ಭಯಪಡುವವರು ಪಕ್ಷ ಬಿಡಿ : ರಾಹುಲ್‌ ಕುತೂಹಲಕಾರಿ ಹೇಳಿಕೆ

By Kannadaprabha NewsFirst Published Jul 17, 2021, 11:13 AM IST
Highlights
  • : ಪಂಜಾಬ್‌ ಕಾಂಗ್ರೆಸ್‌ನಲ್ಲಿನ ಒಳಸಂಘರ್ಷ ಹಾಗೂ ಕೆಲ ಮುಖಂಡರು ಪಕ್ಷ ಬಿಟ್ಟ ಬೆನ್ನಲ್ಲೇ ಕುತೂಹಲಕಾರಿ ಹೇಳಿಕೆ 
  • ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಕುತೂಹಲಕಾರಿ ಹೇಳಿಕೆ 
  • ‘ವಾಸ್ತವ ಸಂಗತಿಯನ್ನು ಮತ್ತು ಬಿಜೆಪಿಯನ್ನು ಎದುರಿಸಲು ಭಯ ಪಡುವವರು ಪಕ್ಷವನ್ನು ತೊರೆಯಬಹುದು

ನವದೆಹಲಿ (ಜು.17) : ಪಂಜಾಬ್‌ ಕಾಂಗ್ರೆಸ್‌ನಲ್ಲಿನ ಒಳಸಂಘರ್ಷ ಹಾಗೂ ಕೆಲ ಮುಖಂಡರು ಪಕ್ಷ ಬಿಟ್ಟ ಬೆನ್ನಲ್ಲೇ ಕುತೂಹಲಕಾರಿ ಹೇಳಿಕೆ ನೀಡಿರುವ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ, ‘ವಾಸ್ತವ ಸಂಗತಿಯನ್ನು ಮತ್ತು ಬಿಜೆಪಿಯನ್ನು ಎದುರಿಸಲು ಭಯ ಪಡುವವರು ಪಕ್ಷವನ್ನು ತೊರೆಯಬಹುದು. ಕಾಂಗ್ರೆಸ್‌ ಹೊರಗಿನ ಭಯ ರಹಿತ ಮುಖಂಡರನ್ನು ಪಕ್ಷಕ್ಕೆ ಕರೆತರಲಾಗುವುದು’ ಎಂದು ಹೇಳಿದ್ದಾರೆ.

ಮಾಜಿ ಸಿಎಂಗೆ ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ಸ್ಥಾನ? ಸೋನಿಯಾ ಭೇಟಿ!

ಸಾಮಾಜಿಕ ಜಾಲತಾಣದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್‌, ಹೆದರಿಕೆ ಇಲ್ಲದೇ ಇರುವ ಅನೇಕ ಮಂದಿ ಇದ್ದಾರೆ. ಆದರೆ, ಅವರು ಪಕ್ಷದ ಹೊರಗಿನವರಾಗಿದ್ದಾರೆ. ಯಾರು ನಮ್ಮವರೋ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲಾಗುವುದು. ಪಕ್ಷದಲ್ಲಿ ಇರಲು ಭಯ ಪಡುವವರನ್ನು ಹೊರಗೆ ಕಳುಹಿಸಲಾಗುವುದು. ಅಂಥವರು ಆರ್‌ಎಸ್‌ಎಸ್‌ ಜನರು. ಅವರು ನಮಗೆ ಬೇಕಾಗಿಲ್ಲ. ಇದು ನಮ್ಮ ಸಿದ್ಧಾಂತ. ಇದು ನಾನು ನಿಮಗೆ ನೀಡುತ್ತಿರುವ ಮೂಲ ಸಂದೇಶ ಎಂದು ಹೇಳಿದ್ದಾರೆ.

ಸಿದ್ದು, ಡಿಕೆಶಿ ಇಬ್ಬರಿಗೂ ರಾಹುಲ್‌ ಬುಲಾವ್‌

ಸಿಧು ಬಗ್ಗೆ ಕ್ಯಾಪ್ಟನ್‌ ಗರಂ

ಚಂಡೀಗಢ: ಪಂಜಾಬ್‌ ಕಾಂಗ್ರೆಸ್‌ ಅಧ್ಯಕ್ಷರನ್ನಾಗಿ ನವಜೋತ್‌ ಸಿಧು ನೇಮಿಸಲಾಗುತ್ತದೆ ಎಂಬ ವರದಿಗಳ ಬೆನ್ನಲ್ಲೇ, ಸಿಧು ಬಗ್ಗೆ ಅವರ ವೈರಿ, ಮುಖ್ಯಮಂತ್ರಿ ಅಮರೀಂದ್‌ ಸಿಂಗ್‌ ಆಕ್ಷೇಪಿಸಿದ್ದಾರೆ. ಸಿಧು ನೇಮಕಾತಿಯು ಪಕ್ಷಕ್ಕೆ ಹೊಡೆತ ನೀಡಲಿದೆ ಎಂದು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಪತ್ರ ಬರೆದಿದ್ದಾರೆ.

click me!