ಎಸ್‌ಸಿ, ಎಸ್‌ಟಿ ಅಭಿವೃದ್ಧಿ ಬಗ್ಗೆ ಬಿಜೆಪಿ ಆರೋಪ ಅಲ್ಲಗಳೆದ ಸಿದ್ದರಾಮಯ್ಯ

Published : Nov 20, 2022, 05:43 PM IST
ಎಸ್‌ಸಿ, ಎಸ್‌ಟಿ ಅಭಿವೃದ್ಧಿ ಬಗ್ಗೆ ಬಿಜೆಪಿ ಆರೋಪ ಅಲ್ಲಗಳೆದ ಸಿದ್ದರಾಮಯ್ಯ

ಸಾರಾಂಶ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭಿವೃದ್ಧಿ ವಿಚಾರವಾಗಿ ಕಾಂಗ್ರೆಸ್‌ ವಿರುದ್ಧ ಬಿಜೆಪಿ ಮಾಡಿದ ಆರೋಪವನ್ನು ಅಲ್ಲಗಳೆದಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ತಮ್ಮ ಸರ್ಕಾರದ ಅವಧಿಯಲ್ಲಿ ನೀಡಲಾದ ಅನುದಾನದ ಬಗ್ಗೆ ಹೋಲಿಕೆ ಮಾಡಿ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಬೆಂಗಳೂರು (ನ.20) : ಬಳ್ಳಾರಿಯಲ್ಲಿ ನಡೆದ ಎಸ್‌ಟಿ ಸಮಾವೇಶದಲ್ಲಿ ಕಾಂಗ್ರೆಸ್‌ ವಿರುದ್ಧ ಬಿಜೆಪಿ ಮಾಡಿದ ಆರೋಪವನ್ನು ಅಲ್ಲಗಳೆದಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಎಸ್‌ಸಿ, ಎಸ್‌ಟಿ ಸಮುದಾಯಕ್ಕೆ ತಮ್ಮ ಸರ್ಕಾರದ ಅವಧಿಯಲ್ಲಿ ನೀಡಲಾದ ಅನುದಾನದ ಬಗ್ಗೆ ಹೋಲಿಕೆ ಮಾಡಿ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಮ್ಮ ಸರ್ಕಾರ ಜಾರಿಗೆ ತಂದಿದ್ದ  ಎಸ್‌ಸಿಪಿ/ಟಿಎಸ್‌ಪಿ (SCP/TSP) ಯೋಜನೆಯ ಕ್ರಾಂತಿಕಾರಿ ಕಾಯ್ದೆಯನ್ನು ರಾಷ್ಟ್ರಮಟ್ಟದಲ್ಲಿ ಜಾರಿಗೆ ತರುವ ಮೂಲಕ ಪರಿಶಿಷ್ಟ ಪಂಗಡದ 'ನವಶಕ್ತಿ ಸಮಾವೇಶ'ದ (Navashakti convention) ಕಾಳಜಿ ಪ್ರಾಮಾಣಿಕವಾಗಿದೆ ಎನ್ನುವುದನ್ನು ಬಿಜೆಪಿ (BJP) ಸಾಬೀತುಪಡಿಸಲಿ. ರಾಜ್ಯದಲ್ಲಿ ಶೇಕಡಾ 24.1ರಷ್ಟು ಇರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನಸಂಖ್ಯೆಗೆ ಅನುಗುಣವಾಗಿ ಯೋಜನಾ ವೆಚ್ಚದ ಶೇ. 24.1ರಷ್ಟು ಹಣವನ್ನು ಕಾನೂನುಬದ್ದವಾಗಿ ಮೀಸಲಿಟ್ಟಿದ್ದು ನಮ್ಮ ಬದ್ದತೆಯಾಗಿದೆ. ಇದರಲ್ಲಿ ನಿಮ್ಮ ಬದ್ದತೆ (commitment) ಏನು? ಭಾಷಣಗಳ ಸಮಾವೇಶವೇ? ಎಂದು ಕಿಡಿಕಾರಿದ್ದಾರೆ.

ಕಾಂಗ್ರೆಸ್ ಟಿಕೆಟ್‌ಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು: ನಾಳೆ ಕೊನೆಯ ದಿನ

2008-09 ರಿಂದ 2012-13ರ ಅವಧಿಯ 5 ವರ್ಷಗಳಲ್ಲಿ ಬಿಜೆಪಿ ಸರ್ಕಾರ ಪರಿಶಿಷ್ಟ ಜಾತಿ/ ಪಂಗಡದ ಕಲ್ಯಾಣಕ್ಕೆ ಕೇವಲ 22,261 ಕೋಟಿ ರೂ. ಹಣವನ್ನು (Amount) ನೀಡಿದೆ. ಆದರೆ, ನಮ್ಮ ಸರ್ಕಾರ ಐದು ವರ್ಷಗಳ ಅವಧಿಯಲ್ಲಿ 88,395 ಕೋಟಿ ರೂ. ಹಣವನ್ನು ನೀಡಿದೆ. ಇದು ನಮ್ಮ ಕಾಂಗ್ರೆಸ್ (Congress) ಪಕ್ಷದ ಕಾಳಜಿಯಾಗಿದೆ. ಎಸ್ ಸಿಪಿ/ಟಿಎಸ್ ಪಿ ಕಾಯ್ದೆಯಡಿ ಯೋಜನೆಯ ಹಣವನ್ನು  ಅನ್ಯ ಉದ್ದೇಶಕ್ಕೆ (other purpose) ಬಳಸುವುದು ಅಪರಾಧ. ಬಿಜೆಪಿ ಸರ್ಕಾರ 2021-22ರ ನಿಗದಿತ 26,695 ಕೋಟಿ ರೂ. ಹಣದಲ್ಲಿ 7,885 ಕೋಟಿ ರೂ. ಹಣವನ್ನು ಮೂಲಸೌಕರ್ಯ (Infrastructure) ಅಭಿವೃದ್ದಿಗೆ ವರ್ಗಾವಣೆ ಮಾಡಿರುವುದು ದಲಿತರಿಗೆ ಬಗೆದಿರುವ ದ್ರೋಹ (Betrayal)ವಾಗಿದೆ ಎಂದು ಆರೋಪಿಸಿದರು.

ಮತದಾರರ ಪಟ್ಟಿ ವಿವಾದ: ಇದು ಕೆಜಿಎಫ್, ಕಾಂತಾರದ ಕಥೆ ಅಲ್ಲ ಎಂದ ಸಿದ್ದರಾಮಯ್ಯ

ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಎಸ್ ಸಿಎಸ್ ಪಿ/ಟಿಎಸ್ ಪಿ ಯೋಜನೆಗೆ ಮೀಸಲಿರಿಸಿದ್ದ ಹಣದಲ್ಲಿ 7,885.32 ಕೋಟಿ ರೂ.ಗಳನ್ನು ನೀರಾವರಿ (Irrigation), ನಗರಾಭಿವೃದ್ದಿ (Urban devolopment) ಮತ್ತು ಮೂಲಸೌಕರ್ಯ ಅಭಿವೃದ್ದಿಗೆ  ವ್ಯಯ ಮಾಡಿರುವ ಬಿಜೆಪಿ ಸರ್ಕಾರ ದಲಿತ ಸಮುದಾಯದ ಬೆನ್ನಿಗೆ ಚೂರಿ (Backstab) ಇರಿದಿದೆ. 2012-13ರಲ್ಲಿ ಬಿಜೆಪಿ ಸರ್ಕಾರ ಎಸ್‌ಸಿ/ಎಸ್‌ಟಿ  ಕಲ್ಯಾಣಕ್ಕೆ ನೀಡಿದ್ದು ಕೇವಲ 7,200 ಕೋಟಿ ರೂ. ಆಗಿದೆ. ಆದರೆ, ನಮ್ಮ ಸರ್ಕಾರ 2014-15ರಲ್ಲಿ 15,832 ಕೋಟಿ ರೂ. ಹಾಗೂ 2018-19ರಲ್ಲಿ ನಮ್ಮ ಕೊನೆಯ ಬಜೆಟ್ (Budget) ನಲ್ಲಿ ಎಸ್ ಸಿಎಸ್ ಪಿ/ಟಿಎಸ್ ಪಿಗೆ 29,691 ಕೋಟಿ ರೂ. ಹಣವನ್ನು ನೀಡಿದ್ದೇವೆ ಎಂದು ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಪುಟಿನ್‌ಗೆ ಇಲ್ಲೇ ಎಲೆಕ್ಷನ್‌ ನಿಲ್ಲೋಕೆ ಟಿಕೆಟ್‌ ಕೊಡ್ತಾರೆ ಅಂದ್ಕೊಂಡಿದ್ದೆ.. ಸಂತೋಷ್‌ ಲಾಡ್‌ ಲೇವಡಿ
ನಾನು ಲಂಚ ಪಡೆದಿದ್ದು ಸಾಬೀತಾದರೆ ರಾಜೀನಾಮೆ: ಗೃಹ ಸಚಿವ ಪರಮೇಶ್ವರ್‌