ಇಂಡಿ ಮತಕ್ಷೇತ್ರದ ಅಗರಖೇಡ ಗ್ರಾಮದ ಯುವಕ ಸಂಜೀವ ಐಹೊಳ್ಳಿ ಎಂಬುವವರರನ್ನು ನಾಗಠಾಣ ಮೀಸಲು ಮತಕ್ಷೇತ್ರದ ಅಧಿಕೃತ ಅಭ್ಯರ್ಥಿಯಾಗಿದ್ದಾರೆ. 2010ರಲ್ಲಿ ಅಗರಖೇಡ ಜಿಲ್ಲಾ ಪಂಚಾಯ್ತಿ ಸದಸ್ಯರಾಗಿ ಬಿಜೆಪಿ ಪಕ್ಷದಿಂದ ಆಯ್ಕೆಯಾಗಿದ್ದರು.
ಶಂಕರ ಹಾವಿನಾಳ ಚಡಚಣ
ಚಡಚಣ(ಏ.18): ನಾಗಠಾಣ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಯ್ಕೆಯಲ್ಲಿ ಅಚ್ಚರಿಯ ಹೆಸರು ಪ್ರಕಟಿಸುವ ಮೂಲಕ ಆಕಾಂಕ್ಷೆಗಳಿಗೆ ದಿಗ್ಭ್ರಮೆಯಾಗುವಂತೆ ಬಿಜೆಪಿ ವರಿಷ್ಟರು ನಿರ್ಧಾರ ಕೈಗೆ ತೆಗೆದುಕೊಂಡಿದ್ದಾರೆ.
undefined
ಕಳೆದ ಚುನಾವಣೆಯಲ್ಲಿ ಕೆಲವೇ ಮತಗಳಿಂದ ಪರಾಭವಗೊಂಡ ಹಾಗೂ ಸಚಿವ ಗೋವಿಂದ ಕಾರಜೋಳ ಅವರ ಪುತ್ರ ಗೋಪಾಲ ಕಾರಜೋಳ ಅವರು ಅಲ್ಲಿಂದ ಇಲ್ಲಿಯವರೆಗೆ ಬಿಜೆಪಿ ಪಕ್ಷ ಪ್ರಚಾರ, ಸತತ ಜನರ ಸಂಪರ್ಕ ದೊಂದಿಗೆ ಮುಂದಿನ ಚುನಾವಣೆಯಲ್ಲಿ ಟಿಕೆಟ್ ಸಿಗುತ್ತದೆ ಎಂಬ ಭಾವಣೆಯಲ್ಲಿ ಪಕ್ಷಕ್ಕಾಗಿ ಹಾಗೂ ಕಾರ್ಯಕರ್ತರೊಂದಿಗೆ ಬಿಜೆಪಿ ಸಂಘಟನೆ ಮಾಡುತ್ತಾ ಬಂದಿದ್ದರೆ, ಒಬ್ಬರದು ಈ ಕತೆಯದರೆ ಇನ್ನೊಬ್ಬರ ಕತೇನೇ ಬೇರೆ ಕಳೆದ ಕೆಲ ದಿನಗಳ ಹಿಂದೆ ಸಿಪಿಐ ಕೆಲಸಲ್ಕೆ ರಾಜೀನಾಮೆ ನೀಡಿ ಬಿಜೆಪಿ ಪಕ್ಷದದಿಂದ ಸ್ಪರ್ಧೆಸಲು ಆಗಮಿಸಿದ ಮಹೇಂದ್ರ ನಾಯಯ್ ಅವರಿಗೂ ಶಾಕ್ ಆಗಿದೆ. ಅದರಲ್ಲಿ ಪಕ್ಷದ ಹಿರಿಯ ಮುಖಂಡರ ಟಿಕೆಟ್ ನೀಡುವ ಭರವಸೆಯಿಂದ ಕೆಲಸಕ್ಕೆ ರಾಜೇನಾಮೆ ನೀಡಿದ್ದಾರೆ. ಮತಕ್ಷೇತ್ರದ ಟಿಕೆಟ್ ಗೋಪಾಲ ಕಾರಜೋಳ ಅವರಿಗೆ ಅಥವಾ ಯಾರಿಗೂ ನೀಡಿದರು ನಾನು ಬೆಜೆಪಿಯನ್ನು ಗೆಲ್ಲಿಸಲು ಶ್ರಮಿಸುತ್ತೇನೆ ಎಂದು ಹೇಳುತ್ತಿರುವ ಮಹೇಂದ್ರ ನಾಯಕ ಅವರು ಹೈ ಕಮಾಂಡ್ ಶಾಕ್ ನೀಡಿದೆ.
ಶತಕೋಟಿ ಒಡೆಯನಾದರೂ ಗುಲಗಂಜಿಯಷ್ಟು ಬಂಗಾರವಿಲ್ಲ! ಲಿಂಗಾಯತ ನಾಯಕನ ಆಸ್ತಿ ಮೌಲ್ಯವೆಷ್ಟು ಗೊತ್ತಾ?
ಕಾರ್ಯಕರ್ತರಿಲ್ಲಿ ಗೊಂದಲ :
ಚುನಾವಣೆ ದಿನಾಂಕ ಪ್ರಕಟವಾದಾಗಿನಿಂದ ಇಲ್ಲಿಯವರೆಗೆ ಮತಕ್ಷೇತ್ರದ ಕಾರ್ಯಕರ್ತರ ಅವರಿಗೆ ಬೇಕಾದ ನಾಯಕರ ಹೆಸರು ಪ್ರಚಾರ ಮಾಡುತ್ತ ಹೊರಟಿದ್ದರು. ಮೊದಲು ಗೋಪಾಲ ಕಾರಜೋಳ ಅವರಿಗೆ ಟಿಕೆಟ್ ಸಿಗುತ್ತೆ ಎಂದು ಅವರ ಹೆಚ್ಚಾಗಿ ಕೇಳಿಬಂದಿತ್ತು. ಕೆಲ ದಿನಗಳ ಹಿಂದೆ ಸಂಸದ ರಮೇಶ ಜಿಗಜಣಗಿ ಅವರ ಹೆಸರ ಪ್ರಚಲಿತದಲ್ಲಿ ಬಂದು ರಾಜ್ಯ ರಾಜಕಾರಣಕ್ಕೆ ಬರುತ್ತಾರೆ ಎಂಬ ಗುಮಾನಿ ಮತಕ್ಷೇತ್ರದ ತುಂಬೆಲ್ಲ ಪಸರಿಸಿತು. ತದನಂತರ ಕೆಲಸಕ್ಕೆ ರಾಜೀನಾಮೆ ನೀಡಿ ರಾಜಕಾರಣಕ್ಕೆ ಆಗಮಿಸಿದ ಮಹೇಂದ್ರಕುಮಾರ ನಾಯಕ ಅವರ ಹೆಸರು ಕೇಳಿ ಬಂದಿತು. ಅಲ್ಲದೆ ಸಂಸದ ರಮೇಶ ಜಿಗಜಣಿಗಿ ಅವರ ಪರಮಾತ್ಮ ನಾದ ಶಿವಾನಂದ ಮಕಣಾಪುರ ಹೆಸರು ಕೇಳಿ ಬಂದಿತ್ತು ಆದರೂ ಯಾರು ಕಂಡು ಕೇಳರಿಯದ ಹೆಸರು ಘೋಷಿಸಿ ಮತಕ್ಷೇತ್ರದ ಹಾಗೂ ಜನಪ್ರತಿನಿಗಳಿಗೆ ದಿಗ್ಬ$›ಮೆ ಯಾಗುವಂತ ಮಾಡಿದ್ದದಂತೂ ಸತ್ಯ.
ಇಂಡಿ ಮತಕ್ಷೇತ್ರದವರಿಗೆ ನಾಗಠಾಣ ಮಣೆ.
ಇಂಡಿ ಮತಕ್ಷೇತ್ರದ ಅಗರಖೇಡ ಗ್ರಾಮದ ಯುವಕ ಸಂಜೀವ ಐಹೊಳ್ಳಿ ಎಂಬುವವರರನ್ನು ನಾಗಠಾಣ ಮೀಸಲು ಮತಕ್ಷೇತ್ರದ ಅಧಿಕೃತ ಅಭ್ಯರ್ಥಿಯಾಗಿದ್ದಾರೆ. 2010ರಲ್ಲಿ ಅಗರಖೇಡ ಜಿಲ್ಲಾ ಪಂಚಾಯ್ತಿ ಸದಸ್ಯರಾಗಿ ಬಿಜೆಪಿ ಪಕ್ಷದಿಂದ ಆಯ್ಕೆಯಾಗಿದ್ದರು. ನಂತರ ಅಂಜುಟಗಿ ಮತಕ್ಷೇತ್ರದ ಜಿಲ್ಲಾ ಪಂಚಾಯ್ತಿಯಿಂದ ಸ್ಪರ್ದಿಸಿ ಸೋತ ಸಂಜೀವ ಮತ್ತೆ ರಾಜಕೀಯಕ್ಕೆ ಮರಳಲಿಲ್ಲಾ ಎಂದು ಹೇಳಲಾಗುತ್ತಿದೆ. ಇದ್ದಕ್ಕಿದ್ದಂತೆ ನಾಗಠಾಣ ಮತಕ್ಷೇತ್ರಕ್ಕೆ ಬಿಜೆಪಿ ಪಕ್ಷದ ಅಧಿಕೃತ ಅಭ್ಯರ್ಥಿ ಆಯ್ಕೆಯಾಗಿದ್ದು ಮತಕ್ಷೇತ್ರದ ಜನತೆಯಲ್ಲಿ ಹಾಗೂ ಕಾರ್ಯಕರ್ತರಲ್ಲಿ ಅಚ್ಚರಿಯಿಂದ ಹೈ ಕಮಾಂಡ್ ಅತ್ತ ಮುಖ ಮಾಡಿದ್ದಾರೆ. ಇದ್ದರು ಇರಲಿ 150 ಕಿ ಮೀರ್ಟ ವಿಸ್ತಾರ ಹೊಂದಿದ ಮತಕ್ಷೇತ್ರದ ಕೇವಲ 20ದಿನಗಳಲ್ಲಿ ಅಲೆದಾಡಿ ಬಿಜೆಪಿ ಪಕ್ಷ ಗೆಲ್ಲಿಸಲು ವರಿಷ್ಟರ ಪ್ಲಾನ… ಮಾಡಿರುವದಾದರೂ ಏನು ಅಂತಾ ಕಾರ್ಯಕರ್ತರು ಚಿತನೆಗೋಳಗಾಗಿದ್ದಾರೆ.
* ನಾಗಠಾಣ ಮತಕ್ಷೆತ್ರದ ಅಪರಿಚಿತ ವ್ಯಕ್ತಿಗೆ ಟಿಕೆಟ್ ನೀಡಲು ಜಿಲ್ಲೆಯ ಪ್ರಮುಖ ಮುಖಂಡ ಹೊಂದಾಣಿಕೆ ಸ್ವಪ್ರತಿಷ್ಠೆ ಹಾಗೂ ಅಧಿಕಾರದ ದಾಹ ಕಾರಣ.
ವಿಜಯಪುರ: ಚುನಾವಣೆ ಹಿನ್ನೆಲೆ ಭೀಮಾತೀರದ ಗ್ಯಾಂಗ್‌ಗಳ ಮೇಲೆ ಪೊಲೀಸ್ ಹದ್ದಿನ ಕಣ್ಣು..!
ಸಿದ್ದು ಬಗಲಿ ಬಿಜೆಪಿ ಕಾರ್ಯಕರ್ತ ಏಳಗಿ (ಪಿಎಚ್)
* ಬಿಜೆಪಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರು ನಾವು. ಪಕ್ಷದ ವರಿಷ್ಟರು ಅಳಿದು ತೂಗಿ ನಿರ್ಧಾರ ತೆಗೆದುಕೊ0ಡಿದ್ದಾರೆ. ಅವರ ನಿರ್ಧಾರದಂತೆ ನಾವು ಪಕ್ಷ ಹೇಳಿರುವ ಅಭ್ಯರ್ಥಿ ಯನ್ನು ಬೆಂಬಲಿಸುವುದು ನಮ್ಮ ಕರ್ತವ್ಯ. ವರಿಷ್ಟರ ನಿರ್ಧಾರ ಸ್ವಾಗತಿಸುತೇವೆ ಅಂತ ಪಟ್ಟಣ ಪಂಚಾಯ್ತಿ ಮಾಜಿ ಸದಸ್ಯ ನಾಗರಾಜ ನಿರಾಳೆ ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.