'ಮುನಿ'ದ ರತ್ನ ಮತ್ತೆ ಕಾಂಗ್ರೆಸ್‌ಗೆ? ಸುರೇಶ್ ಬಿಚ್ಚಿಟ್ಟ ಗುಟ್ಟು!

By Suvarna News  |  First Published Oct 1, 2020, 6:18 PM IST

ಆರ್ ಆರ್ ನಗರ ಉಪಚುನಾವಚಣೆ/ ಮುನಿತತ್ನ ಕಾಂಗ್ರೆಸ್‌ ಸೇರ್ತಾರಾ? ಮುನಿರತ್ನ ಅವರಿಗೆ ಬಿಜೆಪಿ ಮುನಿಯುತ್ತಾ?  ಗರಿಗೆದರಿದ ರಾಜಕಾರಣ


ಬೆಂಗಳೂರು(ಅ. 01) ಚುನಾವಣಾ ಆಯೋಗ  ಶಿರಾ ಮತ್ತು ಆರ್ ಆರ್ ನಗರ ಉಪಚುನಾವಣೆ ಘೋಷಣೆ ಮಾಡಿದ ನಂತರ ರಾಜಕೀಯ ಚಟುವಟಿಕೆ ಬಿರುಸುಗೊಂಡಿದೆ. ಒಂದು ಕಡೆ ಬಿಜೆಪಿಯಿಂದ ಆರ್ ಆರ್‌ ನಗರ ಕ್ಷೇತ್ರಕ್ಕೆ ಮುನಿರತ್ನ ಅವರೇ ನಿಲ್ಲುತ್ತಾರೆ ಎಂಬುದು ಪಕ್ಕಾ ಆಗಿದ್ದರೂ ಹೈಕಮಾಂಡ್ ಅಧಿಕೃತ ಮಾಡಿಲ್ಲ.

"

Tap to resize

Latest Videos

ಈ ನಡುವೆ ಆರ್‌ ಆರ್ ನಗರದಲ್ಲಿ ಕಾಂಗ್ರೆಸ್ ಮುಖಂಡರು ಸಭೆ ನಡೆಸಿದ್ದಾರೆ.  ಆರ್.ಆರ್.ನಗರ ಕ್ಷೇತ್ರದ ಕಾಂಗ್ರೆಸ್ ಮುಖಂಡರ ಸಭೆ ಮುಕ್ತಾಯವಾಗಿದ್ದು ಸಭೆಯ ಬಳಿಕ ಸಂಸದ ಡಿ.ಕೆ.ಸುರೇಶ್ ಹೇಳಿಕೆ ನೀಡಿದ್ದಾರೆ.

ಕ್ಷೇತ್ರದ ಸ್ಥಳೀಯ ಕಾರ್ಯಕರ್ತರ ಸಭೆ ನಡೆಸಿದ್ದೇನೆ. ಸಭೆಯಲ್ಲಿ ಎಲ್ಲರ ಅಭಿಪ್ರಾಯ ತಿಳಿಸಿದ್ದಾರೆ. ಯಾರಿಗೆ ಟಿಕೆಟ್ ಕೊಟ್ರೂ ಕೆಲಸ ಮಾಡ್ತೇವೆ ಅಂದಿದ್ದಾರೆ. ಸಮರ್ಥ ಅಭ್ಯರ್ಥಿ ಕೊಡಿ ಎಂದು ಕೇಳಿದ್ದಾರೆ. ಮಾಗಡಿ ಬಾಲಕೃಷ್ಣ, ರಕ್ಷಾ ರಾಮಯ್ಯ, ಕೃಷ್ಣಪ್ಪ ಅನೇಕರು ಹೆಸರು ಬಂದಿವೆ ಎಂದು ತಿಳಿಸಿದರು.

ಶಿರಾ ಜೆಡಿಎಸ್ ಅಭ್ಯರ್ಥಿ ಯಾರು? ಕುತೂಹಲಕ್ಕೆ ಫುಲ್ ಸ್ಟಾ ಪ್ ಇಟ್ಟ ಕುಮಾರಸ್ವಾಮಿ

ಎಲ್ಲರನ್ನೂ ಒಟ್ಟುಗೂಡಿಸಿಕೊಂಡು ಹೋಗುವವರನ್ನ ಆಯ್ಕೆ ಮಾಡ್ತೇವೆ. ಕಾರ್ಯಕರ್ತರು ಪ್ರತಿ‌ ಬೂತ್ ನಲ್ಲಿದ್ದಾರೆ. ಕೆಲವು ಸಮಸ್ಯೆ, ಬೆದರಿಕೆ ಬಗ್ಗೆ ನನ್ನ‌ ಗಮನಕ್ಕೆ ತಂದಿದ್ದಾರೆ. ಆಸೆ,ಅಮಿಷಗಳ ಬಗ್ಗೆ ನನ್ನ‌ಗಮನಕ್ಕೆ ತಂದಿದ್ದಾರೆ. ನಮ್ಮ ಕಾರ್ಯಕರ್ತರು ಎಲ್ಲವನ್ನೂ ತಿಳಿಸಿದ್ದಾರೆ. ಕುಸುಮಾ ರವಿ‌ ಹೆಸರು ಪ್ರಸ್ತುತ ವಾಗುತ್ತಿದೆ.  ಅದರ ಬಗ್ಗೆ ನನಗೆ ಹೆಚ್ಚಿನ ಮಾಹಿತಿಯಿಲ್ಲ. ನಾನು ಸ್ಪರ್ಧೆ ಮಾಡಲ್ಲ.  ಚುನಾವಣಾ ಜವಾಬ್ದಾರಿಯನ್ನ ಹೊತ್ತುಕೊಳ್ಳುತ್ತೇನೆ ಎಂದು ಸುರೇಶ್ ಹೇಳಿದರು.

ಇನ್ನೊಂದು ಕಡೆ ಬಿಜೆಪಿಯಿಂದ ಟಿಕೆಟ್ ಸಿಗದೆ ಇದ್ದರೆ ಮುನಿರತ್ನ ಕಾಂಗ್ರಸ್ ಕಡೆ ಮುಖ ಮಾಡಲಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ಈ ಬಗ್ಗೆಯೂ ಪ್ರತಿಕ್ರಿಯೆ  ನೀಡಿದ ಸುರೇಶ್ ಮುನಿರತ್ನಂ ನನ್ನ ಸಂಪರ್ಕಕ್ಕೆ ಬಂದಿಲ್ಲ. ಅವರನ್ನ ಸೇರಿಸಿಕೊಳ್ಳೋದು  ಪಕ್ಷದ ನಾಯಕರು ತೀರ್ಮಾನ ಮಾಡ್ತಾರೆ. ಕ್ಷೇತ್ರದ ಮತದಾರರು ನಿರ್ಧಾರ ಮಾಡ್ತಾರೆ.. ಮುನಿರತ್ನಂ ಗೆ ಟಿಕೆಟ್ ಸಿಗಲ್ಲ ಅಂತ ಅವರ ಕಾರ್ಯಕರ್ತರೇ ಹೇಳ್ತಿದ್ದಾರೆ ಎಂದು ಬಿಜೆಪಿ ಕಡೆಯೇ ಬಾಣ ಬಿಟ್ಟರು.

ಮುನಿರತ್ನಂ ನನಗೆ ಒಳ್ಳೆಯ ಸ್ನೇಹಿತ. ರಾಜಕೀಯವಾಗಿ ಮಾತ್ರ ನನಗೆ ಶತ್ರು. ಸ್ನೇಹಿತ ಅಲ್ಲ ಅಂತ ಹೇಳೋಕೆ ಆಗುತ್ತಾ?  ಅವರು ನನ್ನ ಉತ್ತಮ ಸ್ನೇಹಿತ,ಆಗಲೂ ಈಗಲೂ‌ ಅಷ್ಟೇ. ಡಿಕೆ ಸುರೇಶ್ ಅವರೇ ಅಭ್ಯರ್ಥಿ ಅಂದುಕೊಳ್ಳಿ. ಕಾಂಗ್ರೆಸ್ ಪಕ್ಷ ನನ್ನನ್ನೇ ಕಣಕ್ಕಿಳಿಸುತ್ತಿದೆ ಅಂದು ಕೊಳ್ಳಿ ಎಂದು ಅಡ್ಡ ಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡಿದರು.
 

click me!