ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮತಾಲಿಕ್ ಬಳಿ ಆಸ್ತಿಯಿಲ್ಲ: ರಾಜ್ಯಾದ್ಯಂತ ಪೊಲೀಸ್‌ ಕೇಸ್‌ಗಳಿವೆ!

By Sathish Kumar KH  |  First Published Apr 18, 2023, 9:46 PM IST

ಕಾರ್ಕಳದಲ್ಲಿ ನಾಮಪತ್ರ ಸಲ್ಲಿಕೆ ಮಾಡಿರುವ ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಬಳಿ ಯಾವುದೇ ಸ್ಥಿರಾಸ್ತಿ, ಚರಾಸ್ತಿಯಿಲ್ಲ. ಆದರೆ, ರಾಜ್ಯದ 7 ಪೊಲೀಸ್‌ ಠಾಣೆಗಳಲ್ಲಿ ಕೇಸುಗಳಿವೆ.


ಉಡುಪಿ (ಏ.18): ಉಡುಪಿ ಜಿಲ್ಲೆಯ ಕಾರ್ಕಳದಿಂದ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿರುವ  ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಅವರ ಬಳಿ ಯಾವುದೇ ಸ್ಥಿರಾಸ್ತಿ, ಚರಾಸ್ತಿ, ವಾಹನಗಳಿಲ್ಲ. ಆದರೆ ರಾಜ್ಯದ 7 ವಿವಿಧ ಪೊಲೀಸ್‌ ಠಾಣೆಗಳಲ್ಲಿ ಸೌಹಾರ್ಧಕ್ಕೆ ಧಕ್ಕೆ ತಂದಿರುವ ಹಿನ್ನೆಲೆಯಲ್ಲಿ ಕೇಸುಗಳಿವೆ.

ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಭಾರೀ ಕುತೂಹಲಕ್ಕೆ ಕಾರಣವಾಗಿರುವ ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಮಂಗಳವಾರ ಕಾರ್ಕಳದಲ್ಲಿ ನಾಮಪತ್ರ ಸಲ್ಲಿಸಿದರು. ನಾಮಪತ್ರದೊಂದಿಗೆ ತಮ್ಮ ಆಸ್ತಿ ವಿವರಗಳನ್ನು ಸಲ್ಲಿಸಿರುವ ಅವರ ಕೈಯಲ್ಲಿ 10,500 ರೂ. ನಗದು ಮತ್ತು ಬ್ಯಾಂಕುಗಳಲ್ಲಿ 2,63,500 ರು ಠೇವಣಿ ಹಣವಿದೆ. ಇದನ್ನು ಬಿಟ್ಟರೆ ಬೇರೆ ಯಾವುದೇ ಚರಾಸ್ತಿ ಅಥವಾ ಸ್ಥಿರಾಸ್ತಿ, ಸ್ವಂತ ವಾಹನ ಅಥವಾ ಸಾಲ ಇಲ್ಲ‌ವೆಂದು ಘೋಷಣೆ ಮಾಡಿದ್ದಾರೆ.

Latest Videos

undefined

ಕಾಂಗ್ರೆಸ್‌ ನಾಯಕನ ಪುತ್ರನಿಗೆ 881 ಕೋಟಿ ಸಾಲ ಕೊಟ್ಟ ಬ್ಯಾಂಕ್‌ಗಳು: ಮತ್ತೊಬ್ಬ ಮಲ್ಯ ಎನ್ನಬೇಡಿ!

ಎಲ್ಲೆಲ್ಲಿ, ಯಾವ ವಿಚಾರಕ್ಕೆ ಪೊಲೀಸ್‌ ಕೇಸ್‌ಗಳಿವೆ: ಆದರೆ, ಅವರ ಮೇಲೆ ರಾಜ್ಯದ ವಿವಿಧ ಠಾಣೆಗಳಲ್ಲಿ ಪ್ರಮುಖವಾಗಿ ಸೌಹಾರ್ದಕ್ಕೆ ಧಕ್ಕೆ ಉಂಟುಮಾಡಿದ ಒಟ್ಟು 7 ಪ್ರಕರಣಗಳು ವಿಚಾರಣೆಗೆ ಬಾಕಿ ಇವೆ. ಯಾದಗಿರಿ ಠಾಣೆ (ಪ್ರಚೋದನಾಕಾರಿ ಭಾಷಣ ಮತ್ತು ಸಶಸ್ತ್ರ ಕಾಯ್ದೆ ಉಲ್ಲಂಘನೆ), ಶೃಂಗೇರಿ ಠಾಣೆ (ಮಾನನಷ್ಟ ಮೊಕದ್ದಮೆ), ಬೆಂಗಳೂರು ಹೈಗ್ರೌಂಡ್ಸ್ ಠಾಣೆ (ಪ್ರಚೋದನಾಕಾರಿ ಭಾಷಣ, ಜೀವ ಬೆದರಿಕೆ, ಧರ್ಮಗಳ ನಡುವೆ ದ್ವೇಷ ಭಾವನೆ, ಧಾರ್ಮಿಕ ಭಾವನೆಗೆ ಧಕ್ಕೆ), ಬಬಲೇಶ್ವರ ಠಾಣೆ (ದಾರ್ಮಿಕ ಭಾವನೆಗೆ ಧಕ್ಕೆ ಮತ್ತು ಅವಾಚ್ಯ ಶಬ್ದಗಳಿಂದ ನಿಂದನೆ),  ಬಾಗಲಕೋಟೆಯ ನವಸಾಗರ ಠಾಣೆ (ಧಾರ್ಮಿಕ ಭಾವನೆಗಳಿಗೆ ಧಕ್ಕೆ, ಪ್ರಚೋದನೆ, ಕೋಮು ಗಲಭೆ, ಜೀವ ಬೆದರಿಕೆ), ಜೇವರ್ಗಿ ಠಾಣೆ (ಧಾರ್ಮಿಕ ಭಾವನೆಗೆ ಧಕ್ಕೆ, ಪ್ರಚೋದನೆ, ಕೋಮು ಗಲಭೆ, ಜೀವ ಬೆದರಿಕೆ), ಮುರುಡೇಶ್ವರ ಠಾಣೆ (ಮತೀಯ ಭಾವನೆಗೆ ಧಕ್ಕೆ,  ಪ್ರಚೋದನಕಾರಿ ಹೇಳಿಕೆ, ಅವಹೇಳನ, ಆದೇಶ ಉಲ್ಲಂಘನೆ) ಸೇರಿ ಒಟ್ಟು 7 ಪ್ರಕರಣಗಳು ಪ್ರಮೋದ್ ಮುತಾಲಿಕ್‌ ಮೇಲಿವೆ. 

ಶೆಟ್ಟರ್ ನಿರ್ಧಾರದಿಂದ ನೋವಾಗಿದೆ- ಶ್ರೀನಿವಾಸ್ ಪೂಜಾರಿ: ಜಗದೀಶ್ ಶೆಟ್ಟರ್ ಅವರು ಬಿಜೆಪಿ ಪಕ್ಷವನ್ನು ಕಟ್ಟಿ ಬೆಳೆಸಿದವರು. ಪಕ್ಷವು ಅವರಿಗೆ ಉತ್ತಮ ಸ್ಥಾನಮಾನವನ್ನು ನೀಡಿದೆ. ಅವರು ಕಾಂಗ್ರೆಸ್ ಸೇರುತ್ತಾರೆ ಎಂದು ಕನಸಿನಲ್ಲಿಯೂ ಎನಿಸಿರಲಿಲ್ಲ. ಶೆಟ್ಟರ್ ನಿರ್ಧಾರ ನೋವು ತಂದಿದೆ ಎಂದು ಸಚಿವ ಕೋಟ ಶ್ರೀನಿವಾಸ್ ಪೂಜಾರಿ ತಿಳಿಸಿದರು. ಅವರು ಕಾಪುವಿನಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ, ಲಿಂಗಾಯಿತ ಸಮುದಾಯವು ಬಿಜೆಪಿಯ ಜೊತೆಗಿದೆ. ವ್ಯಕ್ತಿಗತವಾಗಿ ಸವದಿ, ಶೆಟ್ಟರ್ ಪಕ್ಷ ತೊರೆದಿರುವುದು ಯಾವ ಪರಿಣಾಮವು ಬೀರುವುದಿಲ್ಲ. ಯಡಿಯೂರಪ್ಪ ಮತ್ತು ಮೀಸಲಾತಿ ಹೆಚ್ಚಿಸಿರುವ ಸಿಎಂ ಬೊಮ್ಮಾಯಿಯವರ ಜೊತೆ ಲಿಂಗಾಯಿತ ಸಮುದಾಯ ನಿಲ್ಲಲಿದೆ ಎಂದು ತಿಳಿಸಿದರು. 

ಹೊಸಕೋಟೆಯಲ್ಲ ಇದು ಶ್ರೀಮಂತರ ಕೋಟೆ: 1,600 ಕೋಟಿ ಒಡೆಯ ಎಂಟಿಬಿ ನಾಗರಾಜ್, ಶತಕೋಟಿ ವೀರ ಶರತ್ ಬಚ್ಚೇಗೌಡ

ವಿಶ್ವನಾಯಕನನ್ನು ಬಿಟ್ಟು ಸೋನಿಯಾರನ್ನು ಹೊಗಳಬೇಕು: ಮೋದಿಯವರನ್ನು ವಿಶ್ವ ನಾಯಕ ಎಂದು ಕರೆದ ಶೆಟ್ಟರ್, ಸೋನಿಯಾ ಗಾಂಧಿಯವರನ್ನು ಹೇಗೆ ಹೊಗಳುತ್ತಾರೆ ಎಂಬುದೇ ಅರ್ಥವಾಗುತ್ತಿಲ್ಲ. ಅವರೇ ಉತ್ತರಿಸಬೇಕು ಎಂದರು. ಬೈಂದೂರಿನಲ್ಲಿ ನಡೆದ ಸಭೆಯೊಂದರಲ್ಲಿ ಕೋಟ ಶ್ರೀನಿವಾಸ್ ಪೂಜಾರಿಯವರು ಮಾತನಾಡುತ್ತಾ ಭಯೋತ್ಪಾದಕರು ಎಂಬ ಶಬ್ಧವನ್ನು ಸಂಭೋದಿಸಿ, ನೋವುಂಟು ಮಾಡಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿತ್ತು‌. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ಇದು ಗೋಪಾಲ್ ಪೂಜಾರಿ ಮತ್ತು ಗುರುರಾಜ್ ಶೆಟ್ಟಿ ಗಂಟಿಹೊಳೆಯವರ ನಡುವಿನ ಚುನಾವಣೆ ಅಲ್ಲ, ರಾಷ್ಟ್ರಭಕ್ತರು ಮತ್ತು ಭಯೋತ್ಪಾದಕತೆಯನ್ನು ಬೆಂಬಲಿಸುವವರ ನಡುವಿನ ಚುನಾವಣೆ ಎಂದು ಹೇಳಿದ್ದೇನೆ. ಗೋಪಾಲ ಪೂಜಾರಿಯವರು ತಪ್ಪಾಗಿ ಅರ್ಥೈಸಿಕೊಂಡು ಟೀಕಿಸುತ್ತಿದ್ದಾರೆ. ಇನ್ನು ಕೆಲವರು ತಪ್ಪಾಗಿ ಅರ್ಥ ಮಾಡಿಕೊಂಡಂತೆ ನಟಿಸುತ್ತಿದ್ದಾರೆ ಎಂದು ಸ್ಪಷ್ಟೀಕರಣ ನೀಡಿದರು.

click me!