ಮದ್ವೆ ಆಗ್ತೀನಿ ಅಂತ ಮಗು ಕೊಟ್ಟು ಕೈ ಕೊಟ್ಟಿದ್ದಾರೆ, ಮಹಿಳೆ ಆರೋಪಕ್ಕೆ ಗಳಗಳನೇ ಅತ್ತ ಬಿಜೆಪಿ ಶಾಸಕ

By Suvarna News  |  First Published Feb 7, 2022, 4:59 PM IST

* ಬಿಜೆಪಿ ಶಾಸಕ ತೇಲ್ಕೂರ್ ವಿರುದ್ಧ  ಲೈಂಗಿಕ ದೌರ್ಜನ್ಯ ಆರೋಪ
* ಮದ್ವೆ ಆಗ್ತೀನಿ ಅಂತ ಮಗು ಕೊಟ್ಟು ಕೈ ಕೊಟ್ಟಿದ್ದಾರೆ ಎಂದು ಆರೋಪಿಸಿದ ಮಹಿಳೆ
* ಈ ಆರೋಪಕ್ಕೆ  ಗಳಗಳನೇ ಅತ್ತ ಬಿಜೆಪಿ ಶಾಸಕ


ಕಲಬುರಗಿ, (ಫೆ.07): ಸೇಡಂನ ಬಿಜೆಪಿ ಶಾಸಕ (BJP MLA), ಕಲಬುರಗಿ- ಯಾದಗಿರಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರೂ ಆಗಿರುವ ರಾಜಕುಮಾರ್ ಪಾಟೀಲ್ ತೆಲ್ಕೂರ್(Rajkumar Patil Telkur) ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಕೇಳಿ ಬಂದಿದೆ.

ನನ್ನ ಮಗನಿಗೆ ಲೀಗಲ್​ ಉತ್ತರದಾಯಿತ್ವ ಕೊಡಿ, ಮದ್ವೆ ಆಗ್ತೀನಿ ಅಂತ ಮಗು ಕೊಟ್ಟು ಕೈ ಕೊಟ್ಟಿದ್ದಾರೆ. ನನ್ನ ಮಗನಿಗೆ ನ್ಯಾಯ ಬೇಕು ಅಂತ ಮಹಿಳೆ ಮನವಿ ಮಾಡಿದ್ದಾಳೆ.  

Latest Videos

undefined

ಇದಕ್ಕೆ ಇಂದು(ಸೋಮವಾರ) ಕಲಬುರಗಿಯ ಏರ್‌ಪೋರ್ಟ್‌ನಲ್ಲಿ ಸುದ್ದಿಗಾರಿಗೆ ಪ್ರತಿಕ್ರಿಯಿಸಿರುವ ಶಾಸಕ ರಾಜಕುಮಾರ್, ಯಾವುದೇ ತಪ್ಪು ಮಾಡಿಲ್ಲ. ಎಂತಹ ತನಿಖೆಗೂ ಸಿದ್ಧನಿದ್ದೇನೆ. ತಾವು ಆರೋಪ ಮುಕ್ತರಾಗಿ ಹೊರಬರುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Exclusive: ನನ್ನ ಮಗನನ್ನು, ಅವರ ಮಗ ಅಂತ ಒಪ್ಕೊಳ್ಳಲಿ: ಶಾಸಕ ರಾಜ್‌ಕುಮಾರ್ ಪಾಟೀಲ್ ಮೇಲೆ ಗಂಭೀರ ಆರೋಪ

 ಫೆ.4ರಂದು ಸಿಎಂ ಅವರ ಟ್ವಿಟರ್‌ನಲ್ಲಿ ಈ ಬಗ್ಗೆ ಟ್ವೀಟ್ ಸಂದೇಶ ಬಂದಿದೆ ಎಂದು ನನಗೆ ಮಾಹಿತಿ ಬಂತು. ಆಗ ನಾನು ಕಲಬುರಗಿಯಲ್ಲಿ ಮೇಯರ್ ಚುನಾವಣೆಯಲ್ಲಿ ಇದ್ದೆ. ತಕ್ಷಣ ಫೆ.5ರಂದು ಬೆಂಗಳೂರಿಗೆ ಹೋಗಿ ವಿಧಾನಸಭೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ ಎಂದರು.

ತನಿಖೆ ಎದುರಿಸಲು ಸಿದ್ಧ
ಬಿಜೆಪಿ ರಾಜ್ಯ ವಕ್ತಾರರೂ ಆಗಿರುವ ಶಾಸಕ  ತೇಲ್ಕೂರ್ ಬೆಂಗಳೂರಿನಿಂದ ಸೋಮವಾರ ಕಲಬುರಗಿಗೆ ವಾಪಸ್ಸಾಗಿದ್ದಾರೆ. ಏರ್‌ಪೋರ್ಟ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ ಯಾವುದೇ ತಪ್ಪು ಮಾಡಿಲ್ಲ, ಸರ್ಕಾರ ಯಾವುದೇ ರೀತಿಯ ತನಿಖೆ ಬೇಕಾದರೂ ನಡೆಸಬಹುದು. ತಪ್ಪಿತಸ್ಥರು ಯಾರೇ ಇದ್ದರೂ ಕ್ರಮ ಕೈಗೊಳ್ಳಲಿ ಎಂದು ಸ್ಪಷ್ಟಪಡಿಸಿದರು.

ನಾನು ಯಾರ ಮಾನಕ್ಕೂ ಧಕ್ಕೆ ತರುವ ಕೆಲಸ ಮಾಡಿಲ್ಲ. ಪಕ್ಷಕ್ಕೆ ಹಾಗೂ ಮತದಾರರಿಗೆ ಮುಜುಗರ ತರುವ ಕೆಲಸ ಎಂದಿಗೂ ಮಾಡಿಲ್ಲ, ಮುಂದೆಯೂ ಮಾಡುವುದಿಲ್ಲ, ನಿಷ್ಪಕ್ಷಪಾತ ತನಿಖೆಯಾಗಲಿ, ಸತ್ಯಾಸತ್ಯತೆ ಹೊರಬರಲಿ ಎಂದು ಹೇಳಿ ತಮ್ಮ ವಿರುದ್ಧ ಮಹಿಳೆ ಮಾಡಿರುವ ಆರೋಪವನ್ನು ಸಾರಾ ಸಾಗಾಟಾಗಿ ತಳ್ಳಿ ಹಾಕಿದರು.

ಮಹಿಳೆಯೊಬ್ಬರು ನನಗೆ ನಿರಂತರವಾಗಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ ಎಂದು ಪೊಲೀಸ್ ಕಂಪ್ಲೇಂಟ್ ನೀಡಿದ್ದೇನೆ. ಹೀಗಾಗಿ ವಿಧಾನಸೌಧ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ನಾನು ಕಾನೂನು ರೀತಿಯಲ್ಲಿ ಇದನ್ನು ಎದರಿಸಲು ಸಿದ್ಧ ಎಂದು ತೆಲ್ಕೂರ್ ಹೇಳಿದರು.

ಗಳಗಳನೇ ಅತ್ತ ಶಾಸಕ ತೇಲ್ಕೂರ್
ಸುದ್ದಿಗಾರರೊಂದಿಗೆ ಮಾತನಾಡುತ್ತಿರುವಾಗಲೇ ಶಾಸಕ ತೇಲ್ಕೂರ್ ಮಾತಿನ ಮದ್ಯೆ ಭಾವುಕರಾದರು. ತಾವು ಪ3ಆಮಾಣಿಕವಾಗಿದ್ದರೂ ಕೂಡಾ ತಮ್ಮ ಮೇಲೆ ಇಂತಹ ಆರೋಪಗಳು ಬಂದಿರುವುದು ಬೇಸರ ತರಿಸಿದೆ ಎಂದು ಹೇಳುತ್ತ ಕಣ್ಣೀರಾದರು. ಪ್ರಕರಣದ ಬಗ್ಗೆ ನಾನು ಯಾರ ಮೇಲೂ ಆರೋಪವನ್ನು ಮಾಡುವುದಿಲ್ಲ. ಕಾನೂನು ಹೋರಾಟಕ್ಕೆ ಸಿದ್ಧನಿದ್ದೇನೆ ಎಂದು ಹೇಳಿದರು.

ನನಗೂ ಸಹ ಕುಟುಂಬವಿದೆ, ಹೀಗಾಗಿ ತುಂಬಾ ನೊಂದಿದ್ದೇನೆ. ನಾನು ಈ ಬಗ್ಗೆ ಹೆಚ್ಚು ಮಾಧ್ಯಮಗಳೊಂದಿಗೆ ಹಂಚಿಕೊಳ್ಳಲು ಇಷ್ಟಪಡುವುದಿಲ್ಲ. ನನಗೂ ಕುಟುಂಬವಿದೆ. ತನಿಖೆ ವೇಳೆ ಸಿಕ್ಕ ಮಾಹಿತಿಯನ್ನು ನೀವು ಸಹ ನೋಡಬಹುದು. ಇಂತಹ ಕೆಲಸ ನಾನು ಮಾಡುವುದೂ ಇಲ್ಲ. ಪಕ್ಷಕ್ಕೆ, ಕಾರ್ಯಕರ್ತರಿಗೆ, ಮತದಾರರಿಗೆ ಮುಜುಗರ ತರುವ ಕೆಲಸ ನನ್ನಿಂದ ಆಗಿಲ್ಲ. ನಾನು ಕಾನೂನು ಹೋರಾಟಕ್ಕೆ ಸಿದ್ಧನಿz್ದÉೀನೆ ಎಂದರು.

ನಾನು ಪರಿಪಾಲಕ. ಕಾನೂನು ಏನೇ ತೀರ್ಮಾನ ತೆಗೆದುಕೊಂಡರು ನಾನು ಅದನ್ನು ಪಾಲಿಸುತ್ತೇನೆ. ಹೆಚ್ಚಿನ ಮಾಹಿತಿ ಬೇಕಾದರೆ ಪೆÇಲೀಸರ ಬಳಿ ತೆಗೆದುಕೊಳ್ಳಿ. ಇದಕ್ಕಿಂತ ಹೆಚ್ಚು ನಾನು ಏನನ್ನು ಹೇಳಲು ಇಷ್ಟಪಡುವುದಿಲ್ಲ. ನೀವು ಸಹ ಈ ಕುರಿತು ಹೆಚ್ಚಿನ ತನಿಖೆ ಮಾಡಿ ನಂತರ ವರದಿ ಮಾಡಿ ಎಂದು ಮಾಧ್ಯಮ ಮಿತ್ರರಲ್ಲಿ ಶಾಸಕರು ಭಾವುಕರಾಗಿಯೇ ಮನವಿ ಮಾಡಿದರು.

ನಾನು ದೂರು ಕೊಟ್ಟಿರುವೆ, ಉಳಿದದ್ದು ಪೊಲೀಸರು ನೋಡಿಕೊಳ್ತಾರೆ
ಕೇಸ್ ದಾಖಲಿಸುವುದಕ್ಕೂ ಮುನ್ನ ಸಿಎಂ ಜೊತೆ ಚರ್ಚೆ ಮಾಡಿದ್ರಾ ಎಂಬ ಪ್ರಶೆಗೆ ಉತ್ತರಿಸಿದ ಅವರು, ಪ್ರಕರಣದಲ್ಲಿ ಸುಖಾ ಸುಮ್ಮನೆ ಸಿಎಂ ಬೊಮ್ಮಾಯಿ ಹೆಸರು ತರವುದು ಸರಿ ಅಲ್ಲ. ನಾನು ಯಾರ ಬಳಿಯೂ ಈ ದೂರಿನ ಕುರಿತು ಮಾತುಕತೆ ಮಾಡಿಲ್ಲ. ಮೊದಲು ನಾನು ದೂರು ಕೊಟ್ಟಿz್ದÉೀನೆ. ಉಳಿದಿದ್ದು ಪೊಲೀಸರು ನೋಡಿಕೊಳ್ಳುತ್ತಾರೆಂದರು.

ಪ್ರಾಥಮಿಕ ಮಾಹಿತಿ ಏನೂ ಸಿಕ್ಕಿಲ್ಲ. ಪ್ರಸ್ತುತ ನಾನು ಎಫ್‍ಐಆರ್ ದಾಖಲಿಸಿದ್ದೇನೆ. ಇನ್ನುಳಿದಂತೆ ಪೆÇಲೀಸರು ನೋಡಿಕೊಳ್ಳುತ್ತಾರೆ. ಈ ಬಗ್ಗೆ ನಾನು ಪೊಲೀಸರ ಜೊತೆ ಯಾವುದೇ ರೀತಿಯ ಸಂಪರ್ಕವನ್ನು ಮಾಡುವುದಿಲ್ಲ. ಅವರು ಈ ಕುರಿತು ತನಿಖೆ ಮಾಡಲು ಸಂಪೂರ್ಣ ಸ್ವಾತಂತ್ರ್ಯವಿದೆ. ನಾನು ಅವರಿಗೆ ರಾಜಕೀಯ ಒತ್ತಡಗಳನ್ನು ಏರುವುದಿಲ್ಲ. ಈ ಹಿಂದೆ ಯಾರು ಇದ್ದಾರೆ ಎಂದು ನಾನು ಆರೋಪಗಳನ್ನೂ ಮಾಡುವುದಿಲ್ಲ. ನನಗೆ ಕಾನೂನಿನ ಮೇಲೆ ಸಂಪೂರ್ಣ ವಿಶ್ವಾಸವಿದೆ ಎಂದರು.

ಪP್ಷÀ ನನಗೆ ತುಂಬಾ ಕೆಲಸವನ್ನು ಕೊಟ್ಟಿದೆ. ಜನರಿಗಾಗಿ ನಾನು ತುಂಬಾ ಕೆಲಸ ಮಾಡಬೇಕಾಗಿದೆ. ಈ ಬಗ್ಗೆ ನಾನು ಯಾವುದೇ ರೀತಿ ತಲೆಯನ್ನು ಕೆಡಿಸಿಕೊಳ್ಳುವುದಿಲ್ಲ. ಪP್ಷÀವನ್ನು ಸಂಫಟನೆ ಮಾಡುವಂತಹ ನಿಟ್ಟಿನಲ್ಲಿ ನಾನು ಕೆಲಸ ಮಾಡುತ್ತೇನೆ. ಪಕ್ಷ ಮತ್ತು ಜನರು ನನಗೆ ಕೊಟ್ಟ ಅಧಿಕಾರವನ್ನು ನಾನು ನೋಡಿಕೊಳ್ಳುತ್ತೇನೆ. ಅದಕ್ಕೆ ನನ್ನ ಸಂಪೂರ್ಣ ಸಮಯವನ್ನು ಮೀಸಲಿಡುತ್ತೇನೆ ಎಂದರು.

ಏನಿದು ಮಹಿಳೆ ಆರೋಪ?: 
ಶಾಸಕ ತೇಲ್ಕೂರ್ ವಿರುದ್ಧ ಮಹಿಳೆಯೊಬ್ಬರು ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದಾರೆ. ಕಳೆದ 14 ವರ್ಷದಿಂದ ತನ್ನ ಮೇಲೆ ಶಾಸಕರು ದೌರ್ಜನ್ಯ ನಡೆಸಿದ್ದಾರೆ ಎಂದು ಮಹಿಳೆ ಆರೋಪಿಸಿದ್ದು, ನನ್ನ ಮಗನಿಗೆ ಲೀಗಲ್​ ಉತ್ತರದಾಯಿತ್ವ ಕೊಡಿ, ಮದ್ವೆ ಆಗ್ತೀನಿ ಅಂತ ಮಗು ಕೊಟ್ಟು ಕೈ ಕೊಟ್ಟಿದ್ದಾರೆ ಎಂದಿದ್ದಾರೆ.

ಕಳೆದ 3 ದಿನದ ಹಿಂದೆ ತಮ್ಮ ವಿರುದ್ಧ ಈ ಆರೋಪದ ಬಗ್ಗೆ ತಿಳಿಯುತ್ತಿದ್ದಂತೆಯೇ ಬೆಂಗಳೂರಿಗೆ ತೆರಳಿದ್ದ ಶಾಸಕ ತೇಲ್ಕೂರ್ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಮಹಿಳೆಯೊಬ್ಬರು ತಮ್ಮನ್ನ ನಿರಂತರ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆಂದು ದೂರು ದಾಖಲಿಸಿದ್ದಾರೆ.

click me!