ಕನ್ನಡ ರಾಜ್ಯೋತ್ಸವ ಬಿಟ್ಟು ದೆಹಲಿಗೆ ಹೋದ ಸಿದ್ದರಾಮಯ್ಯ! ನಾಡಹಬ್ಬಕ್ಕಿಂತ ಪ್ರತಿಭಟನೆಯೇ ಮುಖ್ಯವಾಯಿತೇ?

Kannadaprabha News   | Kannada Prabha
Published : Nov 01, 2026, 06:35 AM IST
Siddaramaiah delhi

ಸಾರಾಂಶ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂಡಿಯಾ ಕೂಟದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ದೆಹಲಿಗೆ ತೆರಳಿದ್ದಾರೆ. ಕ್ಲೀನ್‌ಚಿಟ್ ಸಿಕ್ಕ ಬೆನ್ನಲ್ಲೇ ಅವರು ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ ರಾಜ್ಯ ರಾಜಕೀಯದ ಬಗ್ಗೆ ಚರ್ಚಿಸುವ ಸಾಧ್ಯತೆಯಿದೆ. ಕೆಪಿಸಿಸಿ ನಾಯಕರು ಕೂಡ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ.

ಬೆಂಗಳೂರು (ನ.1): ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ಅವರು ಭಾನುವಾರ ರಾಮಲೀಲಾ ಮೈದಾನ(Ramlila Maidan)ದಲ್ಲಿ ಇಂಡಿಯಾ ಕೂಟ(Indi bloc)ದ ನೇತೃತ್ವದಲ್ಲಿ ನಡೆಯಲಿರುವ ಬೃಹತ್‌ ಪ್ರತಿಭಟನೆಯಲ್ಲಿ ಭಾಗವಹಿಸಲು ಶುಕ್ರವಾರ ಸಂಜೆ ದೆಹಲಿಗೆ ತೆರಳಿದ್ದಾರೆ.

ರಾಹುಲ್ ಗಾಂಧಿ ಭೇಟಿ ಸಾಧ್ಯತೆ

ಎಸ್ಐಆರ್‌ ಮತಗಳ್ಳತನ(SIR Votechori)ದ ವಿರುದ್ಧ ನಡೆಯುತ್ತಿರುವ ಬೃಹತ್‌ ಪ್ರತಿಭಟನೆಯಲ್ಲಿ ಭಾಗವಹಿಸಲಿರುವ ಸಿದ್ದರಾಮಯ್ಯ ಅವರು ಸಂಜೆ ರಾಹುಲ್‌ಗಾಂಧಿ ಅವರನ್ನು ಭೇಟಿ ಮಾಡುವ ಸಾಧ್ಯತೆಯಿದೆ.

ಇದನ್ನೂ ಓದಿ:ರಾಜ್ಯೋತ್ಸವ ದಿನದಂದೇ ದೆಹಲಿಯಲ್ಲಿ ಪ್ರತಿಭಟನೆ: ರಾಹುಲ್ ಗಾಂಧಿ ಕೈನಲ್ಲೇ ಕಾಂಗ್ರೆಸಿನ ಅಂತ್ಯ ಎಂದ ಛಲವಾದಿ!

ರಾಜ್ಯ ರಾಜಕೀಯದಲ್ಲಿ ನಡೆಯುತ್ತಿರುವ ಸ್ಟಿಂಗ್ ಕೋಲಾಹಲ ಹಾಗೂ ಪೊಲೀಸ್‌ ತನಿಖೆಯಲ್ಲಿ ಸಿದ್ದರಾಮಯ್ಯ ಅವರಿಗೆ ಕ್ಲೀನ್‌ಚಿಟ್‌ ಸಿಕ್ಕ ಬೆನ್ನಲ್ಲೇ ಸಿದ್ದರಾಮಯ್ಯ ಅವರು ವರಿಷ್ಠರನ್ನು ಭೇಟಿ ಮಾಡುತ್ತಿರುವುದು ಕುತೂಹಲ ಕೆರಳಿಸಿದೆ.

ಪ್ರಸ್ತತ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳು, ಸರ್ಕಾರದ ಆಡಳಿತ, ಮುಂಬರುವ ಚುನಾವಣೆ, ಪರಿಷತ್‌ ಚುನಾವಣೆ ಸೋಲು ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಯುವ ನಿರೀಕ್ಷೆಯಿದೆ.

ಇದನ್ನೂ ಓದಿ: 'ಮದುವೆ ಆದೋರು ಮಕ್ಕಳ ಮಾಡ್ಕೊಳ್ಳೋಕೆ ಯೋಚ್ನೆ ಮಾಡ್ಬೇಕು.. ಹಾಲಿನ ಬೆಲೆ ಹೆಚ್ಚಳಕ್ಕೆ ವಿಜಯೇಂದ್ರ ವಾಗ್ದಾಳಿ!

ಇಂದು ಕಾಂಗ್ರೆಸ್‌ನ ದಂಡೇ ದೆಹಲಿಗೆ

ಇದೇ ವೇಳೆ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್‌, ಕೆಪಿಸಿಸಿ ಪದಾಧಿಕಾರಿಗಳು, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರು, ಮುಂಚೂಣಿ ಘಟಕಗಳ ಪದಾಧಿಕಾರಿಗಳು ಸಹ ದೆಹಲಿಯಲ್ಲಿ ಸೇರಿಕೊಂಡಿದ್ದು, ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿದುಬಂದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

'ಯಾರೀ ಅದು ಕಮಿಷನರ್?' ಈ ಕುಮಾರಸ್ವಾಮಿಯನ್ನ ಟಚ್ ಮಾಡೋಕೆ ಆಗಲ್ಲ-HDK ವಾಗ್ದಾಳಿ
'ಅಭಿ ಪಿಕ್ಚರ್ ಬಾಕಿ ಹೈ' ಕುಮಾರಸ್ವಾಮಿ ಆಪ್ತರು ಸ್ಟಿಂಗ್ ಆಪರೇಷನ್ ಕೇಸ್‌ನ ವಿಚಾರಣೆಗೆ ಬರದೇ ನಾಪತ್ತೆ ಎಂದ ಪ್ರಿಯಾಂಕ್ ಖರ್ಗೆ