ಪೂರ್ಣಾವಧಿ ಸಿಎಂ ಆದರೆ ಸಿದ್ದರಾಮಯ್ಯ ದಾಖಲೆ..!

Published : May 19, 2023, 07:29 AM ISTUpdated : May 19, 2023, 07:45 AM IST
ಪೂರ್ಣಾವಧಿ ಸಿಎಂ ಆದರೆ ಸಿದ್ದರಾಮಯ್ಯ ದಾಖಲೆ..!

ಸಾರಾಂಶ

ಒಂದು ವೇಳೆ ಸಂಧಾನ ಸೂತ್ರ ನಿಜವಾಗಿ ಎರಡೂವರೆ ವರ್ಷ ಆಡಳಿತ ನಡೆಸಿದರೆ ಆಗ ಸಿದ್ದರಾಮಯ್ಯ ಅವರು ಏಳು ವರ್ಷ 183 ದಿನ ಆಡಳಿತ ನಡೆಸಿದಂತೆ ಆಗುತ್ತದೆ. ತನ್ಮೂಲಕ ರಾಜ್ಯದಲ್ಲಿ ಅತಿ ಹೆಚ್ಚು ಅವಧಿ ಆಡಳಿತ ನಡೆಸಿದವರ ಪಟ್ಟಿಯಲ್ಲಿ ದೇವರಾಜ ಅರಸು ನಂತರದ ಸ್ಥಾನ ಪಡೆಯಲಿದ್ದಾರೆ. ಪ್ರಸ್ತುತ ಎಸ್‌. ನಿಜಲಿಂಗಪ್ಪ ಅವರು (7 ವರ್ಷ 175 ದಿನ) ಎರಡನೇ ಅತಿ ಹೆಚ್ಚು ಅವಧಿಗೆ ಆಡಳಿತ ನಡೆಸಿದ ದಾಖಲೆ ಹೊಂದಿದ್ದಾರೆ.

ಬೆಂಗಳೂರು(ಮೇ.19):  ನಾಡಿನ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಸಿದ್ದರಾಮಯ್ಯ ಅವರು ಈ ಬಾರಿ ಪರಿಪೂರ್ಣ ಅರ್ಥಾತ್‌ ಐದು ವರ್ಷ ಪೂರ್ಣ ಆಡಳಿತ ನಡೆಸಿದರೆ ದೇವರಾಜ ಅರಸು ಅವರನ್ನು ಮೀರಿ ಕರುನಾಡಿನಲ್ಲಿ ಅತಿ ಹೆಚ್ಚು ಅವಧಿ (ಹತ್ತು ವರ್ಷ) ಆಡಳಿತ ನಡೆಸಿದ ಮೊದಲ ಮುಖ್ಯಮಂತ್ರಿಯಾಗಲಿದ್ದಾರೆ. ತನ್ಮೂಲಕ ದಾಖಲೆ ನಿರ್ಮಾಣವಾಗಲಿದೆ.

ಒಂದು ವೇಳೆ ಸಂಧಾನ ಸೂತ್ರ ನಿಜವಾಗಿ ಎರಡೂವರೆ ವರ್ಷ ಆಡಳಿತ ನಡೆಸಿದರೆ ಆಗ ಸಿದ್ದರಾಮಯ್ಯ ಅವರು ಏಳು ವರ್ಷ 183 ದಿನ ಆಡಳಿತ ನಡೆಸಿದಂತೆ ಆಗುತ್ತದೆ. ತನ್ಮೂಲಕ ರಾಜ್ಯದಲ್ಲಿ ಅತಿ ಹೆಚ್ಚು ಅವಧಿ ಆಡಳಿತ ನಡೆಸಿದವರ ಪಟ್ಟಿಯಲ್ಲಿ ದೇವರಾಜ ಅರಸು ನಂತರದ ಸ್ಥಾನ ಪಡೆಯಲಿದ್ದಾರೆ. ಪ್ರಸ್ತುತ ಎಸ್‌. ನಿಜಲಿಂಗಪ್ಪ ಅವರು (7 ವರ್ಷ 175 ದಿನ) ಎರಡನೇ ಅತಿ ಹೆಚ್ಚು ಅವಧಿಗೆ ಆಡಳಿತ ನಡೆಸಿದ ದಾಖಲೆ ಹೊಂದಿದ್ದಾರೆ.

ಸಿದ್ದು ಸಂಪುಟದಲ್ಲಿ ಸಚಿವ ಸ್ಥಾನಕ್ಕೆ ಶಾಸಕರ ಬೇಡಿಕೆ

ರಾಜ್ಯದಲ್ಲಿ ಈವರೆಗೆ 23 ನಾಯಕರು ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದರೂ ಈ ಹುದ್ದೆಯಲ್ಲಿ ಹೆಚ್ಚು ಕಾಲ ಇದ್ದು ಸೇವೆ ಸಲ್ಲಿಸುವ ಅವಕಾಶ ಬೆರಳೆಣಿಕೆಯ ಮುಖಂಡರಿಗೆ ಮಾತ್ರ ಸಿಕ್ಕಿರುವುದು ವಿಶೇಷವಾಗಿದೆ. ಎರಡು ಬಾರಿ ಮುಖ್ಯಮಂತ್ರಿಯಾಗಿದ್ದ ಡಿ. ದೇವರಾಜ ಅರಸು ಅತ್ಯಂತ ಹೆಚ್ಚು ಅವಧಿ ಅಂದರೆ ಒಟ್ಟು 7 ವರ್ಷ 239 ದಿನಗಳ ಕಾಲ ಆಡಳಿತ ನಡೆಸಿದರೆ, ಎಸ್‌. ನಿಜಲಿಂಗಪ್ಪ 7 ವರ್ಷ 175 ದಿನ, ವೀರೇಂದ್ರ ಪಾಟೀಲ್‌ 3 ವರ್ಷ 242 ದಿನ, ರಾಮಕೃಷ್ಣ ಹೆಗಡೆ 5 ವರ್ಷ 216 ದಿನ, ಎಚ್‌.ಡಿ. ಕುಮಾರಸ್ವಾಮಿ 2 ವರ್ಷ 317 ದಿನ ರಾಜ್ಯದ ಚುಕ್ಕಾಣಿ ಹಿಡಿದಿದ್ದರು. ನಾಲ್ಕು ಬಾರಿ ಮುಖ್ಯಮಂತ್ರಿಯಾಗಿದ್ದ ಬಿ.ಎಸ್‌. ಯಡಿಯೂರಪ್ಪ ಅವರು ಒಟ್ಟಾರೆ 5 ವರ್ಷ 82 ದಿನ ಆಡಳಿತ ನಡೆಸಿದ್ದಾರೆ.

ಅತ್ಯಂತ ಕಡಿಮೆ ಅವಧಿ ಸಿಎಂ:

ನಾಲ್ಕು ಬಾರಿ ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ್ದ ಬಿ.ಎಸ್‌. ಯಡಿಯೂರಪ್ಪ ಎರಡು ಬಾರಿ ಅತ್ಯಂತ ಕಡಿಮೆ ದಿನಗಳ ಕಾಲ ಅಧಿಕಾರದಲ್ಲಿದ್ದರು. ಯಡಿಯೂರಪ್ಪ ಮೊದಲ ಬಾರಿ 2007ರ ನವೆಂಬರ್‌ 12ರಿಂದ 19ರವರೆಗೆ (7 ದಿನ) ಹಾಗೂ 2018ರ ಮೇ 17ರಿಂದ 23ರವರೆಗೆ (6 ದಿನ) ಮುಖ್ಯಮಂತ್ರಿಯಾಗಿದ್ದರು.

ಸಿದ್ದು, ಡಿಕೆಶಿ ಶಪಥ ಬಳಿಕ 5 ಗ್ಯಾರಂಟಿ ಜಾರಿಗೆ ಆದೇಶ

ಇವರನ್ನು ಹೊರತುಪಡಿಸಿದರೆ ಕಡಿದಾಳ್‌ ಮಂಜಪ್ಪ 1956ರ ಆಗಸ್ಟ್‌ 19ರಿಂದ 1956ರ ಅಕ್ಟೋಬರ್‌ 31ರವರೆಗೆ (73 ದಿನ) ಹಾಗೂ ಎಸ್‌.ಆರ್‌. ಕಂಠಿ ಅವರು 1962ರ ಮಾರ್ಚ್‌ 14ರಿಂದ 1962ರ ಜೂನ್‌ 21ರವರೆಗೆ (99 ದಿನ) ಮುಖ್ಯಮಂತ್ರಿಯಾಗಿದ್ದರು.

ಸುದೀರ್ಘ ಸಿಎಂಗಳು

ದೇವರಾಜ ಅರಸು 7 ವರ್ಷ 239 ದಿನ
ಎಸ್‌.ನಿಜಲಿಂಗಪ್ಪ 7 ವರ್ಷ 175 ದಿನ
ರಾಮಕೃಷ್ಣ ಹೆಗಡೆ 5 ವರ್ಷ 216 ದಿನ
ಯಡಿಯೂರಪ್ಪ 5 ವರ್ಷ 82 ದಿನ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ