ಕೊಟ್ಟಿದ್ದ ಒಂದು ಚಿಹ್ನೆ, ಬ್ಯಾಲೆಟ್ ಪೇಪರ್‌ನಲ್ಲಿ ಬೇರೊಂದು ಚಿಹ್ನೆ: ಅಭ್ಯರ್ಥಿ ಶಾಕ್..!

By Suvarna NewsFirst Published Dec 22, 2020, 7:51 PM IST
Highlights

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಭ್ಯರ್ಥಿಗಳ ಚಿನ್ಹೆ ಮತಪತ್ರದಲ್ಲಿ ತಪ್ಪಾಗಿ ಮುದ್ರಣವಾಗಿ ಅಭ್ಯರ್ಥಿಗೆ ಶಾಕ್​ ಆಗುವಂತೆ ಮಾಡಿದೆ.

ಶಿವಮೊಗ್ಗ, (ಡಿ.22): ರಾಜ್ಯದಲ್ಲಿ (ಮಂಗಳವಾರ) ಮೊದಲನೇ ಹಂತದ ಗ್ರಾಮ ಪಂಚಾಯಿತಿ ಚುನಾವಣೆ ಅಂತ್ಯವಾಗಿದೆ. ಆದ್ರೆ, ಚಿನ್ಹೆ ಅದಲು ಬದಲು ಆಗಿದ್ದು ಅಭ್ಯರ್ಥಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತನ್ನ ಚಿನ್ನೆ ಟೇಬಲ್ ಆಗಿದ್ದು, ಇದಕ್ಕೆ ಮತ ನೀಡುವಂತೆ ಆ ಅಭ್ಯರ್ಥಿ ಸಾಕಷ್ಟು ಪ್ರಚಾರ ಮಾಡಿದ್ದರು. ಆದರೆ ಚುನಾವಣೆ ವೇಳೆ ಮತ ಪತ್ರದಲ್ಲಿ ಇದ್ದ ಚಿನ್ನೆ ಬೆಂಚು. ಇದರಿಂದ  ಅಭ್ಯರ್ಥಿ ಕಂಗಾಲಾಗಿರುವ ಘಟನೆ  ಶಿವಮೊಗ್ಗ ತಾಲೂಕಿನ ಮೇಲಿನ ಹನಸವಾಡಿ ಗ್ರಾಮ ಪಂಚಾಯತಿಯಲ್ಲಿ ನಡೆದಿದೆ.

ಗ್ರಾಮ ಪಂಚಾಯತ್ ಚುನಾವಣೆಗೆ ಸ್ಪರ್ಧಿಸಿದ್ದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಆತ್ಮಹತ್ಯೆ

ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೊಂದಿ ಚಟ್ನಳ್ಳಿ ಗ್ರಾಾಮದ ವಾರ್ಡ್‌ನಿಂದ ಅರ್ಜುನ್ ಎಂಬುವವರು ಸ್ಪರ್ಧಿಸಿದ್ದು, ಅವರಿಗೆ ಟೇಬಲ್ ಚಿನ್ಹೆ ನೀಡಲಾಗಿತ್ತು. ಆದ್ರೆ,  ಮತ ಪತ್ರದಲ್ಲಿ ಟೇಬಲ್ ಬದಲಾಗಿ ಬೆಂಚ್ ಚಿನ್ಹೆ ಮುದ್ರಣವಾಗಿದೆ. ಇದರಿಂದ ಅಭ್ಯರ್ಥಿ ಆತಂಕ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ನೊಂದ ಅಭ್ಯರ್ಥಿ, ತನಗೆ ಟೇಬಲ್ ಚಿನ್ನೆ ನೀಡಲಾಗಿದೆ ಎಂದು ತಿಳಿಸಲಾಗಿತ್ತು. ಅದರಂತೆ ನಾನು ಪ್ರಚಾರ ಮಾಡಿದ್ದೆ. ಆದರೆ ಮತದಾನದ ವೇಳೆ ಬ್ಯಾಲೆಟ್ ಪೇಪರ್‌ನಲ್ಲಿ ಚಿನ್ಹೆ ಟೇಬಲ್‌ ಬದಲಾಗಿ ಬೆಂಚ್ ಚಿತ್ರ ಮುದ್ರಣವಾಗಿದೆ ಎಂದು ಅಳಲು ತೋಡಿಕೊಂಡರು.ಈ ಸಂಬಂಧ ಚುನಾವಣಾಧಿಕಾರಿಗಳಿಗೆ ದೂರು ನೀಡುವುದಾಗಿ ತಿಳಿಸಿದ್ದಾರೆ.

click me!