ರಮೇಶ್ ಜಾರಕಿಹೊಳಿ ರಾಸಲೀಲೆ ಸಿ.ಡಿ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು (ಶುಕ್ರವಾರ) ಮಹತ್ವದ ಬೆಳವಣಿಗೆಗಳು ನಡೆದಿವೆ.
ಬೆಂಗಳೂರು, (ಮಾ.26): ರಾಜ್ಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿರುವ ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ರಾದ್ದಾಂತ ಪ್ರಕರಣ ಕ್ಷಣಕ್ಕೊಂದು ತಿರುವು ತೆಗೆದುಕೊಳ್ಳುತ್ತಿದೆ.
ಅಶ್ಲೀಲ ವಿಡಿಯೋದಲ್ಲಿ ಇದ್ದಾಳೆ ಎನ್ನಲಾದ ಯುವತಿ ತನ್ನ ಕುಟುಂಬದೊಂದಿಗೆ ಮಾತನಾಡಿರುವ ಆಡಿಯೋ ಇಂದು (ಶುಕ್ರವಾರ) ಬಹಿರಂಗವಾಗಿದೆ. 6 ನಿಮಿಷ 59 ಸೆಕೆಂಡ್ ಗಳ ಆಡಿಯೋದಲ್ಲಿ ಯುವತಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೆಸರು ಪ್ರಸ್ತಾಪಿಸಿದ್ದಾಳೆ.
ಸಿ.ಡಿ.ಕೇಸ್: ಯುವತಿಯ ಮತ್ತೊಂದು ಆಡಿಯೋ ಬಹಿರಂಗ, ಮಹಾನಾಯಕನ ಹೆಸ್ರು ಪ್ರಸ್ತಾಪ!
undefined
ಇನ್ನು ಆಡಿಯೋ ವೈರಲ್ ಆಗುತ್ತಿದ್ದಂತೆ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ರಮೇಶ್ ಜಾರಕಿಹೊಳಿ, ನಾಳೆ (ಶನಿವಾರ) ಇದಕ್ಕಿಂತ ದೊಡ್ಡ ಬಾಂಬ್ ಇದೆ. ಸಂಜೆ 4-6 ರೊಳಗೆ ಬಿಡುಗಡೆಯಾಗಲಿದೆ ಎಂದು ಹೊಸ ಬಾಂಬ್ ಸಿಡಿಸಿದರು.
ಆಡಿಯೋದಲ್ಲಿ ಡಿಕೆಶಿ ಹೆಸರು ಪ್ರಸ್ತಾಪ ಆಗಿದ್ದರ ಕುರಿತು ಮಾತನಾಡಿದ ಅವರು, ಡಿಕೆಶಿ ನನ್ನ ಗೆಳೆಯ, ಆತನಿಗೆ ಒಳ್ಳೆಯದಾಗಲಿ. ನನಗೆ ಬಂದ ಪರಿಸ್ಥಿತಿ ಅವನಿಗೆ ಬರಬಾರದು. ನಾನು ರಾಜೀನಾಮೆ ಕೊಟ್ಟಂತೆ ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಬಾರದು ಎಂದರು.
ಎಫ್ಐಆರ್ ಆದ ತಕ್ಷಣ ನಾನೇನು ಅಪರಾಧಿ ಅಲ್ಲ. ನಾನು ಎಫ್ಐಆರ್ ದಾಖಲಿಸಿದ್ದೇನೆ. ತನಿಖೆಯಿಂದ ಸತ್ಯಾಂಶ ಹೊರಬರಲಿದೆ. ನಾನು ಯಾವುದೇ ಜಾಮೀನು ತೆಗೆದುಕೊಳ್ಳುವುದಿಲ್ಲ ಎಂದು ಜಾರಕಿಹೊಳಿ ಹೇಳಿದ್ದಾರೆ.
ಆಡಿಯೋದಲ್ಲಿ ಏನಿದೆ?
ಯುವತಿ ಸಿಡಿ ಬಿಡುಗಡೆಯಾದ ಆರಂಭದ ದಿನದಲ್ಲಿ ತನ್ನ ಸಹೋದರನೊಂದಿಗೆ ಮಾತನಾಡಿರುವ ಆಡಿಯೋ ವೈರಲ್ ಆಗಿದೆ. ಅಶ್ಲೀಲ ವಿಡಿಯೋದಲ್ಲಿ ಇರುವುದು ನಾನಲ್ಲ, ಅದು ಗ್ರಾಫಿಕ್ ಮಾಡಿದ್ದಾರೆ. ನನ್ನನ್ನು ನಂಬಿ. ಡಿಕೆ ಶಿವಕುಮಾರ್ ಅವರು ನನ್ನನ್ನು ಭೇಟಿಯಾಗಲು ಬಂದಿದ್ದಾರೆ. ಅವರ ಜೊತೆ ಮಾತನಾಡುತ್ತೇನೆ ಎಂದು ಹೇಳಿದ್ದಾರೆ.