ದೇಶದಲ್ಲಿ ಸನಾತನ ಧರ್ಮ ನಿರ್ಮೂಲನೆಗೆ ಉದಯನಿಧಿ ಮಾತ್ರವಲ್ಲ, ಅವರಪ್ಪ ಬಂದ್ರೂ ಆಗಲ್ಲ. ಅವರ ಅಜ್ಜನ ಕೈಯಲ್ಲೂ ಆಗಿಲ್ಲವೆಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ತಿರುಗೇಟು ನೀಡಿದರು.
ಬಾಗಲಕೋಟೆ (ಸೆ.06): ಸನಾತನ ಧರ್ಮದ ಬಗ್ಗೆ ಟೀಕೆ ಮಾಡಿದ್ರೆ ಇವ್ರನ್ನ ಅಯೋಗ್ಯರು ಅಂತಾ ಕರಿಬೇಕು. ಸನಾತನ ಧರ್ಮ ನಾಶ ಆಗೋವರೆಗೂ ಬಿಡಲ್ವಂತೆ. ಅವರಪ್ಪನ ಕೈಯಲ್ಲೂ ಆಗಲ್ಲ, ಅವರ ಅಜ್ಜನ ಕೈಯಲ್ಲೂ ಆಗಿಲ್ಲ ಎಂದು ತಮಿಳುನಾಡು ಸಚಿವ ಉದಯ್‌ನಿಧಿ ಸ್ಟಾಲಿನ್‌ಗೆ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ತಿರುಗೇಟು ನೀಡಿದ್ದಾರೆ.
ಈ ಕುರಿತು ಬಾಗಲಕೋಟೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಸ್ಲಿಂ ವೋಟ್ ಬೇಕು, ಇದನ್ನ ಬಿಟ್ರೆ ಇನ್ನೇನು ಬೇಕಿಲ್ಲ ಇವ್ರಿಗೆ. ಖರ್ಗೆ, ಉದಯನಿಧಿ ಏನು ದೊಡ್ಡ ಮನುಷ್ಯ ಅಲ್ಲ. ಉದಯನಿಧಿ ಹೆಸರು ಕೇಳಿದ್ರಾ ನೀವು? ಹೆಸರು ಬರಲಿ ಅನ್ನೋದಕ್ಕೇನೆ ಹಿಂದು, ಸನಾತನ ಧರ್ಮದ ಬಗ್ಗೆ ಟೀಕೆ ಮಾಡ್ತಾರೆ. ಇವರು ಯಾವೂರ ದಾಸ ಅನ್ನೋದು ಯಾರಿಗೂ ಗೊತ್ತಿರಲಿಲ್ಲ. ಸನಾತನ ಧರ್ಮ ಅಂತಾ ಹೇಳಿಕೊಳ್ಳೋಕೆ ನಮಗೆ ಹೆಮ್ಮೆಯಾಗಿದೆ. ಜಗತ್ತಿನಲ್ಲಿ ಶಾಂತಿಗಾಗಿ ಯಾಗ, ಯಜ್ಞ ಮಾಡಿದ ಧರ್ಮ ಹಿಂದು ಧರ್ಮ. ಸನಾತನ ಧರ್ಮದ ಬಗ್ಗೆ ಟೀಕೆ ಮಾಡಿದ್ರೆ ಇವ್ರನ್ನ ಅಯೋಗ್ಯರು ಅಂತಾ ಕರಿಬೇಕು ಎಂದು ಕಿಡಿಕಾರಿದರು.
ಮುಖ್ಯಮಂತ್ರಿ ಮಗನಿಗೆ ಬುದ್ಧಿ ಹೇಳಿದ ಬಿಗ್‌ಬಾಸ್ ವಿನ್ನರ್ ಪ್ರಥಮ್: ಎಲ್ಲ ಧರ್ಮ ಗೌರವಿಸುವಂತೆ ತಾಕೀತು
ಸನಾತನ ಧರ್ಮ ನಾಶ ಆಗೋವರೆಗೂ ಬಿಡಲ್ವಂತೆ. ಅವರಪ್ಪನ ಕೈಯಲ್ಲೂ ಆಗಲ್ಲ, ಅವರ ಅಜ್ಜನ ಕೈಯಲ್ಲೂ ಆಗಿಲ್ಲ. ತಮಿಳುನಾಡಿನಲ್ಲಿ ಮುಸ್ಲಿಂರು ಜಾಸ್ತಿ, ಅವ್ರನ್ನ ತೃಪ್ತಿ ಪಡಿಸಬೇಕು. ಮುಸ್ಲಿಂ ವೋಟ್ ಬೇಕು ಅಂತ ಮಾತಾಡಿಕೊಂಡಿದ್ದಾರೆ. ಹೀಗೆ, ಮಾತಾಡಿಕೊಂಡು ದೇಶದಲ್ಲಿ ಕಾಂಗ್ರೆಸ್ ನಿರ್ಣಾಮ ಆಯ್ತು. ಧರ್ಮವನ್ನು ಟೀಕೆ ಮಾಡಿದ ಯಾರೂ ಉಳಿದಿಲ್ಲ. ಕೆಲವರಿಗೆ ಇತ್ತೀಚೆಗೆ ರಾಮಾಯಣ, ಮಹಾಭಾರತ ಓದಿ ಬುದ್ದಿ ಬರ್ತಿದೆ ಎಂದು ಹೇಳಿದರು.
ಸಿದ್ದರಾಮಯ್ಯ ದೇವಸ್ಥಾನಕ್ಕೆ ಹೋಗಿಲ್ವಾ? ಇನ್ನು ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಂಚೆ ಹಣೆಗೆ ಕುಂಕುಮ ಇಟ್ಕೊಳ್ಳೋಕೆ ಒಪ್ಪುತ್ತಿರಲಿಲ್ಲ. ಕೇಸರಿ ಪೇಟ ಕಿತ್ತು ಬಿಸಾಕಿದ್ದರು. ಆದರೆ, ಬಜೆಟ್ ಮಂಡನೆಗೆ ಮುನ್ನ ದೇವಸ್ಥಾನ ಹೋಗಿ ಬರಲಿಲ್ವ? ನಾಮಿನೇಶನ್ ಮಾಡೋ ಮೊದಲು ದೇವಸ್ಥಾನ ಹೋಗಿ ಬಂದರಲ್ವಾ? ಇದು ಸನಾತನ ಧರ್ಮ ಫಾಲೋ ಮಾಡ್ತೀದಿನಿ ಅನ್ನೋ ಅರ್ಥ ತಾನೆ? ಚಾಮುಂಡೇಶ್ವರಿಗೆ ಬೈಯ್ತೀನಿ ನನಗೆ ಯಾರೂ ವೋಟ್ ಕೊಡಬೇಡಿ ಅನ್ನಲಿ ನೋಡೊಣ? ಎಲ್ಲ ಕಾಂಗ್ರೆಸ್‌ನವರು ಕೂಡ ದೈವ ಭಕ್ತರೇ. ಆದ್ರೆ, ಅದು ಕೇವಲ ಚುನಾವಣೆಗೆ ಸೀಮಿತವಾಗಿದೆ ಎಂದರು.
ರಾಹುಲ್ ಗಾಂಧಿ ಉತ್ತರ ಭಾರತದ ಪಪ್ಪು ಆದ್ರೆ ಉದಯನಿಧಿ ದಕ್ಷಿಣ ಭಾರತದ ಪಪ್ಪು: ಅಣ್ಣಾಮಲೈ ವ್ಯಂಗ್ಯ
ಅಯೋಧ್ಯೆಯಲ್ಲಿ ಕಾಂಗ್ರೆಸ್‌ನವರೇ ಕ್ಯೂ ನಿಂತಿರ್ತಾರೆ: ಇನ್ನು ದೇಶದಲ್ಲಿ ಚುನಾವಣೆ ಮುಗಿಯುತ್ತಿದ್ದಂತೆ ಎಲ್ಲ ದೇವಸ್ಥಾನಗಳಲ್ಲೂ ಇವರೇ ಕಾಣಿಸ್ತಾರೆ. ಈಗ ಶ್ರೀರಾಮ ಬಿಜೆಪಿಗೆ ಮಾತ್ರ ಸೀಮಿತನಾ ಅಂತಿದಾರೆ. ರಾಮ ಮಂದಿರ ಕಟ್ತೀವಿ ಅಂದರೆ, ಚುನಾವಣೆ ಸಂದರ್ಭದಲ್ಲಿ ನಿಮಗೆ ರಾಮ ಮಂದಿರ ನೆನಪ ಆಗುತ್ತೆ ಅಂತಿದ್ದರು. ಜನವರಿ ತಿಂಗಳಲ್ಲಿ ಅಯೋಧ್ಯೆಯಲ್ಲಿ ನಮಗೆಲ್ಲರಿಗಿಂತ ಮುಂಚೆ ಕಾಂಗ್ರೆಸ್‌ನವರೇ ಕ್ಯೂ ನಿಂತಿರ್ತಾರೆ. ಇದು ಸಂತೋಷ ನಮಗೆ, ತಪ್ಪು ಅನ್ನಲ್ಲ. ತಿದ್ದುಕೊಳ್ತಿದಾರೆ, ಎಂತೆಂಥ ರಾಕ್ಷಸರು ಉಳಿದ್ರೇನು. ಆ ಲೆಕ್ಕದಲ್ಲಿ ಈ ಸ್ಟಾಲೀನ್, ಪ್ರಿಯಾಂಕ್ ಖರ್ಗೆ ಯಾವ ಲೆಕ್ಕ ಎಂದು ಹೇಳಿದರು.