ಟೀಕೆಯನ್ನೇ ಮೆಟ್ಟಿಲಾಗಿಸಿ, ಗುರಿ ಮುಟ್ಟುತ್ತೇನೆ: ಸಿಎಂ ಬೊಮ್ಮಾಯಿ

By Kannadaprabha News  |  First Published Oct 24, 2021, 12:14 PM IST

*  ಹಾನಗಲ್ಲ ಕ್ಷೇತ್ರದ ಚಿಕ್ಕಾಂಶಿ ಹೊಸೂರು ಗ್ರಾಮದಲ್ಲಿ ಬೊಮ್ಮಾಯಿ ಪ್ರಚಾರದ ಅಬ್ಬರ
*  ಕಾಂಗ್ರೆಸ್‌ ಮುಳುಗುತ್ತಿರುವ ಅಲ್ಲ, ಮುಳುಗಿರುವ ಹಡಗು ಎಂದು ಟೀಕೆ
*  ಕಾಂಗ್ರೆಸ್‌ ನಾಯಕರಿಗೆ ತಿರುಗೇಟು ನೀಡಿದ ಸಿಎಂ 
 


ಹಾವೇರಿ(ಅ.24):  ವಿಪಕ್ಷಗಳು ಏನೇ ಟೀಕೆ ಮಾಡಿದರೂ ಅದರಿಂದ ನಾನು ವಿಚಲಿತನಾಗುವುದಿಲ್ಲ. ಅವರ ಟೀಕೆಗಳನ್ನೇ ಮೆಟ್ಟಿಲಾಗಿ ಮಾಡಿಕೊಳ್ಳುತ್ತೇನೆ. ನನ್ನ ಲಕ್ಷ್ಯ ಎಲ್ಲ ವರ್ಗದ ಜನರ ಹಾಗೂ ರಾಜ್ಯದ ಸಮಗ್ರ ಅಭಿವೃದ್ಧಿ...

ಹಾನಗಲ್ಲ(Hanagal) ತಾಲೂಕು ಚಿಕ್ಕಾಂಶಿ ಹೊಸೂರು ಗ್ರಾಮದಲ್ಲಿ ಶನಿವಾರ ಉಪಚುನಾವಣೆ(Byelection) ಬಹಿರಂಗ ಸಮಾವೇಶದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರು ಆಡಿದ ಆತ್ಮವಿಶ್ವಾಸದ ನುಡಿಯಿದು. ರಾಜ್ಯದ ದೀನ ದಲಿತರು, ಹಿಂದುಳಿದ ವರ್ಗ ಸೇರಿದಂತೆ ಸಮಗ್ರ ಅಭಿವೃದ್ಧಿಯೇ ನಮ್ಮ ಸರ್ಕಾರದ(Government) ಗುರಿ. ವಿರೋಧ ಪಕ್ಷಗಳ ನಾಯಕರು ಎಷ್ಟೇ ಟೀಕೆ(Criticism) ಮಾಡಿದರೂ ಸಮಗ್ರ ಅಭಿವೃದ್ಧಿಯ ಗುರಿಯಿಂದ ವಿಚಲಿತನಾಗುವುದಿಲ್ಲ ಎಂದು ಹೇಳಿದರು.

Tap to resize

Latest Videos

undefined

ಕಾಂಗ್ರೆಸ್‌(Congress) ಅಧಿಕಾರಕ್ಕೆ ಬಂದಾಗ ರೈತರು, ನೀರಾವರಿ ಯೋಜನೆಗಳು(Irrigation projects), ಉತ್ತರ ಕರ್ನಾಟಕ(North Karnataka)  ಕಡೆ ತಿರುಗಿ ನೋಡಲಿಲ್ಲ. ಕೆಳಮಟ್ಟದ ಭಾಷೆ ಪ್ರಯೋಗದಿಂದ ಕಾಂಗ್ರೆಸ್‌ನವರು ದೊಡ್ಡವರಾಗುವುದಿಲ್ಲ. ಪ್ರಧಾನಿಗಳ(Prime Minister) ಬಗ್ಗೆ ಏಕವಚನದಲ್ಲಿ ಮಾತನಾಡುತ್ತಾರೆ. ಅಲ್ಪಸಂಖ್ಯಾತರನ್ನು ಬಾವಿಯಲ್ಲಿ ಇಟ್ಟಿರುವ ಕಾಂಗ್ರೆಸ್‌ ಚುನಾವಣೆ ಬಂದಾಗ ಹಗ್ಗ ಬಿಟ್ಟು ಮೇಲಕ್ಕೆತ್ತುತ್ತದೆ.

ಚರ್ಚೆಗೆ ಬರಲು ಸಿಎಂಗೆ ಧೈರ್ಯ ಇಲ್ಲ: ಸಿದ್ದರಾಮಯ್ಯ

ವೋಟ್‌(Vote) ಹಾಕಿದ ಆನಂತರ ಮತ್ತೆ ಬಾವಿಗೆ ಇಳಿಬಿಡುತ್ತದೆ. ನಾವು ಅಲ್ಪಸಂಖ್ಯಾತರ(Minorities) ರಕ್ಷಕರು ಎಂದು ಕಾಂಗ್ರೆಸ್‌ ನಾಯಕರು ಹೇಳುತ್ತಾರೆ. ಆದರೆ, ಅಲ್ಪಸಂಖ್ಯಾತರೇ ಕಾಂಗ್ರೆಸ್‌ ರಕ್ಷಣೆ ಮಾಡಿದ್ದಾರೆ. ಅವರು ಹಿಂದೆ ಸರಿದರೆ ಕಾಂಗ್ರೆಸ್‌ ಅಡ್ರೆಸ್‌ ಇರುವುದಿಲ್ಲ. ಆ ಪಕ್ಷ ಮುಳುಗುತ್ತಿರುವ ಹಡಗಲ್ಲ, ಮುಳುಗಿರುವ ಹಡಗು. ಭೂಪಟ ನೋಡಿದರೆ ಕರ್ನಾಟಕದಲ್ಲಿ ಮಾತ್ರ ಚೂರು ಉಳಿದಿದೆ. ಅ. 30ರಂದು ಬಿಜೆಪಿ(BJP) ಗೆಲ್ಲಿಸಿದರೆ ರಾಜ್ಯದಲ್ಲೂ ಸಂಪೂರ್ಣವಾಗಿ ಮುಳುಗುತ್ತದೆ ಎಂದು ವಾಗ್ದಾಳಿ ನಡೆಸಿದರು.

ಮಾತಿನಿಂದ ಹೊಟ್ಟೆ ತುಂಬುವುದಿಲ್ಲ. ನಾವು ಮಾತನಾಡುವುದಕ್ಕಿಂತ ಕೆಲಸ ಮಾಡುತ್ತಿದ್ದೇವೆ. 6 ಬಾರಿ ಆಯ್ಕೆಯಾಗಿದ್ದ ಉದಾಸಿ ಅವರು ಎಲ್ಲರ ಹೃದಯದಲ್ಲಿ ಸ್ಥಾನ ಪಡೆದಿದ್ದಾರೆ. ಉದಾಸಿ ಅವರ ಜಾಗಕ್ಕೆ ಯೋಗ್ಯರನ್ನು ಆಯ್ಕೆ ಮಾಡಬೇಕು. ತಿಳವಳ್ಳಿ ಏತ ನೀರಾವರಿ ಯೋಜನೆಗೆ ಮಂಜೂರಾತಿ ನೀಡಿದವರೇ ಯಡಿಯೂರಪ್ಪ. . 620 ಕೋಟಿ ನೀರಾವರಿ ಯೋಜನೆಗಳಿಗೆ ಯಡಿಯೂರಪ್ಪ ಅವರು ಮಂಜೂರಾತಿ ನೀಡಿದರು. ಇನ್ನೆರಡು ತಿಂಗಳಲ್ಲಿ ಈ ಯೋಜನೆಗಳನ್ನು ಪೂರ್ಣಗೊಳಿಸಿ ಯಡಿಯೂರಪ್ಪ ಅವರನ್ನೇ ಕರೆಸಿ ಉದ್ಘಾಟನೆ ಮಾಡಿಸುತ್ತೇವೆ. ಕಾಂಗ್ರೆಸ್‌ ಸರ್ಕಾರವಿದ್ದಿದ್ದರೆ ಇಷ್ಟು ದೊಡ್ಡ ಯೋಜನೆಗಳು ಕ್ಷೇತ್ರಕ್ಕೆ ಸಿಗುತ್ತಿರಲಿಲ್ಲ ಎಂದು ಹೇಳಿದರು.

ಅಭ್ಯರ್ಥಿ ಶಿವರಾಜ ಸಜ್ಜನರ(Shivaraj Sajjanar) ಮಾತನಾಡಿ, ಸಿ.ಎಂ. ಉದಾಸಿ ಅವರು ಈ ಭಾಗದ ಕೆರೆ ತುಂಬಿಸಿದ ಆಧುನಿಕ ಭಗೀರಥ ಎನಿಸಿದ್ದಾರೆ. ನೀರಾವರಿ, ರಸ್ತೆ, ಕಟ್ಟಡ, ಶಿಕ್ಷಣಕ್ಕೆ ಆದ್ಯತೆ, ಎಲ್ಲ ವರ್ಗದ ಜನರ ಕಲ್ಯಾಣಕ್ಕಾಗಿ ಉದಾಸಿ ಶ್ರಮಿಸಿದ್ದಾರೆ. ಇಡಿ ರಾಜ್ಯದಲ್ಲೇ ಹಾನಗಲ್ಲ ರೈತರಿಗೆ ಹೆಚ್ಚು ಬೆಳೆ ವಿಮೆ ಸಿಗಲು ಕಾರಣ ಉದಾಸಿ ಅವರು. ಅವರ ಅಭಿವೃದ್ಧಿ ಕಾರ್ಯಗಳನ್ನು ಮುಂದುವರಿಸಿಕೊಂಡು ಹೋಗಲು ನನ್ನನ್ನು ಆಶೀರ್ವದಿಸಿ ಎಂದು ಹೇಳಿದರು.

ನಾನು ಬಿಜೆಪಿ ಸೇರಿದ್ದಕ್ಕೆ ಬಿಎಸ್‌ವೈ ಕಾರಣ: ಸಿಎಂ ಬೊಮ್ಮಾಯಿ

ಮಾಜಿ ಸಿಎಂ ಯಡಿಯೂರಪ್ಪ(BS Yediyurappa), ಸಚಿವರಾದ ಆರ್‌. ಅಶೋಕ, ಬಿ.ಸಿ. ಪಾಟೀಲ, ಮುನಿರತ್ನ, ಡಾ. ನಾರಾಯಣಗೌಡ, ಗೋಪಾಲಯ್ಯ, ಸಂಸದ ಬಿ.ವೈ. ರಾಘವೇಂದ್ರ, ಶಿವಕುಮಾರ ಉದಾಸಿ, ರಾಜುಗೌಡ, ಚಂದ್ರಪ್ಪ ಇತರರು ಇದ್ದರು.

ರಾಜಕೀಯ ಲಾಭ ಪಡೆಯುವ ಯತ್ನ...

ಕಾಂಗ್ರೆಸ್‌ ಅಭ್ಯರ್ಥಿ ಕೋವಿಡ್‌(Covid19) ಸಂದರ್ಭದಲ್ಲಿ ಸಹಾಯ ಮಾಡಿದ್ದನ್ನೇ ಚುನಾವಣೆಯಲ್ಲಿ ಬಂಡವಾಳ ಮಾಡಿಕೊಳ್ಳುತ್ತಿದ್ದಾರೆ. ಹಿಂದೆ ಸಹಾಯ ಮಾಡಿದ್ದನ್ನೇ ಮುಂದಿಟ್ಟುಕೊಂಡು ರಾಜಕೀಯ ಲಾಭ ಪಡೆಯಲು ಹೊರಟಿರುವುದು ಸರಿಯೇ? ಅನೇಕ ಸಂಘ-ಸಂಸ್ಥೆಗಳು ಕೋವಿಡ್‌ ಸಂದರ್ಭದಲ್ಲಿ ನೆರವು ನೀಡಿವೆ. ಸರ್ಕಾರ ಕೂಡ ಎಲ್ಲ ರೀತಿಯ ನೆರವು ನೀಡಿದೆ. ಹಾನಗಲ್ಲ ಕ್ಷೇತ್ರದ 38 ಸಾವಿರ ಕುಟುಂಬಗಳು ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆಯಲ್ಲಿ ತಲಾ 10 ಸಾವಿರ ಪ್ರಯೋಜನ ಪಡೆಯುತ್ತಿವೆ. 12 ಸಾವಿರ ಕಾರ್ಮಿಕರಿಗೆ ಆಹಾರ ಕಿಟ್‌ ನೀಡಿದ್ದೇವೆ. 66 ಸಾವಿರ ಕುಟುಂಬಗಳಿಗೆ ಉಚಿತ ರೇಶನ್‌ ನೀಡಿದ್ದೇವೆ. ಹೂವು, ಹಣ್ಣು ವ್ಯಾಪಾರಿಗಳಿಗೆ, ಕಟ್ಟಡ ಕಾರ್ಮಿಕರಿಗೆ, ಮೆಕ್ಕೆಜೋಳ ಬೆಳೆದ ರೈತರಿಗೆ(Farmers) ಪರಿಹಾರ ನೀಡಿದ್ದೇವೆ. ಇಷ್ಟೇ ಅಲ್ಲ, ಇನ್ನೂ ಹೇಳಬೇಕಾ? ಎಂದು ದಾಖಲೆಯನ್ನೇ ಪ್ರದರ್ಶಿಸಿ, ಕಾಂಗ್ರೆಸ್‌ ನಾಯಕರಿಗೆ ತಿರುಗೇಟು ನೀಡಿದರು. ಅವರೆಲ್ಲ ತಮಗೆ ಸಹಾಯ ಮಾಡಿದ ಬಿಜೆಪಿಗೆ ತಾನೆ ಮತ ಹಾಕುವುದು? ಇದೇ ನಮ್ಮ ಗೆಲುವಿನ ವಿಶ್ವಾಸ ಎಂದು ಸಿಎಂ ಬೊಮ್ಮಾಯಿ ಹೇಳಿದರು.

ಹಾನಗಲ್‌ ಕ್ಷೇತ್ರದಲ್ಲಿರುವ ಅಭ್ಯರ್ಥಿಗಳು: 

ಅಂತಿಮ ಕಣದಲ್ಲಿರುವ ಅಭ್ಯರ್ಥಿಗಳು: ನಿಯಾಜ್ ಶೇಖ್ (ಜೆಡಿಎಶ್), ಶಿವರಾಜ ಸಜ್ಜನರ (ಬಿಜೆಪಿ), ಶ್ರೀನಿವಾಸ ಮಾನೆ (ಕಾಂಗ್ರೆಸ್), ಉಡಚಪ್ಪ ಉದ್ದನಕಾಲ (ಕರ್ನಾಟಕ ರಾಷ್ಟ್ರ ಸಮಿತಿ), ಫಕ್ಕೀರಗೌಡ ಶಂಕರಗೌಡ ಗಾಜಿಗೌಡ್ರ (ರೈತ ಭಾರತ ಪಕ್ಷ), ತಳವಾರ ಶಿವಕುಮಾರ (ಲೋಕಶಕ್ತಿ ಪಕ್ಷ), ಉಮೇಶ ಕೃಷ್ಣಪ್ಪ ದೈವಜ್ಞ (ಪಕ್ಷೇತರ), ಸಿದ್ದಪ್ಪ ಕಲ್ಲಪ್ಪ ಪೂಜಾರ (ಪಕ್ಷೇತರ), ಎಸ್ಎಸ್.ದೊಡ್ಡ ಲಿಂಗಣ್ಣನವರ (ಪಕ್ಷೇತರ), ಸೋಮಶೇಖರ ಮಹದೇವಪ್ಪ ಕೋತಂಬರಿ (ಪಕ್ಷೇತರ), ಹೊನ್ನಪ್ಪ ಹನುಮಂತಪ್ಪ ಅಕ್ಕಿವಳ್ಳಿ (ಪಕ್ಷೇತರ) 

ಸಿಂದಗಿಯಲ್ಲಿ ಕ್ಷೇತ್ರದಲ್ಲಿರುವ ಅಭ್ಯರ್ಥಿಗಳು: 

ಇನ್ನು ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ ಆರು ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ. ಅಶೋಕ ಮನಗೊಳಿ(ಕಾಂಗ್ರೆಸ್‌), ರಮೇಶ್ ಬೂಸನೂರ್(ಬಿಜೆಪಿ), ನಜಿಯಾ ಅಂಗಡಿ(ಜೆಡಿಎಸ್), ಡಾ. ಸುನಿಲ್‌ ಕುಮಾರ್‌ ಹೆಬ್ಬಿ(ಕರ್ನಾಟಕ ರಾಷ್ಟ್ರ ಸಮಿತಿ) ಹಾಗೂ ಜಿಲಾನಿ ಗುಡುಸಾಬ್‌ ಮುಲ್ಲಾ, ದೀಪಿಕಾ ಎಸ್‌. ಪಡಸಲಗಿ ಪಕ್ಷೇತರರಾಗಿ ಸ್ಪರ್ಧಿಸಿದ್ದಾರೆ. ಹಾನಗಲ್‌ ಹಾಗೂ ಸಿಂದಗಿ ವಿಧಾನಸಭಾ ಕ್ಷೇತ್ರಗಳಿಗೆ ಅ. 30ರಂದು ಮತದಾನ ನಡೆಯಲಿದ್ದು ನ.2ರಂದು ಫಲಿತಾಂಶ ಹೊರಬೀಳಲಿದೆ. 
 

click me!