ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಜಿಲ್ಲೆಯ ಸಚಿವರನ್ನೇ ಉಸ್ತುವಾರಿ ಸಚಿವರನ್ನಾಗಿ ಮಾಡಲು ಸ್ಥಳೀಯ ಕಾಂಗ್ರೆಸ್ ಮುಖಂಡರಿಂದ ಪಕ್ಷದ ಮೇಲೆ ತೀವ್ರ ಒತ್ತಡ ಕೇಳಿ ಬಂದಿದೆ.
ಧಾರವಾಡ (ಜೂ.9) : ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಜಿಲ್ಲೆಯ ಸಚಿವರನ್ನೇ ಉಸ್ತುವಾರಿ ಸಚಿವರನ್ನಾಗಿ ಮಾಡಲು ಸ್ಥಳೀಯ ಕಾಂಗ್ರೆಸ್ ಮುಖಂಡರಿಂದ ಪಕ್ಷದ ಮೇಲೆ ತೀವ್ರ ಒತ್ತಡ ಕೇಳಿ ಬಂದಿದೆ.
ಧಾರವಾಡ ಜಿಲ್ಲೆಯ ಪೈಕಿ ಸಂತೋಷ ಲಾಡ್(Santosh lad) ಮಾತ್ರ ಸಚಿವರಾದರೂ ಜಿಲ್ಲೆಯ ಉಸ್ತುವಾರಿ ಹೊಣೆ ಯಾರಿಗೆ ಎಂಬ ಪ್ರಶ್ನೆ ಉದ್ಭವವಾಗಿದ್ದು ಲಾಡ್ ಜೊತೆಗೆ ಪಕ್ಕದ ಜಿಲ್ಲೆಯ ಸಚಿವರಾದ ಲಕ್ಷ್ಮೇ ಹೆಬ್ಬಾಳ್ಕಕರ್(Lakshmi hebbalkar) ಪೈಪೋಟಿ ನೀಡುತ್ತಿದ್ದಾರೆ. ಸಚಿವ ಸ್ಥಾನ ನೀಡಿ ಸಮಾಧಾನದ ನಿಟ್ಟಿಸಿರು ಬಿಡುವ ಹೊತ್ತಿಗೆ ಪಕ್ಷಕ್ಕೆ ಉಸ್ತುವಾರಿಗಳ ನೇಮಕ ಕಗ್ಗಂಟಾಗಿದೆ. ಉತ್ತಮ ಆಡಳಿತ ಹಾಗೂ ಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಧಾರವಾಡ ಜಿಲ್ಲೆಯ ಪೈಕಿ ಸ್ಥಳೀಯ ಸಚಿವರನ್ನೇ ಉಸ್ತುವಾರಿ ಮಾಡಬೇಕೆಂಬ ಕೂಗು ಕೇಳಿ ಬಂದಿದೆ.
ಪಾಕಿಸ್ತಾನ, ಕಾಂಗ್ರೆಸ್ ದೂರುವುದೇ ಬಿಜೆಪಿ ಕೆಲಸ: ಸಚಿವ ಸಂತೋಷ ಲಾಡ್
ಜಿಲ್ಲೆಯ ಸಮಸ್ಯೆಗಳನ್ನು ಅರಿತು ಕೆಲಸ ಮಾಡುವ ಹಾಗೂ ಜನರೊಂದಿಗೆ ನಿರಂತರ ಸಂಪರ್ಕದಲ್ಲಿದಲ್ಲಿರುವ ಸ್ಥಳೀಯ ಸಚಿವರನ್ನು ಆಯಾ ಜಿಲ್ಲಾ ಉಸ್ತುವಾರಿ ಮಾಡಬೇಕು. ಇದರಿಂದ ಅಭಿವೃದ್ಧಿ ಕಾರ್ಯಗಳಿಗೆ ವೇಗ ದೊರೆಯುತ್ತದೆ. ಕ್ಷೇತ್ರದ ಜನರ ಕಷ್ಟಗಳಿಗೆ ಸ್ಪಂದಿಸಲು ಸಹಕಾರಿಯಾಗುತ್ತದೆ. ಬಿಜೆಪಿ ಸರ್ಕಾರದಂತೆ ಬೇರೆ ಜಿಲ್ಲೆಯ ಸಚಿವರನ್ನು ಜಿಲ್ಲಾ ಉಸ್ತುವಾರಿ ಮಾಡಿದರೆ ತೊಂದರೆ ಉಂಟಾಗುತ್ತದೆ. ಸರ್ಕಾರದ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸಲು ಸಾಧ್ಯವಾಗುವುದಿಲ್ಲ. ಬಿಜೆಪಿ ಮಾಡಿದ ಈ ತಂತ್ರದ ಪರಿಣಾಮ ಸೋಲಾಗಿದ್ದು, ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚಿಂತನೆ ಮಾಡಿ ಜಿಲ್ಲಾ ಉಸ್ತುವಾರಿ ಮಂತ್ರಿ ಆಯ್ಕೆ ಮಾಡಬೇಕು ಎಂದು ಕಾಂಗ್ರೆಸ್ ಮುಖಂಡ ಸುಧೀರ ಮುಧೋಳ ಆಗ್ರಹಿಸುತ್ತಾರೆ.
ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದು ಜನಸಾಮಾನ್ಯರಲ್ಲಿ ಹೊಸ ಆಶಾಭಾವನೆ ಹುಟ್ಟು ಹಾಕಿದೆ. ಕಾಂಗ್ರೆಸ್ ಜನಪ್ರಿಯ ಹೊಸ ಯೋಜನೆ ರೂಪಿಸಲು ಸಜ್ಜಾಗಿದೆ. ಈಗ ಜಿಲ್ಲಾ ಉಸ್ತುವಾರಿ ಸಚಿವ ಯಾರಾಗಬೇಕು ಎಂಬ ವಿಚಾರದಲ್ಲಿ ಸ್ಥಳೀಯ ಸಚಿವರಿಗೆ ಆದ್ಯತೆ ನೀಡಬೇಕು. ಜನರ ಅಪೇಕ್ಷೆಯಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಉತ್ತಮ ಆಡಳಿತ ನೀಡಬೇಕು. ಜಿಲ್ಲೆಯ ಸಮಸ್ಯೆಗಳನ್ನು ಅರಿತು ಪರಿಹರಿಸಲು ಸ್ಥಳೀಯ ಸಚಿವರನ್ನು ಜಿಲ್ಲಾ ಉಸ್ತುವಾರಿ ಮಂತ್ರಿ ಮಾಡಬೇಕು ಎಂದು ಬಸವರಾಜ ಮಾದರ ಆಗ್ರಹಿಸುತ್ತಾರೆ.
ಪಾಕಿಸ್ತಾನ, ಕಾಂಗ್ರೆಸ್ ದೂರುವುದೇ ಬಿಜೆಪಿ ಕೆಲಸ: ಸಚಿವ ಸಂತೋಷ ಲಾಡ್
ಬೆಳಗಾವಿ ಉಸ್ತುವಾರಿ ಸತೀಶ ಜಾರಕಿಹೊಳಿ(Satish jarkiholi) ಪಾಲಾಗಲಿದ್ದು, ಅದೇ ಜಿಲ್ಲೆಯ ಪ್ರಭಾವಿ ಸಚಿವರಾದ ಲಕ್ಷ್ಮೇ ಹೆಬ್ಬಾಳ್ಕಕರ್‌ಗೂ ಉಸ್ತುವಾರಿ ನೀಡಬೇಕಿದೆ. ಪಕ್ಕದ ಧಾರವಾಡ ಜಿಲ್ಲೆಗೆ ನೀಡಬೇಕೆಂಬುದು ಪಕ್ಷದ ನಿಲುವು. ಆದರೆ, ಧಾರವಾಡದಲ್ಲಿ ಸಂತೋಷ ಲಾಡ್ ಇದ್ದು, ಅವರಿಗೆ ಮತ್ತಾವ ಜಿಲ್ಲೆ ನೀಡಬೇಕೆಂಬ ಜಿಜ್ಞಾಸೆ ಪಕ್ಷದಲ್ಲಿ ಹುಟ್ಟಿಕೊಂಡಿದೆ. ಈ ಮಧ್ಯೆ ಲಾಡ್ ಅವರು ಕಳೆದ ಎರಡು ದಿನಗಳಲ್ಲಿ ಧಾರವಾಡ, ಕಲಘಟಗಿ ಹಾಗೂ ಅಳ್ನಾವರ ತಾಲೂಕು ಪ್ರಗತಿ ಪರಿಶೀಲನೆ ಮಾಡುವ ಮೂಲಕ ತಾವೇ ಉಸ್ತುವಾರಿ ಸಚಿವರಾಗುವ ಸಂಜ್ಞೆಯನ್ನು ತೋರಿಸಿದ್ದು ಕುತೂಹಲ ಮೂಡಿಸಿದೆ.