ಕಾವೇರಿ ನೀರು ಬಿಡುಗಡೆ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರ ರಾಜ್ಯದ ಜನರ ಬದುಕನ್ನು ಹಾಳು ಮಾಡಿ ತಮಿಳುನಾಡಿನೊಂದಿಗೆ ರಾಜಕೀಯ ಹಿತಾಸಕ್ತಿಯನ್ನು ಪ್ರದರ್ಶಿಸುತ್ತಿದೆ ಎಂದು ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಆರೋಪಿಸಿದರು.
ಮಂಡ್ಯ (ಸೆ.30): ಕಾವೇರಿ ನೀರು ಬಿಡುಗಡೆ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರ ರಾಜ್ಯದ ಜನರ ಬದುಕನ್ನು ಹಾಳು ಮಾಡಿ ತಮಿಳುನಾಡಿನೊಂದಿಗೆ ರಾಜಕೀಯ ಹಿತಾಸಕ್ತಿಯನ್ನು ಪ್ರದರ್ಶಿಸುತ್ತಿದೆ ಎಂದು ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಆರೋಪಿಸಿದರು. ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ನಡೆಯುತ್ತಿರುವ ಕಾವೇರಿ ಹೋರಾಟದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ತಮಿಳುನಾಡು ಮುಖ್ಯಮಂತ್ರಿಯೊಂದಿಗಿನ ಸ್ನೇಹ, ಮೈತ್ರಿಕೂಟದ ಸಂಬಂಧವನ್ನು ಗಟ್ಟಿಯಾಗಿ ಉಳಿಸಿಕೊಳ್ಳಬೇಕೆಂಬ ಉದ್ದೇಶದಿಂದ ಪ್ರಾಧಿಕಾರ, ಸುಪ್ರೀಂಕೋರ್ಟ್ ಹೇಳುವ ಮೊದಲೇ ನೀರು ಬಿಡುಗಡೆ ಮಾಡಿದ್ದಾರೆ ಎಂದು ದೂಷಿಸಿದರು.
ನಮ್ಮಲ್ಲಿ ನೀರಿಲ್ಲ, ‘ನೀರು ಬಿಡುಗಡೆ ಸಾಧ್ಯವೇ ಇಲ್ಲ’ ಎಂದು ಹೇಳುವ ಧೈರ್ಯವನ್ನೇ ರಾಜ್ಯಸರ್ಕಾರ ಇದುವರೆಗೂ ಪ್ರದರ್ಶಿಸಿಲ್ಲ. ಆದೇಶಗಳನ್ನು ಪಾಲಿಸುತ್ತಾ ನೀರು ಬಿಡುಗಡೆ ಮಾಡುತ್ತಲೇ ಇದೆ. ವಿವಾದದಲ್ಲಿ ತಮಿಳುನಾಡು ಸಿಎಂ ಮತ್ತು ಕರ್ನಾಟಕದ ಸಿಎಂ ನಡುವೆ ಜಗಳವೇ ಇಲ್ಲ. ಅಂದ ಮೇಲೆ ಪ್ರಧಾನಿ ಮಧ್ಯಸ್ಥಿಕೆ ವಹಿಸುವುದಾದರೂ ಹೇಗೆ ಎಂದು ಪ್ರಶ್ನಿಸಿದರು. ಕರ್ನಾಟಕದಲ್ಲಿ ರೈತರು, ಜನರು ಸಂಕಷ್ಟದಲ್ಲಿದ್ದಾರೆ. ನಾವುಗಳು ನೀರು ಬಿಡುಗಡೆ ವಿರೋಧಿಸಿ ಬೀದಿಗಿಳಿದಿದ್ದೇವೆ. ಅಧಿಕಾರದಲ್ಲಿರುವವರು ನಮ್ಮ ನೀರನ್ನು ಹಿಡಿದಿಟ್ಟುಕೊಳ್ಳದೆ ಬಿಡುಗಡೆ ಮಾಡಿ ನಮ್ಮ ಜನರನ್ನೇ ಬೀದಿಗೆ ತಳ್ಳಿದ್ದಾರೆ.
ಅಧಿಕಾರದಲ್ಲಿದ್ದಾಗ ಕಾವೇರಿ ನೀರು ಬಿಟ್ಟು ಇಂದು ವಿರೋಧಿಸೋದು ತಪ್ಪು: ಸಚಿವ ಮಧು ಬಂಗಾರಪ್ಪ
ನಮಗೆ ಕುಡಿಯಲು ನೀರಿಲ್ಲದಿರುವಾಗ ತಮಿಳುನಾಡು ಬೆಳೆಗಳಿಗೆ ನೀರು ಹರಿಸಿಕೊಳ್ಳುತ್ತಿರುವುದು ವಿಪರ್ಯಾಸವೆ ಸರಿ. ಇದುವರೆಗೂ ಕಾವೇರಿ ಪರ ವಾದ ಮಾಡುವ ವಕೀಲರಿಗೆ 500೦೦ ಕೋಟಿ ರು. ಹಣ ಕೊಡಲಾಗಿದೆ. ಇಷ್ಟೊಂದು ಹಣ ಪಡೆದು ಕರ್ನಾಟಕದ ಪರ ವಾದ ಮಂಡಿಸಲಾಗುತ್ತಿಲ್ಲವೇ? ನಮಗೆ ನೀರು ಬೇಕಾಗಿದೆ ಎಂದು ಬಲವಾಗಿ ಹೇಳೋಕೆ ಆಗುತ್ತಿಲ್ಲವೇ. ನೀವು ಸಮರ್ಥವಾದ ವಾದ ಮಂಡಿಸದೆ ಕೇಂದ್ರದ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಾ ರಾಜಕೀಯ ಹಿತಾಸಕ್ತಿ ಕಾಪಾಡಿಕೊಳ್ಳುತ್ತಿದ್ದೀರಿ ಎಂದು ಟೀಕಿಸಿದರು.