ಸಿದ್ದರಾಮಯ್ಯ ಸಿಎಂ ಆಗಲೆಂದು ಶಬರಿಮಲೆಗೆ ಕಾಲ್ನಡಿಗೆ ಹೊರಟ ಅಭಿಮಾನಿಗಳು..!

By Kannadaprabha News  |  First Published Apr 4, 2023, 10:30 PM IST

ಶಹಾಪುರದಿಂದ ಶಬರಿಮಲೆಗೆ ಕಾಲ್ನಡಿಗೆ ಮೂಲಕ ತೆರಳಿದ ಅಭಿಮಾನಿಗಳು, ದರ್ಶನಾಪೂರ್‌, ಸಿದ್ರಾಮಯ್ಯಅವರ ಭಾವಚಿತ್ರ ಕೈಯಲ್ಲಿ ಹಿಡಿದು ಪಾದಯಾತ್ರೆ. 


ಶಹಾಪುರ(ಏ.04):  ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬರಲಿ, ಕಾಂಗ್ರೆಸ್‌ ಪಕ್ಷದ ಶರಣ ಬಸಪ್ಪಗೌಡ ದರ್ಶನಾಪೂರ್‌ ಅವರು ಚುನಾವಣೆಯಲ್ಲಿ ಶಾಸಕರಾಗಿ ಗೆಲುವು ಸಾಧಿಸಿ ಸಚಿವರಾಗಲಿ, ಸಿದ್ರಾಮಯ್ಯನವರು ಮತ್ತೊಮ್ಮೆ ಸಿಎಂ ಆಗಲೆಂದು ಹರಕೆ ಹೊತ್ತ ಅವರ ಅಭಿಮಾನಿ ಬಳಗ ಶಹಾಪುರ ಶಬರಿಮಲೆಗೆ ಕಾಲ್ನಡಿಗೆ ಮೂಲಕ ತೆರಳಿದ್ದಾರೆ.

ಶಹಾಪುರ ನಗರದ ಯುವ ಉದ್ಯಮಿ ಗುರು ಮಣಿಕಂಠ ಮತ್ತು ಬಸನಗೌಡ ಅವರು ದರ್ಶನಾಪೂರ್‌ ಮತ್ತು ಸಿದ್ದರಾಮಯ್ಯನವರ ಕಟ್ಟಾಭಿಮಾನಿಗಳಾಗಿದ್ದು, ಅವರ ಐದು ಜನರ ತಂಡ ಸಿದ್ದರಾಮಯ್ಯ ಹಾಗೂ ದರ್ಶನಾಪೂರ್‌ ಅವರಿದ್ದ ಭಾವಚಿತ್ರ ಕೈಯಲ್ಲಿಡಿದು ಶಬರಿಮಲೆ ಬೆಟ್ಟವನ್ನು ಸುಮಾರು 14 ಕಿ. ಮೀ. ಕಾಲ್ನಡಿಗೆ ಮೂಲಕ ಪಾದಯಾತ್ರೆ ನಡೆಸಿ ಅಯ್ಯಪ್ಪ ಸ್ವಾಮಿಯ ಸನ್ನಿಧಾನಕ್ಕೆ ತೆರಳಿ ದರ್ಶನ ಪಡೆದು ಅಯ್ಯಪ್ಪ ಸ್ವಾಮಿಯ ಕೃಪಾಶಿರ್ವಾದದಿಂದ ನಮ್ಮೆಲ್ಲಾ ಕೋರಿಕೆಗಳು ಈಡೇರಿಸುವಂತೆ ಸ್ವಾಮಿ ಸನ್ನಿಧಿಯಲ್ಲಿ ಪ್ರಾರ್ಥಿನೆ ಸಲ್ಲಿಸಿದ್ದಾರೆ ಎಂದು ಅಭಿಮಾನಿ ಬಳಗದವರು ತಿಳಿಸಿದ್ದಾರೆ.

Latest Videos

undefined

ಶಹಾಪುರ ಕ್ಷೇತ್ರದ ಬಿಜೆಪಿ ಟಿಕೆಟ್‌ಗೆ ಮೂವರು ಆಕಾಂಕ್ಷಿಗಳ ಫೈಟ್, ಟಿಕೆಟ್‌ಗಾಗಿ ಬೆಟ್ಟಿಂಗ್!

ಸಿದ್ರಾಮಯ್ಯನವರು ಸಿಎಂ ಆಗಬೇಕು ಮತ್ತು ಅವರ ಸಂಪುಟದಲ್ಲಿಯೇ ನಮ್ಮ ಶಾಸಕರಾದ ದರ್ಶನಾಪೂರ್‌ ಸಚಿವರಾಗಬೇಕೆಂಬುದು ನಮ್ಮ ಐದು ಜನರ ತಂಡ ಹರಕೆ ಹೊತ್ತಿದ್ದು, ಅವರ ಭಾವಚಿತ್ರದೊಂದಿಗೆ ಶಬರಿಮಲೆ ಬೆಟ್ಟಹತ್ತಿದ್ದು, ಅಯ್ಯಪ್ಪ ಸ್ವಾಮಿ ದೇಗುಲದ ಪವಿತ್ರ 18 ಮೆಟ್ಟಿಲನ್ನು ಹತ್ತಿ ವಿಶೇಷ ಪೂಜೆ ಸಲ್ಲಿಸಿದ್ದೇವೆ ಎಂದು ದರ್ಶನಾಪೂರ್‌ ಅಭಿಮಾನಿ ಬಳಗದ ಯುವ ಉದ್ಯಮಿ ಗುರು ಮಣಿಕಂಠ, ಸಿದ್ದು ದರ್ಶನಾಪೂರ್‌ ತಿಳಿಸಿದ್ದಾರೆ.

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

click me!