HDKಗೆ ಇನ್ನೆರಡು ಬಾರಿ ಸಿಎಂ, ಜಿಟಿಡಿ ಹೇಳಿಕೆ ಗೂಡಾರ್ಥ!

By Suvarna NewsFirst Published Mar 8, 2020, 2:29 PM IST
Highlights

ಇದೇನಾಯ್ತು ಜಿಟಿ ದೇವೇಗೌಡರಿಗೆ?/ ಯು ಟರ್ನ್ ಹೊಡೆದ ಮಾಜಿ ಸಚಿವ/ ನಾನು ಜೆಡಿಎಸ್ ನಲ್ಲೇ ಇದ್ದೇನೆ/ ಕುಮಾರಸ್ವಾಮಿಗೆ ಇನ್ನೇರಡು ಸಾರಿ ಸಿಎಂ ಆಗುವ ಅವಕಾಶ ಇದೆ/

ಮೈಸೂರು(ಮಾ. 08)  HDK ಒಂದಲ್ಲ 2 ಬಾರಿ ಸಿಎಂ ಆಗುವ ಅವಕಾಶವಿದೆ ಹೀಗೆ ಹೇಳಿದ್ದು ಜಿಟಿ ದೇವೇಗೌಡ. ಜೆಡಿಎಸ್ ನಿಂದ ಒಂದು ಕಾಲು ಹೊರಗೆ ಇಟ್ಟಿದ್ದಾರೆ ಎಂದು ಸುದ್ದಿಯಾಗಿದ್ದ ಜಿಟಿ ದೇವೇಗೌಡ ಇಂಥ ಹೇಳಿಕೆ ನೀಡಿರುವುದು ಮತ್ತೊಂದಷ್ಟು ಸುದ್ದಿಯಾಗುವಂತೆ ಮಾಡಿದೆ.

ಕುಮಾರಸ್ವಾಮಿ ಅವರಿಗೆ ದೈವ ಬಲವಿದೆ ಬೇರೆ ಯಾರು ಬೇಡ. ಎಲ್ಲರೂ ಅಧಿಕಾರದ ರಾಜಕಾರಣ ಮಾಡುತ್ತಿದ್ದಾರೆ. ತತ್ವ ಸಿದ್ದಾಂತ ಯಾವ ಪಕ್ಷದಲ್ಲೂ ಉಳಿದಿಲ್ಲ.
ಬಿಜೆಪಿ ಕಾಂಗ್ರೆಸ್ ಜೆಡಿಎಸ್ ಯಾವ ಪಕ್ಷದಲ್ಲೂ ಉಳಿದಿಲ್ಲ ಎಂದು ಹೇಳಿದ್ದಾರೆ.

ನಾನು ಕುಮಾರಸ್ವಾಮಿ ನಾವು ಹೇಗಿದ್ದೆವೋ ಹಾಗೆಯೇ ಇದ್ದೇವೆ. ನಾವು ಚೇಂಜ್ ಆಗಿಲ್ಲಾ ಅವರು ಚೇಂಜ್ ಆಗಿಲ್ಲಾ. ನಾನು ಜೆಡಿಎಸ್ ನಿಂದ ಗೆದ್ದಿದ್ದೇನೆ. ಮೂರು ವರ್ಷ ಅವಧಿ ಇನ್ನೂ ಇದೆ. ಜೆಡಿಎಸ್‌ನಲ್ಲೇ ಇರುತ್ತೇನೆ ಎಲ್ಲೂ ಹೋಗಲು ಸಾಧ್ಯವಿಲ್ಲ. ಇಡೀ ದೇಶದಲ್ಲಿ ರಾಜಕೀಯ ಬದಲಾವಣೆ ನಿರಂತರವಾಗಿ ನಡೆಯುತ್ತಿರುತ್ತದೆ.
ಕಾರ್ಯಕರ್ತರು ಗಟ್ಟಿಯಾಗಿದ್ದಾರೆ. ಪಕ್ಷ ಗಟ್ಟಿಯಾಗಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಎಲ್ಲರೂ ಅವಕಾಶಕ್ಕೆ ಬೇರೆ ಪಕ್ಷಕ್ಕೆ ಹೋಗ್ತಾರೆ. ಎಲ್ಲರೂ ಅಧಿಕಾರಕ್ಕೆ ಹೋಗ್ತಾರೆ ಎಂದು ಹೇಳಿದರು.

ಜೆಡಿಎಸ್‌ ನಿಂದ ಹೊರಟ ಮತ್ತೊಮ್ಮ ಮಾಸ್ ಲೀಡರ್!

ಈ ರಾಜಕೀಯ ಬದಲಾವಣೆಯನ್ನು ಜನರು ಒಪ್ಪಿದ್ದಾರೆ. ಯಡಿಯೂರಪ್ಪ ನಾಲ್ಕು ಬಾರಿ ಮುಖ್ಯಮಂತ್ರಿ ಆದರು. ಕುಮಾರಸ್ವಾಮಿ ಅವರಿಗೆ ಇನ್ನು ವಯಸ್ಸಿದೆ.
ಮುಂದೆ ಕುಮಾರಸ್ವಾಮಿಗೆ ಅವಕಾಶ ಸಿಗಲಿದೆ ಎಂದು ಹೇಳಿದರು.

ರಾಜ್ಯ ಬಜೆಟ್ ಬಗ್ಗೆ ಆಡಳಿತ ಪಕ್ಷದ ಶಾಸಕರಿಂದಲೇ ಅಸಮಾಧಾನ ವಿಚಾರ. ರಾಜ್ಯದ ಹಣಕಾಸು ಪರಿಸ್ಥಿತಿ ಸರಿಯಿಲ್ಲದ ಪರಿಣಾಮ ಈ ರೀತಿ ಆಗಿದೆ. ಕೇಂದ್ರ ಸರ್ಕಾರದಿಂದ ಅನುದಾನ ಕಡಿತವಾಗಿದೆ. ನಾನು ಸಹ ಪೆರಿಫರಲ್ ರಿಂಗ್ ರೋಡ್ ಮತ್ತು ಮೈಸೂರು ಅಭಿವೃದ್ಧಿಗೆ 100 ಕೋಟಿ ರೂ. ಅನುದಾನ ಕೇಳಿದ್ದೆ.
ಆದರೆ ಕೊಟ್ಟಿಲ್ಲ. ಉಮೇಶ್ ಖತ್ತಿ ಕೂಡ ಅವರ ಭಾಗಕ್ಕೆ ಅನ್ಯಾಯವಾಗಿದೆ  ಎಂದಿದ್ದಾರೆ. ಆದರೆ ಎಲ್ಲವನ್ನೂ ಸರಿದೂಗಿಸಿಕೊಂಡು ಹೋಗುವಾಗ ಈ ರೀತಿ ಆಗುತ್ತದೆ ಎಂದು ಹೇಳಿದರು. 

click me!