
ಹೈದರಾಬಾದ್: ತೆಲಂಗಾಣದಲ್ಲಿ ಬಿಜೆಪಿ ‘ಆಪರೇಶನ್ ಕಮಲ’ ನಡೆಸುತ್ತಿದೆ ಎಂದು ಆರೋಪಿಸಿದ್ದ ಆಡಳಿತಾರೂಢ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್)ಗೆ ಹಿನ್ನಡೆ ಆಗಿದೆ. ಟಿಆರ್‌ಎಸ್ ದೂರಿನ ಮೇರೆಗೆ ಬಂಧಿತರಾಗಿದ್ದ ಬಿಜೆಪಿ ಏಜೆಂಟರು ಎನ್ನಲಾದ ಮೂವರನ್ನು ಪೊಲೀಸರ ವಶಕ್ಕೆ ಅಥವಾ ನ್ಯಾಯಾಂಗ ವಶಕ್ಕೆ ಒಪ್ಪಿಸಲು ಸ್ಥಳೀಯ ನ್ಯಾಯಾಲಯ ನಿರಾಕರಿಸಿದೆ. ಇದರ ಬದಲು ನೋಟಿಸ್ ಜಾರಿ ಮಾಡಿ ಬಿಡುಗಡೆ ಮಾಡಲು ಸೂಚಿಸಿದೆ.
ಗುರುವಾರ ತಡರಾತ್ರಿ ಮೂವರನ್ನೂ ಬಂಧಿಸಿ ಕೋರ್ಟ್‌ಗೆ ಹಾಜರುಪಡಿಸಲಾಯಿತು. ಈ ವೇಳೆ ನ್ಯಾಯಾಧೀಶರು, ‘ಬಂಧನಕ್ಕೆ ಮುನ್ನ ನೋಟಿಸ್ ನೀಡದೇ ನಿಯಮ ಪಾಲಿಸಿಲ್ಲ’ ಎಂದು ಸೈಬರಾಬಾದ್ ಪೊಲೀಸರಿಗೆ (Cyberabad police) ಚಾಟಿ ಬೀಸಿತು. ಬಂಧಿತರಿಗೆ ನೋಟಿಸ್ ನೀಡಬೇಕು ಹಾಗೂ ಬಿಡುಗಡೆ ಮಾಡಬೇಕು ಎಂದು ಆದೇಶಿಸಿತು.
ರಾಮಚಂದ್ರ ಭಾರತಿ (Ramachandra Bharti), ನಂದಕುಮಾರ (Nandakumar), ಸಿಂಹಯ್ಯಾಜಿ (Sinhayaji)ಅವರನ್ನು ತೆಲಂಗಾಣ ಪೊಲೀಸರು, ‘ಆಪರೇಶನ್ ಕಮಲಕ್ಕೆ ಯತ್ನಿಸಿದ ಬಿಜೆಪಿ ಏಜೆಂಟರು’ ಎಂಬ ದೂರಿನ ಮೇರೆಗೆ ಬಂಧಿಸಿದ್ದರು. ಈ ಮೂವರೂ ಟಿಆರ್‌ಎಸ್ ಶಾಸಕ ಪೈಲಟ್ ರೋಹಿತ್ ರೆಡ್ಡಿಗೆ 100 ಕೋಟಿ ಸೇರಿ ನಾಲ್ವರು ಟಿಆರ್‌ಎಸ್ (TRS MLAs) ಶಾಸಕರಿಗೆ ಬಿಜೆಪಿ ಸೇರಲು 250 ಕೋಟಿ ರು. ಆಮಿಷ ಒಡ್ಡಿದ್ದರು ಎಂದು ದೂರಲಾಗಿತ್ತು.
ಮೋದಿ ವಿರುದ್ಧ ರಣಕಹಳೆ ಊದಿದ TRSಗೆ ಹಿನ್ನಡೆ, ಪ್ರಮುಖ ನಾಯಕ ರಾಜೀನಾಮೆ!
ಕೆಸಿಆರ್ ಪಕ್ಷದ ನಾಲ್ವರು ಶಾಸಕರಿಗೆ BJPಯಿಂದ ತಲಾ 50 ಕೋಟಿ ಆಫರ್..?
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.