ಸಿದ್ದರಾಮಯ್ಯ ಹುಣಸೂರಿನಲ್ಲಿ ಸ್ಪರ್ಧೆ ಮಾಡ್ಲಿ, ಗೆಲ್ಲಿಸ್ಕೊಂಡು ಬರುವ ಜವಾಬ್ದಾರಿ ನನ್ನದು ಎಂದ ಜೆಡಿಎಸ್ ಶಾಸಕ

By Ramesh B  |  First Published Mar 9, 2022, 5:06 PM IST

* ಸಿದ್ದರಾಮಯ್ಯ ಈ ಕ್ಷೇತ್ರದಲ್ಲಿ ನಿಲ್ಲಬೇಕು ಎಂದ ಮಾಜಿ ಸಚಿವ
* ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ನನ್ನದು ಎಂದ ಜೆಡಿಎಸ್ ಶಾಸಕ
* ರಾಜ್ಯ ರಾಜಕಾರಣದಲ್ಲಿ ಸಂಚಲನ


ಮೈಸೂರು, (ಮಾ.09): 2023ರ ವಿಧಾನಸಭೆ ಚುನಾವಣೆ ಇನ್ನೂ ಒಂದೂವರೆ ವರ್ಷ ಬಾಕಿ ಉಳಿದಿರುವಾಗಲೇ  ದೊಡ್ಡ ರಾಜಕೀಯ ಬೆಳವಣಿಗೆಗಳು ನಡೆಯುತ್ತಿವೆ.

ಹೌದು...ಸಿದ್ದರಾಮಯ್ಯ(Siddaramaiah) ಅವರು ಮುಂದಿನ ಚುನಾವಣೆಯಲ್ಲಿ ಹುಣಸೂರಿನಲ್ಲಿ ಸ್ಪರ್ಧಿಸಬೇಕು. ಅವರನ್ನು ಹುಣಸೂರಿನಿಂದ ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ನನ್ನದು ಎಂದು ಜೆಡಿಎಸ್ ಶಾಸಕ ಜಿಟಿ ದೇವೇಗೌಡ(GT Devegowda) ಹೇಳಿದ್ದಾರೆ.

Tap to resize

Latest Videos

Karnataka Politics: ಸಿದ್ದು ಸಿಎಂ ಆಗಲೆಂದು ಪೂಜೆ, ಜಿಟಿ ದೇವೇಗೌಡ್ರ ಬಾಗಿಲು ಬಂದ್ ಮಾಡಿದ ಎಚ್‌ಡಿಕೆ

ಕೋಲಾರದಲ್ಲಿ(Kolar) ಇಂದು(ಬುಧವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಜಿಟಿಡಿ,ಸಿದ್ದರಾಮಯ್ಯ ಎಲ್ಲಿ ಸ್ಪರ್ದಿಸಬೇಕು ಅನ್ನೋ ವಿಚಾರ ಚರ್ಚೆ ಆಗಿಲ್ಲ. ಹುಣಸೂರಿನಲ್ಲಿ ನಿಲ್ಲಿ ಎಂದು ಅವರಿಗೆ ಆಫರ್ ಇದೆ. ಮಂಜುನಾಥ್ ಗೆ MLC ಮಾಡಿ ಸಿದ್ದರಾಮಯ್ಯ ಚುನಾವಣೆಗೆ ನಿಲ್ಲಲಿ. ಅವರನ್ನು ಹುಣಸೂರಿನಿಂದ ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ನನ್ನದು. ನಾನು ಮಾತ್ರ ಚಾಮುಂಡೇಶ್ವರಿ ಕ್ಷೇತ್ರದಲ್ಲೇ ಸ್ಪರ್ದಿಸೋದು ಎಂದು ಸ್ಪಷ್ಟಪಡಿಸಿದರು.

ನಾನಿನ್ನು ಕಾಂಗ್ರೆಸ್ ಪಕ್ಷಕ್ಕೆ ಹೋಗಿಲ್ಲ,ಇದರ ಬಗ್ಗೆ ಏನೂ ಮಾತಾಡೋಕ್ಕೆ ಆಗುತ್ತೆ ? ನಾನು ಕಾಂಗ್ರೆಸ್ ಪಕ್ಷಕ್ಕೆ ಸೇರುವ ಬಗ್ಗೆ ತೀರ್ಮಾನ ಕೈಗೊಂಡಿಲ್ಲ. ಪಂಚರಾಜ್ಯ ಚುನಾವಣೆಯ ಫಲಿತಾಂಶ ನೋಡಿ ತೀರ್ಮಾನ ಮಾಡ್ತೇನೆ ಎಂದು ಅಚ್ಚರಿ ಹೇಳಿಕೆ ನೀಡಿದರು.

ಗೆದ್ದ ಮೇಲೆ ಪಕ್ಷ ಸೇರುವ ವ್ಯಕ್ತಿ ನಾನಲ್ಲ. ನಾನು ಯಾವುದೇ ಪಕ್ಷಕ್ಕೆ ಹೋದ್ರು ಗೆಲ್ಲಿಸಿಕೊಂಡು ಬರುವ ವ್ಯಕ್ತಿ. ನಾನು ಜೆಡಿಎಸ್ ನಲ್ಲೇ ಇರ್ತೀನೋ, ಬಿಜೆಪಿ ಅಥವಾ ಕಾಂಗ್ರೆಸ್ ಸೇರುತ್ತಿನೊ ಗೊತ್ತಿಲ್ಲ ಎಂದರು.

ಚುನಾವಣೆಯಲ್ಲಿ ಸ್ಪರ್ದಿಸಲೇಬೇಕು ಅಂತ ನನಗೆ ಮತ್ತೆ ನನ್ನ ಮಗನಿಗೆ ಕಾರ್ಯಕರ್ತರ ಒತ್ತಡ ಇದೆ. ಇಬ್ಬರಿಗೂ ಟಿಕೇಟ್ ನೀಡಿದ್ರೆ ಕಾಂಗ್ರೆಸ್ ಸೇರುತ್ತೇವೆ ಅಂತ ಸಿದ್ದರಾಮಯ್ಯ ನವರಿಗೆ ತಿಳಿಸಿರೋದು ನಿಜ. ಇದುವರೆಗೂ ಜೆಡಿಎಸ್ ಪಕ್ಷದಲ್ಲಿ ಯಾರು ನನ್ನನು ಕರೆದು ಮಾತನಾಡಿಲ್ಲ ಎಂದು ಹೇಳಿದರು.

ಸಿದ್ದರಾಮಯ್ಯ ಅವರನ್ನು ಮೈಸೂರು ಜಿಲ್ಲೆಯ ಹುಣಸೂರು ಜನರೇ ಕರೆಯುತ್ತಿದ್ದಾರೆ. ಶ್ರೀನಿವಾಸಗೌಡರು ಕೋಲಾರಕ್ಕೂ ಕರೆದಿದ್ದಾರೆ. ಸಿದ್ದರಾಮಯ್ಯ ಅವರ ಜೊತೆಗೆ ಈ ಬಗ್ಗೆ ಯಾವುದೆ ಚರ್ಚೆ ಮಾಡಿಲ್ಲ. ಆದರೆ, ನಾನು ಮಾತ್ರ ಚಾಮುಂಡೇಶ್ವರಿ ಕ್ಷೇತ್ರದಲ್ಲೇ ನಿಲ್ಲೋದು. ಕೋಲಾರದ ವಿಚಾರವನ್ನು ನಾನು ಅವರ ಜೊತೆ ಮಾತನಾಡಿಲ್ಲ. ಹೊಸಮನೆ ರವಿ, ಸುಧಾಕರ್, ಹಾಗು ನಾನು ಊಟಕ್ಕೆ ಸೇರಿದ್ದೇವು. ಅಲ್ಲಿಗೆ ಸಿದ್ದರಾಮಯ್ಯ ಬಂದಿದ್ದರು ಆಗ ಕೋಲಾರದಲ್ಲಿ ಸ್ಪರ್ಧೆ ಮಾಡುವ ವಿಚಾರ ಚರ್ಚೆಯಾಗಿದೆ. ನಮ್ಮೊಂದಿಗೆ ಯಾವುದೇ ಒಪ್ಪಂದವೂ ಆಗಿಲ್ಲ ಎಂದರು.

ನಾನು ಸಿದ್ದರಾಮಯ್ಯ ಈ ಹಿಂದೆ ಖಾಸಗಿ ಕಾರ್ಯಕ್ರಮದಲ್ಲಿ ಒಂದಾಗಿದ್ದೇವು. ಅಲ್ಲಿ ನಾನು 1983ರಿಂದ ಇಬ್ಬರ ರಾಜಕೀಯ ಜೀವನ ಬಿಚ್ಚಿಟ್ಟೆ. ಆಗ ಸಿದ್ದರಾಮಯ್ಯ ಅವರು ಅದನ್ನೆಲ್ಲಾ ಒಪ್ಪಿಕೊಂಡ್ರು. ಆಗ ಮುಕ್ತವಾಗಿ ಮಾತನಾಡಿದ್ದರಿಂದ ಅವರು ಕೂಡ ನನ್ನ ಕುರಿತು ಒಳ್ಳೆಯ ಮಾತನಾಡಿದ್ರು. ನನ್ನ ಮಗ ಹರೀಶ್ ಗೌಡ ಹಾಗೂ ನಾನು ಇಬ್ಬರು‌ ಚುನಾವಣೆಗೆ ನಿಲ್ಲಬೇಕು ಎಂದುಕೊಂಡಿದ್ದೇವೆ ಎಂದು ನಮ್ಮ ಅಭಿಪ್ರಾಯವನ್ನು ಸ್ಪಷ್ಟವಾಗಿ ತಿಳಿಸಿದ್ದೇವೆ. ಅವರು ಅದು ಹೈಕಮಾಂಡ್‌ಗೆ ಬಿಟ್ಟ ವಿಚಾರ ಎಂದಿದ್ದಾರೆ. ಹಾಗಾಗಿ ಇದುವರೆಗೂ ಯಾವ ತೀರ್ಮಾನ ತೆಗೆದುಕೊಂಡಿಲ್ಲ ಎಂದು ತಿಳಿಸಿದರು.

ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಅವರು ಮತ್ತೆ ಸಿಎಂ ಆಗಲಿ ಎಂದು ಚಾಮುಂಡೇಶ್ವರಿ (Chamundeshwari) ಕ್ಷೇತ್ರದ ಶಾಸಕ ಜಿಟಿ ದೇವೇಗೌಡ (GT Devegowda)  ಶ್ರಿನಿವಾಸನ ಮುಂದೆ ಸಂಕಲ್ಪದೊಂದಿಗೆ ಪೂಜೆ ಮಾಡಿದ್ದರು. ಮೈಸೂರು (Mysuru) ತಾಲೂಕಿನ ದಡದಕಲ್ಲು ದೇವಾಲಯದಲ್ಲಿ  ಪೂಜೆ ಮಾಡಿಸಿದ್ದರು. ಈ ಹಿಂದೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಹಾಗೂ ಜಿಟಿ ದೇವೇಗೌಡ ಎದುರಾಳಿಗಳಾಗಿದ್ದರು.

click me!