ಸ್ಯಾಂಡಲ್ವುಡ್ ನಟ ಜಗ್ಗೇಶ್ ಅವರು ರಾಜಕಾರಣಿಯಾಗಿಯೂ ಸಕ್ರಿಯರಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅವರು ಅನೇಕ ವಿಚಾರಗಳನ್ನು ಹಂಚಿಕೊಳ್ಳುತ್ತಾರೆ. ರಿಪಬ್ಲಿಕ್ ಆಫ್ ಭಾರತ್ ಮರು ನಾಮಕರಣಕ್ಕೆ ತಮ್ಮದೇ ಆದಂತಹ ಅನಿಸಿಕೆಯನ್ನು ಹಂಚಿಕೊಂಡಿದ್ದು, ಈ ಬಗ್ಗೆ ಟ್ವೀಟ್ ಮಾಡಿ ಗಮನ ಸೆಳೆದಿದ್ದಾರೆ.
ಸ್ಯಾಂಡಲ್ವುಡ್ ನಟ ಜಗ್ಗೇಶ್ ಅವರು ರಾಜಕಾರಣಿಯಾಗಿಯೂ ಸಕ್ರಿಯರಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅವರು ಅನೇಕ ವಿಚಾರಗಳನ್ನು ಹಂಚಿಕೊಳ್ಳುತ್ತಾರೆ. ರಿಪಬ್ಲಿಕ್ ಆಫ್ ಭಾರತ್ ಮರು ನಾಮಕರಣಕ್ಕೆ ತಮ್ಮದೇ ಆದಂತಹ ಅನಿಸಿಕೆಯನ್ನು ಹಂಚಿಕೊಂಡಿದ್ದು, ಈ ಬಗ್ಗೆ ಟ್ವೀಟ್ ಮಾಡಿ ಗಮನ ಸೆಳೆದಿದ್ದಾರೆ. ‘ಯುಗ ಸೃಷ್ಟಿಯ ಸಮಯದಿಂದ ನಮ್ಮ ದೇಶದ ಹೆಸರು ಭಾರತ’ ಎಂದು ಜಗ್ಗೇಶ್ ಅವರು ಪೋಸ್ಟ್ ಮಾಡಿದ್ದಾರೆ.
‘ಸಹಸ್ರಾರು ಏಕೆ, ಯುಗ ಸೃಷ್ಟಿಯ ಸಮಯದಿಂದ ನಮ್ಮ ದೇಶದ ಹೆಸರು ಭಾರತ. ಬೆಳಗಲಿ ಭಾರತ ಭವ್ಯವಾಗಿ. ಭಗವದ್ಗೀತೆಯ ಭೋದನೆಯಂತೆ. ಉಳಿಯಲಿ ಸನಾತನ ಧರ್ಮ ಭಾರತವಾಸಿಯ ರಕ್ತದ ಕಣಕಣದಲ್ಲಿ. ಬಿಡಿಸಿಕೊಳ್ಳಲಿ ಸಹಸ್ರ ಸಂವತ್ಸರ ದಾಸ್ಯಗುಣದಿಂದ. ಶಾಶ್ವತ ವಿಶ್ವ ಗುರುವಾಗಲಿ ಭಾರತ. ಸಂಭವಾಮಿ ಯುಗೆ ಯುಗೆ. ಜೈ ಶ್ರೀರಾಮ’ ಎಂದು ಜಗ್ಗೇಶ್ ಅವರು ಟ್ವೀಟ್ ಮಾಡಿದ್ದಾರೆ. ‘ಜಯ ಭಾರತ ಜನನಿಯ ತನುಜಾತೆ. ಜಯ ಹೇ ಕರ್ನಾಟಕ ಮಾತೆ. ಭಾರತ್ ಮಾತಾ ಕೀ ಜೈ’ ಎಂದು ಕರ್ನಾಟಕ ಬಿಜೆಪಿ ಟ್ವೀಟ್ ಮಾಡಿದ್ದು ಅದನ್ನು ಜಗ್ಗೇಶ್ ರೀ-ಟ್ವೀಟ್ ಮಾಡಿದ್ದಾರೆ.
ಸಹಸ್ರಾರು ಏಕೆ ಯುಗ ಸೃಷ್ಠಿಯ ಸಮಯದಿಂದ ನಮ್ಮ ದೇಶದ ಹೆಸರು .
ಬೆಳಗಲಿ ಭವ್ಯವಾಗಿ ಭೋಧನೆಯಂತೆ.
ಉಳಿಯಲಿ
ಭಾರತವಾಸಿಯ ರಕ್ತದ ಕಣಕಣದಲ್ಲಿ.
"ಬಿಡಿಸಿಕೊಳ್ಳಲಿ ಸಹಸ್ರ ಸಂವತ್ಸರ ದಾಸ್ಯಗುಣದಿಂದ"
ಶಾಶ್ವತ ವಿಶ್ವ ಗುರುವಾಗಲಿ
"ಸಂಭವಾಮಿ ಯುಗೆ ಯುಗೆ"
ಜೈ ಶ್ರೀರಾಮ🙏 pic.twitter.com/u0DYtR3mPy
ಪ್ರಧಾನಿ ಮೋದಿ 'ಗೇಮ್ ಚೇಂಜರ್ಸ್' ಅಲ್ಲ 'ನೇಮ್ ಚೇಂಜರ್ಸ್': ಇಂಡಿಯಾ ಹೆಸರು ಬದಲಾವಣೆಗೆ ಸಚಿವ ಪ್ರಿಯಾಂಕ್ ವಾಗ್ದಾಳಿ
ಭಾರತ್ ಹೆಸರಿಗೆ ನಟ ಅಮಿತಾಭ್ ಬೆಂಬಲ: ದೇಶದ ಹೆಸರು ಮರುನಾಮಕರಣದ ವಿವಾದದ ನಡೆಯುತ್ತಿರುವ ನಡುವೆಯೇ ನಟ ಅಮಿತಾಭ್ ಬಚ್ಚನ್ ತಮ್ಮ ಟ್ವೀಟರ್‌ನಲ್ಲಿ ‘ಭಾರತ’ಕ್ಕೆ ಬೆಂಬಲ ಸೂಚಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿದ ಅವರು,‘ಭಾರತ್ ಮಾತಾ ಕಿ ಜೈ’ (ಭಾರತ ಮಾತೆಗೆ ಜಯವಾಗಲಿ) ಎಂದು ಬರೆದುಕೊಂಡಿದ್ದಾರೆ. ಇವರ ಟ್ವೀಟ್ ಬೆನ್ನಲ್ಲೇ ಅಭಿಮಾನಿಗಳು ಭಾರಿ ಮೆಚ್ಚುಗೆ ಸೂಚಿಸಿದ್ದು, ತಮ್ಮ ಖಾತೆಗಳಲ್ಲಿ ಭಾರತ್ ಮಾತಾ ಕಿ ಜೈ ಎಂದು ಬರೆದುಕೊಳ್ಳುವುದರ ಮೂಲಕ ತಮ್ಮ ಬೆಂಬಲವನ್ನು ಸೂಚಿಸಿದ್ದಾರೆ.
ಜಾಲತಾಣದಲ್ಲಿ ಹಾಸ್ಯಭರಿತ ಚರ್ಚೆ: ಜಿ20 ಆಮಂತ್ರಣ ಪತ್ರಿಕೆಯಲ್ಲಿ ಪ್ರೆಸಿಡೆಂಟ್ ಆಫ್ ಭಾರತ ಎಂದು ನಮೂದಿಸಿರುವುದರಿಂದ ಇಂಡಿಯಾ ಎಂಬ ಹೆಸರನ್ನು ಭಾರತ ಎಂದು ಬದಲಿಸಲಾಗುತ್ತದೆ ಎಂಬ ವದಂತಿಗಳು ಹಬ್ಬಿವೆ. ಇದರ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಹಾಸ್ಯಭರಿತವಾದ ಚರ್ಚೆಗಳು ಆರಂಭವಾಗಿವೆ. ಒಂದು ವೇಳೆ ಭಾರತ ಎಂದು ಹೆಸರು ಬದಲಾದರೆ ಇಂಡಿಯಾ ಹೆಸರನ್ನು ಹೊಂದಿರುವ ಸಂಸ್ಥೆಗಳು ಬದಲಾಗಲಿವೆ ಎಂದು ಹಲವರು ಪೋಸ್ಟ್ ಮಾಡಿದ್ದಾರೆ. ಇಸ್ರೋ ಬಿಸ್ರೋ ಎಂದು ಬದಲಾಗಲಿದೆ. ಐಐಎಂ- ಬಿಐಎಂ ಎಂದು, ಐಐಟಿ- ಬಿಐಟಿ, ಎಐಐಎಂಎಸ್- ಎಬಿಐಎಂಸ್, ಆರ್‌ಬಿಐ- ಆರ್‌ಬಿಬಿ ಎಂದು ಬದಲಾಗಲಿದೆ ಎಂದು ಪೋಸ್ಟ್‌ಗಳನ್ನು ಮಾಡಲಾಗಿದೆ.
ಜನರ ಭಾವನೆಗಳ ಜೊತೆ ಕೇಂದ್ರ ಸರ್ಕಾರ ಚೆಲ್ಲಾಟ: ಭಾರತ್ ಮರುನಾಮಕರಣಕ್ಕೆ ಸಚಿವ ಕೃಷ್ಣ ಬೈರೇಗೌಡ ವ್ಯಂಗ್ಯ
ಅದೇ ರೀತಿ ಬಿಸಿಸಿಐ ಎಂಬುದು ‘ಭಾರತ್ ಕಂಟ್ರೋಲಿಂಗ್ ಕ್ರಿಕೆಟ್ ಇಂಟರ್‌ನ್ಯಾಷನಲಿ ಎಂದಾಗಲಿದೆ ಎಂದು ಟ್ವೀಟರ್ ಬಳಕೆದಾರರೊಬ್ಬರು ಹೇಳಿದ್ದಾರೆ. ಬ್ರಿಕ್ಸ್ ಕೂಟಕ್ಕೆ ಅರ್ಜೆಂಟೀನಾ, ಈಜಿಪ್‌್ಟ, ಇಥಿಯೋಪಿಯಾ, ಇರಾನ್, ಸೌದಿ ಅರೇಬಿಯಾ ಮತ್ತು ಯುಎಇಗಳನ್ನು ಆಹ್ವಾನಿಸಿದರೆ ಅದರ ಹೆಸರು ‘ಬಾರ್ಬಿಕ್ಯೂ’ ಎಂದಾಗುತ್ತದೆ ಎಂದು ಟ್ವೀಟ್ ಮಾಡಲಾಗಿದೆ. ಅದೇ ರೀತಿ ‘ಭಾರತ್ ಕಾ ರಹನೆ ವಾಲಾ ಹೂ’ ಹಾಡು ವೈರಲ್ ಆಗಿದೆ. ಭಾರತ್ ಕುಮಾರ್ ಎಂದು ಕರೆಯಲ್ಪಡುವ ನಟ ಮನೋಜ್ ಕುಮಾರ್ ಇಂದು ಎಲ್ಲರಿಗಿಂತ ಹೆಚ್ಚು ಖುಷಿಯಾಗಲಿದೆ ಎಂಬ ಟ್ವೀಟ್ ವೈರಲ್ ಅಗಿದೆ.