ಕಾಂಗ್ರೆಸ್ ಅಧ್ಯಕ್ಷ ಚುನಾವಣೆಯಿಂದ ಗೆಹ್ಲೋಟ್ ಔಟ್, ಇದನ್ನೇ ಬಯಸಿದ್ದ ರಾಜಸ್ಥಾನ ಸಿಎಂ!

Published : Sep 27, 2022, 03:40 PM IST
ಕಾಂಗ್ರೆಸ್ ಅಧ್ಯಕ್ಷ ಚುನಾವಣೆಯಿಂದ ಗೆಹ್ಲೋಟ್ ಔಟ್, ಇದನ್ನೇ ಬಯಸಿದ್ದ ರಾಜಸ್ಥಾನ ಸಿಎಂ!

ಸಾರಾಂಶ

ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ ರಾಜಸ್ಥಾನ ರಾಜಕೀಯದಲ್ಲಿ ಅತೀ ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿದೆ. ಹಲವು ಡ್ರಾಮಗಳ ಬಳಿಕ ಇದೀಗ ಕಾಂಗ್ರೆಸ್ ಅಧ್ಯಕ್ಷ ಚುನಾವಣೆ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಸ್ಪರ್ಧೆಯಿಂದ ಹೊರಬಿದ್ದಿದ್ದಾರೆ. ಕಾಂಗ್ರೆಸ್ ಗೆಹ್ಲೋಟ್ ಅವರನ್ನು ಹೊರಗಿಟ್ಟಿದೆ. ಇದನ್ನು ಅಶೋಕ್ ಗೆಹ್ಲೋಟ್ ಕೂಡ ಬಯಸಿದ್ದರು.

ನವದೆಹಲಿ(ಸೆ.27): ರೋಗಿ ಬಯಸಿದ್ದು ಹಾಲು, ವೈದ್ಯರು ಹೇಳಿದ್ದು ಹಾಲು. ಈ ಗಾದೆ ಮಾತು ಸದ್ಯ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್‌ಗೆ ಸೂಕ್ತವಾಗಿದೆ. ಕಾರಣ ಇಷ್ಟವಿಲ್ಲದೆ ಕಾಂಗ್ರೆಸ್ ಅಧ್ಯಕ್ಷ ಚುನಾವಣೆಗೆ ರೇಸ್‌ನಲ್ಲಿ ಧುಮುಕಿದ ಅಶೋಕ್ ಗೆಹ್ಲೋಟ್ ಇದೀಗ ಚುನಾವಣೆ ರೇಸ್‌ನಿಂದ ಹೊರಬಿದ್ದಿದ್ದಾರೆ.  ಕಾಂಗ್ರೆಸ್ ಅಧ್ಯಕ್ಷರಾದರೆ ರಾಜಸ್ಥಾನ ಸಿಎಂ ಸ್ಥಾನ ತ್ಯಜಿಸಬೇಕಾಗುತ್ತದೆ. ಸಿಎಂ ಸ್ಥಾನ ತ್ಯಜಿಸಿದರೆ ತನ್ನ ವಿರೋಧಿ ಬಣ ಸಚಿನ್ ಪೈಲೆಟ್ ಪಾಲಾಗಲಿದೆ. ಇದು ಅಶೋಕ್ ಗೆಹ್ಲೋಟ್‌ಗೆ ಸುತಾರಾಂ ಇಷ್ಟವಿಲ್ಲ. ಇದಕ್ಕೂ ಮುಖ್ಯವಾಗಿ ಸಿಎಂ ಸ್ಥಾನ ಬಿಟ್ಟುಕೊಡಲು ಇಷ್ಟವಿರಲಿಲ್ಲ. ಇದೇ ಕಾರಣಕ್ಕೆ ಗೆಹ್ಲೋಟ್ ಬಣದ 92 ಶಾಸಕರನ್ನು ರಾಜೀನಾಮೆ ನಾಟಕವಾಡಿಸಿದ ಗೆಹ್ಲೋಟ್ ಇದೀಗ ಕಾಂಗ್ರೆಸ್ ಅಧ್ಯಕ್ಷ ಚುನಾವಣೆಯಿಂದ ಹೊರಬಿದ್ದಿದ್ದಾರೆ. ಈ ಮೂಲಕ ತನ್ನ ಮೊದಲ ಪ್ರಯತ್ನದಲ್ಲಿ ಭಾರಿ ಯಶಸ್ಸು ಕಂಡಿದ್ದಾರೆ. ಇನ್ನುಳಿದಿರುವುದು ತನ್ನು ಸಿಎಂ ಸ್ಥಾನವನ್ನು ಭದ್ರಗೊಳಿಸುವುದು. ಇದಕ್ಕೆ ಬೇಕಾದ ಎಲ್ಲಾ ತಯಾರಿಗಳು ಈಗಾಗಲೇ ನಡೆದಿದೆ.

ರಾಜಸ್ಥಾನ ಕಾಂಗ್ರೆಸ್‌ನಲ್ಲಿ ಬಿರುಗಾಳಿ(Rajasthan Congress Political Crisis) ಎಬ್ಬಿಸಿದ ಅಶೋಕ್ ಗೆಹ್ಲೋಟ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಹೊರಬಿದ್ದ ಕಾರಣ ಇದೀಗ ಶಶಿ ತರೂರ್(Shashi Tharoor) ಮುಂದಿನ ಅಧ್ಯಕ್ಷರಾಗಲಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಶಶಿ ತರೂರ್ ಇದೇ ತಿಂಗಳ 30 ರಂದು ನಾಮಪತ್ರ ಸಲ್ಲಿಸಲಿದ್ದಾರೆ. ಇನ್ನು ಕಾಂಗ್ರೆಸ್ ಖಜಾಂಚಿ ಪವನ್ ಕುಮಾರ್ ಬನ್ಸಾಲ್(Pawan Kumar bansal) ಕೂಡ ಅಧ್ಯಕ್ಷೀಯ ರೇಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತ ಹಿರಿಯ ನಾಯಕ ಮಲ್ಲಿಖಾರ್ಜುನ್ ಖರ್ಗೆ, ದಿಗ್ವಿಜಯ್ ಸಿಂಗ್ ಕೂಡ ಇದೀಗ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಇದು ಅಧ್ಯಕ್ಷ ಚುನಾವಣೆ ಮಾತಾದರೆ, ರಾಜಸ್ಥಾನದಲ್ಲಿ ರಾಜಕೀಯ ಹೈಡ್ರಾಮ ಇನ್ನೂ ನಿಂತಿಲ್ಲ.

Rajasthan Political Crisis: ಲಿಖಿತ ವರದಿ ಕೇಳಿದ ಸೋನಿಯಾ ಗಾಂಧಿ, ಸಭೆಯ ಪ್ರಮುಖ ಅಂಶ ತಿಳಿಸಿದ ಮಾಕನ್‌!

ಕಾಂಗ್ರೆಸ್‌ನಲ್ಲಿ ಓರ್ವ ನಾಯಕನಿಗೆ ಒಂದು ಸ್ಥಾನ ಎಂದು ರಾಹುಲ್ ಗಾಂಧಿ(Rahul Gandhi) ಸ್ಪಷ್ಟವಾಗಿ ಹೇಳಿದ್ದಾರೆ. ಹೀಗಾಗಿ ಅಶೋಕ್ ಗೆಹ್ಲೋಟ್(Ashok Gehlot) ಅನಿವಾರ್ಯವಾಗಿ ರಾಜಸ್ಥಾನ ಸಿಎಂ ಸ್ಥಾನದಿಂದ ರಾಜೀನಾಮೆ ನೀಡಲು ಸಜ್ಜಾಗಿದ್ದರು. ಆದರೆ ಇದು ಕೇವಲ ನಾಟಕವಾಗಿತ್ತು. ಕಾರಣ ಭಾನುವಾರ ಸಂಜೆ ಅಶೋಕ್ ಗೆಹ್ಲೋಟ್ ಮನೆಯಲ್ಲಿ ಕಾಂಗ್ರೆಸ್ ಅಧಿಕೃತ ಸಭೆ ನಡೆಸಿತ್ತು. ಮಲ್ಲಿಕಾರ್ಜುನ್ ಖರ್ಗೆ, ಅಜಯ್ ಮಾಕೆನ್ ಸೇರಿದಂತೆ ಹಲವು ಕಾಂಗ್ರೆಸ್ ಹೈಕಮಾಂಡ್ ನಾಯಕರು ಈ ಸಭೆಯಲ್ಲಿ ಹಾಜರಿದ್ದರು. ಮುಖ್ಯವಾಗಿ ಮುಂದಿನ ಸಿಎಂ ಆಯ್ಕೆಗೆ ಈ ಸಭೆ ನಡೆಸಲಾಗಿತ್ತು. ಗೆಹ್ಲೋಟ್ ರಾಜೀನಾಮೆ ನೀಡಿದರೆ ಸಿಎಂ ಸ್ಥಾನ ನೇರವಾಗಿ ಸಚಿನ್ ಪೈಲೆಟ್ ಪಾಲಾಗಲಿದೆ ಅನ್ನೋದು ಬಹುತೇಕ ಸ್ಪಷ್ಟವಾಗಿತ್ತು. 

ಇದಕ್ಕಾಗಿ ಗೆಹ್ಲೋಟ್ ಮನೆಗೆ ಗೆಹ್ಲೋಟ್ ಬಣ 30 ಶಾಸಕರು ಮಾತ್ರ ಹಾಜರಾಗಿದ್ದರು. ಇನ್ನುಳಿದ ಶಾಸಕರು, ನಾಯಕರು ಗೆಹ್ಲೋಟ್ ಆಪ್ತ ಶಾಂತಿ ಧರಿವಾಲ್ ಮನೆಯಲ್ಲಿನ ಬಂಡಾಯ ಸಭೆಗೆ ಹಾಜರಾಗಿದ್ದರು. ಬಳಿಕ ನೇರವಾಗಿ ಸ್ಪೀಕರ್ ಮನೆಗೆ ತೆರಳಿ, ಅಲ್ಲಿಂದಲೇ ಕಾಂಗ್ರೆಸ್ ಹೈಕಮಾಂಡ್‌ಗೆ ಎಚ್ಚರಿಕೆ ನೀಡಿದ್ದರು. ರಾಜಸ್ಥಾನ ಸಿಎಂ ಸ್ಥಾನಕ್ಕೆ ಸಚಿನ್ ಪೈಲೆಟ್(Sachin Pilot) ಅಥವಾ ಪೈಲೆಟ್ ಬಣದ ನಾಯಕರನ್ನು ಆಯ್ಕೆ ಮಾಡಿದರೆ ರಾಜೀನಾಮೆ ನೀಡುವುದಾಗಿ 92 ಶಾಸಕರು ಬಂಡೆದಿದ್ದರು. 

 

Rajasthan Political Crisis: ರಾಜಸ್ಥಾನದ ರಾಜಕೀಯ ನಾಟಕಕ್ಕೆ ಎಂಟ್ರಿಯಾದ ಕಮಲ್ ನಾಥ್!

ಅತೀ ದೊಡ್ಡ ರಾಜಕೀಯ ಹಿನ್ನಡೆ ಅರಿತ ಕಾಂಗ್ರೆಸ್ ತಕ್ಷಣವೇ ಅಶೋಕ್ ಗೆಹ್ಲೋಟ್ ಅವರನ್ನು ಕಾಂಗ್ರೆಸ್ ಅಧ್ಯಕ್ಷ ರೇಸ್‌ನಿಂದ ಹೊರಗಿಟ್ಟಿತು. ಇದು ಸಚಿನ್ ಪೈಲೆಟ್ ಬಣದ ಆಕ್ರೋಶಕ್ಕೆ ಕಾರಣವಾಗಿದೆ. ಸದ್ಯ ಸಚಿನ್ ಪೈಲೆಟ್ ನೇರವಾಗಿ ದೆಹಲಿಗೆ ಹಾರಿದ್ದಾರೆ. ಹೈಕಮಾಂಡ್ ಜೊತೆ ಮಾತುಕತೆ ನಡೆಸಲಿದ್ದಾರೆ. ಪಕ್ಷದ ವಿರುದ್ಧವೇ ತಿರುಗಿ ಬಿದ್ದ ಗೆಹ್ಲೋಟ್ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವ ಕುರಿತು ಹೈಕಮಾಂಡ್ ಒತ್ತಾಯಿಸುವ ಸಾಧ್ಯತೆ ಇದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನೆಹರೂ ಕಾಲದಲ್ಲೇ ಮೊದಲ ಮತಗಳ್ಳತನ ನಡೆದಿದ್ದು; ಎರಡು ಮತ ಪಡೆದು ಪ್ರಧಾನಿಯಾದರು' ಸಂಸತ್ತಿನಲ್ಲಿ ಕಾಂಗ್ರೆಸ್ ವಿರುದ್ಧ ಶಾ ವಾಗ್ದಾಳಿ
2.84 ಲಕ್ಷ ಹುದ್ದೆ ಖಾಲಿ ಇದ್ರೂ, ಶೇ.9 ಹುದ್ದೆಗಳ ನೇಮಕಾತಿಯನ್ನೇ ಪ್ರಚಾರಕ್ಕೆ ಬಳಸಿಕೊಂಡ ಸರ್ಕಾರ!