'ಭಗವದ್ಗೀತೆಯಲ್ಲಿ ಇನ್ನೊಬ್ಬರ ಕೈ ಕಡೀರಿ, ಕಾಲು ತೆಗೀರಿ ಅಂತಾ ಹೇಳಿಲ್ಲ'

By Suvarna News  |  First Published Mar 19, 2022, 4:20 PM IST

* ಪಠ್ಯದಲ್ಲಿ ಭಗವದ್ಗೀತೆ ಅಳವಡಿಸುವ ಬಗ್ಗೆ ಚರ್ಚೆ
* ಕಾಂಗ್ರೆಸ್-ಬಿಜೆಪಿ ನಾಯಕರ ವಾಕ್ಸಮರ
* ಭಗವದ್ಗೀತೆಯಲ್ಲಿ ಇನ್ನೊಬ್ಬರ ಕೈ ಕಡೀರಿ, ಕಾಲು ತೆಗೀರಿ ಅಂತಾ ಹೇಳಿಲ್ಲ ಎಂದ ಸಚಿವ


ಬೆಂಗಳೂರು, (ಮಾ.19): ಶಾಲಾ ಪಠ್ಯದಲ್ಲಿ (School Syllabus) ಭಗವದ್ಗೀತೆ (Bhagavad Gita) ಅಳವಡಿಸುವ ವಿಚಾರದ ಬಗ್ಗೆ ಕರ್ನಾಟಕದಲ್ಲಿ ಕಾಂಗ್ರೆಸ್-ಬಿಜೆಪಿ ನಾಯಕರ ವಾಕ್ಸಮರ ಶುರುವಾಗಿದೆ.

 ಇನ್ನು ಈ ಬಗ್ಗೆ ಪಠ್ಯದಲ್ಲಿ ಭಗವದ್ಗೀತೆ ಅಳವಡಿಸುವ (Bhagavad Gita In School Syllabus ) ವಿಚಾರದಲ್ಲಿ ಚರ್ಚೆ ನಡೆಯುತ್ತಿರುವ ಹಿನ್ನೆಲೆ ಸಚಿವ ಸಿಸಿ ಪಾಟೀಲ್ (CC Patil) ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

Tap to resize

Latest Videos

ಹಿಜಾಬ್, ಕಾಶ್ಮೀರಿ ಫೈಲ್ ಆಯ್ತು ಈಗ ಭಗವದ್ಗೀತೆ ಪ್ರಲಾಪ, ರಾಜ್ಯ ರಾಜಕಾರಣದಲ್ಲಿ ಮತ್ತೆ ಕಿಡಿ

 ಗದಗದಲ್ಲಿ(Gadag) ಪತ್ರಿಕಾಗೋಷ್ಠಿಯಲ್ಲಿ ಮಾತ್ನಾಡಿದ ಅವರು, ಬೇರೆ ಪುಸ್ತಕದಲ್ಲಿ ಹೇಳಿದಂತೆ ಭಗವದ್ಗೀತೆಯಲ್ಲಿ ಹಿಂಸೆ ಬಗ್ಗೆ ಹೇಳಿಲ್ಲ ಎಂದರು.. ಪಠ್ಯದಲ್ಲಿ ಭಗವದ್ಗೀತೆ ವಿಚಾರದ ಡಿಕೆಶಿ ಆಕ್ಷೇಪ  ವ್ಯಕ್ತಪಡಿಸಿರುವ ವಿಚಾರಕ್ಕೆ, ನಾನು ಹೇಳಿದರೆ ಅಪಾರ್ಥವಾಗುತ್ತದೆ. ಭಗವದ್ಗೀತೆ ಬದಲಾಗಿ ಬೇರೆ ಪುಸ್ತಕ (ಹಿಂದೂ ಹೊರತಾದ ಧರ್ಮ ಗ್ರಂಥ) ಸೇರಿಸುತ್ತೇವೆ ಅಂದಿದ್ದರೆ ಅದನ್ನ ಸ್ವಾಗತಿಸುತ್ತಿದ್ದರು.. ಆ ಪುಸ್ತಕ ಯಾವ್ದು ಅಂತ ನಿಮಗೇ ಗೊತ್ತು ಅಂತಾ ಹೇಳಿದ್ರು.. ಅಲ್ದೆ, ರಾಮನರದಲ್ಲಿ ಏಸು ಪ್ರತಿಮೆ ವಿಚಾರ ಎಳೆತಂದ ಸಿಸಿ ಪಾಟೀಲ, ಗುಡ್ಡವನ್ನೇ ಕ್ರಿಶ್ಚಿಯನ್ ರಿಗೆ ಕೊಡೋದಕ್ಕೆ ಹೊರಟಿದ್ದರು ಎಂದು ಡಿಕೆಶಿವಕುಮಾರ್ ಕಾಲೆಳೆದರು. 

ಭಗವದ್ಗೀತೆ ವಿಚಾರ ಈಗ ಇನ್ನೂ ಚರ್ಚೆಯಲ್ಲಿದೆ.. ಈಗ ಯಾಕೆ ಸುಮ್ಮನೇ ಮಾತಾಡ್ಬೇಕು.. ಸತ್ಯವನ್ನ ಬಿಟ್ಟು ಬೇರೇನೂ ಹೇಳಲ್ಲ ಅಂತಾ ಗೀತೆಯ ಮೇಲೆ ಪ್ರಮಾಣಮಾಡಿ ಕೋರ್ಟ್ ನಲ್ಲಿ ಮಾತಾಡ್ತೀವಿ.. ಇಂಥ ಮೌಲ್ಯ ಇರುವ ಭಗವದ್ಗೀತೆ ಪಠ್ಯದಲ್ಲಿ ಅವಳವಡಿಸಿಕೊಳ್ಳಲು ತಪ್ಪೇನಿದೆ.. ಭಗವದ್ಗೀತೆ ಒಂದು ಜಾತಿಗೆ ಸಂಬಂಧಪಟ್ಟದಲ್ಲ.. ಕರ್ಮ ನೀನು ಮಾಡು.. ಫಲವನ್ನ ನನಗೆ ಬಿಡು ಅಂತಾ ಕೃಷ್ಣ ಹೇಳಿದ್ದಾನೆ ಇದೇ ಆಧಾರದಲ್ಲಿ ಭಗವದ್ಗೀತೆ ಇದೆ ಎಂದರು.

ಇನ್ನು, ಸಂಪುಟ ಪುನಃ ರಚನೆ ವೇಳೆ ಉಪ ಮುಖ್ಯಮಂತ್ರಿ ಹುದ್ದೆ ಬಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ,  ನಾನು ಪಕ್ಷದ ಶಿಸ್ತಿನ ಸಿಪಾಯಿ, ಪಕ್ಷ ಕೊಟ್ಟ ಕೆಲಸ ನಿಷ್ಠೆಯಿಂದ ಮಾಡುತ್ತೇನೆ.. ನನ್ನ ಅಭಿಪ್ರಾಯ, ಅನಿಸಿಕೆ, ನೋವು, ನಲಿವು ಪಕ್ಷದ ವೇದಿಕೆಯಲ್ಲಿ ಹಂಚಿಕೊಳ್ಳುತ್ತೇನೆ ಅಂತಾ ಹೇಳಿ ಜಾರಿಕೊಂಡ್ರು..

ಕರ್ನಾಟಕದಲ್ಲಿ ಒಂದಲ್ಲ ಒಂದು ರಾಜಕೀಯ ಕಿತ್ತಾಟಗಳು ನಡೆಯುತ್ತಲೇ ಇವೆ. ಒಂದು ಮುಗಿಯುವುದರೊಳಗೆ ಮತ್ತೊಂದು ಶುರುವಾಗುತ್ತೆ.

ಹೌದು...ಹಿಜಾಬ್ (Hijab Row), ಕಾಶ್ಮೀರಿ ಫೈಲ್ ಪರ-ವಿರೋಧ ಮುಗಿಯುತ್ತಿದ್ದಂತೆಯೇ ಈಗ  ಭಗವದ್ಗೀತೆ(Bhagavad Gita)  ಪ್ರಲಾಪ ಶುರುವಾಗಿದೆ. .

ಗುಜರಾತ್ ನಲ್ಲಿ ಪಠ್ಯದಲ್ಲಿ ಭಗವದ್ಗೀತೆ ಅಳವಡಿಸಿರುವ ಮಾದರಿಯಲ್ಲೇ ಕರ್ನಾಟಕ ರಾಜ್ಯದಲ್ಲೂ  ಅಳವಡಿಸಲು ಸಿಎಂ ಜೊತೆ ಚರ್ಚೆ ಮಾಡಿ ತೀರ್ಮಾನ ಮಾಡುವುದಾಗಿ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಹೇಳಿದ್ದಾರೆ.  ಪಠ್ಯದಲ್ಲಿ ಭಗವದ್ಗೀತೆ ವಿಚಾರಗಳನ್ನು ಅಳವಡಿಸುವ ಬಗ್ಗೆ ರಾಜಕೀಯ ನಾಯಕರ ಪರ-ವಿರೋಧಗಳು ವ್ಯಕ್ತವಾಗುತ್ತಿವೆ.

ಡಿಕೆ ಶಿವಕುಮಾರ್ ಟಾಂಗ್
ನಾಗೇಶ್ ಈ ಹೇಳಿಕೆ ನೀಡುತ್ತಿದ್ದಂತೆಯೇ ಕಾಂಗ್ರೆಸ್ ನ ಅನೇಕ ನಾಯಕರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದು, ಆರಂಭದಂದಲೇ ನಾನು ಎನ್‌ಇಪಿ ವಿರೋಧ ಮಾಡಿರುವವನು. ಎಲ್ಲಾ ತಿಳಿದವರೇ ಸೇರಿ ಪಠ್ಯ ಕ್ರಮ ರಚನೆ ಮಾಡಿದ್ದಾರೆ. ಹೊಸದಾಗಿ ಏನನ್ನೂ ಸೇರಿಸುವ ಅವಶ್ಯಕತೆ ಇಲ್ಲ ಎಂದು ಸಚಿವ ನಾಗೇಶ್‌ಗೆ ಟಾಂಗ್ ಕೊಟ್ಟಿದ್ದಾರೆ

ಎಲ್ಲಾ ಧರ್ಮದ ಆಚಾರ ವಿಚಾರಗಳನ್ನು ಜನ ತಿಳಿದುಕೊಳ್ಳೋದ್ರಲ್ಲಿ ತಪ್ಪಿಲ್ಲ. ಈಗಾಗಲೇ ಭಗವದ್ಗೀತೆ, ರಾಮಾಯಣ, ಇತರ ಧರ್ಮದ ವಿಚಾರಗಳು ಪಠ್ಯದಲ್ಲಿ ಇವೆ. ಹನುಮಂತಯ್ಯ ಮುಖ್ಯಮಂತ್ರಿ ಆಗಿದ್ದಾಗಲೇ ಎರಡು ರುಪಾಯಿ ಗೆ ಭಗವದ್ಗೀತೆ ಪುಸ್ತಕ ಕೊಟ್ಟಿದ್ದರು. ಈಗ ಇವರು ಹೊಸದಾಗಿ ಕ್ರೆಡಿಟ್ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ ಎಂದು ವಾಗ್ದಾಳಿ ನಡೆಸಿದ್ದರು.

click me!