ಕಾವೇರಿ ನೀರಿನ ವಿಚಾರದಲ್ಲಿ ಯಾರೂ ರಾಜಕೀಯ ಮಾಡಬಾರದು. ನಾನು ಚಿಕ್ಕಂದಿನಿಂದಲೂ ಹೋರಾಟವನ್ನು ನೋಡಿಕೊಂಡೇ ಬಂದಿದ್ದೇನೆ. ವಿವಾದದ ಹಿಂದೆ ರಾಜಕೀಯ ಉದ್ದೇಶ ಸಾಧನೆ ಅಡಗಿರುವುದೇ ಇಂದಿನ ಸಂಕಷ್ಟ ಪರಿಸ್ಥಿತಿಗೆ ಕಾರಣ ಎಂದು ನಟ, ನಿರ್ದೇಶಕ ಪ್ರೇಮ್ ಆರೋಪಿಸಿದರು.
ಮಂಡ್ಯ (ಸೆ.30): ಕಾವೇರಿ ನೀರಿನ ವಿಚಾರದಲ್ಲಿ ಯಾರೂ ರಾಜಕೀಯ ಮಾಡಬಾರದು. ನಾನು ಚಿಕ್ಕಂದಿನಿಂದಲೂ ಹೋರಾಟವನ್ನು ನೋಡಿಕೊಂಡೇ ಬಂದಿದ್ದೇನೆ. ವಿವಾದದ ಹಿಂದೆ ರಾಜಕೀಯ ಉದ್ದೇಶ ಸಾಧನೆ ಅಡಗಿರುವುದೇ ಇಂದಿನ ಸಂಕಷ್ಟ ಪರಿಸ್ಥಿತಿಗೆ ಕಾರಣ ಎಂದು ನಟ, ನಿರ್ದೇಶಕ ಪ್ರೇಮ್ ಆರೋಪಿಸಿದರು. ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ನಡೆಯುತ್ತಿರುವ ಕಾವೇರಿ ಹೋರಾಟದಲ್ಲಿ ಪಾಲ್ಗೊಂಡು ಮಾತನಾಡಿ, ನಮ್ಮಲ್ಲಿ ಸರಿಯಾದ ಪ್ರಮಾಣದಲ್ಲಿ ಮಳೆಯಾಗಿಲ್ಲ. ಜಲಾಶಯಗಳು ಭರ್ತಿಯಾಗಿಲ್ಲ. ಹಾಗಾಗಿ ನೀರು ಬಿಡಲು ಸಾಧ್ಯವಿಲ್ಲವೆಂದು ನೇರವಾಗಿ ಹೇಳಿ.
ನೀರಿಲ್ಲ ಎಂದು ಹೇಳಿಕೊಂಡು ಪದೇ ಪದೇ ನೀರು ಬಿಡುಗಡೆ ಮಾಡುತ್ತಿರುವುದೇಕೆ ಎಂದು ಪ್ರಶ್ನಿಸಿದರು. ಈಗ ಲೋಕಸಭೆ ಚುನಾವಣೆ ಬರುತ್ತಿದೆ. ಅದಕ್ಕೆ ರಾಜಕೀಯವನ್ನು ಮುಂದಿಟ್ಟುಕೊಂಡು ಎಲ್ಲಾ ಪಕ್ಷಗಳು ಅವರ ಅನುಕೂಲಕ್ಕೆ ತಕ್ಕಂತೆ ವಿವಾದವನ್ನು ಬಳಸಿಕೊಳ್ಳುತ್ತಿವೆ. ಜನರ ಕಷ್ಟ ಬೇಕಿಲ್ಲ, ರೈತರ ಬದುಕನ್ನು ರಕ್ಷಣೆ ಮಾಡುವುದು ಬೇಕಿಲ್ಲ. ಚುನಾವಣೆಗೆ ಸೀಮಿತವಾಗಿ ರಾಜಕೀಯ ಮಾಡಿ. ಆದರೆ, ನೀರಿನ ವಿಚಾರದಲ್ಲಿ ರಾಜಕೀಯ ಮಾಡುವುದು ಅಸಹ್ಯ ಹುಟ್ಟಿಸುತ್ತದೆ ಎಂದು ಹೇಳಿದರು. ಸಂಸದರು ಈ ವಿಚಾರದಲ್ಲಿ ಏಕೆ ಮೌನವಾಗಿದ್ದಾರೆ. ಬೀದಿಗಿಳಿದು ಏಕೆ ಹೋರಾಟ ಮಾಡುತ್ತಿಲ್ಲ.
ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಸಿದ್ದರಾಮಯ್ಯಗೆ ಪ್ರಯಾಸ: ಜನಾರ್ದನ ರೆಡ್ಡಿ
ನಿಮಗೆ ರೈತರು, ಜನರ ಕಷ್ಟ ಬೇಕಿಲ್ಲವೇ. ನಿಮ್ಮನ್ನು ಆರಿಸಿ ಕಳುಹಿಸಿದ ಜನರಿಗೆ ನೀವು ಕೊಡುವ ಕೊಡುಗೆ ಇದೇನಾ. ಬಂಗಾರಪ್ಪ ಒಬ್ಬರೇ ಕಾವೇರಿ ನೀರು ಬಿಡುವುದಿಲ್ಲವೆಂದು ಸುಪ್ರೀಂಕೋರ್ಟ್ ಆದೇಶವನ್ನೇ ಧಿಕ್ಕರಿಸಿ ಸುಗ್ರೀವಾಜ್ಞೆ ತಂದರು. ಅದು ನಿಜವಾದ ಧೈರ್ಯ. ನಂತರ ಏನಾಯಿತೋ ಅದು ಬೇಕಿಲ್ಲ. ಅಂತಹದೊಂದು ಇಚ್ಛಾಶಕ್ತಿ, ಬದ್ಧತೆ ಅಧಿಕಾರಸ್ಥರಿಗೆ ಇಲ್ಲದಿದ್ದರೆ ನ್ಯಾಯ ಸಿಗಲು ಹೇಗೆ ಸಾಧ್ಯ. ಅದಕ್ಕಾಗಿ ಎಲ್ಲರೂ ಒಗ್ಗಟ್ಟಾಗಿ ಹೋರಾಡಿ ನ್ಯಾಯ ಪಡೆಯಬೇಕಿದೆ ಎಂದು ಹೇಳಿದರು.