'ಮದುವೆ ಆದೋರು ಮಕ್ಕಳ ಮಾಡ್ಕೊಳ್ಳೋಕೆ ಯೋಚ್ನೆ ಮಾಡ್ಬೇಕು.. ಹಾಲಿನ ಬೆಲೆ ಹೆಚ್ಚಳಕ್ಕೆ ವಿಜಯೇಂದ್ರ ವಾಗ್ದಾಳಿ!

Published : Oct 31, 2026, 03:18 PM ISTUpdated : Oct 31, 2026, 03:27 PM IST
BY Vijayendra vs Dk Shivakuomar

ಸಾರಾಂಶ

ದೀಪಾವಳಿ ಮತ್ತು ರಾಜ್ಯೋತ್ಸವದ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರ ಹಾಲಿನ ದರ ಹೆಚ್ಚಿಸಿ ಜನರಿಗೆ ಬರೆ ಎಳೆದಿದೆ ಎಂದು ಬಿ.ವೈ. ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಜನಸಾಮಾನ್ಯರು ಜೀವನ ನಡೆಸುವುದು ಅತ್ಯಂತ ದುಬಾರಿಯಾಗಿದೆ ಎಂದು ಅವರು ಟೀಕಿಸಿದ್ದಾರೆ.

ದಾವಣಗೆರೆ (ಅ.31): ಡಿಕೆ ಶಿವಕುಮಾರ ನೇತೃತ್ವದ ಕಾಂಗ್ರೆಸ್ ಸರ್ಕಾರ ನಾಡಿನ ಜನತೆಗೆ ದೀಪಾವಳಿ, ರಾಜ್ಯೋತ್ಸವದ ದೊಡ್ಡ ಉಡುಗೊರೆ ನೀಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವ್ಯಂಗ್ಯವಾಡಿದರು.

ದಾವಣಗರೆಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯೋತ್ಸವ, ದೀಪಾವಳಿ ಹಬ್ಬದ ಸಮಯದಲ್ಲಿ ಹಾಲಿನ ಬೆಲೆ 8 ರೂಪಾಯಿ ಹೆಚ್ಚು ಮಾಡಿದ್ದಾರೆ. ಮೊಸರಿನ ಬೆಲೆ ಹೆಚ್ಚಳವಾಗಿದೆ. ಇನ್ನೇನು ಕೆಲವು ದಿನಗಳಲ್ಲಿ ಬಸ್ ದರವೂ ಹೆಚ್ಚಳ ಮಾಡುವ ತೀರ್ಮಾನ ಮಾಡಿದ್ದಾರೆ. ರಾಜ್ಯದ ಮುಖ್ಯಮಂತ್ರಿಗಳಿಗೆ ನಾಡಿನ ಜನರ ಬಗ್ಗೆ ನಿಜವಾಗಿಯೂ ಕಾಳಜಿ ಇದ್ದಿದ್ದರೆ ಈ ರೀತಿ ತೀರ್ಮಾನ ಮಾಡುತ್ತಿರಲಿಲ್ಲ ಎಂದು ಕಿಡಿಕಾರಿದರು.

ರೈತರಿಗೆ ಪ್ರೋತ್ಸಾಹ ಧನ ಸಿಗೋದಾದ್ರೆ ಸ್ವಾಗತ, ಆದರೆ ಮಾಡ್ತಿರೋದೇನು?

ಬರಗಾಲದ ಸಮಯದಲ್ಲೂ ನಾಡಿನ ಜನರ ಮೇಲೆ ದರ ಹೆಚ್ಚಳದ ಬರೆ ಎಳೆಯುವ ಸ್ಥಿತಿ ಏಕೆ ಬಂತು? ಹಾಲಿನ ದರ ಹೆಚ್ಚಳದಿಂದ ರೈತರಿಗೆ ಪ್ರೋತ್ಹಾಹ ಧನ ಹೆಚ್ಚಳವಾಗುವುದಾದರೆ ನಾವು ಅದನ್ನು ಸ್ವಾಗತ ಮಾಡ್ತೇವೆ. ಹಿಂದೆ ಬಿಎಸ್‌ವೈ ಸಿಎಂ ಆಗಿದ್ದಾಗಲೂ ಎರಡು ರೂಪಾಯಿ ಸಹಾಯಧನ ನೀಡಿದ್ರು. ಆದ್ರೆ ಈ ಬಾರಿ ಗ್ರಾಹಕರ ಮೇಲೆಯೇ ಹಾಕುವ ಕೆಲಸ ಆದ್ರೆ ಈ ಭಾರ ಗ್ರಾಹಕರ ಮೇಲೆ ಹಾಕುವ ಕೆಲಸ ಮಾಡಿರಲಿಲ್ಲ. ಆದರೆ ಈಗಿನ ಲಜ್ಜೆಗೆಟ್ಟ ಕಾಂಗ್ರೆಸ್ ಸರ್ಕಾರ ಜನರ ಮೇಲೆ ಬರೆ ಎಳೆಯುವ ಕೆಲಸಕ್ಕೆ ಮುಂದಾಗಿದೆ. ಜನಸಾಮಾನ್ಯರ ಮೇಲೆ ಭಾರ ಹಾಕಿ ರೈತರಿಗೆ ಕೊಡೋದ್ರಲ್ಲಿ ಏನು ಬಂತು? ಎಂದು ಪ್ರಶ್ನಿಸಿದರು.

ಮದುವೆಯಾದೋರು ಮಕ್ಕಳು ಮಾಡ್ಕೊಳ್ಳೋಕೆ ಯೋಚನೆ ಮಾಡಬೇಕು

ವಿಜಯೇಂದ್ರ ಕಳೆದ ಮೂರು ವರ್ಷಗಳಿಂದ ಅಗತ್ಯ ವಸ್ತುಗಳ ಬೆಲೆ ಹೆಚ್ಚಿಸುತ್ತಲೇ ಇದೆ. ಪೆಟ್ರೋಲ್, ಡೀಸೆಲ್ ಹೆಚ್ಚಳ ಮಾಡಿದ್ರು, ಮದ್ಯದ ದರ ಹೆಚ್ಚಳ ಮಾಡಿದ್ರು, ಆಸ್ಪತ್ರೆಯಲ್ಲೂ ದರ ಹೆಚ್ಚಳವಾಗಿದೆ, ಬೆಂಗಳೂರಿನಲ್ಲಿ ವೆಹಿಕಲ್ ಪಾರ್ಕಿಂಗ್‌ಗೂ ದರ ಹೆಚ್ಚಿಸಿದ್ರು, ಗಾಳಿ ಬಿಟ್ಟು ಉಳಿದ ಎಲ್ಲ ವಸ್ತುಗಳ ಮೇಲೆ ದರ ಹೆಚ್ಚಿಸಲಾಗಿದೆ. ಈ ಸರ್ಕಾರದಲ್ಲಿ ಜನರ ಪರಿಸ್ಥಿತಿ ಹೇಗಿದೆ ಎಂದರೆ ಮದುವೆಯಾದವರು ಮಕ್ಕಳ ಮಾಡಿಕೊಳ್ಳಲು ಯೋಚನೆ ಮಾಡಬೇಕು ಜೀವನ ನಡೆಸೋದು ಅಷ್ಟು ದುಬಾರಿಯಾಗಿದೆ ಎಂದು ವಾಗ್ದಾಳಿ ನಡೆಸಿದರು. ಈ ಸರ್ಕಾರಕ್ಕೆ ಜನರ ಮೇಲೆ ಕಾಳಜಿ ಇದ್ದಿದ್ದೇ ಆದ್ರೆ ಈ ರೀತಿ ಬರಗಾಲದಲ್ಲಿ ಬೆಲೆ ಹೆಚ್ಚಳ ಮಾಡಿ ಬರೆ ಎಳೆಯುವ ಕೆಲಸ ನಿಲ್ಲಿಸಬೇಕು, ರೈತರಿಗೆ ಪ್ರೋತ್ಸಾಹ ಧನ ರಾಜ್ಯವೇ ಭರಿಸಬೇಕು ಎಂದು ಆಗ್ರಹಿಸಿದರು.

ಯಾವನು ಹೇಳಿದವನು.. ಏಕವಚನದಲ್ಲಿ ಬಿವೈ ವಿಜಯೇಂದ್ರ ವಾಗ್ದಾಳಿ

ಒಟ್ಟಾರೆ ಮೀಸಲಾತಿ ಶೇ.56ಕ್ಕೆ ಹೆಚ್ಚಳ ಕಾಯ್ದೆ ಹೈಕೋರ್ಟ್ ರದ್ದುಪಡಿಸಿದ ವಿಚಾರ ಸಂಬಂಧಿಸಿದಂತೆ ಇದಕ್ಕೆ ಪ್ರಧಾನಿ ಮೋದಿ ಟೀಂ ಕಾರಣ ಎಂಬ ಉಗ್ರಪ್ಪ ಹೇಳಿಕೆಗೆ ತೀವ್ರ ಕೆಂಡಾಮಂಡಲರಾಗಿ 'ಯಾವನು ಹೇಳಿದವನು..' ಎಂದು ವಿಜಯೇಂದ್ರ ಏಕವಚನದಲ್ಲೇ ವಾಗ್ದಾಳಿ ನಡೆಸಿದರು.

ಈ ನನ್ನ ಮಕ್ಕಳಿಗೆ ಮಾನ ಮಾರ್ಯಾದೆ ಏನಾದರೂ ಇದೆಯಾ ಎಂದು ಆಕ್ರೋಶ ವ್ಯಕ್ತಪಡಿಸಿದ ವಿಜಯೇಂದ್ರ, ಕೋರ್ಟ್‌ನಲ್ಲಿ ಸೂಕ್ತವಾದ ವಾದ ಮಂಡನೆ ಮಾಡಬೇಕಿತ್ತು. ಈ ಕಾಂಗ್ರೆಸ್‌ನವರು ಬರೀ ಕಪಟ ನಾಟಕ ಮಾಡ್ತಾ ಗೊಂದಲ ಸೃಷ್ಟಿಸಲು ಹೊರಟಿದ್ದಾರೆ. ಸುಪ್ರೀಂಕೋರ್ಟ್ ಆದೇಶ ಸದ್ಭಳಕೆ ಮಾಡಿಕೊಳ್ಳದೇ ನ್ಯಾಯಾಲಯದಲ್ಲಿ ಸರಿಯಾಗಿ ವಾದಮಂಡನೆ ಮಾಡಿಲ್ಲ. ಕಬ್ಬಿನ ವಿಚಾರದಲ್ಲೂ ವಿಶೇಷ ವಿಮಾನದಲ್ಲಿ ಬೆಳಗಾವಿಗೆ ಹಾರಿ ಹೋದ್ರು. ರಾಜ್ಯದ ಸಕ್ಕರೆ ಕಾರ್ಖಾನೆಗಳಿಂದ ರಾಜ್ಯ ಸರ್ಕಾರಕ್ಕೆ 15 ಸಾವಿರ ಕೋಟಿ ಪ್ರತಿ ವರ್ಷ ಬರ್ತದೆ. ಈಗ ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸಬೇಕು. ಕಬ್ಬು ಬೆಳೆಗಾರರ ಪರವಾಗಿ ಬಿಜೆಪಿ ಬೀದಿಗಿಳಿದು ಹೋರಾಟ ಮಾಡುತ್ತಿದೆ. ಸ್ವತಃ ಸಿಎಂ ಡಿಕೆ ಶಿವಕುಮಾರ ಜೇಬು ಖಾಲಿಯಾಗಿದೆ ಅಂತಾ ಹೇಳಿದ್ಮೇಲೆ ಇದಕ್ಕಿಂತ ಉದಾಹರಣೆ ಬೇಕಾ? ರಾಜ್ಯದ ಆರ್ಥಿಕ ಪರಿಸ್ಥಿತಿ ಬಗ್ಗೆ ಶ್ವೇತ ಪತ್ರ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಪ್ರತಿಭಟನೆಗೆ ಬನ್ನಿ, ಶಾಪಿಂಗ್ ಕೂಡ ಮಾಡಿ..! ದೆಹಲಿಗೆ ಬರುವವರಿಗೆ ರಾಹುಲ್ ಗಾಂಧಿ ಹೀಗೇಕೆ ಹೇಳಿದ್ರು, ಅಸಲಿ ಕಾರಣವೇನು?
Bengaluru: ಸ್ಟಿಂಗ್ ಕೇಸ್, ಕೃಪಾ ಆಳ್ವಾ ಉಚ್ಚಾಟನೆಗೆ ಕಾರಣ ಕೊಟ್ಟ ಬಿ.ಕೆ. ಹರಿಪ್ರಸಾದ್‌