ನಾಳೆ ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಬಿಜೆಪಿಗೆ ಸೇರಲಿರುವ ನಟ ಕಿಚ್ಚ ಸುದೀಪ್. ಬಿಜೆಪಿ ಪರ ಪ್ರಚಾರದ ಸ್ಟಾರ್ ಕ್ಯಾಂಪೇನ್ ಕೂಡ ಆಗಲಿದ್ದಾರೆ ಕಿಚ್ಚ ಸುದೀಪ್.
ಬೆಂಗಳೂರು(ಏ.04): ಸ್ಯಾಂಡಲ್‌ವುಡ್ ನಟ ಕಿಚ್ಚ ಸುದೀಪ್ ಅವರು ಬಿಜೆಪಿಗೆ ಸೇರುತ್ತಾರೆ ಅಂತ ಹೇಳಲಾಗುತ್ತಿದೆ. ನಟ ಸುದೀಪ್ ಬಿಜೆಪಿ ಸೇರುವ ಬಗ್ಗೆ ನಾಳೆ(ಬುಧವಾರ) ಬಿಜೆಪಿ ಚುನಾವಣಾ ಪ್ರಚಾರ ಸಮಿತಿ ಸುದ್ದಿಗೋಷ್ಠಿ ನಡೆಸಲಿದೆ ಅಂತ ತಿಳಿದು ಬಂದಿದೆ. ಮಧ್ಯಾಹ್ನ 1.30 ಕ್ಕೆ ಸುದ್ದಿಗೋಷ್ಠಿ ನಡೆಯಲಿದ್ದು ಅಧಿಕೃತವಾಗಿ ಸುದೀಪ್ ಪಕ್ಷಕ್ಕೆ ಸೇರಲಿದ್ದಾರೆ.
ನಾಳೆ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಟ ಕಿಚ್ಚ ಸುದೀಪ್ ಬಿಜೆಪಿಗೆ ಸೇರಲಿದ್ದಾರೆ. ಬಿಜೆಪಿ ಪರ ಪ್ರಚಾರದ ಸ್ಟಾರ್ ಕ್ಯಾಂಪೇನ್ ಕೂಡ ಆಗಲಿದ್ದಾರೆ ಕಿಚ್ಚ ಸುದೀಪ್. ಬಿಜೆಪಿ ಸೇರುವ ಬಗ್ಗೆ ಕಿಚ್ಚ ಸುದೀಪ್ ಆಪ್ತ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ಕಾಂಗ್ರೆಸ್ ಎರಡನೇ ಪಟ್ಟಿಯಲ್ಲಿ ಲಿಂಗಾಯತರಿಗೆ ಹೆಚ್ಚು ಸೀಟು ನೀಡುವಂತೆ ಹೈಕಮಾಂಡ್ ಮಟ್ಟದಲ್ಲಿ ಲಾಭಿ!
ಸುದೀಪ್ ಅವರನ್ನ ಬಿಜೆಪಿಗೆ ಕರೆ ತರಲು ಎರಡು ತಿಂಗಳಿಂದ ಪ್ರಯತ್ನ ನಡೆಯುತ್ತಿತ್ತು. ಸಿಎಂ ನೇತೃತ್ವದಲ್ಲೇ ಮಾತುಕತೆ ಆಗಿದೆ. ಒಳ್ಳೆಯ ಫಲಿತಾಂಶದ ನಿರೀಕ್ಷೆ ಪಕ್ಷಕ್ಕಿದೆ. ಹೀಗಾಗಿ ಸುದೀಪ್ ಬಿಜೆಪಿ ಸೇರ್ಪಡೆ ಬಗ್ಗೆ ಬಿಜೆಪಿ ಮೂಲಗಳ ಮಾಹಿತಿ ಲಭ್ಯವಾಗಿದೆ.
ನಾಳೆ ಮಧ್ಯಾಹ್ನ 1-30ಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಅಬರು ಪತ್ರಿಕಾಗೋಷ್ಠಿ ನಡೆಸುವ ಸಾಧ್ಯತೆ ಇದೆ. ಚುನಾವಣಾ ಪ್ರಚಾರ ಕುರಿತಾದ ಧ್ವನಿ ಸುರುಳಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಧ್ವನಿ ಸುರಳಿ ಬಿಡುಗಡೆ ಕಾರ್ಯಕ್ರಮಕ್ಕೆ ನಟ ಸುದೀಪ್‌ಗೆ ಆಹ್ವಾನನಾ?, ಅಥವಾ ಸುದೀಪ್ ಅವರು ಬಿಜೆಪಿ ಸೇರುವ ಬಗ್ಗೆ ಪತ್ರಿಕಾಗೋಷ್ಠಿನಾ? ಎಂಬುದರ ಬಗ್ಗೆ ನಾಳೆ ಉತ್ತರ ಸಿಗಲಿದೆ.
ಸಿದ್ದರಾಮಯ್ಯ ಸಿಎಂ ಆಗಲೆಂದು ಶಬರಿಮಲೆಗೆ ಕಾಲ್ನಡಿಗೆ ಹೊರಟ ಅಭಿಮಾನಿಗಳು..!
ನಗರದ ಕ್ಯಾಪಿಟಲ್ ಹೊಟೇಲ್‌ನಲ್ಲಿ ಪತ್ರಿಕಾಗೋಷ್ಠಿ ನಡೆಯಲಿದೆ. ಸಿಎಂ ಜೊತೆಗೆ ವೇದಿಕೆ ಸುದೀಪ್ ಹಂಚಿಕೊಳ್ಳಲಿದ್ದಾರೆ. ಆದರೆ ಪಕ್ಷ ಸೇರ್ಪಡೆ ಬಗ್ಗೆ ಮಾತುಕತೆ ಇನ್ನೂ ಅಂತಿಮವಾಗಿಲ್ಲ. ಸುದೀಪ್ ಪಕ್ಷಕ್ಕೆ ಕರೆ ತರಲು ತೆರೆಮರೆಯಲ್ಲಿ ಸಚಿವರಾದಿಯಾಗಿ ಹಲವು ನಾಯಕರ ಚರ್ಚೆ ನಡೆಸಿದ್ದಾರೆ. ಈಗಾಗಲೇ ಬಿಜೆಪಿ ನಾಯಕರು ಹಲವು ಸುತ್ತಿನ ಮಾತುಕತೆ ನಡೆಸಿದ್ದಾರೆ. ಪಕ್ಷ ಸೇರ್ಪಡೆ ಬಗ್ಗೆ ಸುದೀಪ್ ಇನ್ನೂ ಗ್ರೀನ್ ಸಿಗ್ನಲ್ ಕೊಟ್ಟಿಲ್ಲ. ಪ್ರಯತ್ನ ಮುಂದುವರಿದಿದೆ ಅಂತ ಹೇಳಲಾಗುತ್ತಿದೆ.
ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.