ಹಾಲುಮತ ಸಮುದಾಯದ ಶ್ರೇಷ್ಠ ಗುರು ಯಾದಗಿರಿ ಜಿಲ್ಲೆಯ ಮಾಳಿಂಗರಾಯ ದೇವಸ್ಥಾನದಲ್ಲಿ ನುಡಿದಿದ್ದ ಭವಿಷ್ಯದಂತೆ ಸಿದ್ದರಾಮಯ್ಯಗೆ ಮುಖ್ಯಮಂತ್ರಿ ಹುದ್ದೆ ಲಭಿಸಿದೆ.
ಯಾದಗಿರಿ (ಮೇ 19): ಕಳೆದ ಒಂದು ವರ್ಷದ ಹಿಂದೆಯೇ ರಾಜ್ಯದ ಹಾಲುಮತ ಸಮುದಾಯದ ಶ್ರೇಷ್ಠ ಗುರು ಯಾದಗಿರಿ ಜಿಲ್ಲೆಯ ಮಾಳಿಂಗರಾಯ ದೇವಸ್ಥಾನದಲ್ಲಿ ನುಡಿದಿದ್ದ ಭವಿಷ್ಯದಂತೆ ಸಿದ್ದರಾಮಯ್ಯಗೆ ಮುಖ್ಯಮಂತ್ರಿ ಹುದ್ದೆ ಲಭಿಸಿದೆ. ಈ ಹಿನ್ನೆಲೆಯಲ್ಲಿ ದೇವಸ್ಥಾನದಲ್ಲಿ ವಿಶೇಷ ಪೂಜೆಯನ್ನೂ ನಾಳೆ ಆಯೋಜಿಸಲಾಗಿದೆ.
ರಾಜ್ಯದ ನಿಯೋಜಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಿಎಂ ಆಗುವ ಕುರಿತು ಒಂದು ವರ್ಷದ ಹಿಂದೆ ಭವಿಷ್ಯ ನುಡಿದಿದ್ದ ದೇವಸ್ಥಾನದಲ್ಲಿ ವಿಶೇಷ ಪೂಜೆಯನ್ನು ಆಯೋಜನೆ ಮಾಡಲಾಗಿದೆ. ದೇವಸ್ಥಾನದ ಗರ್ಭಗುಡಿಯೊಳಗೆ ಸಿದ್ದರಾಮಯ್ಯ ಪೋಟೋ ಇಟ್ಟು ಪೂಜೆ ಮಾಡಲಾಗುತ್ತಿದೆ. ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಮಾಳಹಳ್ಳಿಯ ಮಾಳಿಂಗರಾಯ ದೇವಸ್ಥಾನದಲ್ಲಿ ಕಳೆದ ಒಂದು ವರ್ಷದ ಹಿಂದೆಯೇ ಭವಿಷ್ಯ ನುಡಿದಿದ್ದು, ಸಿದ್ದರಾಮಯ್ಯ ಅವರು ಮುಂದಿನ ಚುನಾವಣೆಯಲ್ಲಿ ಗೆದ್ದು ಮುಖ್ಯಮಂತ್ರಿ ಆಗುತ್ತಾರೆ ಎಂದು ಹೇಳಲಾಗುತ್ತಿತ್ತು. ಅದರಂತೆ 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತವನ್ನು ಪಡೆದಿದ್ದು, ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕಾರ ಮಾಡುತ್ತಿದ್ದಾರೆ ಎಂದು ಮಾಳಿಂಗರಾಯ ದೇವಸ್ಥಾನದ ಅರ್ಚಕ ಕೆಂಚಪ್ಪ ಪೂಜಾರಿ ಹೇಳಿದ್ದಾರೆ.
ಗೋನಾಲದ ಗಡೇ ದುರ್ಗಾದೇವಿ ಭವಿಷ್ಯ: 9 ಮಂದಿ ಹಿಂದಿಕ್ಕಿ ಡಿ.ಕೆ.ಶಿವಕುಮಾರ್ ಶೀಘ್ರ ಸಿಎಂ ಆಗ್ತಾರೆ
ಒಂದು ವರ್ಷದ ಹಿಂದೆಯೇ ಸಿಎಂ ಭವಿಷ್ಯ: ಕಳೆದ ವರ್ಷದ (2022ರ ಜುಲೈ 14)ರಂದು ದಿದ್ದರಾಮಯ್ಯ ಅವರು ದೇವಸ್ಥಾನಕ್ಕೆ ಆಗಮಿಸಿದ್ದ ವೇಳೆ ಭವಿಷ್ಯ ನುಡಿದಿದ್ದ ಕೆಂಚಪ್ಪ ಪೂಜಾರಿ ಅವರು, 2023ರಲ್ಲಿ ನಮ್ಮಪ್ಪ ಸದ್ಗುರುನಾಥ ಮುತ್ಯಾ ಮಾಳಿಂಗರಾಯ ಬೀಜಗುಂತಿ ಮ್ಯಾಲೆ ಮಾಳಿಂಗರಾಯ ಕಂಬಳಿ ಬಿಸಿ ಮಳೆ ಕರೆದಾರ, ಮಾಳಿಂಗರಾಯ ಮುತ್ಯಾ ಹೆಂಗ್ ಮಳೆ ಕರದಾರೋ ಅದೇ ರೀತಿ ಕಂಬಳಿ ಬೀಸ್ತಾದ. 2023 ಕ್ಕೆ ಬೆಂಗಳೂರಿನ ವಿಧಾನಸೌಧದಾಗ ಮೂರನೇ ಮಹಡಿ ಮೇಲೆ ಕಂಬಳಿ ಬೀಸುತ್ತದೆ ಎಂದು ಹೇಳಿದ್ದರು. ಈಗ ಅವರ ಭವಿಷ್ಯ ನಿಜವಾಗಿದೆ.
ಮಾಳಿಂಗರಾಯನ ಭವಿಷ್ಯ ನಿಜವಾಯ್ತು: ನಾಳೆ ಸಿದ್ದರಾಮಯ್ಯ ಪ್ರಮಾಣವಚನ ಹಿನ್ನೆಲೆ ಇಡೀ ಗ್ರಾಮದಲ್ಲಿ ಹಬ್ಬದ ವಾತಾವರಣ ಮನೆ ಮಾಡಿದೆ. ಗುರು ಮಾಳಿಂಗರಾಯನ ಆಜ್ಞೆಯಂತೆ ಸಿದ್ದು ಸಿಎಂ ಆಗ್ತಾರೆ ಎಂದು ಅವತ್ತೆ ನುಡಿಯಲಾಗಿತ್ತು. ಅದು ಸ್ವತಃ ಮಾಳಿಂಗರಾಯ ನುಡಿದ ಆಜ್ಞೆಯಾಗಿದೆ. ಮುಂದೆ ಅವರು ಪ್ರಧಾನಮಂತ್ರಿ ಸಹ ಆಗಬಹುದು ಎಂದು ಗ್ರಾಮದಲ್ಲಿ ಹೇಳುತ್ತಿದ್ದಾರೆ. ಈ ಕುರಿತು ಏಷ್ಯಾನೆಟ್ ಸುವರ್ಣ ನ್ಯೂಸ್‌ನೊಂದಿಗೆ ಮಾತನಾಡಿದ ಅರ್ಚಕ ಕೆಂಚಪ್ಪ ಪೂಜಾರಿ, ಸಿದ್ದರಾಮಯ್ಯ ಅವರ ರಾಜಕೀಯ ಬೆಳವಣಿಗೆ ಭವಿಷ್ಯ ನುಡಿದಂತೆ ನಿಜವಾಗಿದೆ ಎಂದು ಹೇಳಿದರು.
ಯಾದಗಿರಿ : ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಕನಸು ಈಡೇರಿಸ್ತಿದಾಳ ಯಾದಗಿರಿಯ ದೇವತೆ..! ಡಿಕೆಶಿ ರಾಜ್ಯದ ಮುಖ್ಯಮಂತ್ರಿ ಆಗೋದು ಗ್ಯಾರಂಟಿ..! ಈ ಬಾರಿ ತಪ್ಪಿದ್ರೂ ಎರಡೂವರೆ ವರ್ಷದ ಬಳಿಕ ಮುಖ್ಯಮಂತ್ರಿ ಆಗೇ ಆಗುತ್ತಾರೆ ಎಂದು ಗೋನಾಲದ ಗಡೇ ದುರ್ಗಾದೇವಿ ಹೇಳಿದ ಭವಿಷ್ಯವನ್ನು ಅರ್ಚಕ ಮಹಾದೇವಪ್ಪ ಪೂಜಾರಿ ನುಡಿದಿದ್ದಾರೆ.
ಪ್ರೀತಿಸಿದವರನ್ನೇ ಮದ್ವೆ ಆಗ್ಬೇಕಾ? ಹಾಗಿದ್ರೆ ಈ ದೇಗುಲಕ್ಕೆ ಒಮ್ಮೆ ಹೋಗ್ ಬನ್ನಿ
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಯಾದಗಿರಿ ಜಿಲ್ಲೆಯ ವಡಿಗೇರಾ ತಾಲೂಕಿನ ಗೋನಾಲದ ಗಡೇ ದುರ್ಗಾದೇವಿಯ ಭಕ್ತರಾಗಿದ್ದಾರೆ. ಈ ಮೊದಲು ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾಗೋದಕ್ಕೂ ತಾಯಿಯ ಪ್ರೇರಣೆ ಸಿಕ್ಕಿತ್ತು. ಈ ವರ್ಷ ಕಾಂಗ್ರೆಸ್ ರಾಜ್ಯದಲ್ಲಿ ಬಹುಮತವನ್ನು ಗಳಿಸಿದಾಗ ಒಟ್ಟು 9 ಜನರು ಮುಖ್ಯಮಂತ್ರಿ ಆಗುವ ಪೈಪೋಟಿಯಲ್ಲಿದ್ದರು. ಆದರೆ, ಮುಖ್ಯಮಂತ್ರಿ ಸ್ಥಾನ ನೀಡೋದಕ್ಕೆ ತಾಯಿಯಿಂದ ಇಬ್ಬರಿಗೆ ಪ್ರೇರಣೆ ಆಗಿತ್ತು. ಅದರಂತೆ ಮೊದಲ ಅವಧಿಗೆ ಸಿದ್ದರಾಮಯ್ಯ ಸಿಎಂ ಆಗಿದ್ದಾರೆ. ಎರಡನೇ ಅವಧಿಗೆ ಡಿ.ಕೆ ಶಿವಕುಮಾರ್ ಸಿಎಂ ಆಗುತ್ತಾರೆ ಎಂದು ಮಹಾದೇವಪ್ಪ ಪೂಜಾರಿ ಹೇಳಿದ್ದಾರೆ.