ರಾಜರಾಜೇಶ್ವರಿ ನಗರದ ಉಪಚುನಾವಣೆಗೆ ಅಭ್ಯರ್ಥಿ ಆಯ್ಕೆಗೆ ಮೂರು ಪಕ್ಷಗಳು ಅಂತಿಮ ಕಸರತ್ತಿನಲ್ಲಿ ತೊಡಗಿದೆ. ಬಿಜೆಪಿ ಈಗಾಗಲೇ ಎರಡು ಹೆಸರನ್ನು ಅಂತಿಮಗೊಳಿಸಿ ಹೈಕಮಾಂಡ್ ಗೆ ಕಳುಹಿಸಿದೆ. ಅದೇ ರೀತಿ ಕಾಂಗ್ರೆಸ್ ಪಕ್ಷದಲ್ಲೂ ಸಭೆಗಳು, ಚರ್ಚೆಗಳು ನಡೆಯುತ್ತಿದೆ.
ಬೆಂಗಳೂರು, (ಅ.02): ನವೆಂಬರ್ 3 ರಂದು ನಡೆಯಲಿರುವ ಆರ್. ಆರ್ ನಗರ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾರು ಎಂಬುವುದು ಕುತೂಹಲ ಕೆರಳಿಸಿದೆ. ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಪ್ರ್ಲಾನ್‌ನಲ್ಲಿದ್ದಾರೆ.
ಈ ಹಿನ್ನಲೆಯಲ್ಲಿ ಕೆಪಿಸಿಸಿ ಕಚೇರಿಯಲ್ಲಿ ಇಂದು (ಶುಕ್ರವಾರ) ಹಿರಿಯ ನಾಯಕರು ಸಭೆ ನಡೆಸಿದ್ದಾರೆ. ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಸಭೆ ನಡೆಯುತ್ತಿದ್ದು, ಮಾಜಿ ಸಚಿವ ರಾಮಲಿಂಗಾ ರೆಡ್ಡಿ, ಚೆಲುವರಾಯಸ್ವಾಮಿ ಭಾಗಿಯಾಗಿದ್ದಾರೆ. ಅದಲ್ಲದೆ ಟಿಕೆಟ್ ಆಕಾಂಕ್ಷಿಯಾಗಿರುವ ಮಾಜಿ ಸಚಿವ ಮಾಗಡಿ ಬಾಲಕೃಷ್ಣ ಕೂಡಾ ಸಭೆಯಲ್ಲಿ ಹಾಜರಾಗಿದ್ದು, ಹಿರಿಯ ನಾಯಕರ ಜೊತೆ ಚರ್ಚೆ ನಡೆಸುತ್ತಿದ್ದಾರೆ.
'ಕಾಂಗ್ರೆಸ್‌ನಿಂದ RR ನಗರಕ್ಕೆ ಅಚ್ಚರಿ ಅಭ್ಯರ್ಥಿ' ಸೂಚನೆ ಕೊಟ್ಟ ಕಾಂಗ್ರೆಸ್ ಲೀಡರ್
ಹೀಗಾಗಿ ಮಾಗಡಿ ಬಾಲಕೃಷ್ಣ ಅವರನ್ನೇ ಆರ್.ಆರ್ ನಗರ ಕ್ಷೇತ್ರಕ್ಕೆ ಅಭ್ಯರ್ಥಿ ಮಾಡುತ್ತಾರೆ ಎನ್ನಲಾಗಿದೆ. ಆರ್.ಆರ್.ನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಗಾಗಿ ಮಾಗಡಿ ಬಾಲಕೃಷ್ಣ, ರಕ್ಷಾ ರಾಮಯ್ಯ, ಪ್ರಿಯಾ ಕೃಷ್ಣ ಹೆಸರುಗಳು ಗುರುವಾರದ ಸಭೆಯಲ್ಲಿ ಕೇಳಿಬಂದಿದ್ದವು.
ದಿವಂಗತ ಐಎಎಸ್ ಅಧಿಕಾರಿ ಡಿ.ಕೆ.ರವಿ ಅವರ ಪತ್ನಿ ಕುಸುಮಾ ಅವರು ಕೂಡಾ ಆಕಾಂಕ್ಷಿ ಆಗಿದ್ದಾರೆ. ಆದ್ರೆ, ಅತ್ತ ಡಿ.ಕೆ. ರವಿ ಅವರ ತಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚುನಾವಣೆಗೆ ನನ್ನ ಮಗನ ಹೆಸರು ಹೇಳುಕೊಂಡು ನಿಲ್ಲಬಾರದು ಎಂದು ಸೊಸೆ ಕುಸುಮಾಗೆ ಎಚ್ಚರಿಕೆ ಕೊಟ್ಟಿದ್ದಾರೆ.
RR ನಗರ ಬೈಎಲೆಕ್ಷನ್: ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಡಿ.ಕೆ.ರವಿ ಪತ್ನಿ ಕುಸುಮ
ಒಂದು ವೇಳೆ ಕುಸುಮಾ ಅವನ್ನ ಅಭ್ಯರ್ಥಿಯನ್ನಾಗಿ ಮಾಡಿದ್ರೆ ಬಿಜೆಪಿ ಡಿ.ಕೆ. ರವಿ ಅವರ ತಾಯಿಯನ್ನು ಹೆತ್ತಿ ಕಟ್ಟುವ ಭಯ ಕಾಂಗ್ರೆಸ್ ನಾಯಕರಿಗಿದೆ. ಈ ಹಿನ್ನೆಲೆಯಲ್ಲಿ ಕೈ ನಾಯಕರು ಎಲ್ಲಾ ಆಯಾಮಗಳಲ್ಲಿ ಚಿಂತನೆಗಳನ್ನ ನಡೆಸಿದ್ದಾರೆ.ಇದರಿಂದ ಕೊನೆಗಳಿಗೆಯಲ್ಲಿ ಕಾಂಗ್ರೆಸ್ ಯಾರಿಗೆ ಮಣೆ ಹಾಕುತ್ತೆ ಎನ್ನುವುದು ಭಾರೀ ಕುತೂಹಲ ಮೂಡಿಸಿದೆ.