ನಾವು ಓದುತ್ತಿರುವ ಸಂವಿಧಾನ ಪೀಠಿಕೆ ಅಂಬೇಡ್ಕರ್ ಬರೆದಿದ್ದಾ? ಇಂದಿರಾಗಾಂಧಿ ಬರೆಸಿದ್ದಾ? ಸಿದ್ದರಾಮಯ್ಯ, ಕಾಂಗ್ರೆಸ್ ವಿರುದ್ಧ ಸಿಂಹ ವಾಗ್ದಾಳಿ

Published : Nov 27, 2026, 03:20 PM IST
Pratap simha

ಸಾರಾಂಶ

ಕಾಂಗ್ರೆಸ್ ಪಕ್ಷಕ್ಕೆ ಅಂಬೇಡ್ಕರ್ ಮತ್ತು ಸಂವಿಧಾನದ ಮೇಲಿನ ಪ್ರೀತಿ ಕೇವಲ ದಲಿತರ ಮತ ಗಳಿಸಲು ಮಾತ್ರ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಟೀಕಿಸಿದ್ದಾರೆ. ದಲಿತರ ಹಣವನ್ನು ಗ್ಯಾರಂಟಿ ಯೋಜನೆಗೆ ಬಳಸಿದ ಸಿದ್ದರಾಮಯ್ಯ ನಿಜವಾದ ದಲಿತ ವಿರೋಧಿ ಎಂದು ಅವರು ವಾಗ್ದಾಳಿ ನಡೆಸಿದರು.

ಮೈಸೂರು (ನ.27): ಕಾಂಗ್ರೆಸ್ಸಿಗರಿಗೆ ಅಂಬೇಡ್ಕರ್, ಸಂವಿಧಾನದ ಮೇಲಿನ ಪ್ರೀತಿ ಕೇವಲ ದಲಿತರನ್ನು ಓಲೈಸಿ ಮತ ಗಳಿಸಲು ಮಾತ್ರ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಟೀಕಿಸಿದರು.

ಮೈಸೂರಿನಲ್ಲಿ ಸಂವಿಧಾನ ದಿನ ಆಚರಣೆ ಬಗ್ಗೆ ಪ್ರತಾಪ್ ಸಿಂಹ ಏನಂದ್ರು?

ಇನ್ನು ಮೈಸೂರಿನಲ್ಲಿ ಸಂವಿಧಾನ ದಿನಾಚರಣೆ ವಿಚಾರವಾಗಿ ಪ್ರತಿಕ್ರಿಯಿಸಿದ ಪ್ರತಾಪ್ ಸಿಂಹ ಅವರು, ಇಷ್ಟು ವರ್ಷ ಸಂವಿಧಾನ ದಿನಾಚರಣೆ ಮಾಡದ ಕಾಂಗ್ರೆಸ್ ಈಗ ಯಾಕೆ ಮಾಡುತ್ತಿದೆ? ಇಷ್ಟು ದಿನ ಏಕೆ ಸಂವಿಧಾನ ದಿನದ ಬಗ್ಗೆ ಒಲವು ತೋರಿಸಲಿಲ್ಲ ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯ ಅವರೇ ನಿಜವಾದ ದಲಿತ ವಿರೋಧಿ

ಪ್ರಧಾನಿ ಮೋದಿ ಅವರು ಸಂವಿಧಾನದ ಬಗ್ಗೆ ಗೌರವಿಸುವ ಕಾರ್ಯಕ್ರಮ ಮಾಡಿದ ಬಳಿಕ ಈ ಕಾಂಗ್ರೆಸ್‌ಗೆ ಅಂಬೇಡ್ಕರ್ ಅವರ ಸಂವಿಧಾನದ ಬಗ್ಗೆ ಪ್ರೀತಿ ಬಂದಿದೆ. ದಲಿತರ ಕಲ್ಯಾಣಕ್ಕಾಗಿ ಬಳಕೆಯಾಗಬೇಕಿದ್ದ ಹಣವನ್ನು ಸಿದ್ದರಾಮಯ್ಯ ಅವರು ಯಾಕೆ ಗ್ಯಾರಂಟಿ ಯೋಜನೆಗೆ ಹಾಕಿದರು? ಇಲ್ಲಿ ಸಿದ್ದರಾಮಯ್ಯ ಅವರೇ ನಿಜವಾದ ದಲಿತ ವಿರೋಧಿ. ಇವರ ತೋರ್ಪಡಿಕೆಗೆ ಮರುಳಾಗದೆ ವಾಸ್ತವ ಅರ್ಥ ಮಾಡಿಕೊಳ್ಳಬೇಕು. ಈ ಹಿಂದೆ ದಲಿತ ನಾಯಕ ಶ್ರೀನಿವಾಸಪ್ರಸಾದ ಅವರನ್ನು ರಾಜಕೀಯವಾಗಿ ತುಳಿದುಹಾಕಿದ್ದು ಯಾರು? ತಮ್ಮ ಮಗನ ಮೇಲೆ ಮಾತ್ರ ಕಿರೀಟ ಉಳಿಸಲು ಮಹದೇವಪ್ಪ ಅವರನ್ನ ತುಳಿದುಹಾಕಿದರು. ಕಾಂಗ್ರೆಸ್‌ಗೆ ಅಂಬೇಡ್ಕರ್, ಸಂವಿಧಾನದ ಮೇಲಿನ ಪ್ರೀತಿ ಕೇವಲ ದಲಿತರನ್ನು ಒಲೈಸಿ ಮತಗಳಿಸಲು ಮಾತ್ರ ಎಂದು ಟೀಕಿಸಿದರು.

ವಿಶ್ವವಿಖ್ಯಾತ ಅರ್ಥಶಾಸ್ತ್ರಜ್ಞ ಸಿದ್ದರಾಮಯ್ಯ ಅವರೇ ನಾವು ಓದುತ್ತಿರುವ ಸಂವಿಧಾನ ಪೀಠಿಕೆ ಯಾರು ಬರೆದಿದ್ದು?

ವಿಶ್ವವಿಖ್ಯಾತ ಅರ್ಥಶಾಸ್ತ್ರಜ್ಞ ಸಿದ್ದರಾಮಯ್ಯ ಅವರೇ ನೀವೇ ಹೇಳಿ, ನಾವಿಂದು ಓದುತ್ತಿರುವುದು ಅಂಬೇಡ್ಕರ್ ಬರೆದ ಸಂವಿಧಾನದ ಪೀಠಿಕೆನಾ? ಇಂದಿರಾಗಾಂಧಿ ತಿದ್ದುಪಡಿ ಮಾಡಿಸಿದ ಸಂವಿಧಾನದ ಪೀಠಿಕೆನಾ? ಈಗ ಓದುತ್ತಿರುವ ಪೀಠಿಕೆ ಇಂದಿರಾಗಾಂಧಿ ಬರೆಸಿದ್ದು. ಅಂಬೇಡ್ಕರ್ ಬರೆದ ಸಂವಿಧಾನದ ಪೀಠಿಕೆ ಬದಲಾಯಿಸಿದ್ದೇ ಕಾಂಗ್ರೆಸ್. ಸಂವಿಧಾನವನ್ನು ಹಳ್ಳ ಹಿಡಿಸಲು ಯತ್ನಿಸಿದ್ದು ಇದೇ ಕಾಂಗ್ರೆಸ್ ಪಕ್ಷ. ತಾವು ದಲಿತರು, ಸಂವಿಧಾನ ರಕ್ಷಕರು ಎಂದು ಹೇಳಿಕೊಳ್ಳುವ ಕಾಂಗ್ರೆಸ್ ಇಲ್ಲಿವರೆಗೆ ಯಾಕೆ ದಲಿತರನ್ನ ಏಕೆ ಮುಖ್ಯಮಂತ್ರಿ ಮಾಡಲಿಲ್ಲ? ಮುಖ್ಯಮಂತ್ರಿ ಸ್ಥಾನವನ್ನು ಸಿದ್ದರಾಮಯ್ಯ ಏಕೆ ದಲಿತರಿಗೆ ಬಿಟ್ಟುಕೊಡಲಿಲ್ಲ? ಈ ಕಾಂಗ್ರೆಸ್‌ಗರು ಯಾರನ್ನ ಸಂವಿಧಾನ ವಿರೋಧಿ, ದಲಿತ ವಿರೋಧಿ ಎಂದು ಕರೆಯುತ್ತಿದ್ದಾೋ ಅದೇ ಬಿಜೆಪಿ ಪಕ್ಷ ಮಾಯಾವತಿ ಅವರನ್ನು ಎರಡು ಬಾರಿ ಮುಖ್ಯಮಂತ್ರಿ ಮಾಡಿದ್ದು. ನಿಜವಾದ ದಲಿತ ವಿರೋಧಿಗಳೆಂದರೆ ಕಾಂಗ್ರೆಸ್, ಸಿದ್ದರಾಮಯ್ಯ ಎಂದು ನೇರವಾಗಿ ವಾಗ್ದಾಳಿ ನಡೆಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕರ್ನಾಟಕಕ್ಕೆ, ಇಲ್ಲಿನ ಸಂಸ್ಕೃತಿಗೆ ಕಂಟಕವಾದರಾ ಕೇರಳಿಗರು? ಪ್ರತಾಪ್ ಸಿಂಹ ಸ್ಫೋಟಕ ಹೇಳಿಕೆ!
ಗಡ್ಢಧಾರಿ ಮುಸ್ಲಿಂ ಬೇಕೋ, ಹಿಂದುತ್ವದ ಅಖಿಲೇಶ್ ಬೇಕೋ, ಒವೈಸಿ ಠಕ್ಕರ್‌ಗೆ ಕಂಗಾಲಾದ ಅಜಂ ಖಾನ್