* ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ vs ಡಿಕೆ ಶಿವಕುಮಾರ್ ಶೀತಲ ಸಮರ
* ಸಿದ್ದು-ಡಿಕೆಶಿ ರಾಜಕೀಯ ಅಸ್ತ್ರವಾಗಿ ಬಳಸಿಕೊಂಡ ಬಿಜೆಪಿ
* ಸಿಎಂ ಅಭ್ಯರ್ಥಿ ಘೋಷಣೆ ಈಗಿಲ್ಲ, ಇದು ಇತಿಹಾಸ ಎಂದ ಕಾಂಗ್ರೆಸ್ ನಾಯಕ
ವರದಿ: ರವಿ ಶಿವರಾಮ್
ಬೆಂಗಳೂರು, (ಮಾ.19): ಕರ್ನಾಟಕ ಕಾಂಗ್ರೆಸ್ ನಲ್ಲಿ(Karnataka Congress) ಸಿದ್ದರಾಮಯ್ಯ vs ಡಿಕೆ ಶಿವಕುಮಾರ್ ಬಣ ಎನ್ನುವ ಚಿತ್ರಣ ಇದೆ. ಮುಖ್ಯಮಂತ್ರಿ ಅಭ್ಯರ್ಥಿಗಾಗಿ ಇಬ್ಬರು ನಾಯಕರು ಪರಸ್ಪರ ಶೀತಲ ಸಮರ ನಡೆಸುತ್ತಿದ್ದಾರೆ ಎನ್ನುವ ವಾತಾವರಣ ಅನೇಕ ಬಾರಿ ಸಾಬೀತಾಗಿದೆ.
ಪ್ರತಿಪಕ್ಷ ಬಿಜೆಪಿ ಕೂಡ ಡಿಕೆ ಶಿವಕುಮಾರ್(DK Shivakumar) ಮತ್ತು ಸಿದ್ದರಾಮಯ್ಯ(Siddaramaiah) ವಾರ್‌ನ್ನು ರಾಜಕೀಯ ಅಸ್ತ್ರವಾಗಿ ಬಳಸಿಕೊಂಡಿದೆ. ಅವಕಾಶ ಸಿಕ್ಕಾಗಲೆಲ್ಲಾ ಅದನ್ನು ಪ್ರಯೋಗಿಸುವ ಬಿಜೆಪಿ ನಾಯಕರು ಕಾಂಗ್ರೆಸ್'ನ ಆಂತರಿಕ ವಿಚಾರವನ್ನೇ ಹೋದಲ್ಲಿ ಬಂದಲ್ಲಿ ಕೆದಕುತ್ತಾರೆ.
ಕಾಂಗ್ರೆಸ್‌ಗೆ ಸಾಫ್ಟ್, ಹಾರ್ಡ್ ಹಿಂದುತ್ವ ಎಂದಿಲ್ಲ, ಹಿಂದೂ ಧರ್ಮದಲ್ಲಿ ನಂಬಿಕೆ ಇದೆ: ಸಿದ್ದರಾಮಯ್ಯ
ಈ ಮಧ್ಯೆ ಕಾಂಗ್ರೆಸ್ ನ (Congress) ಮುಖ್ಯಮಂತ್ರಿ ಅಭ್ಯರ್ಥಿ (CM Face) ಯಾರು ಎನ್ನುವ ಪ್ರಶ್ನೆಯನ್ನು ರಾಜ್ಯ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂಬಿ ಪಾಟೀಲ್ (MB Patil) ಅವರಿಗೆ ಕೇಳಿದ್ರೆ, ನಮ್ಮ ಹೈಕಮಾಂಡ್ ಚುನಾವಣೆ ಮೊದಲು ಸಿಎಂ ಅಭ್ಯರ್ಥಿಯನ್ನು ಘೋಷಣೆ ಮಾಡೋದಿಲ್ಲ. ಇದು ಕಾಂಗ್ರೆಸ್ ಪಕ್ಷದ ಇತಿಹಾಸ. ಪಂಜಾಬ್ ಒಂದನ್ನು ಹೊರತುಪಡಿಸಿ, ಬೇರೆಡೆ ಚುನಾವಣೆ ಮುನ್ನ ಸಿಎಂ ಅಭ್ಯರ್ಥಿ ಘೋಷಣೆ ಮಾಡುವುದಿಲ್ಲ ಎಂದು ಸ್ಪಷ್ಟನೆ ನೀಡಿದರು.
ಶಾಸಕರ ಅಭಿಪ್ರಾಯ ಪಡೆದು ಹೈಕಮಾಂಡ್ ಸಿಎಂ ಅಭ್ಯರ್ಥಿ ಘೋಷಣೆ ಮಾಡುತ್ತದೆ ಎಂದು ಇದೇ ವೇಳೆ ತಿಳಿಸಿದ್ರು. ಮುಂದುವರಿದು ಮಾತನಾಡಿದ ಎಂಬಿ ಪಾಟೀಲ್, ಪಂಜಾಬ್ ಬೇರೆ , ಕರ್ನಾಟಕ ಬೇರೆ. ಅಲ್ಲಿ ನಾವು ಸೋತಿರಬಹುದು. ಆದ್ರೆ ರಾಜ್ಯದಲ್ಲಿ ನಾವು ಅಧಿಕಾರಕ್ಕೆ ಬರ್ತೆವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಅವರು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ನಾವು 130-135 ಸ್ಥಾನ ಗೆಲ್ಲುವ ಮೂಲಕ ಅಧಿಕಾರಕ್ಕೆ ಬರೋದಿ ನಿಶ್ಚಿತ ಎಂದರು. ಇದೇ ತಿಂಗಳ 28 ನೇ ತಾರೀಖಿನಂದು ಪ್ರಚಾರ ಸಮಿತಿ ಅಧ್ಯಕ್ಷನಾಗಿ ಅಧಿಕಾರ ಸ್ವೀಕಾರ ಮಾಡಲಿದ್ದೇನೆ. ಅಧಿಕಾರ ಸ್ವೀಕಾರದ ಬಳಿಕ ಹಿರಿಯರ, ಕಿರಿಯರ ಜೊತೆ ಸಭೆ ಮಾಡಿ ಸಲಹೆ ಪಡೆಯುತ್ತೇನೆ. ಬಳಿಕ ಪ್ರಚಾರ ಸಮಿತಿ ರಚನೆ ಮಾಡಿ, ಯಾವ ವಿಚಾರದ ಮೇಲೆ ಪ್ರಚಾರ ಮಾಡಬೇಕು ಎಂದು ನಿರ್ಧಾರ ಮಾಡ್ತೇವೆ ಎಂದು ಎಂಬಿ ಪಾಟೀಲ್ ಹೇಳಿದರು.
ಇದೇ ವೇಳೆ ಮಾತಮಾಡಿದ ಕೆಪಿಸಿಸಿ ಕಾರ್ಯಧ್ಯಕ್ಷ ಸಲೀಂ ಅಹ್ಮದ್ ಪಂಚ ರಾಜ್ಯ ಸೋತಿದ್ದೇವೆ ಸರಿ, ಆದ್ರೆ ಉತ್ತರ ಪ್ರದೇಶದಲ್ಲಿ ಬಿಜೆಪಿ ಯಾಕೆ ಕಳೆದ ಬಾರಿಗಿಂತ 47 ಸ್ಥಾನ ಕಡಿಮೆ ಪಡೆಯಿತು ಎಂದು ಪ್ರಶ್ನೆ ಮಾಡಿದ್ರು.
ಇನ್ನು ರಾಜ್ಯದ ನೀರಾವರಿ ವಿವಾದದ ಬಗ್ಗೆ ನೆನ್ನೆ ನಡೆದ ಸರ್ವಪಕ್ಷ ಸಭೆಯ ಕುರಿತು ಮಾತನಾಡಿದ ಎಂಬಿ ಪಾಟೀಲ್ ನಾವು ಎಲ್ಲವನ್ನೂ ಮುಕ್ತವಾಗಿ ಮಾತಾಡಿದ್ದೇವೆ. ಪ್ರಧಾನಿ ಬಳಿ ನಿಯೋಗ ಕೊಂಡೊಯ್ಯಬೇಕು ಎಂದು ಆಗ್ರಹ ಪಡಿಸಿದ್ದೇವೆ. ಅಗತ್ಯ ಬಿದ್ದರೆ ಪ್ರಧಾನಿ ಬಳಿ ನಿಯೋಗ ಒಯ್ಯೋಣ ಎಂದು ಸಿಎಂ ಹೇಳಿದ್ದಾರೆ ಎಂದು ಎಂಬಿ ಪಾಟೀಲ್ ತಿಳಿಸಿದ್ರು. ಮೇಕೆದಾಟು ಯೋಜನೆಗೆ ಸಾವಿರ ಕೋಟಿ ಇಟ್ಟಿದ್ದಾರೆ. ಅದರಿಂದ ಏನು ಪ್ರಯೋಜನ ಇಲ್ಲ. ಪರಿಸರ ಇಲಾಖೆಯ ಪರ್ಮಿಶನ್ ತಗೊಳ್ಳದೆ, ನೋಟಿಫಿಕೇಶನ್ ಮಾಡದೆ ಸಾವಿರ ಕೋಟಿ ಇಟ್ಟು ಏನು ಲಾಭ ಎಂದು ಅವರು ಪ್ರಶ್ನೆ ಮಾಡಿದ್ರು. ಇದು ಕಣ್ಣೊರೆಸುವ ತಂತ್ರ ಎಂದು ಆರೋಪಿಸಿದರು.