ನಳಿನ್ ಕುಮಾರ್ ಕಟೀಲ್ ಒಬ್ಬ ವಿಧೂಷಕ ಇದ್ದಂಗೆ, ಪಾಪ ಮೆಚುರಿಟಿ ಇಲ್ಲ: ಸಿದ್ದು ವ್ಯಂಗ್ಯ

By Suvarna NewsFirst Published Sep 27, 2022, 5:17 PM IST
Highlights

ಲೋಕಾಯುಕ್ತ  ಇದ್ದರೆ ಸಿದ್ದರಾಮಯ್ಯನವರು ಜೈಲಿಗೆ ಹೋಗುತ್ತಿದ್ದರು ಎಂಬ ನಳಿನ್ ಕುಮಾರ್ ಕಟೀಲ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ನಾವು ಅಧಿಕಾರದಲ್ಲಿದ್ದಾಗ ಇವರು ವಿಪಕ್ಷ ಇದ್ರೂ ಆಗ ಯಾಕೆ ಪ್ರಸ್ತಾಪ ಮಾಡಲಿಲ್ಲ. ಇವರ ಬಾಯಲ್ಲೇನು ಕಡಬು ಸಿಕ್ಕಿ ಹಾಕಿಕೊಂಡಿತ್ತಾ ಎಂದು ವ್ಯಂಗ್ಯ ವಾಡಿದ್ದಾರೆ.

ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷಿಯಾನೆಟ್ ಸುವರ್ಣನ್ಯೂಸ್

ಬಾಗಲಕೋಟೆ (ಸೆ.27) : ಬಿಜೆಪಿ ಪಕ್ಷದ ರಾಜ್ಯಾದ್ಯಕ್ಷ ನಳಿನ್ ಕುಮಾರ್ ಕಟೀಲ್ ಒಬ್ಬ ವಿಧೂಷಕ ಇದ್ದಂಗೆ, ಕಟೀಲ್ ಗೆ ಪಾಪ, ಮೆಚುರಿಟಿ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ವ್ಯಂಗ್ಯ ವಾಡಿದ್ದಾರೆ.  ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ನಾಗನೂರು  ನಲ್ಲಿ ನಡೆಯುತ್ತಿರುವ ಖಾಸಗಿ ಕಾರ್ಯಕ್ರಮ ಆಗಮಸಿದ ಸಂದರ್ಭದಲ್ಲಿ ಮಾಧ್ಯಮ ಪತ್ರಿನಿಧಿಗಳೊಂದಿಗೆ ಮಾತನಾಡುತ್ತಾ, ಲೋಕಾಯುಕ್ತ  ಇದ್ದರೆ ಸಿದ್ದರಾಮಯ್ಯನವರು ಜೈಲಿಗೆ ಹೋಗುತ್ತಿದ್ದರು ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ನಾವು ಅಧಿಕಾರದಲ್ಲಿದ್ದಾಗ ಇವರು ವಿಪಕ್ಷ ಇದ್ರೂ ಆಗ ಯಾಕೆ ಪ್ರಸ್ತಾಪ ಮಾಡಲಿಲ್ಲ. ಇವರ ಬಾಯಲ್ಲೇನು ಕಡಬು ಸಿಕ್ಕಿ ಹಾಕಿಕೊಂಡಿತ್ತಾ ಎಂದು ವ್ಯಂಗ್ಯ ವಾಡಿ, ನಮ್ಮ ಕಾಲದ್ದೂ ಸೇರಿ ಕಳೆದ 16 ವರ್ಷದ್ದೂ ತನಿಖೆ ಮಾಡಿಸಿ ನಿಮಗ್ಯಾಕೆ ಭಯ. ಜನರ ಅಟೆನ್ಸನ್ ಸೆಳೆಯೋಕೆ ಈ ಆಪಾದನೆ ಮಾಡ್ತಿದ್ದಾರೆ ಎಂದು ಅಧಿವೇಶನದಲ್ಲೇ ಸಿಎಂಗೆ ನ್ಯಾಯಾಂಗ ತನಿಖೆ ಮಾಡಿಸಿ ಎಂದು ಹೇಳಿದ್ದೆ, ಅದಕ್ಕೆ ಉತ್ತರ ನೀಡಲಿಲ್ಲ. ಅದನ್ನೆಲ್ಲಾ ಬಿಟ್ಟು ಈಗ ಜಾತಿಗೆ ನಿಂತಿದ್ದಾರೆ. ಜಾತಿಗೂ ಭ್ರಷ್ಟಾಚಾರಕ್ಕೂ ಸಂಬಂಧ ಏನು ಪ್ರಶ್ನೆ, ಬೊಮ್ಮಾಯಿ ಈಸ್ ಹೆಡ್ ಆಪ್ ದಿ ಗವರ್ನಮೆಂಟ್. ಸಿಎಂ ಮತ್ತು ಸರ್ಕಾರದ ಮೇಲೆ ಆರೋಪ ಮಾಡ್ತಿದಿವಿ, ಜಾತಿ ಮೇಲಲ್ಲಾ, ಕ್ಷುಲ್ಲಕ ವಿಚಾರ ಜನರ ಮುಂದಿಟ್ಟು ದಾರಿತಪ್ಪಿಸುವ ಕೆಲಸ ಮಾಡ್ತಿದ್ದಾರೆ. ಜನರು ಬುದ್ಧಿವಂತರಿದ್ದಾರೆ. ಈಗ ಇವರಿಗೆ ಬುದ್ದಿಕಲಿಸ್ತಾರೆ ಎಂದು ಸಿದ್ದರಾಮಯ್ಯನವರು ಹೇಳಿದರು.

ಯಾರೇ ತಪ್ಪಿತಸ್ಥರಿದ್ದರೆ ನಾವು ಸಹಾಯ ಮಾಡುವ ಪ್ರಶ್ನೆಯೇ ಇಲ್ಲ: ಇದೇ ಸಮಯದಲ್ಲಿ, ಪಿಎಫ್ಐ ಬೆಳೆಸಿದ್ದೇ ಸಿದ್ದರಾಮಯ್ಯ ಎಂದ ಕಟೀಲ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಿದ್ದು, ಯಾರೇ ತಪ್ಪಿತಸ್ಥರಿದ್ದರೂ ನಾವು ಸಹಾಯ ಮಾಡುವ ಪ್ರಶ್ನೆಯೇ ಇಲ್ಲ. ಯಾರು ಭ್ರಷ್ಟಾಚಾರ ಮಾಡಿದ್ರೂ ಮಾಡಿದ ಹಾಗೆ,ಭ್ರಷ್ಟಾಚಾರ ಭ್ರಷ್ಟಾಚಾರವೇ ಎಂದು ತಿಳಿಸಿದರು.

ಈಗ ದಾಖಲೆ ಕೇಳುವ ಬಿಜೆಪಿಗರು ಹಿಂದೆ ನಮಗೆ 10 ಪರ್ಸೆಂಟ್ ಸರ್ಕಾರ ಅಂದಾಗ ದಾಖಲೆ ನೀಡಿದ್ರಾ?
ಇದೇ ಸಮಯ ದಲ್ಲಿ ಮಾತನಾಡಿದ ಅವರು, ನಮ್ಮ ಸರ್ಕಾರಕ್ಕೆ ಮೋದಿ 10 ಪರ್ಸೆಂಟ್ ಅಂತ ಆರೋಪ ಮಾಡಿದ್ದರು.
ಅದಕ್ಕೆ ಯಾವ ದಾಖಲೆ ಕೊಟ್ಟಿದ್ದೀರಿ ಎಂದು ಪ್ರಶ್ನೆ ಮಾಡಿದ ಸಿದ್ದು ಅವರು, 10 ಪರ್ಸೆಂಟ್ ಸಿದ್ದರಾಮಯ್ಯ ಸರ್ಕಾರ ಅಂತ ಮೋದಿ ಹೇಳಿದ್ದರು,ಅವಾಗ ಯಾವ ದಾಖಲೆ ನೀಡಿದ್ರು, ಈ ಕಟೀಲ್ ಆಗ ಎಲ್ಲಿದ್ದ,ಆಗ ಯಡಿಯೂರಪ್ಪ ಸಹ ಅಧ್ಯಕ್ಷ ಇದ್ದರು. ಇವರೇ ಅಲ್ವಾ ಮೋದಿ ಕಡೆಯಿಂದ ಹೇಳಿಸಿದ್ದು. ನರೇಂದ್ರ ಮೋದಿ ಕಡೆಯಿಂದ ಹೇಳಿಸಿದವರೇ ಇವರೇ ಅಲ್ವಾ ಎಂದರು.

 

ಲೋಕಾಯುಕ್ತ ಇದ್ದಿದ್ದರೆ ಅಂದೇ ಸಿದ್ದರಾಮಯ್ಯ ಜೈಲಿಗೆ ಹೋಗಿರುತ್ತಿದ್ದರು: ಕಟೀಲ್

ಮೋರ್ ಸ್ಟ್ರಾಂಗ್ ಮೋರ್ ಎನಿಮೀಸ್. ಲೆಸ್ ಸ್ಟ್ರಾಂಗ್ ಲೆಸ್ ಎನಿಮೀಸ್. ನೋ ಸ್ಟ್ರಾಂಗ್ ನೋ ಎಲಿಮೀಸ್ ಎಂದ ಸಿದ್ದರಾಮಯ್ಯ: 
ಇನ್ನು ಎಸಿಬಿ ರದ್ದು ವಿಚಾರಕ್ಕೆ  ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯನವರು, ಮೋರ್ ಸ್ಟ್ರಾಂಗ್ ಮೋರ್ ಎನಿಮೀಸ್.ಲೆಸ್ ಸ್ಟ್ರಾಂಗ್ ಲೆಸ್ ಎನಿಮೀಸ್, ನೋ ಸ್ಟ್ರಾಂಗ್ ನೋ ಎಲಿಮೀಸ್ ಎಂದು ಹೇಳಿ, ಅದಕ್ಕೆ ಬಿಜೆಪಿಗರಿಗೆ ನನ್ನ ಮೇಲೆ ಕೋಪಾ.ದೊಡ್ಡಬಳ್ಳಾಪುರ ಸಮಾವೇಶ ದಲ್ಲಿನ ಬಿಜೆಪಿಗರು ಯಾರ ಬಗ್ಗೆ ಮಾತನಾಡಿದರು. ನನ್ನ ಕಂಡರೆ ಬಿಜೆಪಿಗರಿಗೆ ಭಯಾ , ಅವರಿಗಾದ ಭಯದಿಂದ ಹಿಂಗೆಲ್ಲ ಮಾತಾಡ್ತಿದ್ದಾರೆ ಎಂದು ಕುಟುಕಿದರು.

PFI, SDPI ಬೆಳೆಯಲು ಸಿದ್ದರಾಮಯ್ಯ ಕಾರಣ; ನಳಿನ್ ಕುಮಾರ ಕಟೀಲ್ ಗಂಭೀರ ಆರೋಪ

ಲೋಕಾಯುಕ್ತ ನಾನು ರದ್ದು ಮಾಡಿದ್ದಲ್ಲಪ್ಪಾ, ಆಯ್ತು ಇವರು ಬಂದಿದ್ದಾರಲ್ಲಾ ಎಸಿಬಿಯನ್ನ ಇವರಾ ರದ್ದು ಮಾಡಿದ್ದು, ಅಧಿಕಾರಕ್ಕೆ ಬಂದ 24ಗಂಟೆಯಲ್ಲಿ ಎಸಿಬಿ ರದ್ದು ಮಾಡ್ತಿನಿ ಅಂತಾ ಹೇಳಿದ್ರು, ಮಾಡಿದ್ರಾ, ಎಸಿಬಿ ರದ್ದು ಮಾಡಿದ್ದು ಕೋರ್ಟು, ಇವರಲ್ಲಾ ಎಸಿಬಿ ರದ್ದು ಮಾಡಿದ್ದು ಎಂದ ಸಿದ್ದರಾಮಯ್ಯನವರು, ಲೋಕಾಯುಕ್ತರ ಬಗ್ಗೆ ಇವರಿಗೆ ಮಾತನಾಡಲು ಯಾವ ನೈತಿಕತೆ ಇದೆ.ಹಿಂದೆ ಲೋಕಾಯುಕ್ತ ಅಧಿಕಾರಿ ಮಗಾ ಲೋಕಾಯುಕ್ತನ ಮನೆಯಲ್ಲೆ ಲಂಚಾ ತಗೋಳ್ತಿದ್ದಾ, ಅದಕ್ಕಾಗಿ ನಾನು ಎಸಿಬಿಗೆ ಹೆಚ್ಚು ಪವರ್ ಕೊಟ್ಟಿದ್ದು ನಿಜಾ. ಈಗ ಭ್ರಷ್ಟಾಚಾರದಲ್ಲಿ ಬಿಜೆಪಿಗರು ಸಿಕ್ಕಾಕೊಂಡ ಬಿಟ್ಟಿದ್ದಾರಲ್ಲಾ,ಅದಕ್ಕೆ ಇವನ್ನೆಲ್ಲಾ ಬಿಜೆಪಿಗರು ಹೇಳ್ತಿರೋದು ಬಿಜೆಪಿಗರು ತಮ್ಮ ಹಗರಣ ಮುಚ್ಚಿಕೊಳ್ಳಲಿಕ್ಕೆ,ಭ್ರಷ್ಟಾಚಾರ ಮುಚ್ಚಿಕೊಳ್ಳಲಿಕ್ಕೆ ಎಸಿಬಿ ರದ್ದು ಮಾಡಿದರು ಎಂದು ಬಿಜೆಪಿ ಪಕ್ಷದವರ ವಿರುದ್ಧ ಕಿಡಿ ಕಾರಿದರು.

click me!