Vijayanagara: ಬೂಟು ನೆಕ್ಕುವ ಚಾಳಿ ಇರೋ ಸಿದ್ದರಾಮಯ್ಯ: ನಳಿನ್‌ ಕುಮಾರ್‌ ಕಟೀಲ್‌ ವಾಗ್ದಾಳಿ!

By Govindaraj S  |  First Published May 30, 2022, 9:17 PM IST

2023ರ ಸಾರ್ವತ್ರಿಕ ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿ ಫುಲ್ ಆ್ಯಕ್ಟಿವ್ ಆಗಿದೆ. ನಿತ್ಯ ಒಂದೊಂದು ಜಿಲ್ಲೆಯಲ್ಲಿ ಒಂದೊಂದು ಸಮುದಾಯದ ಜನರನ್ನು ಸೇರಿಸಿ ಕಾರ್ಯಕ್ರಮವನ್ನು ಮಾಡೋ ಮೂಲಕ ಕಾರ್ಯಕರ್ತರನ್ನು ಹುರಿದುಂಬಿಸೋ ಕೆಲಸ ಮಾಡುತ್ತಿದೆ.


ವರದಿ: ನರಸಿಂಹ ಮೂರ್ತಿ ಕುಲಕರ್ಣಿ, ಏಷ್ಯಾನೆಟ್ ಸುವರ್ಣ ನ್ಯೂಸ್

ವಿಜಯನಗರ (ಮೇ.30): 2023ರ ಸಾರ್ವತ್ರಿಕ ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿ ಫುಲ್ ಆ್ಯಕ್ಟಿವ್ ಆಗಿದೆ. ನಿತ್ಯ ಒಂದೊಂದು ಜಿಲ್ಲೆಯಲ್ಲಿ ಒಂದೊಂದು ಸಮುದಾಯದ ಜನರನ್ನು ಸೇರಿಸಿ ಕಾರ್ಯಕ್ರಮವನ್ನು ಮಾಡೋ ಮೂಲಕ ಕಾರ್ಯಕರ್ತರನ್ನು ಹುರಿದುಂಬಿಸೋ ಕೆಲಸ ಮಾಡುತ್ತಿದೆ. ಆ ಪ್ರಕಾರ ಇದೀಗ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯಲ್ಲಿರೋ ಅತಿಹೆಚ್ಚು ಎಸ್ಪಿ ಕ್ಷೇತ್ರಗಳನ್ನು ಗೆಲ್ಲುವ ಉದ್ದೇಶದಿಂದ ತೋರಣಗಲ್ಲಿನ ಖಾಸಗಿ ಹೋಟೆಲ್‌ನಲ್ಲಿ ಎಸ್ಪಿ ಮೋರ್ಚಾ ರಾಜ್ಯ ಕಾರ್ಯಕಾರಿಣಿಯನ್ನು ಆಯೋಜನೆ ಮಾಡಲಾಗಿತ್ತು. ಕಾರ್ಯಕಾರಿಣಿಯನ್ನು ಉದ್ಘಾಟನೆ ಮಾಡಿದ ಬಿಜೆಪಿ ರಾಜ್ಯಧ್ಯಕ್ಷ  ನಳಿನ್ ಕುಮಾರ್ ಕಟೀಲ್ ಕಾರ್ಯಕರ್ತರನ್ನು ಹುರಿದುಂಬಿಸೋದಕ್ಕಿಂತ ಕಾಂಗ್ರೆಸ್ ಮತ್ತು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ಮಾಡಿದ್ದೇ ಹೆಚ್ಚಾಗಿತ್ತು.
 
ಸಿದ್ದರಾಮಯ್ಯ ವಿರುದ್ದ ರೋಷಾವೇಷದಲ್ಲಿ ವಾಗ್ದಾಳಿ ನಡೆಸಿದ ಕಟೀಲ್: ಕಾರ್ಯಕಾರಿಣಿ ವೇದಿಕೆಯಲ್ಲಿ ರೋಷಾವೇಷದಲ್ಲಿ ಮಾತನಾಡದಿ ಬಿಜೆಪಿ ರಾಜ್ಯಧ್ಯಕ್ಷ ನಳೀನ್ ಕುಮಾರ ಕಟೀಲ್ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಎಗ್ಗಮಗ್ಗ ತರಾಟೆಗೆ ತೆಗೆದುಕೊಂಡರು. ಕೇವಲ ಮತ ಬ್ಯಾಂಕ್ ಗೋಸ್ಕರ ಸಿದ್ದರಾಮಯ್ಯ ಭಯೋತ್ಪಾದಕರ ಕಾಲು ನೆಕ್ಕೋದ್ರ ಜೊತೆ ಬಿಕ್ಷಾಟನೆ ಮಾಡುವ ಸ್ಥಿತಿಗೆ ಹೋಗಿದ್ದಾರೆ. ಸಿದ್ದರಾಮಯ್ಯ ಚಿಂತನೆ ರಾವಣದ್ದು ಮುಖ ಮಾತ್ರ ಸಿದ್ದರಾಮಯ್ಯನದ್ದು, ಹೀಗಾಗಿ ಮೊದಲು ಚಾಮುಂಡಿ ಕ್ಷೇತ್ರದಿಂದ ಓಡಿಸಿದ್ರು. ಇದೀಗ ಬಾದಾಮಿಯಿಂದಲೂ ಜನರು ಓಡಿಸೋ ಪ್ರಯತ್ನ ಮಾಡುತ್ತಿದ್ದಾರೆ. ಹೀಗಾಗಿ ರಾಜ್ಯದ ಯಾವ ಕ್ಷೇತ್ರದಲ್ಲೂ ಸ್ಪರ್ಧೆ ಮಾಡಿದ್ರು ಈ ಬಾರಿ ಸಿದ್ದರಾಮಯ್ಯ ಅವರನ್ನು ಜನರು ಓಡಿಸುತ್ತಾರೆಂದರು. 
 
Vijayanagaraದಲ್ಲಿ ಸಮಗ್ರ ನೀರಾವರಿಗಾಗಿ ಪಾದಯಾತ್ರೆ , ಸ್ವಾಮೀಜಿಗಳ ಬೆಂಬಲ

Tap to resize

Latest Videos

undefined

ಕಾಂಗ್ರೆಸ್‌ನಲ್ಲಿರೋರು  ಜಾಮೀನಿನ ಮೇಲಿದ್ದಾರೆ: ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷೆ ಯಾವ ಕಾರಣಕ್ಕಾಗಿ ಬೇಲ್ ಮೇಲೆ ಇದ್ದಾರೆ?. ನಿಮ್ಮ ರಾಷ್ಟ್ರೀಯ ಮಹಾರಾಜ ಉಪಾಧ್ಯಕ್ಷರು ರಾಹುಲ್ ಗಾಂಧಿ ಯಾಕೆ ಬೇಲ್ ಮೇಲೆ ಇದ್ದಾರೆ?  ರಾಹುಲ್ ಗಾಂಧಿ ಭಾವಾ ರಾಬರ್ಟ್ ವಾದ್ರಾ ಬೇಲ್ ಮೇಲೆ ಇದ್ದಾರೆ.  ರಾಜ್ಯ ಕಾಂಗ್ರೆಸ್ ರಾಜ್ಯಾಧ್ಯಕ್ಷರೂ ಕೂಡ ಬೇಲ್ ಬೇಲ್ ಮೇಲಿದ್ದಾರೆ, ಈಗ ಚಾರ್ಜ್ ಶೀಟ್ ಹಾಕಲಾಗಿದೆ. ಇವರೆಲ್ಲ ಏನು ಸ್ವಾತಂತ್ರ್ಯ ಹೊರಾಟ ಮಾಡಿ ಜೈಲಿಗೆ ಹೋಗಿದ್ರಾ ಅಥವಾ ಬೇಲ್ ಪಡೆದಿದ್ದಾರಾ? ಎಂದು ಕಟೀಲ್ ಪ್ರಶ್ನಿಸಿದ್ರು. ಅಲ್ಲದೇ ಇವತ್ತು ಕಾಂಗ್ರೆಸ್ ಸೇರಬೇಕು ಅಂದ್ರೆ ಅವನ ಮೇಲೆ 50 ಕ್ರಿಮಿನಲ್ ಕೇಸ್ ಇರಬೇಕು. ಭ್ರಷ್ಟರ ಪಾರ್ಟಿ ಕಾಂಗ್ರೆಸ್, ಕ್ರಿಮಿನಲ್ ಗಳ ಪಾರ್ಟಿ‌ ಕಾಂಗ್ರೆಸ್, ಉಗ್ರವಾದಿಗಳ ಪಾರ್ಟಿ ಕಾಂಗ್ರೆಸ್ ಎಂದು ವಾಗ್ದಾಳಿ ನಡೆಸಿದರು.
 
ಶ್ರೀರಾಮುಲು ತಡವಾಗಿದ್ದಕ್ಕೆ ರಾಜ್ಯಧ್ಯಕ್ಷರ ಅಸಮಾಧಾನ?: ಬಳ್ಳಾರಿ ಜಿಲ್ಲೆಯ ತೋರಣಗಲ್‌ನಲ್ಲಿ ನಡೆಯುತ್ತಿರುವ ಬಿಜೆಪಿ ಎಸ್ಟಿ ಮೋರ್ಚಾ ಕಾರ್ಯಕಾರಿಣಿ ಸಭೆಗೆ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್  ಆಗಮಿಸಿ ಕಾರ್ಯಕಾರಿಣಿ ಉದ್ಘಾಟನೆ ಮಾಡಿ ಭಾಷಣ ಮುಗಿಸಿದ್ರು ಎಸ್ಪಿ ಸಮುದಾಯದ ಮುಖಂಡ ಹಾಗೂ ಬಳ್ಳಾರಿ ಉಸ್ತುವಾರಿ ಸಚಿವ ಶ್ರೀರಾಮುಲು ಕಾರ್ಯಕ್ರಮಕ್ಕೆ ಬರಲೇ ಇಲ್ಲ. ಏಕಾಂಗಿಯಾಗಿ ವೇದಿಕೆ ಏರಿದ ಕಟೀಲ್ ಗೆ ಬಳ್ಳಾರಿ ಸಂಸದ ದೇವೇಂದ್ರಪ್ಪ ಮಾತ್ರ ಸಾಥ್ ನೀಡಿದ್ರು. ಅಲ್ಲದೇ ಬಳ್ಳಾರಿ ಎಸ್ಟಿ ಸಮುದಾಯ ದಿಂದ ಆಯ್ಕೆಯಾದ ಶಾಸಕರು ಹಾಗೂ ಸಚಿವರು ಗೈರಾಗಿರೋದು ಎದ್ದು ಕಾಣುತ್ತಿತ್ತು. ಇನ್ನೂ ಕಟೀಲ್ ಭಾಷಣ ಮುಗಿಯುತ್ತಿದ್ದಂತೆ ಕಾರ್ಯಕ್ರಮಕ್ಕೆ ಆಗಮಿಸಿದ ಶ್ರೀರಾಮುಲು ಅವರು ಕಟೀಲ್ ಅವರ ಮಾತನಾಡಿಸಿದರು. ಅಷ್ಟ ಹೊತ್ತಿಗಾಗಲೇ ತಮಗೆ ಲೇಟಾಗಿದೆ ಎಂದು ಕಟೀಲ್ ಹೊರಟು ಹೋದರು. ನಂತರ ವೇದಿಕೆಯಲ್ಲಿ ಶ್ರೀರಾಮುಲು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
 
Vijayanagara: ಹೊಸಪೇಟೆ ಸರ್ಕಾರಿ ಕಾಲೇಜಿನಲ್ಲಿ 3 ಕೋಟಿ ರೂಪಾಯಿ ಗುಳುಂ!

ಎಸ್ಟಿ ಮೀಸಲಾತಿಯನ್ನು ನಮ್ಮ ಸರ್ಕಾರದ ಅವಧಿ ಮುಗಿಯೋದ್ರೊಳಗೆ ಕೊಡ್ತೇವೆ: ಇನ್ನೂ ಸಚಿವ ಶ್ರೀರಾಮುಲು ತಮ್ಮ ಭಾಷಣದೂದ್ದಕ್ಕೂ ಎಸ್ಟಿ ಮೀಸಲಾತಿ ವಿಚಾರದಲ್ಲಿ ತಾವು ಕೊಟ್ಟ ಮಾತಿನ ವಿಚಾರವನ್ನೇ ಪ್ರಸ್ತಾಪಿಸಿದ್ರು. ನಮ್ಮ ಸರ್ಕಾರ ಮೀಸಲಾಯಿ ಕೊಡೋದು ಪಕ್ಕ ಆದ್ರೇ ಕೆಲ ತಾಂತ್ರಿಕ ತೊಂದರೆಗಳಿವೆ ಅದನ್ನೆಲ್ಲವನ್ನು ನಿವಾರಣೆ ಮಾಡೋ ಮೂಲಕ ಮೀಸಲಾತಿ ಕೋಡೋ ಪ್ರಯತ್ನ ಮಾಡುತ್ತಿದ್ದೇವೆ. ಆದ್ರೇ ನಮ್ಮ ಸಮುದಾಯದಲ್ಲಿ ಕೆಲವರು ಒಡಕು ತರೋ ಪ್ರಯತ್ನ ಮಾಡುತ್ತಿದ್ದಾರೆ. ಕೊಟ್ಟ ಮಾತನ್ನು ತಪ್ಪಿದ ಶ್ರೀರಾಮುಲು ಎಂದು ಬಿಂಬಿಸೋ ಪ್ರಯತ್ನ ಮಾಡುತ್ತಿದ್ದಾರೆ. ಆದ್ರೇ ಇದೆಲ್ಲವೂ ಸುಳ್ಳು ನಾನು ಸಮುದಾಯದ ಪರವೇ ಇದ್ದೇ ಇರುತ್ತೇವೆ ಎಂದು ಹೇಳಿದರು.

click me!