
ಬೆಂಗಳೂರು (ನ.20) : ರಾಜ್ಯದಲ್ಲಿ ಬಿಜೆಪಿ ಎಸ್‌ಟಿ ಮೋರ್ಚಾ ವತಿಯಿಂದ ಬಳ್ಳಾರಿಯಲ್ಲಿ ನಡೆಸಲಾದ ಪರಿಶಿಷ್ಟ ಪಂಗಡದ ನವಶಕ್ತಿ ಸಮಾವೇಶದ ಬೆನ್ನಲ್ಲೇ ಕಾಂಗ್ರೆಸ್‌ನಿಂದ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡದ ಜನಾಂಗದ ಐಕ್ಯತಾ ಸಮಾವೇಶ ನಡೆಸಲು ಹಿರಿಯ ನಾಯಕರು ಬೆಂಗಳೂರಿನಲ್ಲಿ ಪೂರ್ವಭಾವಿ ಸಭೆ ನಡೆಸಿದ್ದಾರೆ. ಈ ಸಭೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗರಾಜುತ್ತಿದ್ದಂತೆಯೇ, ನಿಮಗೆ ಆಹ್ವಾನ ಇಲ್ಲದಿದ್ದರೂ ಯಾಕೆ ಬಂದಿರಿ ಎಂದು ವಿ.ಎಸ್. ಉಗ್ರಪ್ಪ ಸಿದ್ದರಾಮಯ್ಯ ಅವರಿಗೆ ಕಿಚಾಯಿಸಿದ್ದಾರೆ.
ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಕಾಂಗ್ರೆಸ್ (Congress) ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನಾಂಗದ ಐಕ್ಯತಾ ಸಮಾವೇಶದ (Unity convention) ಬಗ್ಗೆ ಪೂರ್ವಭಾವಿ ಸಭೆ ನಡೆಸಲಾಗಿದೆ. ಈ ಸಭೆಯಲ್ಲಿ ಕಾಂಗ್ರೆಸ್ ಹಿರಿಯ ಮುಖಂಡರಾದ ವಿ.ಎಸ್. ಉಗ್ರಪ್ಪ (Ugrappa) ಮತ್ತು ಸಿದ್ದರಾಮಯ್ಯ (Siddaramaiah) ಅವರ ನಡುವೆ ಟಾಕ್ ಫೈಟ್ (Talk fight) ನಡೆದಿದೆ. ಸಿದ್ದರಾಮಯ್ಯನವರೇ ನಿಮಗೆ ಈ ಕಾರ್ಯಕ್ರಮಕ್ಕೆ ಆಹ್ವಾನ (Invitation) ಇರಲಿಲ್ಲ, ಆದ್ರೂ ಯಾಕೆ ಬಂದಿದ್ದೀರಿ ಎಂದು ಉಗ್ರಪ್ಪ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರಿಸಿದ ಸಿದ್ದರಾಮಯ್ಯ ಅವರು, 'ಏ ಉಗ್ರಪ್ಪಾ, ನಾನು ಬರೋ ಹಂಗೆ ಇರಲಿಲ್ಲ, ಪರಮೇಶ್ವರ್ (Parameswar) ಫೋನ್ ಮಾಡಿ ಕರೆದಿದ್ದಕ್ಕೆ ಬಂದಿದೀನಿ' ಎಂದು ಹೇಳಿದರು. ಮುಂದುವರೆದು ನಿಂಗೆ ಈ ತರಾ ಮಾತಾಡಿಲ್ಲ ಅಂದ್ರೆ ತಿಂದಿದ್ದು ಅರಗಲ್ವಾ ಎಂದು ಹೇಳಿದ್ದಾರೆ.
ಸತೀಶ್ ಜಾರಕಿಹೊಳಿ ಗೈರು: ಬಿಜೆಪಿ ಎಸ್‌ಟಿ ಮೋರ್ಚಾದಿಂದ (BJP ST Morcha) ಬಳ್ಳಾರಿಯಲ್ಲಿ ನಡೆಸಲಾದ ಸಮಾವೇಶದಲ್ಲಿ ಸುಮಾರು 10 ಲಕ್ಷದಷ್ಟು ಜನರನ್ನು ಸೇರಿಸಲಾಗಿದೆ. ಆದರೆ, ಇದೇ ಪರಿಶಿಷ್ಟ ಪಂಗಡ ಜನಾಂಗದ ನಾಯಕ ಹಾಗೂ ಕೆಪಿಸಿಸಿ (KPCC) ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ (Sathish Jarakiholi) ಅವರು ಕಾಂಗ್ರೆಸ್‌ನ ಎಸ್‌ಸಿ, ಎಸ್‌ಟಿ ಐಕ್ಯತಾ ಸಮಾವೇಶದ ಕುರಿತ ಪೂರ್ವಭಾವಿ ಸಭೆಗೆ ಹಾಜರಾಗಿರಲಿಲ್ಲ. ಇದು ಆರಂಭದಲ್ಲಿಯೇ ಕಾಂಗ್ರೆಸ್ ಕಾರ್ಯಕ್ರಮಕ್ಕೆ ಹಿನ್ನಡೆ (Setback) ಆಗಬಹುದೇ ಎಂಬ ಅನುಮಾನವನ್ನು ಹುಟ್ಟುಹಾಕಿದೆ. ಇನ್ನು ಇತ್ತೀಚೆಗಷ್ಟೇ 'ಹಿಂದು ಅಶ್ಲೀಲ ಪದ' ಎಂದು ವಿವಾದಾತ್ಮಕ ಹೇಳಿಕೆ ನೀಡಿದ ಸತೀಶ್ ಜಾರಕಿಹೊಳಿ ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಸುರ್ಜೇವಾಲ , ಸಿದ್ದರಾಮಯ್ಯ ಅವರು ಅಸಮಾಧಾನ ವ್ಯಕ್ತಪಡಿಸಿದ್ದರು. ಅಂದಿನಿಂದ ಪಕ್ಷದ ಚಟುವಟಿಕೆಗಳಿಂದ ದೂರ ಸತೀಶ್ ಜಾರಕಿಹೊಳಿ ದೂರ (Distance) ಉಳಿದಿದ್ದರು.
ಈ ಸಭೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಉಪ ಮುಖ್ಯಮಂತ್ರಿ ಡಾ ಜಿ ಪರಮೇಶ್ವರ್, ಕಾಂಗ್ರೆಸ್ ದಲಿತ ನಾಯಕರಾದ ಪ್ರಿಯಾಂಕ್ ಖರ್ಗೆ, ಕೆ.ಎಚ್. ಮುನಿಯಪ್ಪ, ಅಖಂಡ ಶ್ರೀನಿವಾಸ ಮೂರ್ತಿ ಸೇರಿ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.
Ballari ST Convention: ನಮ್ಮ ಜನಾಂಗದ ಋಣ ತೀರಿಸಿದ್ದೇನೆ- ಸಚಿವ ಶ್ರೀರಾಮುಲು
ಕಾಂಗ್ರೆಸ್‌ನಿಂದ ದೊಡ್ಡ ಸಮಾವೇಶದ ಲೆಕ್ಕಾಚಾರ: ಈಗಾಗಲೇ ಮುಂಬರುವ ವಿಧಾನಸಭಾ ಚುನಾವಣೆ ಮುಂದಿಟ್ಟುಕೊಂಡು ಕಾಂಗ್ರೆಸ್‌ನಿಂದ ದಾವಣಗೆರೆಯಲ್ಲಿ 'ಸಿದ್ಧರಾಮೋತ್ಸವ'ವನ್ನು (Siddharamotsava)ದೊಡ್ಡ ಸಮಾವೇಶವನ್ನಾಗಿ ಮಾಡಲಾಗಿತ್ತು.ಇದರ ಬೆನ್ನಲ್ಲೇ ರಾಹುಲ್ ಗಾಂಧಿ ಅವರ ಭಾರತ ಜೋಡೋ (Bharat jodo) ಯಾತ್ರೆಯ ಮೂಲಕ ನಾಗಮಂಗಲ ಮತ್ತು ರಾಯಚೂರಿನಲ್ಲಿ ದೊಡ್ಡ ಸಮಾವೇಶಗಳನ್ನು (Convention) ಆಯೋಜಿಸಲಾಗಿತ್ತು. ಈಗ ಬಿಜೆಪಿಯಿಂದ ವಾರದಲ್ಲಿ ಎರಡರಿಂದ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಲೋಕಾರ್ಪಣೆಗಳ ಜತೆಗೆ ಸಮಾವೇಶದ ರೀತಿಯಲ್ಲಿ ಜನರನ್ನು ಸೆಳೆಯುವ ಕಾರ್ಯಕ್ರಮ ಮಾಡಲಾಗುತ್ತಿದೆ. ಜೊತೆಗೆ ಜನಸಂಕಲ್ಪ (Jana Sankalpa) ಯಾತ್ರೆಯನ್ನು ಮುಂದುವರೆಸಿದೆ. ಬಳ್ಳಾರಿಯಲ್ಲಿ ಎಸ್‌ಟಿ ಸಮಾವೇಶದ ಮೂಲಕ ಬಲ ಪ್ರದರ್ಶನ ಮಾಡಿದೆ. ಇದಕ್ಕೆ ತಿರುಗೇಟು ನೀಡುವಲ್ಲಿ ಕಾಂಗ್ರೆಸ್ ಎಸ್‌ಸಿ ಮತ್ತು ಎಸ್‌ಟಿ ಸಮುದಾಯ ಎರಡನ್ನೂ ಸೇರಿಸಿ ದೊಡ್ಡ ಮಟ್ಟದಲ್ಲಿ ಐಕ್ಯತಾ ಸಮಾವೇಶ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.