ಕೊಡಗು: ಭ್ರಷ್ಟಾಚಾರ ರಹಿತ ಸ್ವಚ್ಛ ಆಡಳಿತಕ್ಕೆ ಬದ್ಧ: ಶಾಸಕ ಎ.ಎಸ್‌. ಪೊನ್ನಣ್ಣ

By Kannadaprabha News  |  First Published Jun 9, 2023, 5:33 AM IST

ಕೊಡಗು ಜಿಲ್ಲೆಯಲ್ಲಿ ಕೆಲವು ವರ್ಷಗಳಿಂದ ಕೆಲವು ಸರ್ಕಾರಿ ಅಧಿಕಾರಿಗಳು ಮನತೋಚಿದ ರೀತಿಯಲ್ಲಿ ಕಾರ್ಯನಿರ್ವಹಿಸಿರುವುದು ಕಂಡುಬಂದಿದೆ. ಕೆಲಸ ಕಾರ್ಯದಲ್ಲಿ ಸಾರ್ವಜನಿಕರಿಗೆ ಯಾವುದೇ ಕಷ್ಟನೀಡದೆ ಕಾರ್ಯನಿರ್ವಹಿಸಿ. ಇಲ್ಲವಾದಲ್ಲಿ ಕಾನೂನಿಗೆ ಬದ್ಧನಾಗಿ ಕೕಣ ಕ್ರಮ ಜರುಗಿಸಬೇಕಾಗಬುಹುದು ಎಂದು ವಿರಾಜಪೇಟೆ ಶಾಸಕ ಎ.ಎಸ್‌. ಪೊನ್ನಣ್ಣ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.


ವಿರಾಜಪೇಟೆ (ನೂ.9) ಕೊಡಗು ಜಿಲ್ಲೆಯಲ್ಲಿ ಕೆಲವು ವರ್ಷಗಳಿಂದ ಕೆಲವು ಸರ್ಕಾರಿ ಅಧಿಕಾರಿಗಳು ಮನತೋಚಿದ ರೀತಿಯಲ್ಲಿ ಕಾರ್ಯನಿರ್ವಹಿಸಿರುವುದು ಕಂಡುಬಂದಿದೆ. ಕೆಲಸ ಕಾರ್ಯದಲ್ಲಿ ಸಾರ್ವಜನಿಕರಿಗೆ ಯಾವುದೇ ಕಷ್ಟನೀಡದೆ ಕಾರ್ಯನಿರ್ವಹಿಸಿ. ಇಲ್ಲವಾದಲ್ಲಿ ಕಾನೂನಿಗೆ ಬದ್ಧನಾಗಿ ಕೕಣ ಕ್ರಮ ಜರುಗಿಸಬೇಕಾಗಬುಹುದು ಎಂದು ವಿರಾಜಪೇಟೆ ಶಾಸಕ ಎ.ಎಸ್‌. ಪೊನ್ನಣ್ಣ(MLA AS Ponnanna) ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ವಿರಾಜಪೇಟೆ(Virajpet) ಬ್ಲಾಕ್‌ ಕಾಂಗ್ರೆಸ್‌ ವತಿಯಿಂದ ನಗರದ ಗೊಣಿಕೊಪ್ಪ ರಸ್ತೆಯಲ್ಲಿರುವ ಸೆರಿನಿಟಿ ಹಾಲ್‌ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ ಕೃತಜ್ಞತಾ ಸಭೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಸಾರ್ವಜನಿಕರು ಹಾಗೂ ಕಾರ್ಯಕರ್ತರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.

Latest Videos

undefined

 

ಐದು ವರ್ಷದಲ್ಲಿ ದುಪ್ಪಟ್ಟಾದ ಕಾಡಾನೆಗಳ ಸಂತತಿ: ಮಾನವರ ಮೇಲಿನ ದಾಳಿಯೂ ಹೆಚ್ಚಳ

ಜಾತಿ, ಧರ್ಮ, ವ್ಯಕ್ತಿ ಅಧಾರಿತವಾಗಿ ರಾಜಕೀಯ ಮಾಡದೆ ಸರ್ವರ ಸಮಸ್ಯೆಗಳನ್ನು ಒಂದೇ ತಳಹದಿಯ ಮೇಲೆ ಪರಿಹಾರ ಒದಗಿಸುವ ಕಾರ್ಯಕ್ಕೆ ಬದ್ಧನಾಗಿ ಇಂದು ಜನಪ್ರತಿನಿಧಿಯಾಗಿ ಅಯ್ಕೆಗೊಂಡಿದ್ದೇನೆ. ಒಂದು ವ್ಯಕ್ತಿಯ ಮೇಲೆ ಅಧಾರಿತವಾಗಿ ಅಯ್ಕೆಗೊಂಡಿಲ್ಲಾ ಬದಲಿಗೆ ಕ್ಷೇತ್ರದ ನಾಡಿನ ಜನತೆ ಮತ್ತು ಕಾರ್ಯಕರ್ತರ ಸಂಘಟಿತ ಶ್ರಮದ ಫಲ ಇಂದು ನಾಡಿನ ಪ್ರತಿನಿಧಿಯಾಗಿ ತಮ್ಮ ಮುಂದೆ ಇದ್ದೇನೆ. ಜಿಲ್ಲೆ ಎದುರಾಗುವ ಮಳೆಗಾಲದ ವಿಪತ್ತು ನಿರ್ವಹಣೆಗಾಗಿ ಸರ್ವರು ಸನ್ನದ್ಧರಾಗಬೇಕು ಎಂದರು.

ಭ್ರಷ್ಟಾಚಾರ ರಹಿತ ಆಡಳಿತ:

ಯಾವುದೇ ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಚಾರದ ಕೂಗು ಕೇಳಿಸಬಾರದು. ದೂರು ಬಂದಲ್ಲಿ ನಿರ್ದಾಕ್ಷೀಣ್ಯವಾಗಿ ಅಧಿಕಾರಿಗಳ ಮೇಲೆ ಕ್ರಮಕ್ಕೆ ಮುಂದಾಗುತ್ತೆನೆ ಎಂದ ಅವರು, ಇದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಅದೇಶವಾಗಿದೆ. ಸ್ವಚ್ಛ ಆಡಳಿತ ನೀಡುವುದು ನನ್ನ ಮುಖ್ಯ ಉದ್ದೇಶ, ಜನವಲಯದಲ್ಲಿ ಉತ್ತಮ ಸೇವೆ ನೀಡುವ ಅಧಿಕಾರಿಗಳನ್ನು ಸರ್ಕಾರದ ಮಟ್ಟದಲ್ಲಿ ಸಂಪರ್ಕಿಸಿ ಜಿಲ್ಲೆಗೆ ಕರೆತರುವ ಕೆಲಸ ಮಾಡುತ್ತೇನೆ ಎಂದರು.

ಜಿಲ್ಲೆ ಮತ್ತು ಕ್ಷೇತ್ರದ ಅಭಿವೃದ್ಧಿಗಾಗಿ ಕಾರ್ಯಕರ್ತರು ಸಂಯಮ ಕಳೆದುಕೊಳ್ಳದೆ ಶಿಸ್ತಿನಿಂದ ಬದ್ಧತೆಯಿಂದ ಕಾರ್ಯನಿರ್ವಹಿಸುವಂತೆ ಸಲಹೆ ನೀಡಿದರು.

ವಿಧಾನ ಪರಿಷತ್‌ ಮಾಜಿ ಸದಸ್ಯೆ ವೀಣಾ ಅಚ್ಚಯ್ಯ ಅವರು ಮಾತನಾಡಿ, ಜಿಲ್ಲೆಯ ಮತ್ತು ಕ್ಷೇತ್ರದ ಜನತೆಯ ಅಶೋತ್ತರಗಳಿಗೆ ಶಾಸಕರು ಸ್ಪಂದಿಸಿಬೇಕು. ಜಿಲ್ಲೆಯ ಜ್ವಲಂತ ಸಮಸ್ಯೆಗಳ ಬಗ್ಗೆ ತಿಳಿದು ಸಮಸ್ಯೆಗೆ ಪರಿಹಾರ ದೊರಕಿಸುವಲ್ಲಿ ಶ್ರಮವಹಿಸಬೇಕು ಎಂದು ಹೇಳಿದರು.

ವಿಧಾನ ಪರಿಷತ್‌ ಮಾಜಿ ಸದಸ್ಯ ಚೆಪ್ಪುಡಿರ ಅರುಣ್‌ ಮಾಚಯ್ಯ ಮಾತನಾಡಿ, ಕಾರ್ಯಕರ್ತರ, ಮುಖಂಡರ ಸಂಘಟಿತ ಹೋರಾಟ ಶ್ರಮದಿಂದ ಇಂದು ಕಾಂಗ್ರೇಸ್‌ ಪಕ್ಷ ಮರು ಸ್ಥಾಪನೆಯಾಗಿದೆ. ಮುಂಬರುವ ಸ್ಥಳೀಯ ಚುನಾವಣೆಗಳಲ್ಲಿಯು ಸಂಘಟಿತವಾಗಿ ಕಾರ್ಯತಂತ್ರ ರೂಪಿಸಬೇಕು. ಪಕ್ಷಕ್ಕಾಗಿ ದುಡಿದ ಹಿರಿಯರು ಮತ್ತು ಕಿರಿಯರು ಕಾರ್ಯಕರ್ತರನ್ನು ಗುರುತಿಸಿ ಸೂಕ್ತ ಸ್ಥಾನಮಾನ ನೀಡಲು ಶಾಸಕರು ಮುಂದಾಗಬೇಕು ಎಂದರು.

ಕೊಡಗು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಧರ್ಮಜ ಉತ್ತಪ್ಪ, ಜಿಲ್ಲಾ ಪ್ರಚಾರ ಸಮಿತಿಯ ಅಧ್ಯಕ್ಷ ಟಿ.ಪಿ. ರಮೇಶ್‌, ಜಿಲ್ಲಾ ಕಾಂಗ್ರೆಸ್‌ ಉಪಧ್ಯಕ್ಷ ಉಸ್ಮಾನ್‌, ಎಐಸಿಸಿ ಸದಸ್ಯರಾದ ತಾರಾ ಅಯ್ಯಮ್ಮ ಮಾತನಾಡಿದರು. ವಕೀಲ ನರೇಂದ್ರ ಕಾಮತ್‌ ಪ್ರಾಸ್ತಾವಿಕವಾಗಿ ಮಾತನಾಡಿದರು.

ವಿರಾಜಪೇಟೆ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿವಿಧ ಘಟಕ ಮತ್ತು ಸಂಘಟನೆಗಳು ಶಾಸಕರಿಗೆ ಕೊಡಗಿನ ಸಾಂಪ್ರದಾಯಿಕ ಒಡಿಕತ್ತಿ ನೀಡಿ ಪೇಟ ತೊಡಸಿ ಸನ್ಮಾನಿಸಲಾಯಿತು.

ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಗೆ ಗೋವಿಂದರಾಜು, ನಜೀರ್‌ ನೇಮಕ

ನಾಪೋಕ್ಲು ಬ್ಲಾಕ್‌ ಅಧ್ಯಕ್ಷ ಇಸ್ಮಾಯಿಲ್‌, ವಿರಾಜಪೇಟೆ ಬ್ಲಾಕ್‌ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಕೊಳುಮಂಡ ರಫೀಕ್‌, ಪ್ರಚಾರ ಸಮಿತಿ ಅಧ್ಯಕ್ಷ ಹನೀಫ್‌, ಒಬಿಸಿ ಘಟಕದ ಅಧ್ಯಕ್ಷ ಸಿ.ಕೆ. ಪೃಥ್ವಿನಾಥ್‌, ಎಸ್‌ಸಿ ಘಟಕದ ಅಧ್ಯಕ್ಷ ಮಹದೇವ್‌, ವಿರಾಜಪೇಟೆ ನಗರ ಕಾಂಗ್ರೆಸ್‌ ಅಧ್ಯಕ್ಷ ಮಾದಂಡ ತಿಮ್ಮಯ್ಯ ಮತ್ತು ಇತರರ ಮುಖಂಡರು ಉಪಸ್ಥಿತರಿದ್ದರು.

ಚಿತ್ರ ಅಳವಡಿಸಲಾಗಿದೆ: ಕಾರ್ಯಕ್ರಮ ಉದ್ದೇಶಿಸಿ ಮಾತನಾಡುತ್ತಿರುವ ಶಾಸಕರು ಎ.ಎಸ್‌. ಪೊನ್ನಣ್ಣ, ಕಾರ್ಯಕರ್ತರಿಂದ ಸನ್ಮಾನ, ಕಾರ್ಯಕ್ರಮದ ವೇದಿಕೆಯಲ್ಲಿ ಉಪಸ್ಥಿತಿರಿದ್ದ ಗಣ್ಯರು, ಕಾರ್ಯಕ್ರಮದಲ್ಲಿ ಹಾಜರಿದ್ದ ಕಾರ್ಯಕರ್ತರು.

click me!