Congress President Election: ನಾಳೆ ಅಧ್ಯಕ್ಷ ಚುನಾವಣೆ, ಮಲ್ಲಿಕಾರ್ಜುನ ಖರ್ಗೆ-ಶಶಿ ತರೂರ್‌ ನಡುವೆ ಯಾರು ಬಲಿಷ್ಠ?

Published : Oct 16, 2022, 09:02 PM IST
Congress President Election: ನಾಳೆ ಅಧ್ಯಕ್ಷ ಚುನಾವಣೆ, ಮಲ್ಲಿಕಾರ್ಜುನ ಖರ್ಗೆ-ಶಶಿ ತರೂರ್‌ ನಡುವೆ ಯಾರು ಬಲಿಷ್ಠ?

ಸಾರಾಂಶ

ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಬಗ್ಗೆಯೂ ಪ್ರಶ್ನೆಗಳು ಎದ್ದಿವೆ. ಈ ಪ್ರಶ್ನೆಗಳನ್ನು ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಶಶಿ ತರೂರ್ ಅವರೇ ಎತ್ತಿದ್ದಾರೆ. ಹೀಗಿರುವಾಗ ಖರ್ಗೆಯವರ ಮುಂದೆ ತರೂರ್ ಎಷ್ಟು ಬಲಿಷ್ಠವಾಗಿ ನಿಲ್ಲುತ್ತಾರೆ ಎನ್ನುವ ಚರ್ಚೆಯೂ ಶುರುವಾಗಿದೆ. 

ನವದೆಹಲಿ (ಅ.16): ಸೋಮವಾರ (ಅಕ್ಟೋಬರ್ 17) ಕಾಂಗ್ರೆಸ್ ನ ನೂತನ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಯಲಿದೆ. ಇದಕ್ಕಾಗಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಕಾಂಗ್ರೆಸ್ ನ 9800 ಕ್ಕೂ ಹೆಚ್ಚು ಮತದಾರರು ಮಲ್ಲಿಕಾರ್ಜುನ ಖರ್ಗೆ ಅಥವಾ ಶಶಿ ತರೂರ್ ಅವರಲ್ಲಿ ಒಬ್ಬರನ್ನ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಲಿದ್ದರೆ. ಆದರೆ, ಚುನಾವಣಾ ಪ್ರಕ್ರಿಯೆಯ ಬಗ್ಗೆಯೂ ಈಗಾಗಲೇ ಪ್ರಶ್ನೆಗಳು ಎದ್ದಿವೆ. ಈ ಪ್ರಶ್ನೆಗಳನ್ನು ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಶಶಿ ತರೂರ್ ಅವರೇ ಎತ್ತಿದ್ದಾರೆ. ಕಾಂಗ್ರೆಸ್‌ನ ಪ್ರಮುಖ ನಾಯಕರು ಮಲ್ಲಿಕಾರ್ಜುನ ಖರ್ಗೆ ಅವರನ್ನು ಸುಲಭವಾಗಿ ಭೇಟಿಯಾಗಿದ್ದಾರೆ ಎಂದು ತರೂರ್ ಆರೋಪಿಸಿದ್ದಾರೆ. ನಾವು ಅವರನ್ನು ಸ್ವಾಗತಿಸುತ್ತೇವೆ, ಆದರೆ ತರೂರ್ ವಿಷಯದಲ್ಲಿ ಇದು ಆಗುವುದಿಲ್ಲ. ತರೂರ್ ಅವರನ್ನು ಭೇಟಿ ಮಾಡಲು ಕಾಂಗ್ರೆಸ್ ನಾಯಕರು ಹಿಂದೇಟು ಹಾಕುತ್ತಿದ್ದಾರೆ ಎಂದು ಹೇಳಿದ್ದಾರೆ. ಸೋಮವಾರ ಬೆಳಗ್ಗೆ 10 ಗಂಟೆಗೆ ಚುನಾವನೆ ಪ್ರಕ್ರಯೆ ಆರಂಭವಾಗಲಿದ್ದು, ಸಂಜೆ 4ರ ವರೆಗೆ ಮತದಾನ ಮಾಡುವ ಅವಕಾಶ ಇರಲಿದೆ. ಇದಕ್ಕಾಗಿ ದೇಶಾದ್ಯಂತ 68 ಬೂತ್‌ಗಳು ಹಾಗೂ 40 ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ವಿವಿಧ ರಾಜ್ಯಗಳ ಸಾಕಷ್ಟು ಕಾರ್ಯಕರ್ತರು ಹಾಗೂ ಕಾಂಗ್ರೆಸ್‌ ಮುಖಂಡರು ಮತ ಹಾಕಲಿದ್ದಾರೆ.

ಸೋನಿಯಾ ಗಾಂಧಿ (Sonia Gandhi), ಮನಮೋಹನ್ ಸಿಂಗ್ (Manmohan Singh), ಪ್ರಿಯಾಂಕಾ ಗಾಂಧಿ (Priyanka Gandhi) ಮತ್ತು ಇತರ ಸಿಡಬ್ಲ್ಯೂಸಿ (CWC) ಸದಸ್ಯರು ಕಾಂಗ್ರೆಸ್ ಪ್ರಧಾನ (Congress President Election) ಕಚೇರಿಯ ಬೂತ್‌ನಲ್ಲಿ ಮತ ಚಲಾಯಿಸಲಿದ್ದಾರೆ. ಭಾರತ್ ಜೋಡೋ ಯಾತ್ರಾ ಶಿಬಿರದಲ್ಲಿ ಬೂತ್ ಕೂಡ ಸ್ಥಾಪಿಸಲಾಗಿದ್ದು, ರಾಹುಲ್ ಗಾಂಧಿ ಮತ್ತು ಸುಮಾರು 40 ಮತದಾರರು ಮತ ಚಲಾಯಿಸಲಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರು ಬೆಂಗಳೂರು ಮತ್ತು ಶಶಿ ತರೂರ್ ಅವರು ತಿರುವನಂತಪುರಂನಲ್ಲಿರುವ ರಾಜ್ಯ ಕಾಂಗ್ರೆಸ್ ಕಚೇರಿಯಲ್ಲಿ ಮತ ಚಲಾಯಿಸಲಿದ್ದಾರೆ. ಮತದಾನದ ನಂತರ ಮತಪೆಟ್ಟಿಗೆಗಳನ್ನು ದೆಹಲಿಗೆ ತರಲಾಗುತ್ತಿದ್ದು, ಅಕ್ಟೋಬರ್ 19 ರಂದು ಪಕ್ಷದ ಕೇಂದ್ರ ಕಚೇರಿಯಲ್ಲಿ ಮತ ಎಣಿಕೆ ನಡೆಯಲಿದೆ. 22 ವರ್ಷಗಳ ನಂತರ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಸುಮಾರು 24 ವರ್ಷಗಳ ನಂತರ ಗಾಂಧಿ ಕುಟುಂಬದ ಹೊರತಾದ ವ್ಯಕ್ತಿಯೊಬ್ಬರು ಕಾಂಗ್ರೆಸ್‌ನ ಅಧ್ಯಕ್ಷರಾಗಲಿದ್ದಾರೆ.

ಶಶಿ ತರೂರ್‌ ಎತ್ತಿರುವ ಆಕ್ಷೇಪಗಳೇನು: ಶಶಿ ತರೂರ್ ( Shashi Tharoor) ಎದುರು ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಕಣಕ್ಕಿಳಿದಿದ್ದಾರೆ. ಖರ್ಗೆ ಅವರನ್ನು ಪಕ್ಷ ಬಹಿರಂಗವಾಗಿ ಬೆಂಬಲಿಸುತ್ತಿದೆ. ಇದೇ ಕಾರಣಕ್ಕೆ ತಮ್ಮನ್ನು ಏಕಾಂಗಿ ಮಾಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ.  ಈ ಬಗ್ಗೆ ತರೂರ್ ಕೂಡ ಮುಕ್ತವಾಗಿ ಮಾತನಾಡಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರನ್ನು ಕಾಂಗ್ರೆಸ್‌ನ ದೊಡ್ಡ ನಾಯಕರು ಸುಲಭವಾಗಿ ಭೇಟಿಯಾಗುತ್ತಾರೆ. ಅವರನ್ನು ಸ್ವಾಗತಿಸಿ, ಆದರೆ ಅದು ನನ್ನ ವಿಚಾರದಲ್ಲಿ ಆಗುತ್ತಿಲ್ಲ. ಕಾಂಗ್ರೆಸ್ ನಾಯಕರು ನನ್ನನ್ನು ಭೇಟಿ ಮಾಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ಹೇಳಿದ್ದಾರೆ. ಸೆ.30ರಂದು ನಮಗೆ ಮೊದಲ ಮತದಾರರ ಪಟ್ಟಿ ನೀಡಲಾಗಿತ್ತು. ಕೇವಲ ಹೆಸರುಗಳನ್ನು ಹೊಂದಿತ್ತು. ಯಾರ ನಂಬರ್ ಕೂಡ ಇದರಲ್ಲಿ ಇದ್ದಿರಲಿಲ್ಲ. ಎರಡನೇ ಪಟ್ಟಿಯನ್ನು ವಾರದ ಹಿಂದೆ ನೀಡಲಾಗಿದೆ. ಹೀಗಾದಲ್ಲಿ ನಾವು ಸಂಪರ್ಕ ಮಾಡುವುದು ಹೇಗೆ? ಉದ್ದೇಶಪೂರ್ವಕವಾಗಿ ಇದನ್ನು ಮಾಡಲಾಗುತ್ತಿದೆ ಎಂದು ನಾನು ಹೇಳುತ್ತಿಲ್ಲ.  ನಮ್ಮ ಪಕ್ಷದಲ್ಲಿ ಹಲವು ವರ್ಷಗಳಿಂದ ಚುನಾವಣೆ ನಡೆಯದೇ ಇರುವುದರಿಂದ ಕೆಲ ತಪ್ಪುಗಳು ನಡೆದಿವೆ. ಮಿಸ್ತ್ರಿಯವರು ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗೆ ಕುಳಿತಿದ್ದಾರೆ ಎಂದು ನನಗೆ ತಿಳಿದಿದೆ. ಅವರ ವಿರುದ್ಧ ನನಗೆ ಯಾವುದೇ ದೂರುಗಳಿಲ್ಲ ಎಂದಿದ್ದಾರೆ.

Congress President Election: ಗಾಂಧಿ ಪರಿವಾರ ಬಿಟ್ಟು ರಾಜಕೀಯ ಮಾಡಲು ಸಾಧ್ಯವಿಲ್ಲ: ಮಲ್ಲಿಕಾರ್ಜುನ ಖರ್ಗೆ

ಅಧ್ಯಕ್ಷ ಸ್ಥಾನಕ್ಕೆ ಶಶಿ ತರೂರ್‌ ಬಲವೇನು?
1. ಕೇರಳ ಮತ್ತು ಇತರ ದಕ್ಷಿಣ ರಾಜ್ಯಗಳ ಮತಗಳನ್ನು ಪಡೆಯುವ ಸಾಧ್ಯತೆಗಳು ಅಧಿಕ
2. ಕಾಂಗ್ರೆಸ್‌ನಲ್ಲಿ ಆಂತರಿಕ ಗೊಂದಲದ ಲಾಭ ಸಿಗಬಹುದು
3. ದೇಶಾದ್ಯಂತ ಹೊಂದಿರುವ ಅಪಾರ ಅಭಿಮಾನಿ ಬಳಗ
4. ಮಾತನಾಡುವಲ್ಲಿ ತರೂರ್‌ಗೆ ಇರುವ ಚುರುಕುತನ, ತಾರ್ಕಿಕವಾಗಿ, ಪರಿಣಾಮಕಾರಿಯಾಗಿ ಮಾತನಾಡುವ ಶಕ್ತಿ
5.ಕಾಂಗ್ರೆಸ್‌ನಲ್ಲಿ ಬದಲಾವಣೆ ಆದಲ್ಲಿ, ಪ್ರತಿಪಕ್ಷಗಳಿಗೆ ತಿರುಗೇಟು ನೀಡುವ ಸಾಮರ್ಥ್ಯ ಹೆಚ್ಚಲಿದೆ ಎನ್ನುವ ನಂಬಿಕೆ

Congress President Election: ನಾಮಪತ್ರ ಹಿಂಪಡೆಯಲು ಇಂದು ಕೊನೆ ದಿನ, ಗುಜರಾತ್‌ನಿಂದ ಖರ್ಗೆ ಪ್ರಚಾರ

ಅಧ್ಯಕ್ಷ ಸ್ಥಾನಕ್ಕೆ ಮಲ್ಲಿಕಾರ್ಜುನ ಖರ್ಗೆ ಬಲವೇನು?
1. ಪಕ್ಷದ ಬೆಂಬಲ, ಹಿರಿಯ ನಾಯಕರ ಬೆಂಬಲವೂ ಇರುವುದು
2. ದಕ್ಷಿಣದೊಂದಿಗೆ ಇರುವ ಸಂಪರ್ಕ ಹಾಗೂ ಕಾಂಗ್ರೆಸ್‌ನ ತಳಮಟ್ಟದ ನಾಯಕ ಎನ್ನುವ ಹೆಸರು
3. ವಿರೋಧ ಪಕ್ಷದ ನಾಯಕರೊಂದಿಗೆ ಉತ್ತಮ ಬಾಂಧವ್ಯ
4. ಕಾರ್ಯಕರ್ತರಲ್ಲಿ ಉತ್ತಮ ಹಿಡಿತ, ಒಂಬತ್ತು ಬಾರಿ ಶಾಸಕರಾಗಿರುವ ಬಲ
5. ಕರ್ನಾಟಕ, ಮಹಾರಾಷ್ಟ್ರದ ಭಾಗಗಳಲ್ಲಿ ಲಾಭವಾಗುವ ನಿರೀಕ್ಷೆ

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನೆಹರೂ ಕಾಲದಲ್ಲೇ ಮೊದಲ ಮತಗಳ್ಳತನ ನಡೆದಿದ್ದು; ಎರಡು ಮತ ಪಡೆದು ಪ್ರಧಾನಿಯಾದರು' ಸಂಸತ್ತಿನಲ್ಲಿ ಕಾಂಗ್ರೆಸ್ ವಿರುದ್ಧ ಶಾ ವಾಗ್ದಾಳಿ
2.84 ಲಕ್ಷ ಹುದ್ದೆ ಖಾಲಿ ಇದ್ರೂ, ಶೇ.9 ಹುದ್ದೆಗಳ ನೇಮಕಾತಿಯನ್ನೇ ಪ್ರಚಾರಕ್ಕೆ ಬಳಸಿಕೊಂಡ ಸರ್ಕಾರ!