ರಮೇಶ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಬಹುದೊಡ್ಡ ತಿರುವು ಸಿಕ್ಕಿದೆ. ಸಿಡಿ ಪ್ರಕರಣದ ಮಹತ್ವದ ಆಡಿಯೋ ಬಹಿರಂಗವಾಗಿದೆ.
ಬೆಂಗಳೂರು, (ಮಾ.26): ರಮೇಶ್ ಜಾರಕಿಹೊಳಿ ರಾಸಲೀಲೆ ಸಿ.ಡಿ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು (ಶುಕ್ರವಾರ) ಮಹತ್ವದ ಬೆಳವಣಿಗೆಗಳು ನಡೆದಿವೆ.
ಹೌದು...ಯುವತಿಯ ಎರಡನೇ ವಿಡಿಯೋ ರಿಲೀಸ್ ಆಯ್ತು. ಬಳಿಕ ರಮೇಶ್ ಜಾರಕಿಹೊಳಿ ವಿರುದ್ಧ ದೂರು ದಾಖಲಾಯ್ತು. ಇಷ್ಟೆಲ್ಲಾ ಬೆಳವಣಿಗೆಗಗಳ ಮಧ್ಯೆ ಈ ಕೇಸ್‌ಗೆ ಮತ್ತೊಂದು ಬಹುದೊಡ್ಡ ಟ್ವಿಸ್ಟ್ ಸಿಕ್ಕಿದೆ.
ಯೆಸ್..ಸಿ.ಡಿ. ಲೇಡಿಯ ಮತ್ತೊಂದು ಆಡಿಯೋ ಬಹಿರಂಗವಾಗಿದೆ. ಈ ಆಡಿಯೋದಲ್ಲಿ ಯುವತಿ ತಮ್ಮ ಕುಟುಂಬದ ಸದಸ್ಯರ ಜೊತೆ ಮಾತನಾಡಿದ್ದಾರೆ. ಈ ವೇಳೆ ಕರ್ನಾಟಕದ ಪ್ರಭಾವಿಶಾಲಿ ರಾಜಕಾರಣಿಯ ಹೆಸರು ಪ್ರಸ್ತಾಪವಾಗಿದ್ದು, ರಾಜ್ಯ ರಾಜಕಾರಣದಲ್ಲಿ ಅಲ್ಲೋಲ-ಕಲ್ಲೋಲ ಸೃಷ್ಟಿಸಿದೆ.
'ಸಿ.ಡಿ.ಕೇಸ್ ಬಗ್ಗೆ ನಾಳೆಯಿಂದ ನನ್ನ ಆಟ ಶುರು ಎಂದ ಜಾರಕಿಹೊಳಿಯನ್ನು ಬಂಧಿಸಿ'
ಕುಟುಂಬದವರೊಂದಿಗೆ ಯುವತಿ ಮಾತನಾಡುವಾಗ ಮಹಾನಾಯಕನ ಹೆಸರು ಪ್ರಸ್ತಾಪಿಸಿದ್ದಾಳೆ. ವಿಡಿಯೋ ಚಾನೆಲ್ ನಲ್ಲಿ ಲೀಕ್ ಆಗಿ ಟಿವಿಯಲ್ಲಿ ಬರ್ತಿದೆ ಎಂದು ಆಕೆಯ ಕುಟುಂಬದವರು ಹೇಳಿದ್ದು, ನಾನ್ಯಾಕೆ ಅಂತಹ ಕೆಲಸ ಮಾಡಲಿ? ಬೇರೆ ಹುಡುಗಿ ವಿಡಿಯೋ ಅದು.
ನಾನಲ್ಲ. ಯಾರೂ ನಂಬುತ್ತಿಲ್ಲ ಎಂದು ಯುವತಿ ಹೇಳಿರುವ 6 ನಿಮಿಷ 59 ಸೆಕೆಂಡ್ ಗಳ ಆಡಿಯೋದಲ್ಲಿ ಡಿಕೆ ಶಿವಕುಮಾರ್ ಅವರ ಹೆಸರು ಹೇಳಿದ್ದು, ಬಹುದೊಡ್ಡ ಸಾಕ್ಷ್ಯ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಇದು ತೀವ್ರ ಸ್ವರೂಪ ಪಡೆದುಕೊಳ್ಳುವ ಎಲ್ಲಾ ಸಾಧ್ಯತೆಗಳಿವೆ.
ಈ ರಾಸಲೀಲೆ ಸಿ.ಡಿ. ಹಿಂದೆ ರಾಜ್ಯದ ಒಬ್ಬ ಮಹಾನ್ ನಾಯಕ ಇದ್ದಾನೆ ಎಂದು ಸ್ವತಃ ಜಾರಕಿಹೊಳಿ ಬ್ರದರ್ಸ್ ಹೇಳಿದ್ದರು. ಯಾರು ಆ ಮಹಾನ್ ನಾಯಕ ಎನ್ನುವ ಚರ್ಚೆಗಳು ಸಹ ನಡೆದಿವೆ. ಇದೀಗ ಯುವತಿ ಬಾಯಲ್ಲಿ ಡಿಕೆ ಶಿವಕುಮಾರ್ ಕೇಳಿಬಂದಿದ್ದು, ಅವರೇ ಆ ಮಹಾನ್ ನಾಯಕನಾ ಎನ್ನುವ ಪ್ರಶ್ನೆಗಳು ಉದ್ಭವಿಸಿವೆ.