ್ತಿನಿ..ನೀವೂ ಬನ್ನಿ: ಸಿಎಂ ಬೊಮ್ಮಾಯಿಗೆ ಸಿದ್ದರಾಮಯ್ಯ ಓಪನ್ ಚಾಲೆಂಜ್!

ಮೋದಿ ವಿರುದ್ಧ ಕಿಡಿ: 

ಮೋದಿ(Narendra Modi) ಅವರಂಥ ಪ್ರಧಾನಿಯನ್ನು ನಾವು ಯಾವತ್ತೂ ನೋಡಿಲ್ಲ ಎನ್ನುತ್ತಾರೆ. ಮೋದಿ ಕೊಟ್ಟ ಭರವಸೆ ಒಂದಾದರೂ ಈಡೇರಿದೆಯಾ? ನಿರುದ್ಯೋಗಿ ಯುವಕರಿಗೆ(Youths) ಉದ್ಯೋಗ(Jobs) ಕೊಡುವ ಭರವಸೆ ಏನಾಯ್ತು? ಮೋದಿ ಬಡವರ, ರೈತರ(Farmers) ಕಾರ್ಮಿಕರ ರಕ್ತ ಕುಡಿಯುತ್ತಿದ್ದಾರೆ. ಮತ ಹಾಕಿದ ಜನತೆಗೆ ಈಗ ತಿರುಪತಿ ತಿಮ್ಮಪ್ಪನ ನಾಮ ಹಾಕಿದ್ದಾರೆ. ಮೊದಲು ಮೋದಿ... ಮೋದಿ... ಅಂತಿದ್ದ ಜನ ಈಗ ಹೋಗಿ... ಹೋಗಿ... ಎನ್ನುತ್ತಿದ್ದಾರೆ. ನಾಚಿಕೆ ಆಗಲ್ವಾ? ಇಂಥ ಕೆಟ್ಟಸರ್ಕಾರ ಇರಬೇಕಾ? ನನಗೆ ನೈತಿಕ ಶಕ್ತಿ ಇದೆ. ಅದಕ್ಕಾಗಿ ನಾನು ಸತ್ಯ ಹೇಳುತ್ತಿದ್ದೇನೆ. ನೀವೂ ಹೇಳ್ತೀರಾ ಬೊಮ್ಮಾಯಿ ಎಂದು ಪ್ರಶ್ನೆ ಮಾಡಿದರು.

ಬಿಎಸ್‌ವೈರನ್ನು ಹೆದರಿಸಿ ಕರೆತಂದಿದ್ದಾರೆ-ಸಿದ್ದು

ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಬಿಜೆಪಿಯವರು ಹೆದರಿಸಿ ಪ್ರಚಾರಕ್ಕೆ ಕರೆತಂದಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದರು. ಯಡಿಯೂರಪ್ಪ ಅವರಿಗೆ ಈ ಚುನಾವಣೆಯಲ್ಲಿ ಕೆಲಸ ಮಾಡಬೇಕು ಅಂತ ಏನೂ ಇಲ್ಲ. ಅವರನ್ನು ಹೆದರಿಸಿ ಕರೆದುಕೊಂಡು ಬಂದಿದ್ದಾರೆ. ಆಪರೇಷನ್‌ ಕಮಲ(Operation BJP) ಮಾಡಿ ಸರ್ಕಾರ ಮಾಡಿ ಸರ್ಕಾರ ರಚನೆ ಮಾಡಿದ್ದು ಯಡಿಯೂರಪ್ಪ, ಆದರೆ ಈಗ ಅಧಿಕಾರದಲ್ಲಿರೋದು ಬೊಮ್ಮಾಯಿ. ನಮ್ಮ ವಿರುದ್ಧ ಹೋದರೆ ಇ.ಡಿ, ಆದಾಯ ತೆರಿಗೆ ಅವರನ್ನು ಬಿಟ್ಟು ತನಿಖೆ ಮಾಡಿಸ್ತೀವಿ ಎಂದಿದ್ದಾರೆ. ಆಡ್ವಾಣಿ, ಮುರಳಿ ಮನೋಹರ ಜೋಶಿ, ಯಶವಂತ ಸಿನ್ಹಾ ಅಂಥವರನ್ನೇ ಇವರು ಬಿಟ್ಟಿಲ್ಲ, ಇನ್ನು ಯಡಿಯೂರಪ್ಪ ಅವರನ್ನು ಬಿಡ್ತಾರಾ? ಉಪಯೋಗಿಸಿ ಎಸೆಯೋದು ಬಿಜೆಪಿ ಸಂಸ್ಕೃತಿ. ಯಡಿಯೂರಪ್ಪ ಮೇಲೆ ತೂಗುಗತ್ತಿ ನೇತಾಡುತ್ತಿದೆ ಎಂದರು.
 

click me!