
ಯಾದಗಿರಿ (ಅ.31): ನಾಳೆ ಕರ್ನಾಟಕದಲ್ಲಿ ರಾಜ್ಯೋತ್ಸವದ ಸಂಭ್ರಮ. ಆದರೆ ಇಂಥ ಹೊತ್ತಲ್ಲಿ ರಾಜ್ಯದ ಕಾಂಗ್ರೆಸ್ ನಾಯಕರು ದೆಹಲಿಯಲ್ಲಿ ಹೋರಾಟ ಮಾಡಲು ಹೋಗುತ್ತಿದ್ದಾರೆ. ಕನ್ನಡ ರಾಜ್ಯೋತ್ಸವ ನಮ್ಮ ನಾಡಿನ ಹಬ್ಬ, ಆದರೆ ಕಾಂಗ್ರೆಸ್ ನಾಯಕರಿಗೆ ದೆಹಲಿ ಕನ್ನಡ ಹಬ್ಬಕ್ಕಿಂತ ದೆಹಲಿ ಹೋರಾಟ ಮುಖ್ಯವಾಗಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ ನಡೆಸಿದರು.
ಎಸ್ಐಆರ್ ವಿರೋಧಿಸಿ ಕಾಂಗ್ರೆಸ್ ನಾಳೆ ದೆಹಲಿ ಚಲೋ ಪ್ರತಿಭಟನೆಗೆ ಕರೆ ನೀಡಿರುವ ಹಿನ್ನೆಲೆ ರಾಜ್ಯದ ನಾಯಕರು ನಾಳೆ ದೆಹಲಿ ಹೋರಾಟದಲ್ಲಿ ಭಾಗಿಯಾಗಲಿದ್ದಾರೆ. ಈ ವಿಚಾರವಾಗಿ ಇಂದು ಯಾದಗಿರಿಯಲ್ಲಿ ಮಾಧ್ಯಮಳೊಂದಿಗೆ ಮಾತನಾಡುವ ವೇಳೆ ಛಲವಾದಿ ನಾರಾಯಣಸ್ವಾಮಿ ಗರಂ ಆದರು. ನಾಡಿನ ಜನರು ಕನ್ನಡ ಹಬ್ಬ ಆಚರಿಸುವಾಗ ಕಾಂಗ್ರೆಸ್ ನಾಯಕರು ದೆಹಲಿ ಪ್ರತಿಭಟನೆಗೆ ಹೋಗ್ತಾರೆ. ದಸರಾ ಹಬ್ಬದಲ್ಲೂ ಸಿಎಂ ಪ್ರತಿಭಟನೆಯಲ್ಲಿ ಭಾಗಿಯಾದಾಗ ಏನಾಯ್ತು ಎಂಬುದು ರಾಜ್ಯದ ಜನತೆ ನೋಡಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ನಾಡಹಬ್ಬಕ್ಕಿಂತ ಅವರ ಅಧಿಕಾರದ ಹಪಾಹಪಿ ಹೆಚ್ಚಾಗಿದೆ ಎಂದು ಗುಡುಗಿದರು.
ಚುನಾವಣಾ ಆಯೋಗವು ಈಗಾಗಲೇ ಎಸ್ಐಆರ್ ಬಗ್ಗೆ ವಿವರಣೆ ಕೊಟ್ಟಿದ್ದಾರೆ. ಆದ್ರೂ ಕಾಂಗ್ರೆಸ್ ಎಸ್ಐಆರ್ ನೆಪದಲ್ಲಿ ವಿದೇಶಿ ಶಕ್ತಿಗಳ ಜೊತೆ ಸೇರಿ ದೇಶದಲ್ಲಿ ಅಶಾಂತಿ, ಅರಾಜಕತೆ ಸೃಷ್ಟಿಸುವ ಮೂಲಕ ಕೇಂದ್ರ ಸರ್ಕಾರವನ್ನು ತೆಗೆಯಲು ಸಂವಿಧಾನಬಾಹಿರ ಸಂಚು ನಡೆಸಿದ್ದಾರೆ ಎಂದು ಕಿಡಿಕಾರಿದರು.
ಕಾಂಗ್ರೆಸ್ ಪಕ್ಷ ಈಗ ದೇಶದಲ್ಲಿ ಪ್ಯಾಕೆಜ್ ಹೋರಾಟ ಮಾಡುತ್ತಿದೆ. ಬ್ರೇನ್ಲೆಸ್ ರಾಹುಲ್ ಗಾಂಧಿ ಒಂದು ವಾರ ಹೋರಾಟ ಮಾಡ್ತಾರೆ ನಂತರ ವಿದೇಶಕ್ಕೆ ಹೋಗುತ್ತಾರೆ. ವಿದೇಶಕ್ಕೆ ಹೋಗಿ ಏನು ಮಾಡ್ತಾರೋ, ಎಲ್ಲಿಗೆ ಹೋಗ್ತಾರೋ ಯಾರಿಗೂ ಗೊತ್ತಿಲ್ಲ. ಕಾಂಗ್ರೆಸ್ ರಿಜಿಮ್ ಚೇಂಜ್ ಮಾಡಲು ಹೊರಟಿದ್ದಾರೆ. ಅದಕ್ಕಾಗಿ ದೇಶದಲ್ಲಿ ಅರಾಜಕತೆ, ಅಶಾಂತಿ ಸೃಷ್ಟಿಸಲು ವಿದೇಶಿ ಶಕ್ತಿಗಳೊಂದಿಗೆ ಕೈಜೋಡಿಸಿದ್ದಾರೆ. ಆದರೆ ಒಂದು ಮಾತು ನೆನಪಿರಲಿ, ರಾಹುಲ್ ಗಾಂಧಿ ಮೂಲಕವೇ ದೇಶದಲ್ಲಿ ಕಾಂಗ್ರೆಸಿನ ಅಂತ್ಯವಾಗಲಿದೆ ಎಂದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧವೂ ವಾಗ್ದಾಳಿ ನಡೆಸಿದ ಛಲವಾದಿ, ದೇಶದ ಹೆಮ್ಮೆಯ ಪ್ರಧಾನಿಯವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡ್ತಾರೆ, ಖರ್ಗೆ ಅಧಿಕಾರವನ್ನಷ್ಟೇ, ಸ್ಥಿಮಿತ ಕಳೆದುಕೊಂಡಿದ್ದಾರೆ. ಖರ್ಗೆ ಬಾಯಿಗೆ ಬಂದಂತೆ ಮಾತನಾಡುವ ಮೂಲಕ ದೇಶದ ಜನರ ಮುಂದೆ ತಮ್ಮ ಗೌರವ ತಾವೇ ಕಳೆದುಕೊಳ್ಳೂತ್ತಿದ್ದಾರೆ. ಹಿಂದೂಳಿದ ವ್ಯಕ್ತಿ ಪ್ರಧಾನಿ ಆಗಿದ್ದು ಇವರಿಗೆ ಏಕೆ ಸಹಿಸಿಕೊಳ್ಳಲು ಆಗುತ್ತಿಲ್ಲ? ಕಾಂಗ್ರೆಸ್fನ ದುರ್ನಡತೆಗೆ ಮುಂದಿನ ಚುನಾವಣೆಯಲ್ಲಿ ದೇಶದ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.