Maha Vikas Aghadi ಅಸಾದುದ್ದೀನ್ ಓವೈಸಿ ಪಾರ್ಟಿ, ಬಿಜೆಪಿಯ ಬಿ ಟೀಮ್ ಎಂದ ಸಂಜಯ್ ರಾವತ್!

Suvarna News   | Asianet News
Published : Mar 19, 2022, 07:15 PM ISTUpdated : Mar 19, 2022, 07:23 PM IST
Maha Vikas Aghadi ಅಸಾದುದ್ದೀನ್ ಓವೈಸಿ ಪಾರ್ಟಿ, ಬಿಜೆಪಿಯ ಬಿ ಟೀಮ್ ಎಂದ ಸಂಜಯ್ ರಾವತ್!

ಸಾರಾಂಶ

ಮಹಾ ವಿಕಾಸ್ ಅಘಾಡಿ ಮೂರು ಪಕ್ಷಗಳ ಮೈತ್ರಿ ಮಾತ್ರ ಅಸಾದುದ್ದೀನ್ ಓವೈಸಿ ಪಕ್ಷವನ್ನು ಯಾವುದೇ ಕಾರಣಕ್ಕೂ ಸೇರಿಸಿಕೊಳ್ಳಲ್ಲ ಶಿವಸೇನಾ ಸಂಸದ ಸಂಜಯ್ ರಾವತ್ ಹೇಳಿಕೆ

ಮುಂಬೈ (ಮಾ. 19): ಶಿವಸೇನಾ ಸಂಸದ ಸಂಜಯ್ ರಾವತ್ (Sanjay Raut) ಅವರು ಮಹಾ ವಿಕಾಸ್ ಅಘಾಡಿ (ಎಂವಿಎ) (Maha Vikas Aghadi ) ಜೊತೆ ಮೈತ್ರಿ ಮಾಡಿಕೊಳ್ಳುವ ಎಐಎಂಐಎಂ (AIMIM)ಸಲಹೆಯನ್ನು ಶನಿವಾರ ತಿರಸ್ಕರಿಸಿದ್ದಾರೆ, ಔರಂಗಜೇಬ್ (Aurangzeb ) ಸಮಾಧಿಯ ಮುಂದೆ ತಲೆಬಾಗುವವರು ಮಹಾರಾಷ್ಟ್ರದ ಆದರ್ಶವಾಗಲು ಸಾಧ್ಯವಿಲ್ಲ ಮತ್ತು ಅಸಾದುದ್ದೀನ್ ಓವೈಸಿ (Asaduddin Owaisi) ನೇತೃತ್ವದ ಪಕ್ಷವನ್ನು ಬಿಜೆಪಿಯ ಬಿ ಟೀಮ್ (BJP B Team) ಆಗಿದೆ ಎಂದು ಟೀಕೆ ಮಾಡಿದ್ದಾರೆ.

ಆಲ್ ಇಂಡಿಯಾ ಮಜ್ಲಿಸ್-ಇ-ಇತ್ತೆಹಾದುಲ್ ಮುಸ್ಲಿಮೀನ್ ಸಂಸದ ಇಮ್ತಿಯಾಜ್ ಜಲೀಲ್ (All India Majlis-E-Ittehadul Muslimeen MP Imtiaz Jaleel ) ಅವರು ಎಂವಿಎ (MVA) ಜೊತೆ ಮೈತ್ರಿ ಮಾಡಿಕೊಳ್ಳುವಂತೆ ಸೂಚಿಸುವ ಮೂಲಕ ರಾಜಕೀಯ ವಲಯಗಳಲ್ಲಿ ಅಲ್ಲೋಲ ಕಲ್ಲೋಲ  ಸೃಷ್ಟಿಸಿದ್ದರು. ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ಬರದಂತೆ ತಡೆಯಲು ಸದ್ಯ ಮಹಾರಾಷ್ಟ್ರದಲ್ಲಿ ಮೂರು ಚಕ್ರದ ಆಟೋರಿಕ್ಷಾ ಇದೆ, ಎಐಎಂಐಎಂ ಅನ್ನು ಸೇರಿಸಿಕೊಂಡಲ್ಲಿ ಇದು ಆರಾಮದಾಯ ಕಾರು ಕೂಡ ಆಗಬಹುದು ಎಂದು ಹೇಳಿದ್ದರು.

"ಬಿಜೆಪಿಯೊಂದಿಗೆ ಎಐಎಂಐಎಂ ರಹಸ್ಯ ಮೈತ್ರಿ ಹೊಂದಿದ್ದು, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳ ಚುನಾವಣೆಗಳಲ್ಲಿ ಸಾಬೀತಾಗಿದೆ. ಎಐಎಂಐಎಂ ಬಿಜೆಪಿಯ 'ಬಿ' ಟೀಮ್ ಮತ್ತು ಹಾಗೆಯೇ ಉಳಿಯುತ್ತದೆ. ಮಹಾ ವಿಕಾಸ್ ಅಘಾಡಿ ಮೂರು ಪಕ್ಷಗಳ ಮೈತ್ರಿಕೂಟ. ಇಲ್ಲಿ ನಾಲ್ಕನೇ ಪಕ್ಷಕಕ್ಕೆ ಅವಕಾಶವಿಲ್ಲ ಎಂದು ಸಂಜಯ್ ರಾವತ್ ಹೇಳಿದ್ದಾರೆ.

ಮಹಾ ವಿಕಾಸ್ ಅಘಾಡಿಯ ಪಾಲುದಾರರು ಛತ್ರಪತಿ ಶಿವಾಜಿ ಮಹಾರಾಜ್ ಮತ್ತು ಛತ್ರಪತಿ ಸಂಭಾಜಿ ಮಹಾರಾಜ್ ಅವರನ್ನು ಗೌರವಿಸುತ್ತಾರೆ ಎಂದು ತಿಳಿಸಿದ್ದಾರರೆ. ಆದರೆ ಎಐಎಂಐಎಂ ಔರಂಗಜೇಬನ ಮುಂದೆ ತಲೆಬಾಗುತ್ತಾರೆ ಎಂದು ಹೇಳಿದ್ದಾರೆ. 17ನೇ ಶತಮಾನದ ಮೊಘಲ್ ಚಕ್ರವರ್ತಿಯಾಗಿದ್ದ ಔರಂಗಜೇಬ್, ಛತ್ರಪತಿ ಶಿವಾಜಿ ಮಹಾರಾಜರನ್ನು ಆಗ್ರಾದಲ್ಲಿ ಸೆರೆಯಿಟ್ಟುಕೊಂಡಿದ್ದ. ಅಲ್ಲಿಂದ ಶಿವಾಜಿ ತಪ್ಪಿಸಿಕೊಂಡಿದ್ದೇ ದೊಡ್ಡ ಸಾಹಸಾಗಥೆ. ಹಿಂದುತ್ವದ ನಿರೂಪಣೆಯಲ್ಲಿ, ಔರಂಗಜೇಬನನ್ನು ದಖನ್‌ನಲ್ಲಿ ಛತ್ರಪತಿ ಶಿವಾಜಿಯನ್ನು ಖ್ಯಾತಿಯನ್ನು ತಡೆಯಲು ವಿಫಲವಾದ ಒಬ್ಬ ಮತಾಂಧನಂತೆ ಚಿತ್ರಿಸಲಾಗಿದೆ.

Sanjay Raut to Narayan Rane : ಬೆದರಿಕೆ ಹಾಕೋದ್ರಲ್ಲಿ ನಾವು ನಿಮ್ಮಪ್ಪ, ಎಚ್ಚರಿಕೆಯಿಂದಿರಿ!
ಮಹಾ ವಿಕಾಸ್ ಅಘಾಡಿಯ 25 ಅತೃಪ್ತ ಶಾಸಕರು ನಡೆಯುತ್ತಿರುವ ಬಜೆಟ್ ಅಧಿವೇಶನವನ್ನು ಬಹಿಷ್ಕರಿಸಲು ಸಿದ್ಧರಾಗಿದ್ದಾರೆ ಮತ್ತು ಹಲವಾರು ಶಾಸಕರು ಬಿಜೆಪಿಯೊಂದಿಗೆ ಸಂಪರ್ಕದಲ್ಲಿದ್ದಾರೆ ಮತ್ತು ಚುನಾವಣೆ ಹತ್ತಿರವಾದ ನಂತರ ಅವರು ಪಕ್ಷಾಂತರ ಮಾಡುತ್ತಾರೆ ಎಂದು ಹೇಳಿದ್ದ ಬಿಜೆಪಿ ಸಂಸದ ರಾವ್ಸಾಹೇಬ್ ದಾನ್ವೆ ಮಾತುಗಳಿಗೆ ಸಂಜಯ್ ರಾವತ್ ಲೇವಡಿ ಮಾಡಿದರು. "ಅವನು (ದನ್ವೆ) ಹೋಳಿ ಹಬ್ಬದ ಕಾರಣದಿಂದಾಗಿ ಅಮಲಿನಲ್ಲಿರಬಹುದು. ಹೋಳಿ ನಂತರ ಅವನು (ಕುಡಿತದ) ದೌರ್ಬಲ್ಯದಿಂದ ಹೊರಬಂದಲ್ಲಿ, ಅವನು ಏನು ಹೇಳುತ್ತಾನೆ ಎಂದು ಅವನಿಗೆ ನೆನಪಿಲ್ಲದೇ ಇರಬಹುದು" ಎಂದು ಸಂಜಯ್ ರಾವತ್ ಪ್ರತಿಕ್ರಿಯಿಸಿದ್ದಾರೆ.

Election Result 2022 ಮಾಯಾವತಿ, ಓವೈಸಿಗೆ ಪದ್ಮಭೂಷಣ, ಭಾರತ ರತ್ನ ನೀಡಿ ಎಂದ ಶಿವಸೇನೆ!
ಶನಿವಾರ ಬೆಳಗ್ಗೆ ಮಾತನಾಡಿದ್ದ ಜಲೀಲ್, ಮೂರು ಚಕ್ರಗಳ ಆಟೋರಿಕ್ಷಾವನ್ನು "ಆರಾಮದಾಯಕ ಕಾರು" ಮಾಡಲು ಮತ್ತೊಂದು ಚಕ್ರವನ್ನು ಮಹಾ ವಿಕಾಸ್ ಅಘಾಡಿಗೆ ಸೇರಿಸಬಹುದು ಎಂದು ಹೇಳಿದ್ದರು. "ಬಿಜೆಪಿಯನ್ನು ಏಕಾಂಗಿಯಾಗಿ ಸೋಲಿಸುವ ಶಕ್ತಿ ಅವರಲ್ಲಿ (ಶಿವಸೇನೆ) ಉಳಿದಿಲ್ಲ. ಅದಕ್ಕಾಗಿಯೇ ಅವರಿಗೆ ಕಾಂಗ್ರೆಸ್ ಮತ್ತು ಎನ್‌ಸಿಪಿಯ ಬೆಂಬಲ ಬೇಕು. ಆಟೊರಿಕ್ಷಾಕ್ಕೆ (ಮಹಾ ವಿಕಾಸ್ ಅಘಾಡಿ) ಮತ್ತೊಂದು ಚಕ್ರವನ್ನು ಸೇರಿಸಿ ಅದನ್ನೊಂದು ಆರಾಮದಾಯಕ ಕಾರು  ಮಾಡೋಣ ಎಂದು ನಾನು ಪ್ರಸ್ತಾಪಿಸಿದ್ದೇನೆ.  'ವಂದೇ ಮಾತರಂ' (ಔರಂಗಾಬಾದ್ ಮುನಿಸಿಪಲ್ ಕಾರ್ಪೊರೇಷನ್‌ನಲ್ಲಿ) ಹಾಡುವುದನ್ನು ವಿರೋಧಿಸಿದ ಕಾರ್ಪೊರೇಟರ್ ಅನ್ನು ನಾವು ಹೊರಹಾಕಿದ್ದೇವೆ ಮತ್ತು ಅವರು ಈಗ ಎನ್‌ಸಿಪಿಗೆ ಸೇರಿದ್ದಾರೆ" ಎಂದು ಎಐಎಂಐಎಂನ ಮಹಾರಾಷ್ಟ್ರ ಘಟಕದ ಮುಖ್ಯಸ್ಥರಾಗಿರುವ ಜಲೀಲ್ ಸ್ಥಳೀಯ ಸುದ್ದಿವಾಹಿನಿಗೆ ತಿಳಿಸಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ಆನೆ ಕಾರಿಡಾರ್ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಬೇಕು: ಮಾಜಿ ಸಂಸದ ಪ್ರತಾಪ್ ಸಿಂಹ