ಕೋಲಾರದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಪ್ರತಿಕಿಯೆ ನೀಡಿದ್ದಾರೆ. ರಾಜ್ಯದಲ್ಲಿ ಉಂಟಾಗಿರುವ ಹಿಜಾಬ್ ನ ವಿವಾದ ಕುರಿತು ಪ್ರತಿಕ್ರಿಯೆ ನೀಡಿದ ಅವರೂ ಪಿಯುಸಿ ಹಾಗು ಎಸೆಸೆಲ್ಸಿ ಮಕ್ಕಳನ್ನ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು.
ವರದಿ: ದೀಪಕ್, ಏಷ್ಯಾನೆಟ್ ಸುವರ್ಣ ನ್ಯೂಸ್ ಕೋಲಾರ.
ಕೋಲಾರ (ಮಾ.27): ಕೋಲಾರದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ (HD Kumaraswamy) ಪ್ರತಿಕಿಯೆ ನೀಡಿದ್ದಾರೆ. ರಾಜ್ಯದಲ್ಲಿ ಉಂಟಾಗಿರುವ ಹಿಜಾಬ್ ನ (Hijab) ವಿವಾದ ಕುರಿತು ಪ್ರತಿಕ್ರಿಯೆ ನೀಡಿದ ಅವರೂ ಪಿಯುಸಿ ಹಾಗು ಎಸೆಸೆಲ್ಸಿ ಮಕ್ಕಳನ್ನ (SSLC Students) ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಪರೀಕ್ಷೆ ಬರಿಯಲು ಮುಕ್ತವಾದ ಅವಕಾಶ ನೀಡಬೇಕು. ಮಕ್ಕಳ ಭವಿಷ್ಯದ ದೃಷ್ಟಿಯಿಂದ ಎಲ್ಲರನ್ನು ಒಟ್ಟಿಗೆ ತೆಗೆದುಕೊಂಡು ಹೋಗಬೇಕು. ಮುಸ್ಲಿಂ ಸಮುದಾಯದ ಅಂಗಡಿಗಳು ಮುಚ್ಚುವ ಕೆಲಸ ನಡೆಯುತ್ತಿದೆ. ಕರ್ನಾಟಕದಲ್ಲಿ ಈ ಪರಿಸ್ಥಿತಿ ಬರುತ್ತೆ ಎಂದು ಊಹಿಸಿರಲಿಲ್ಲ. ರಾಜ್ಯ ಈ ಪರಿಸ್ಥಿತಿ ಬರೋದಕ್ಕೆ ಮೂಲ ಕಾರಣ ಸಿದ್ದರಾಮಯ್ಯ (Siddaramaiah).
ಇಷ್ಟ ಇಲ್ಲದೆ ಇದ್ರು ಕಾಂಗ್ರೆಸ್ (Congress) ಜೊತೆ ಮೈತ್ರಿ ಮಾಡಿಕೊಂಡಿದ್ವಿ. ಶಾಲಾ ಕಾಲೇಜುಗಳಲ್ಲಿ ಉಂಟಾಗಿದ್ದು ಇನ್ನೇನು ಒಂದು ಹಂತಕ್ಕೆ ಬಂದು ತಲುಪಿತ್ತು. ಈಗ ಅಂಗಡಿ ತೆರವುಗೊಳಿಸುವ ಕೆಲಸ ಶುರುವಾಗಿದೆ. ಎರಡು ರಾಷ್ಟ್ರೀಯ ಪಕ್ಷಗಳು ಸಮಾಜದ ಸಾಮರಸ್ಯ ಹಾಳು ಮಾಡ್ತಿವೆ. ಅಮಾಯಕ ಮಕ್ಕಳ ಭವಿಷ್ಯಕ್ಕೆ ಕುತ್ತು ತರ್ತಿದ್ದಾರೆ. ಸಿದ್ದರಾಮಯ್ಯನ ನಂಬಿದ್ರೆ ಆಗೋದಿಲ್ಲ ಅಂತ ಮುಸಲ್ಮಾನರಿಗೂ ಗೊತ್ತಾಗಿದೆ. ನಾವು ಬೀದಿಗೆ ಬಂದಿದ್ದೇವೆ ಅಂತ ಅವರಿಗೆ ಗೊತ್ತಾಗಿದೆ. ಇನ್ಮುಂದೆ ಸಿದ್ದರಾಮಯ್ಯನ ಆಟ ನಡೆಯೋದಿಲ್ಲ, ಬಿಜೆಪಿ ಯ ಬಿ ಟೀಂ ಅಂದ್ರೆ ಮುಸಲ್ಮಾನರು ನಂಬೋದಿಲ್ಲ.
Mekedatu project ತಮಿಳುನಾಡು ವಿಧಾನಸಭೆ ನಿರ್ಣಯಕ್ಕೂ ರಾಜ್ಯಕ್ಕೂ ಸಂಬಂಧವಿಲ್ಲ ಎಂದ HDK
ಮುಂದಿನ 10 ವರ್ಷ ನಮ್ಮದೇ ಸರ್ಕಾರ 2014 ಬಿಜೆಪಿ ಹಾಗು ಸಿದ್ದರಾಮಯ್ಯ ಸಹ ಹೇಳಿದ್ರು, ಏನಾಯ್ತು ಎಂದು?. ಬಿಜೆಪಿಗೆ 105 ಸೀಟ್ ಬರೋದಕ್ಕೆ ಕಾರಣ ಸಿದ್ದರಾಮಯ್ಯ. ನಮ್ಮನು ಬಿಜೆಪಿಯ ಬಿ ಟೀಂ ಅಂದಿದಕ್ಕೆ ಬಿಜೆಪಿಗೆ 105 ಸೀಟ್ ಬಂದಿದ್ದು ಎಂದರು. ಸಂಸದ ತೇಜಸ್ವಿ ಸೂರ್ಯ (MP Tejasvi Surya) ಬೆಂಗಳೂರು - ಕೋಲಾರ ಸೈಕಲ್ ಜಾತ ಮಾಡ್ತಿದ್ದಾರೆ, ಏನೂ ಸಂದೇಶ ಕೊಡೋದಕ್ಕೆ ಸೈಕಲ್ ಜಾತಾ ಮಾಡ್ತಿದ್ದಾರೆ. ಕೋಲಾರ ಜಿಲ್ಲೆಗೆ ಬೆಂಕಿ ಹಚ್ಚೋದಕ್ಕೆ ಬರ್ತಿದೀರಾ? ಹಿಂದೂ - ಸಮುದಾಯದ ಇಲ್ಲಿ ಒಟ್ಟಾಗಿ ಬಾಳುತ್ತಿದ್ದಾರೆ ಎಂದರು.
ಆಗ ತಲೆಯಲ್ಲಿ ಕೂದಲು ಇತ್ತು: ಕೋಲಾರ - ಚಿಕ್ಕಬಳ್ಳಾಪುರ ಎತ್ತಿನಹೊಳೆ ಯೋಜನೆ ಕುರಿತು ಮಾತನಾಡಿದ ಕುಮಾರಸ್ವಾಮಿ. ಕೋಲಾರ - ಚಿಕ್ಕಬಳ್ಳಾಪುರ ಜಿಲ್ಲೆಗೆ ಎತ್ತಿನಹೊಳೆ ನೀರು ಕೊಡ್ತೇನೆ ಎಂದು 2014 ರಲ್ಲಿ ಹೇಳಿದರು. ಇನ್ನೊಂದು ವಷ೯ದಲ್ಲಿ ಏನಾದ್ರು ನೀರು ಕೊಟ್ರೆ ನಾನು ತಲೆ ಬೋಳಿಸಿಕೊಳ್ಳುತ್ತೇನೆ ಎಂದು 2014 ರಲ್ಲಿ ಹೇಳಿದ್ದೆ. ಆಗ ನನಗೆ ಇನ್ನೂ ಸ್ವಲ್ಪ ಕೂದಲು ಇತ್ತು, ಈಗ ಎತ್ತಿನಹೊಳೆ ಅಲ್ಲೇ ಇದೆ. ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದವೂ ಇನ್ನೂ 50 ವಷ೯ ಆದ್ರೂ ನೀರು ಕೊಡೋದಿಲ್ಲಾ. ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡ್ತಿದ್ದಾರೆ ಎಂದರು.