* ಯಾರೋ ಒಬ್ಬರು ತಪ್ಪು ಮಾಡಿದರೆ ಎಲ್ಲರನ್ನು ಏಕೆ ಶಿಕ್ಷಿಸುವುದು? ಇದು ಸರಿಯಲ್ಲ
* ಸಮಾಜದಲಲ್ಲಿ ಶಾಂತಿ ನೆಲೆಸಲು ಏನು ಬೇಕೋ ಅದನ್ನು ಮಾಡಬೇಕು
* ಕೆಸರು ಎರಚುವ ಕೆಲಸ ಮಾಡಬಾರದು
ಹುಬ್ಬಳ್ಳಿ(ಏ.23): ಸಮಾಜದಲ್ಲಿ ಶಾಂತಿ ಕದಡುವ ಸಂಘಟನೆಗಳಿದ್ದರೆ ಅವುಗಳನ್ನು ಬಿಜೆಪಿ ಸರ್ಕಾರ(BJP) ನಿಷೇಧಿಸಲಿ, ಅದಕ್ಕೆ ನಮ್ಮದೇನೂ ತಕರಾರಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ಹೇಳಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಧಮ್ ಇದ್ದರೆ ಎಸ್‌ಡಿಪಿಐ(SDPI), ಎಂಐಎಂ(MIM), ಆರ್‌ಎಸ್‌ಎಸ್(RSS), ಬಜರಂಗದಳ ಸೇರಿದಂತೆ ಯಾವ್ಯಾವ ಸಂಘಟನೆಗಳು ಶಾಂತಿ ಕದಡುತ್ತಿವೆಯೋ ಅವುಗಳನ್ನೆಲ್ಲ ಬ್ಯಾನ್ ಮಾಡಲಿ. ಬೇಡ ಎಂದವರು ಯಾರು ಎಂದು ಪ್ರಶ್ನಿಸಿದರು.
ರಾಜೀನಾಮೆ ನೀಡಲಿ:
undefined
ಆರಗ ಜ್ಞಾನೇಂದ್ರ ಮೋಸ್ಟ್ ಇರ್‌ರೆಸ್ಪಾನ್ಸಿಬಲ್ ಹೋಂ ಮಿನಿಸ್ಟರ್. ಜವಾಬ್ದಾರಿಯೇ ಇಲ್ಲ ಅವರಿಗೆ. ಏನೇನೋ ಹೇಳಿಕೆ ಕೊಡುತ್ತಾರೆ. ಬೆಂಗಳೂರಲ್ಲೂ ಇದೇ ರೀತಿ ಮಾಡಿದರು. ಇದೀಗ ಹುಬ್ಬಳ್ಳಿ ಗಲಾಟೆಗೆ(Hubballi Riots) ಸಂಬಂಧಪಟ್ಟಂತೆಯೂ ಅದೇ ರೀತಿ ಮಾಡುತ್ತಿದ್ದಾರೆ. ಹೋಮ ಡಿಪಾರ್ಚ್‌ಮೆಂಟ್ ಇರುವುದು ಶಾಂತಿ ಕಾಪಾಡಲು. ಕಾನೂನು ರೀತಿಯಲ್ಲಿ ನಡೆದುಕೊಳ್ಳದಿದ್ದರೆ ಸರಿಪಡಿಸಲು. ಆದರೆ ಮಂತ್ರಿಯಾಗಿ ಇವರೇ ಗೊಂದಲದ ಹೇಳಿಕೆಗಳನ್ನು ನೀಡಿದರೆ ಹೇಗೆ? ಜವಾಬ್ದಾರಿಯಿಂದ ಹೇಳಿಕೆಗಳನ್ನು ನೀಡಬೇಕು. ಅದರ್‌ವೈಸ್ ರಿಸೈನ್ ಆ್ಯಂಡ್ ಗೆಟ್‌ಔಟ್ ಎಂದು ಗುಡುಗಿದ ಸಿದ್ದರಾಮಯ್ಯ, ಗೃಹ ಸಚಿವರಾಗಲು ಅವರ ಅನ್‌ಫಿಟ್ ಎಂದು ಕಿಡಿಕಾರಿದರು.
Hubli Riots: ಸ್ಫೋಟಕ ಮಾಹಿತಿ ಬಾಯ್ಬಿಟ್ಟ ಬಂಧಿತ ವಸೀಮ್ ಪಠಾಣ್!
ಹುಬ್ಬಳ್ಳಿ ಗಲಭೆಯಲ್ಲಿ ಕಾಂಗ್ರೆಸ್(Congress) ಕೈವಾಡವಿದೆ ಎಂಬ ಸಚಿವ ಆರ್. ಅಶೋಕ(R Ashok) ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಅವರು ಘಟನೆಯ ಪ್ರತ್ಯಕ್ಷದರ್ಶಿಯೇ. ಅವರಿಗೆ ಹೇಗೆ ಗೊತ್ತು ಎಂದು ಮರುಪ್ರಶ್ನಿಸಿದರು.
ಹುಬ್ಬಳ್ಳಿಯಲ್ಲಿ ಗಲಭೆ ನಡೆದಿರುವುದು ಅತ್ಯಂತ ಖಂಡನೀಯ. ತಪ್ಪು ಯಾರೇ ಮಾಡಿರಲಿ ಅವರಿಗೆ ತಕ್ಕ ಶಿಕ್ಷೆಯಾಗಬೇಕು. ಅದೇ ರೀತಿ ನಿರಪರಾಧಿಗಳ ಮೇಲೆ ಕ್ರಮವಾಗಬಾರದು. ಇದನ್ನೇ ನಾವು ಹೇಳಿರುವುದು ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಮೌಲ್ವಿಗಳ ಸಮೀಕ್ಷೆ ನಡೆಸಬೇಕೆಂಬ ಬಿಜೆಪಿಗರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಯಾರೋ ಒಬ್ಬರು ತಪ್ಪು ಮಾಡಿದರೆ ಎಲ್ಲರನ್ನು ಏಕೆ ಶಿಕ್ಷಿಸುವುದು? ಇದು ಸರಿಯಲ್ಲ. ಆದರಿಂದ ಸಮಾಜದಲಲ್ಲಿ ಶಾಂತಿ ನೆಲೆಸಲು ಏನು ಬೇಕೋ ಅದನ್ನು ಮಾಡಬೇಕು. ವಿನಾಕಾರಣ ಕೆಸರು ಎರಚುವ ಕೆಲಸ ಮಾಡಬಾರದು ಎಂದು ನುಡಿದರು.
ಹುಬ್ಬಳ್ಳಿ ಗಲಭೆಗೆ ಪ್ರೇರಣೆ ಕೊಟ್ಟವರಾರು ಗೊತ್ತಾ? ಇಲ್ಲಿದೆ ಎಕ್ಸ್‌ಕ್ಲ್ಯೂಸಿವ್ ಸ್ಟೋರಿ
ಪಿಎಸ್‌ಐ ಅಕ್ರಮ ನೇಮಕಾತಿಯಲ್ಲಿ ಯಾರೇ ತಪ್ಪು ಮಾಡಿದ್ದರೂ ಕಾನೂನು ಕ್ರಮವಾಗಬೇಕು. ಬಹಳ ಜನ ಪರೀಕ್ಷೆ ಬರೆದಿದ್ದರು. ಕೆಲವರಿಗೆ ಅನ್ಯಾಯವಾಗಿದೆ. ಆದಕಾರಣ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ತಪ್ಪಿತಸ್ಥರನ್ನು ಅರೆಸ್ಟ್ ಮಾಡಿ ಶಿಕ್ಷೆಗೊಳಪಡಿಸಬೇಕು ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಆಮ್ ಆದ್ಮಿ ಪಕ್ಷ- ರೈತ ಸಂಘ ಮೈತ್ರಿ ಮಾಡಿಕೊಂಡಿದ್ದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಆಪ್ ಬಗ್ಗೆ ನಾನೇನೂ ಮಾತನಾಡಲ್ಲ. ಅದು ರಾಜ್ಯದಲ್ಲಿ ಬಹಳ ವರ್ಷಗಳಿಂದ ಇದೆ. ಆದರೆ ಯಾವುದೇ ಚುನಾವಣೆ ಎದುರಿಸಿಲ್ಲ. ಇದೀಗ ಕೇಜ್ರಿವಾಲ್ ಬಂದು ಚುನಾವಣೆಗೆ ಸ್ಪರ್ಧಿಸುವುದಾಗಿ ಹೇಳಿದ್ದಾರೆ. ಅವರದು ರಾಜಕೀಯ ಪಕ್ಷ, ಸ್ಪರ್ಧಿಸಲಿ, ಜನರ ನಡುವೆ ಬರಲಿ, ಅದಕ್ಕೇನು? ಎಂದರು. ಚುನಾವಣೆ(Election) ರಣತಂತ್ರಕ್ಕಾಗಿ ಪ್ರಶಾಂತ ಕಿಶೋರ ಅವರನ್ನು ನೇಮಿಸಿರುವ ಬಗ್ಗೆ ಪ್ರಶ್ನಿಸಿದ್ದಕ್ಕೆ , ಆ ಬಗ್ಗೆ ನನಗೇನೂ ಗೊತ್ತಿಲ್ಲ. ಸೋನಿಯಾಗಾಂಧಿ ಅವರು ಕಮಿಟಿ ಮಾಡಿರುವ ಬಗ್ಗೆಯೂ ಗೊತ್ತಿಲ್ಲ ಎಂದು ನುಡಿದರು.