* ಆರಗಗೆ ಯಾವುದೇ ಅನುಭವ ಇಲ್ಲ, ಇಲಾಖೆ ನಡೆಸಲೂ ಬರಲ್ಲ
* ಹಿಂದೆ ಮೈಸೂರಲ್ಲಿ ಗ್ಯಾಂಗ್ ರೇಪ್ ಆದಾಗಲೂ ಇದೇ ರೀತಿ ಹೇಳಿಕೆ ನೀಡಿದ್ದರು
* ಹಿಂದೂ ಸಮುದಾಯದವರು ಸತ್ತರೂ, ಮುಸ್ಲಿಮರು ಸತ್ತರೂ ಜೀವ ಜೀವವೇ
ಹುಬ್ಬಳ್ಳಿ/ಬಾಗಲಕೋಟೆ(ಏ.07): ಬೆಂಗಳೂರಿನ ಜೆಜೆ ನಗರದ ಯುವಕ ಚಂದ್ರು ಹತ್ಯೆಗೆ(Chandru Murder) ಸಂಬಂಧಿಸಿ ಗೃಹ ಸಚಿವ ಆರಗ ಜ್ಞಾನೇಂದ್ರ(Araga Jnanendra) ನೀಡಿದ ಹೇಳಿಕೆಯನ್ನು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಖಂಡಿಸಿದ್ದಾರೆ. ಆರಗ ಜ್ಞಾನೇಂದ್ರ ಗೃಹ ಸಚಿವರಾಗಲು ನಾಲಾಯಕ್ ಎಂದು ಕಿಡಿಕಾರಿದರು.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಉರ್ದು ಬಾರದಕ್ಕೆ ಕೊಲೆ ಆಗಿದೆ ಎಂದು ಗೃಹ ಸಚಿವರು ಹೇಳಿಕೆ ನೀಡುತ್ತಾರೆಂದರೆ ಏನು ಹೇಳಬೇಕು? ಹಿಂದೆ ಮೈಸೂರಲ್ಲಿ ಗ್ಯಾಂಗ್ ರೇಪ್(Mysuru Gang Rape) ಆದಾಗಲೂ ಇದೇ ರೀತಿ ಹೇಳಿಕೆ ನೀಡಿದ್ದರು. ಆರಗ ಅವರಿಗೆ ಅನುಭವವೂ ಇಲ್ಲ. ಇಲಾಖೆಯನ್ನೂ ನಿಭಾಯಿಸಲೂ ಬರಲ್ಲ. ಯಾರದ್ದೇ ಕೊಲೆಯಾದರೂ ಅದನ್ನು ಖಂಡಿಸುತ್ತೇನೆ. ಹಿಂದೂ ಸಮುದಾಯದವರು ಸತ್ತರೂ, ಮುಸ್ಲಿಮರು ಸತ್ತರೂ ಜೀವ ಜೀವವೇ. ಆದರೆ ಇವರಿಗೆಲ್ಲ ಹಾಗಲ್ಲ ಎಂದರು.
ರಾಹುಲ್ ಗಾಂಧಿ ಬಂದಾಗ ಚಕ್ಕರ್, ಪಕ್ಷದ ಕಾರ್ಯಕ್ರಮಗಳಿಗೂ ಇಲ್ಲ ಹಾಜರ್, ಜಮೀರ್ ಸೈಲೆಂಟಾಗಿದ್ದೇಕೆ.?
ಇದೇ ವೇಳೆ ಮಂಡ್ಯದ ವಿದ್ಯಾರ್ಥಿನಿ ಮುಸ್ಕಾನ್ಗೆ(Muskan) ಅಲ್ಖೈದಾ ಮುಖಂಡ ಬೆಂಬಲ ವ್ಯಕ್ತಪಡಿಸಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ‘ಎಲ್ರೀ ಉಗ್ರ, ಯಾರ್ರೀ ಉಗ್ರ. ಇವುಗಳನ್ನೆಲ್ಲ ಆರೆಸ್ಸೆಸ್ನವರೇ ಕಲಿಸೋದು. ಸಮಾಜದಲ್ಲಿ ಅಶಾಂತಿ ಉಂಟು ಮಾಡಲು, ಸಾಮರಸ್ಯ ಹಾಳುಮಾಡಲು, ಮತಗಿಟ್ಟಿಸಲು ಇಂಥವುಗಳನ್ನು ಹುಟ್ಟು ಹಾಕುತ್ತಿದ್ದಾರೆ’ ಎಂದು ಆರೋಪಿಸಿದರು.
ಹಲಾಲ್ ಕಟ್ ಮಾಡಿದ್ದೆ ನಾವು ತಿನ್ನೋದು, ಮಾಂಸ ತಿನ್ನದವರಿಂದ ವಿವಾದ ಸೃಷ್ಟಿ:
ಹುಬ್ಬಳ್ಳಿ: ಮುಸ್ಲಿಂರು(Muslim) ಹಲಾಲ್(Halal) ಕಟ್ ಮಾಡಿದ್ದೆ ನಾವು ತಿನ್ನೋದು, ಮಾಂಸ(Meat) ತಿನ್ನದೇ ಇರುವವರು ಈ ವಿವಾದ ಸೃಷ್ಟಿ ಮಾಡ್ತಿದ್ದಾರೆ ಅಂತ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಹುಬ್ಬಳ್ಳಿಯಲ್ಲಿ(Hubballi) ಮಾತನಾಡಿದ ಅವರು, ಮುಸ್ಲಿಮರ ನಂಬಿಕೆ ಹಲಾಲ್ ಮಾಡೋದು, ಕುರಿಗಳಲ್ಲಿ ರಕ್ತ ಇರಬಾರದು ಅನ್ನೋದು ಅವರ ನಂಬಿಕೆ, ನಾವು ಕುರಿ ಕಡಿದರೆ ಅವರನ್ನೇ ಕರೆಸಿ ಕ್ಲೀನ್ ಮಾಡಸ್ತಿದ್ವಿ, ಮುಸ್ಲಿಂರು ಹಲಾಲ್ ಕಟ್ ಮಾಡಿದ್ದೆ ನಾವು ತಿನ್ನೋದು ಬಿಜೆಪಿಯವರು ಸಮಾಜದಲ್ಲಿ ಸಾಮರಸ್ಯ ಹಾಳು ಮಾಡುತ್ತಿದ್ದಾರೆ ಅಂತ ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದ್ದಾರೆ.
ಹಿಜಬ್ ಆಯ್ತು, ಹಲಾಲ್ ಕಟ್ ಆಯ್ತು ಈಗ ಧ್ವನಿವರ್ಧಕ ವಿಚಾರಕ್ಕೆ ಬಂದಿದಾರೆ, ಮಾವಿನಹಣ್ಣು ಮಾರಾಟದಲ್ಲಿಯೂ ವಿವಾದ ಸೃಷ್ಟಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇದೆಲ್ಲವೂ ಬಿಜೆಪಿಗೆ ತಿರುಗುಬಾಣವಾಗಲಿದೆ. ಜನರ ಮುಂದೆ ಹೋಗೋಕೆ ಅವರ ಬಳಿ ಸಾಧನೆಗಳಿಲ್ಲ. ಅದನ್ನ ಮರೆ ಮಚೋಕೆ ಧಾರ್ಮಿಕ ವಿಚಾರಕ್ಕೆ ಮುಂದಾಗಿದ್ದಾರೆ. ಈಗ ಮಸೀದಿಯಲ್ಲಿ ಮೈಕ್ ಬಳಸೋದು ವಿಷಯ ಈಗ ಬಂದಿದೆ.
ಖುರಾನ್ ಬರೆವಾಗ ಮೈಕಷ್ಟೇ ಅಲ್ಲ, ವಿದ್ಯುತ್ ಕೂಡ ಇರಲಿಲ್ಲ: ಸಿದ್ದರಾಮಯ್ಯ
ಮಾವಿನ ಹಣ್ಣು ಹಿಂದೂ ಮುಸ್ಲಿಂ ಬಹಳ ವರ್ಷದಿಂದ ವ್ಯಾಪಾರ ಮಾಡ್ತಿದ್ದಾರೆ. ನಮ್ಮೂರಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಹಣ್ಣು ಕೊಡ್ತಿದ್ವಿ. ಆದ್ರೆ ಬಿಜೆಪಿ ಮತಗಳ ಕ್ರೂಢೀಕರಣ ಮಾಡಬೇಕು ಅಂತ ಹೀಗೆ ಮಾಡ್ತಿದ್ದಾರೆ. ಧರ್ಮದ ಹೆಸರಿನ ಮೇಲೆ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ಇದೆಲ್ಲ ಹುನ್ನಾರ ಜನರಿಗೆ ಗೊತ್ತಾಗುತ್ತೆ.
ಬೆಲೆ ಏರಿಕೆ ಬಗ್ಗೆ ಯಾಕ ಮಾತನಾಡುತ್ತಿಲ್ಲ?:
ಬಿಜೆಪಿಯವರು(BJP) ಈಗ ಬೆಲೆ ಏರಿಕೆ ಬಗ್ಗೆ ಯಾಕೆ ಮಾತಡಲ್ಲ? ಗೊಬ್ಬರ ಸಹ ಏರಿಕೆ ಆಗಿದೆ, ಗ್ಯಾಸ್, ಅಡುಗೆ ಎಣ್ಣೆ, ಎಲ್ಲವೂ ಜಾಸ್ತಿ ಆಗಿದೆ. ಇದರ ಬಗ್ಗೆ ಅವರು ಮಾತಾಡಲ್ಲ. ಧಾರ್ಮಿಕ ಭಾವನೆ ಕೆರಳಿಸುವಂಥದ್ದು ನಾವು ಖಂಡಿಸುತ್ತೇವೆ ಅಂತ ಸಿದ್ದರಾಮಯ್ಯ ಹೇಳಿದ್ದಾರೆ.
ಟಾರ್ಗೆಟ್ 150 ಸೀಟು ಗೆಲ್ಲುವ ಸಾಮರ್ಥ್ಯವಿದೆ: ನಾವು 150 ಸೀಟು ಗೆಲ್ಲೋ ಸಾಮರ್ಥ್ಯವಿರೋದ್ರಿಂದ ರಾಹುಲ್ ಗಾಂಧಿ 150 ಟಾರ್ಗೆಟ್ ಕೊಟ್ಟಿದ್ದಾರೆ. ಖಂಡಿತ ನಮ್ಮ ಟಾರ್ಗೆಟ್ ನಾವು ರೀಚ್ ಆಗುತ್ತೇವೆ ಎಂದಿರುವ ಸಿದ್ದರಾಮಯ್ಯ, ಬಿಜೆಪಿ ಕೋಮು ದ್ವೇಷ ಬಿತ್ತುವ ಬಿಜೆಪಿ ಧೋರಣೆ ವಿರುದ್ಧ ರಾಜ್ಯಾದ್ಯಂತ ಹೋರಾಟ ಮಾಡ್ತೇವ, ಕೋವಿಡ್ ಇಲ್ಲಿ ಅಷ್ಟೇ ಅಲ್ಲ ಇಡೀ ಜಗತ್ತಿಗೇ ಇದೆ, ಆದರೂ ಹೂಡಿಕೆ ಕರ್ನಾಟಕಕ್ಕೆ ಬರದೆ ನೆರೆ ರಾಜ್ಯಗಳಿಗೆ ಹೋಗ್ರಿದೆ ಅಂದ್ರೆ ಅರ್ಥವೇನು.? ಎಲ್ಲ ಉದ್ಯಮಗಳು ರಾಜ್ಯದಲ್ಲಿ ಮುಚ್ಚಿ ಹೋಗುತ್ತಿವೆ. ನಾವು ಸುಳ್ಳು ಹೇಳಲ್ಲ, ನಾವು ಸತ್ಯ ಹೇಳಿಕೊಂಡು ಜನರ ಮುಂದೆ ಹೋಗ್ತೀವೆ. ಬೋಗಸ್ ಧರ್ಮ ಪ್ರಚಾರ ನಾವು ಮಾಡುವುದಿಲ್ಲ ಬಿಜೆಪಿಯ ಅಪಪ್ರಚಾರದ ವಿರುದ್ಧ ಜನ ಜಾಗೃತಿ ಮೂಡಿಸುತ್ತೇವೆ ಎಂದು ಸಿದ್ಧರಾಮಯ್ಯ ಹೇಳಿದ್ದಾರೆ.