ಅಕ್ರಮ ಗಣಿಗಾರಿಕೆ ಕೇಸ್ ಮಧ್ಯೆ ಮಂಡ್ಯ ಜೆಡಿಎಸ್ ಶಾಸಕರಿಗೆ ಸಿಬಿಐ ಕಂಟಕ

Published : Jul 16, 2021, 06:51 PM IST
ಅಕ್ರಮ ಗಣಿಗಾರಿಕೆ ಕೇಸ್ ಮಧ್ಯೆ ಮಂಡ್ಯ ಜೆಡಿಎಸ್ ಶಾಸಕರಿಗೆ ಸಿಬಿಐ ಕಂಟಕ

ಸಾರಾಂಶ

* ಮಂಡ್ಯ ಜೆಡಿಎಸ್ ಶಾಸಕ, ನಾಯಕರುಗಳಿಗೆ ಮತ್ತೊಂದು ಕಂಟಕ *ಮಡ್ಯ ನಗರಾಭಿವೃದ್ಧಿ ಪ್ರಾಧಿಕಾರ ನಿವೇಶನಗಳ ಅಕ್ರಮ ಹಂಚಿಕೆ ಪ್ರಕರಣ *ಮಂಡ್ಯ ಜಿಲ್ಲೆಜೆಡಿಎಸ್ ಶಾಸಕರಿಗೆ ಸಿಬಿಐ ಕೋರ್ಟ್ ಸಮನ್ಸ್

ಮಂಡ್ಯ, (ಜು.16): ಅಕ್ರಮ ಗಣಿಗಾರಿಕೆ ಕೇಸ್​​ ಭಾರೀ ಸದ್ದು ಮಾಡುತ್ತಿರುವ ಸಮಯದಲ್ಲಿಯೇ ಮಂಡ್ಯ ಜೆಡಿಎಸ್ ಶಾಸಕ, ನಾಯಕರುಗಳಿಗೆ ಮತ್ತೊಂದು ಕಂಟಕ ಎದುರಾಗಿದೆ.

ಮಡ್ಯ ನಗರಾಭಿವೃದ್ಧಿ ಪ್ರಾಧಿಕಾರ ನಿವೇಶನಗಳ ಅಕ್ರಮ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಶಾಸಕ ಹಾಗೂ ಮಾಜಿ ಶಾಸಕ ಸೇರಿದಂತೆ 24 ಮಂದಿ ಸಿಬಿಐ ಕೋರ್ಟ್ ಸಮನ್ಸ್ ನೀಡಿದೆ.

24 ಮಂದಿ ಆರೋಪಿಗಳಿಗೆ ಸಮನ್ಸ್​ ಜಾರಿಗೊಳಿಸಿರುವ ಸಿಬಿಐ ವಿಶೇಷ ನ್ಯಾಯಲಯ, ಜುಲೈ 20ರಂದು ಪ್ರಕರಣದ ವಿಚಾರಣೆಗಾಗಿ ಹಾಜರಾಗುವಂತೆ ಹಳಿದೆ.

KRS ಬಗ್ಗೆ ಸುಮಲತಾ ಅಂಬರೀಶ್ ಆತಂಕ : ಸಿಬಿಐ ತನಿಖೆಗೆ ಆಗ್ರಹ

ಈ ಪ್ರಕರಣದ ಪ್ರಮುಖ ಆರೋಪಿಗಳಾದ ಮೇಲುಕೋಟೆ ಕ್ಷೇತ್ರದ ಶಾಸಕ ಸಿ.ಎಸ್ ಪುಟ್ಟರಾಜು, ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಶ್ರೀನಿವಾಸ್, ಮಾಜಿ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ, ಮಡ್ಯ ನಗರಾಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷೆ ವಿದ್ಯಾ ನಾಗೇಂದ್ರ ಸೇರಿದಂತೆ 24 ಜನರಿಗೆ ಸಿಬಿಐ ವಿಶೇಷ ನ್ಯಾಯಲಯ ಸಮನ್ಸ್ ಜಾರಿಗೊಳಿಸಿದೆ.

2009ರಲ್ಲಿ ಮಡ್ಯ ನಗರಾಭಿವೃದ್ಧಿ ಪ್ರಾಧಿಕಾರದ107 ನಿವೇಶನಗಳನ್ನು ಅಕ್ರಮವಾಗಿ ಹಂಚಿಕೆ ಮಾಡಿರುವ ಆರೋಪ ಶಾಸಕ ಸಿ.ಎಸ್​ ಪುಟ್ಟರಾಜು ಸೇರಿದಂತೆ ಹಲವರ ವಿರುದ್ಧ ಕೇಳಿ ಬಂದಿತ್ತು. 

ಈ ಸಂಬಂಧ ಅಕ್ರಮಗಳ ಬಗ್ಗೆ ವಿವರಗಳನ್ನು ನೀಡುವಂತೆ ಸಿಬಿಐ ಸಾರ್ವಜನಿಕರಿಗೆ ಮನವಿ ಮಾಡಿದ್ದರು. ಬಳಿಕ ಸಾರ್ವಜನಿಕರು ನೀಡಿದ ಮಾಹಿತಿ ಮೇರೆಗೆ ಸಿಬಿಐ ಅಧಿಕಾರಿಗಳೇ ಖುದ್ದು ಕೇಸು ದಾಖಲಿಸಿಕೊಂಡು 24 ಮಂದಿ ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಿದ್ಧಪಡಿಸಿದ್ದರು.ಚಾರ್ಜ್ ಶೀಟ್ ಆಧರಿಸಿ ಸಿಬಿಐ ಕೋರ್ಟ್ ಸಮನ್ಸ್ ನೀಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಒಂದೇ ಕಾರಲ್ಲಿ ಪ್ರಯಾಣಿಸಿದ ಖರ್ಗೆ, ಡಿಕೆಶಿ: ತೀವ್ರ ರಾಜಕೀಯ ಕುತೂಹಲ
Karnataka News Live: ವೈದ್ಯರ ವರದಿ ಬಳಿಕ ಜೈಲಿನಲ್ಲಿ ನಟ ದರ್ಶನ್‌ಗೆ ಫಿಸಿಯೋಥೆರಪಿ ಚಿಕಿತ್ಸೆ ಸ್ಥಗಿತ