Siddaramaiah Press Conference ನಾನು ಯಾವಾಗಲೂ ಕೂಲ್ ಆಗಿ ಇರ್ತೀನಿ, ಆದ್ರೆ…

By Suvarna News  |  First Published Feb 6, 2022, 6:29 PM IST

* ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸುದ್ದಿಗೋಷ್ಠಿ
* ಎಲ್ಲಾ ದಿನಗಳಲ್ಲೂ ನಾನು ಖುಷಿಯಾಗಿರುತ್ತೇನೆ
* ಸಿಎಂ ಇಬ್ರಾಹಿಂ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ


ಬೆಂಗಳೂರು, (ಫೆ.6):ಸಂಡೇ ಕೂಲ್ ಆಗಿಯೇ ಇರಬೇಕಲ್ಲವಾ? ನಾನು ಯಾವಾಗಲೂ ಕೂಲ್ ಆಗಿಯೇ ಇರುತ್ತೇನೆ. ನಾನು ತಲೆಕೆಡಿಸಿಕೊಳ್ಳೋದು ಯಾವಾಗ ಎಂದರೆ ಸಮಾಜದಲ್ಲಿ ಡಿಸ್ಟರ್ಬ್ ಆದಾಗ, ಇಲ್ಲ ಅಂದ್ರೆ ನಾನು ಯಾವಾಗಲೂ ಕೂಲ್ ಆಗಿರುತ್ತೇನೆ ಎಂದು ಮಾಜಿ ಸಿಎಂ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಇಂದು(ಭಾನುವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾನುವಾರವಷ್ಟೆ ಅಲ್ಲ ಎಲ್ಲಾ ದಿನಗಳಲ್ಲೂ ತಾವು ತಾಳ್ಮೆ ಮತ್ತು ಖುಷಿಯಿಂದ ಇರುತ್ತೇನೆ. ಸಮಾಜ ಡಿಸ್ಟರ್ಬ್ ಆಗುವ ಘಟನೆಗಳು ನಡೆದಾಗ ಮಾತ್ರ ತಾವು ತಾಳ್ಮೆ ಕಳೆದುಕೊಳ್ಳುವುದಾಗಿ ಹೇಳಿದರು..

Tap to resize

Latest Videos

Karnataka Congress ಸಿಎಂ ಇಬ್ರಾಹಿಂ ಸ್ವಾಗತಿಸಿದ್ದ ನಾಯಕ ಕಾಂಗ್ರೆಸ್‌ನಿಂದ ಉಚ್ಚಾಟನೆ

ಕಾಂಗ್ರೆಸ್‍ನ ಡಿಜಿಟಲ್ ಸದಸ್ಯತ್ವ ನೋಂದಣಿಯ ಉಸ್ತುವಾರಿ ನೋಡಿಕೊಳ್ಳುತ್ತಿರುವ ಕೆ.ರಾಜು ಅವರು ಬೆಂಗಳೂರಿಗೆ ಆಗಮಿಸಿದ್ದರು. ನಿನ್ನೆ ತಮ್ಮ ಮನೆಗೂ ಭೇಟಿ ನೀಡಿದ್ದರು. ಇದೊಂದು ಸೌಜನ್ಯದ ಭೇಟಿಯಷ್ಟೆ. ಹೈಕಮಾಂಡ್ ತಮಗೆ ಯಾವ ಸಂದೇಶವನ್ನು ಕಳುಹಿಸಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ವಿಧಾನಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ ತಮ್ಮ ಸ್ನೇಹಿತ, ಮೊದಲಿನಿಂದಲೂ ಅವರನ್ನು ನಾನು ನೋಡಿದ್ದೇನೆ. ನನ್ನ ಪ್ರಕಾರ ಅವರು ಕಾಂಗ್ರೆಸ್ ತೊರೆಯುವುದಿಲ್ಲ. ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಸ್ಥಾನ ಸಿಕ್ಕಿಲ್ಲ ಎಂದು ಸಿಟ್ಟಿನಲ್ಲಿದ್ದಾರೆ. ಕೋಪ ತಣ್ಣಗಾದ ಮೇಲೆ ಅವರ ಜೊತೆ ಮಾತನಾಡುತ್ತೇನೆ. ಈ ನಡುವೆ ಮಾಜಿ ಸಚಿವ ಎಚ್.ಸಿ.ಮಹದೇವಪ್ಪ ಅವರು ಸಿ.ಎಂ.ಇಬ್ರಾಹಿಂ ಅವರೊಂದಿಗೆ ಮಾತುಕತೆ ನಡೆಸಿ ಮನವೋಲಿಸುವ ಪ್ರಯತ್ನ ನಡೆಸಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್‍ನಲ್ಲಿ ನಾನು ಖುಷಿಯಾಗಿಲ್ಲ, ವಿಚಲಿತನಾಗಿದ್ದೇನೆ ಎಂದು ಸಿ.ಎಂ.ಇಬ್ರಾಹಿಂ ಹೇಳಿರುವುದು ಸರಿಯಲ್ಲ, ಕಾಮಾಲೆ ಕಣ್ಣಿಗೆ ಕಾಣುವುದೇಲ್ಲಾ ಹಳದಿಯಂತೆ. ಅವರಿಗೆ ನಾನು ಹಾಗೆ ಕಂಡಿರಬಹುದು. ಇಬ್ರಾಹಿಂ ವಿರೇಂದ್ರ ಪಾಟೀಲರ ಜೊತೆ ಕಾಂಗ್ರೆಸ್‍ಗೆ ಸೇರಿದ್ದರು. ಆಗ ನಾನು ಅವರೊಂದಿಗೆ ಇರಲಿಲ್ಲ, ಕಾಂಗ್ರೆಸ್‌ನಲ್ಲೂ  ಇರಲಿಲ್ಲ. ಹಾಗಾಗಿ ಆ ವೇಳೆ ಅವರಿಗೆ ಏನು ಅನ್ಯಾಯವಾಯಿತು ಎಂದು ನನಗೆ ತಿಳಿದಿಲ್ಲ.

ಕಾಲಾನಂತರ ಜನತಾ ದಳಕ್ಕೆ ಬಂದರು. ನಾನು ಜೆಡಿಎಸ್ ತೊರೆದು ಬಂದಾಗ ನನ್ನೊಂದಿಗೆ ಕಾಂಗ್ರೆಸ್‍ಗೆ ಬಂದರು ಎಂದು ಹೇಳಿದರು.
ಚುನಾವಣೆಯಲ್ಲಿ ಸ್ರ್ಪಸಲು ಸಿದ್ದರಾಮಯ್ಯ ಅವರಿಗೆ ನಾನೇ ಟಿಕೆಟ್ ಕೊಡಿಸಿದ್ದೇನೆ ಎಂದು ಇಬ್ರಾಹಿಂ ಹೇಳಲು ಸಾಧ್ಯವಿಲ್ಲ. ಎಲ್ಲರಿಗೂ ಅವರೇ ಟಿಕೆಟ್ ಕೊಡಿಸಲು ಹೇಗೆ ಸಾಧ್ಯ ಎಂದು ಗರಂ ಆದ ಸಿದ್ದರಾಮಯ್ಯ ಅವರು, ಇಬ್ರಾಹಿಂ ಅಹಿಂದ ಸಮಾವೇಶ ಮಾಡುತ್ತಾರೋ ಅಥವಾ ಇನ್ನೇನು ಮಾಡುತ್ತಾರೋ ನನಗೆ ಸಂಬಂಸಿಲ್ಲ ಎಂದರು.

1977ರಲ್ಲಿ ಇಬ್ರಾಹಿಂ ಟೌನ್ ಹಾಲ್‍ನಲ್ಲಿ ಭಾಷಣ ಮಾಡಲು ಬಂದಿದ್ದರು. ನಾನು ಆ ಕಾರ್ಯಕ್ರಮದಲ್ಲಿ ಕುಳಿತು ಭಾಷಣ ಕೇಳಿದ್ದೆ. ಈ ವಿಷಯವನ್ನು ನಾನು ಅವರ ಬಳಿ ಹಂಚಿಕೊಂಡಿದ್ದೆ. ಅದನ್ನೇ ತಿರುಚಿ ನನ್ನ ಭಾಷಣ ಕೇಳಳು ಸಿದ್ದರಾಮಯ್ಯ ಸ್ಕೂಟರ್‍ನಲ್ಲಿ ಬರುತ್ತಿದ್ದರು ಎಂದು ಹೇಳಿಕೊಂಡಿದ್ದಾರೆ. ಆಗ ನಾನು ವಿದ್ಯಾರ್ಥಿ, ನನ್ನ ಬಳಿ ಸ್ಕೂಟರು ಇರಲಿಲ್ಲ, ಸೈಕಲ್ ಇರಲಿಲ್ಲ ಎಂದು ಹಾಸ್ಯ ಚಟಾಕೆ ಹಾರಿಸಿದರು.

ಸಿಎಂ ಇಬ್ರಾಹಿಂ ಸ್ವಾಗತಿಸಿದ್ದ ನಾಯಕ ಕಾಂಗ್ರೆಸ್‌ನಿಂದ ಉಚ್ಚಾಟನೆ
ಎಂಎಲ್ಸಿ ಸಿ.ಎಂ ಇಬ್ರಾಹಿಂ(CM Ibrahim) ಸ್ವಾಗತಿಸಿದ್ದ ತನ್ವೀರ್ ಸೇಠ್(Tanveer sait) ಆಪ್ತನಿಗೆ ಕಾಂಗ್ರೆಸ್ ಗೇಟ್‌ಪಾಸ್ ನೀಡಿದೆ. 

ತನ್ವೀರ್ ಸೇಠ್ ಆಪ್ತ ಅಬ್ದುಲ್ ಖಾದರ್ ಶಾಹೀದ್ರನ್ನು(Abdul Khader Shaheed) 6 ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟನೆ ಮಾಡಿ ಕಾಂಗ್ರೆಸ್ ಆದೇಶ ಹೊರಡಿಸಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಸೂಚನೆಯ ಮೇರೆಗೆ ಅಬ್ದುಲ್ ಖಾದರ್ ಶಾಹೀದ್ರನ್ನ ಉಚ್ಚಾಟನೆ ಮಾಡಲಾಗಿದೆ.
 

click me!