ಸ್ಮಶಾನ ಪೂಜೆ ಮಾಡಿ ಗೆಲುವು ಸಾಧಿಸಿದ ಕಾಂಗ್ರೆಸ್‌: ಸತೀಶ್‌ ಜಾರಕಿಹೊಳಿ ಕಾರಿನ ಭವಿಷ್ಯ ನಿಜವಾಯ್ತು!

By Sathish Kumar KHFirst Published May 17, 2023, 8:30 PM IST
Highlights

ಸ್ಮಶಾನದಲ್ಲಿ ಕಾರಿನ ಪೂಜೆ ಮಾಡಿ 2023ರಲ್ಲಿ ಕಾಂಗ್ರೆಸ್‌ ಗೆದ್ದು ಅಧಿಕಾರಕ್ಕೆ ಬರುತ್ತದೆ ಎಂದು ಭವಿಷ್ಯ ನುಡಿದಿದ್ದ ಸತೀಶ್‌ ಜಾರಕಿಹೊಳಿ ಭವಿಷ್ಯ ಈಗ ನಿಜವಾಗಿದೆ.

ಬೆಳಗಾವಿ (ಮೇ 17): ನಮ್ಮ ಕಾಂಗ್ರೆಸ್ ಸರ್ಕಾರ 2023ರಲ್ಲಿ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದು, 2020ರಲ್ಲಿಯೇ ತೆಗೆದುಕೊಂಡಿದ್ದ ಹೊಸ ಕಾರಿಗೆ 2023 ಎಂದು ನಂಬರ್‌ ಪ್ಲೇಟ್‌ ಹಾಕಿಸಿ ಸ್ಮಶಾನದಲ್ಲಿ ಪೂಜೆ ಮಾಡಿಸಿದ್ದ ಸತೀಶ್‌ ಜಾರಕಿಹೊಳಿ ಅವರ ಭವಿಷ್ಯ ನಿಜವಾಗಿದೆ. ಈಗ ಕಾಂಗ್ರೆಸ್‌ 135 ಕ್ಷೇತ್ರಗಳಲ್ಲಿ ಗೆದ್ದು ಬಹುಮತದಿಂದ ಸರ್ಕಾರ ರಚನೆ ಮಾಡುತ್ತಿದೆ. 

ರಾಜ್ಯದಲ್ಲಿ ಸದಾ ಮೌಢ್ಯತೆಯ ವಿರುದ್ಧವೇ ಮಾತನಾಡುವ ಹಾಗೂ ಅದರ ವಿರುದ್ಧ ಹಲವು ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಾ ಬಂದಿರುವ ಶಾಸಕ ಸತೀಶ್‌ ಜಾರಕಿಹೊಳಿ ವಿರುದ್ಧ ಕೆಲವು ಸಂಪ್ರದಾಯಸ್ಥರು ವಿರೋಧ ವ್ಯಕ್ತಪಡಿಸುತ್ತಾರೆ. ಈಗಾಗಲೇ ಸ್ಮಶಾನದಲ್ಲಿ ಹಲವು ಪೂಜೆ, ಪುನಸ್ಕಾರ, ಮದುವೆ ಹಾಗೂ ಶುಭ ಕಾರ್ಯಗಳಿಗೆ ಚಾಲನೆ ನೀಡಿ, ಪೂಜೆಗಳನ್ನು ಮಾಡುತ್ತಿದ್ದ ಸತೀಶ್‌ ಜಾರಕಿಹೊಳಿ ಅವರನ್ನು ಹೀಯಾಳಿಸಿದ್ದವರೇ ಹೆಚ್ಚಾಗಿದ್ದಾರೆ. ಆದರೆ, ಜನರು ಅವರನ್ನು ನಂಬಿ ಚುನಾವಣೆಯಲ್ಲಿ ಗೆಲ್ಲಿಸುವ ಜೊತೆಗೆ, ಅವರು ಮೂರು ವರ್ಷಗಳ ಹಿಂದೆ ನುಡಿದಿದ್ದ ಕಾಂಗ್ರೆಸ್‌ ಸರ್ಕಾರ ರಚನೆಯ ಕನಸನ್ನೂ ಸಾಕಾರ ಮಾಡಿದ್ದಾರೆ.

ಹೊಸ ಕಾರ್‌ಗೆ 2023 ಎಂದು ನಂಬರ್ ಪ್ಲೇಟ್ ತೆಗೆದುಕೊಂಡು ಮೂಢನಂಬಿಕೆಗಳಿಗೆ ಸೆಡ್ಡು ಹೊಡೆದು ಆ ಕಾರ್‌ನ್ನು 2020ರಲ್ಲೇ ಸ್ಮಶಾನದಲ್ಲೇ ಲೋಕಾರ್ಪಣೆ ಮಾಡಿದ್ದ ಶಾಸಕ ಸತೀಶ ಜಾರಕಿಹೊಳಿ ಅವರ ಭವಿಷ್ಯ ಇಂದು ಖಚಿತವಾಗಿದೆ. ಇದೀಗ ಕಾಂಗ್ರೆಸ್ ಸರ್ಕಾರ 135 ಸ್ಥಾನ ಗೆದ್ದು ರಾಜ್ಯದಲ್ಲಿ ಸರ್ಕಾರ ರಚನೆ ಮಾಡುತ್ತಿದೆ. ಸದಾ ಮೂಢನಂಬಿಕೆಗಳ ವಿರುದ್ಧ ಧ್ವನಿ ಎತ್ತುವ ಶಾಸಕ ಸತೀಶ ಜಾರಕಿಹೊಳಿ ಅವರು 2020ರಲ್ಲೇ ತಮ್ಮ "ನೂತನ ಕಾರ್‌ಗೆ 2023 ಎಂದು ನಂಬರ್ ಪ್ಲೇಟ್" ತೆಗೆದುಕೊಂಡಿದ್ದರು.

ಸ್ಮಶಾನದಲ್ಲಿ ಪೂಜೆ ಸಲ್ಲಿಸಿ ಪ್ರಚಾರಕ್ಕೆ ಚಾಲನೆ: ರಾಹುಕಾಲದಲ್ಲಿ ನಾಮಪತ್ರ ಸಲ್ಲಿಕೆ- ಸತೀಶ

ಇದು ಯಾಕೆ ಎಂದು ಪ್ರಶ್ನಿಸಿದ್ದಕ್ಕೆ ಆಗಲೇ ಅವರು, 2023ರಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದ್ದರು. ಆಗ ಜನರು ಇವರ ಮಾತಿಗೆ ನಕ್ಕು ಸುಮ್ಮನಾಗಿದ್ದರು. ಆದರೆ, ನಿಜವೂ, ಕಾಕತಾಳಿಯವೋ ಇಂದು ಅವರು ಹೇಳಿದ ಭವಿಷ್ಯ ನಿಜವಾಗಿದೆ. ಆಗ ತೆಗೆದುಕೊಂಡು 2023ರ ನಂಬರ್ ಪ್ಲೇಟ್‌ನ ಕಾರ್‌ನಲ್ಲೇ ಅವರು ಪ್ರಯಾಣ ಮಾಡುತ್ತಿದ್ದಾರೆ.

ಶಿಷ್ಯನ ಕಾರಿಗೂ ಸ್ಮಶಾನದಲ್ಲಿ ಪೂಜೆ: ಸ್ಮಶಾನದ ಕುರಿತು ಜನರಲ್ಲಿರುವ ತಪ್ಪು ನಂಬಿಕೆಯನ್ನು ಹೋಗಲಾಡಿಸಲು  ಕಾಂಗ್ರೆಸ್ ನಾಯಕ, ಕೆಪಿಸಿಸಿ ಕಾರ್ಯಧ್ಯಕ್ಷ ಸತೀಶ್ ಜಾರಕಿಹೊಳಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ. ಇದೀಗ ತಮ್ಮ ಬೆಂಬಲಿಗನ ಹೊಸ ನಿಸಾನ್ ಮ್ಯಾಗ್ನೈಟ್ ಕಾರಿಗೆ ಸತೀಶ್ ಜಾರಕಿಹೊಳಿ ಸ್ಮಶಾನದಲ್ಲಿ ಚಾಲನೆ ನೀಡಿದ್ದಾರೆ. ಜಾರಕಿಹೊಳಿ ಬೆಂಬಲಿಗನಾಗಿರುವ  ಸಂಕೇಶ್ವರದ ವಿಕ್ರಂ ಕರಣಿಂಗ್‌ರ ಸತೀಶ್ ಜಾರಕಿಹೊಳಿಯಿಂದ ಪ್ರೇರಣೆಗೊಂಡಿದ್ದಾರೆ. ಈ ಹಿಂದೆ ಜಾರಕಿಹೊಳಿ ತಮ್ಮ ಹೊಸ ಕಾರನ್ನು ಇದೇ ಸ್ಮಶಾನದಲ್ಲಿ ಚಾಲನೆ ನೀಡಿದ್ದರು. ಹೀಗಾಗಿ ತನ್ನ ಕಾರಿಗೂ ಬೆಳಗಾವಿಯ ಸದಾಶಿವನಗರ ಸ್ಮಶಾನದಲ್ಲಿ ಚಾಲನೆ ನೀಡಲು ಮನವಿ ಮಾಡಿದ್ದರು. 

ಚುನಾವಣಾ ಪ್ರಚಾರ ವಾಹನಕ್ಕೂ ಸ್ಮಶಾನದಲ್ಲಿಯೇ ಪೂಜೆ: ಇನ್ನು ವಿಧಾನಸಭಾ ಚುನಾವಣಾ ಪ್ರಚಾರದ ಕಾರ್ಯದ ವೇಳೆ ಏಪ್ರಿಲ್‌ 3ರಂದು ವಿಶೇಷ ವಾಹನವನ್ನು ತಯಾರಿಸಲಾಗಿದ್ದು, ನಾಲ್ಕೈದು ದಿನಗಳಲ್ಲಿ ಸ್ಮಶಾನದಲ್ಲಿ ಪೂಜೆ ಸಲ್ಲಿಸಿ ಚುನಾವಣಾ ಪ್ರಚಾರ ಆರಂಭಿಸಲಾಗುವುದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಹೊಳಿ (Satish Jrkiholi) ತಿಳಿಸಿದ್ದರು. ಅದರಂತೆ ಸ್ಮಶಾನದಲ್ಲಿ ವಾಹನ ಪೂಜೆ ಸಲ್ಲಿಸಿ ಚುನಾವಣಾ ಪ್ರಚಾರ ಕಣಕ್ಕೆ ಇಳಿದಿದ್ದರು. ಜೊತೆಗೆ, ಅಮವಾಸ್ಯೆ ದಿನವೇ ರಾಹು ಕಾಲದಲ್ಲಿ ನಾಮಪತ್ರ ಸಲ್ಲಿಸಲಾಗುವುದು ಎಂದು ಹೇಳಿದಂತೆ ರಾಹುಕಾಲದಲ್ಲಿ ಹೋಗಿ ನಾಮಪತ್ರ ಸಲ್ಲಿಕೆ ಮಾಡಿ ಗೆದ್ದು ಬಂದಿದ್ದಾರೆ.

ಸ್ಮಶಾನದಲ್ಲಿ ಬೆಂಬಲಿಗನ ಕಾರಿಗೆ ಚಾಲನೆ; ಮೌಢ್ಯತೆ ವಿರುದ್ಧ ಸತೀಶ್ ಜಾರಕಿಹೊಳಿ ಹೋರಾಟ!

ಮೌಢ್ಯತೆ ವಿರುದ್ಧ ಹೋರಾಟ:  ನಾವು ಹೆಚ್ಚು ಮೌಢ್ಯಕ್ಕೆ ಒತ್ತು ನೀಡುವುದಿಲ್ಲ. ಬಸವ ತತ್ವ, ಅಂಬೇಡ್ಕರ್‌, ಬುದ್ಧನ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮೌಢ್ಯಕ್ಕೆ ಸೆಡ್ಡುಹೊಡೆದು ಹಲವು ಕಾರ್ಯಕ್ರಮಗಳನ್ನು ಮಾಡಿದ್ದೇವೆ. ಅದರಂತೆ ಚುನಾವಣಾ ಪ್ರಚಾರದ ವಾಹನಕ್ಕೆ ಸ್ಮಶಾನದಲ್ಲಿ ಪೂಜೆ ಸಲ್ಲಿಸಿ ರಾಹು ಕಾಲದಲ್ಲಿ ನಾಮಪತ್ರ ಸಲ್ಲಿಸಲಾಗುವುದು ಎಂದಿದ್ದರು. ಅಲ್ಲದೇ, ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಲಕ್ಷ್ಮೀ ಹೆಬ್ಬಾಳಕರ ಪರ (Lakshmi hebbalkar) ಪ್ರಚಾರ ನಡೆಸುತ್ತೇನೆ. ಈಗಾಗಲೇ ಎರಡ್ಮೂರು ಬಾರಿ ಗ್ರಾಮೀಣ ಕ್ಷೇತ್ರದಲ್ಲಿ ಪ್ರಚಾರ ನಡೆಸಿದ್ದು, ಮತ್ತೆ ಪ್ರಚಾರಕ್ಕೆ ಹೋಗುವುದಾಗಿ ತಿಳಿಸಿದ್ದರು. 

click me!