ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ ಕುರಿತು ಕೋಲಾರದಲ್ಲಿ ತಿರುಗೇಟು ನೀಡಿರುವ ಸಂಸದ ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕರು ಆಗಿರುವ ತೇಜಸ್ವಿ ಸೂರ್ಯ ಕರ್ನಾಟಕದಲ್ಲಿ ಜೆಡಿಎಸ್ ಎಲ್ಲಿದೆ ಎಂದು ಪ್ರಶ್ನಿಸಿದ್ದಾರೆ.
ವರದಿ : ದೀಪಕ್ ,ಏಷ್ಯಾನೆಟ್ ಸುವರ್ಣ ನ್ಯೂಸ್
ಕೋಲಾರ (ಮಾ.27): ಸೈಕಲ್ ಜಾಥ ನೆಪದಲ್ಲಿ ಕೋಲಾರದಲ್ಲಿ (Kolara) ಶಾಂತಿ ಕದಡುವ ಕೆಲಸ ತೇಜಸ್ವಿ ಸೂರ್ಯ (MP Tejasvi Surya ) ಮಾಡಿದ್ದಾರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ (H D kumaraswamy) ಹೇಳಿಕೆ ಕುರಿತು ಕೋಲಾರದಲ್ಲಿ ತಿರುಗೇಟು ನೀಡಿರುವ ಸಂಸದರು ಹಾಗೂ ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕರು ಆಗಿರುವ ತೇಜಸ್ವಿ ಸೂರ್ಯ, ಸ್ವಾತಂತ್ರ್ಯ ಬಂದ ಬಳಿಕ ಕೋಲಾರದ ಕ್ಲಾಕ್ ಟವರ್ ನಲ್ಲಿ ಭಾರತದ ಧ್ವಜ ಹಾರಾಟ ಮಾಡಲಾಗಿದೆ. ಸೈಕಲ್ ರ್ಯಾಲಿ ಯಿಂದ ಆರೋಗ್ಯ ಸುಧಾರಿಸುತ್ತೆ, ಸಂಘಟನೆಯೂ ಆಗುತ್ತೆ ಎಂದಿದ್ದಾರೆ.
ಜೆಡಿಎಸ್ (JDS) ಪಕ್ಷ ಕರ್ನಾಟದಲ್ಲಿ ಕಡೆಯ ಹಂತ ತಲುಪಿದೆ. ಸೈಕಲ್ ರ್ಯಾಲಿ ಮಾಡಿರುವ ಉದ್ದೇಶ ಏನೇಂದು ಯುವಕರಿಗೆ ಗೊತ್ತು. ಇದರ ಬಗ್ಗೆ ಮೊದಲು ಜೆಡಿಎಸ್ ಪಾರ್ಟಿಯ ಸಿದ್ದಂತಾ ಏನೂ ಎಂದು ತಿಳಿಸಲಿ. ಭಾವುಟ ಹಾರಿಸಿರುವ ಬಗ್ಗೆ ಕುಮಾರಸ್ವಾಮಿ ಮಾತನಾಡುತ್ತಾರೆ. ಜೆಡಿಎಸ್ ಪಕ್ಷದವ್ರ ನಿಲುವು ಏನೂ ಅನ್ನೋದು ತಿಳಿಸಲಿ. ಒಬ್ಬ ಪ್ರಬುದ್ಧ ನಾಯಕ ಈ ರೀತಿ ಹೇಳ್ತಾರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಗೆ ತೇಜಸ್ವಿ ಸೂರ್ಯ ಟಾಂಗ್ ನೀಡಿದರು.
ಹಿಜಾಬ್ ಧರಿಸದೇ SSLC ಪರೀಕ್ಷೆ ಬರೆಯುವಂತೆ ಮುಸ್ಲಿಂ ಮುಖಂಡನ ಮನವಿ
ತಲೆಕೆಡಿಸಿಕೊಳ್ಳದೆ ಪರೀಕ್ಷೆ ಬರೀರಿ: ಹಿಜಾಬ್ (Hijab) ವಿವಾದದ ಕುರಿತು ಮಾತನಾಡಿದ ಸಂಸದ ತೇಜಸ್ವಿ ಸೂರ್ಯ ,ವಿದ್ಯಾಭ್ಯಾಸದ ಸಮಯದಲ್ಲಿ ಹಿಜಾಬ್ ವಿಚಾರ ಬಂದಿದೆ. ಎಕ್ಸಾಂ ಬರೀಬೇಡಿ ಎಂದು ಕುಮ್ಮಕು ಕೊಡೋರನ್ನು ಮುಸ್ಲಿಂ ಯುವತಿಯರು ನಂಬಬೇಡಿ. ನಿಮಗೆ ಮುಂದೆ ಉದ್ಯೋಗ ಸಿಗಲಿಲ್ಲ ಅಂದ್ರೆ ಇವರ್ಯಾರು ನಿಮ್ಮ ಸಹಾಯಕ್ಕೆ ಬರೋದಿಲ್ಲ.ಕಣ್ಣಿಗೆ ಕಾಣದ, ಹಿತ ಬಯಸದ, ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತಿರುವವರ ಬಗ್ಗೆ ನಿವ್ಯಾರು ತಲೆ ಕೆಡಿಸಿಕೊಳ್ಳಬೇಡಿ, ಇವರ ಮಾತಿಗೆ ಕಿವಿಗೊಡಬೇಡಿ ಎಂದು ತೇಜಸ್ವಿ ಸೂರ್ಯ ಮುಸ್ಲಿಂ ಯುವತಿಯರಿಗೆ ಮನವಿ ಮಾಡಿದ್ರು.
ಎಂಟು ಖಾಸಗಿ ಶಾಲೆಗಳ ವಿದ್ಯಾರ್ಥಿಗಳಿಗೆ SSLC Exam ಬರೆಯಲು ಹೈಕೋರ್ಟ್