ಜೆಡಿಎಸ್ ಮುಖಂಡ ಹನುಮಂತರಾಯಪ್ಪ ಪುತ್ರಿ ಕಾಂಗ್ರೆಸ್ ಗೆ ಬರೋದು ಪಕ್ಕಾ/ ಡಿ.ಕೆ.ರವಿ ಪತ್ನಿ ಕುಸುಮಾರನ್ನು ಕಾಂಗ್ರೆಸ್ ಕರೆತರಲು ಅಂತಿಮಗೊಂಡ ಮಾತುಕತೆ/ ಹಿರಿಯ ಕಾಂಗ್ರೆಸ್ ಮುಖಂಡ ರಮೇಶ್ ಕುಮಾರ್ ನೇತೃತ್ವದಲ್ಲಿ ನಡೆದ ಸಭೆ ಸಫಲ/ ಹನುಮಂತರಾಯಪ್ಪ ಜೊತೆಗೆ ರಮೇಶ್ ಕುಮಾರ್ ನಡೆಸಿದ ಮಾತುಕತೆ ಯಶಸ್ವಿ.
ಬೆಂಗಳೂರು(ಅ. 02) ಜೆಡಿಎಸ್ ನಲ್ಲಿ ಗುರುತಿಸಿಕೊಂಡಿದ್ದ ಹನುಮಂತರಾಯಪ್ಪ ಪುತ್ರಿ ಕಾಂಗ್ರೆಸ್ ಗೆ ಬರೋದು ಪಕ್ಕಾ ಆಗಿದೆ.
ಐಎಎಸ್ ಅಧಿಕಾರಿ ಡಿಕೆ.ರವಿ ಪತ್ನಿ ಕುಸುಮಾರನ್ನು ಕಾಂಗ್ರೆಸ್ ಕರೆತರಲು ಮಾತುಕತೆ ಅಂತ್ಯವಾಗಿದೆ. ಹಿರಿಯ ಕಾಂಗ್ರೆಸ್ ಮುಖಂಡ ರಮೇಶ್ ಕುಮಾರ್ ನೇತೃತ್ವದಲ್ಲಿ ನಡೆದ ಸಭೆ ಸಫಲವಾಗಿದೆ.
ಹನುಮಂತರಾಯಪ್ಪ ಜೊತೆಗೆ ರಮೇಶ್ ಕುಮಾರ್ ನಡೆಸಿದ ಮಾತುಕತೆ ಯಶಸ್ವಿಯಾಗಿದೆ. ಚುನಾವಣಾ ರಾಜಕಾರಣಕ್ಕೆ ಸೈ ಎಂದಿರುವ ಡಿ.ಕೆ.ರವಿ ಪತ್ನಿ ಕುಸುಮಾ ಆರ್ ಆರ್ ನಗರದಿಂದ ಸ್ಪರ್ಧೆ ಮಾಡುವುದು ನಿಚ್ಚಳವಾಗಿದೆ.
ಆರ್ ಆರ್ ನಗರಕ್ಕೆ ಮುನಿರತ್ನ ಜತೆಗೆ ಬಿಜೆಪಿಯಿಂದ ಮತ್ತೊಂದು ಹೆಸರು
ರಮೇಶ್ ಕುಮಾರ್ ನಿವಾಸದಲ್ಲಿ ನಡೆದ ಮಾತುಕತೆ ಬಳಿಕ ಸಿದ್ಧರಾಮಯ್ಯ ಅವರನ್ನು ಹನುಮಂತರಾಯಪ್ಪಭೇಟಿ ಮಾಡಿದ್ದಾರೆ. ಹನುಮಂತರಾಯಪ್ಪರನ್ನು ಸಿದ್ಧರಾಮಯ್ಯ ನಿವಾಸಕ್ಕೆ ರಮೇಶ್ ಕುಮಾರ್ ಕರೆದುಕೊಂಡು ಬಂದಿದ್ದರು.
ವಿಧಾನಪರಿಷತ್ ಸದಸ್ಯ ನಸೀರ್ ಅಹಮದ್, ರಮೇಶ್ ಕುಮಾರ್ ಸಮ್ಮುಖದಲ್ಲಿ ಮಾತುಕತೆಯಾಗಿದೆ. R R ನಗರ ವಿಧಾನಸಭಾ ಕ್ಷೇತ್ರದ ಟಿಕೆಟ್ ಕುಸುಮಾಗೆ ನೀಡುವಂತೆ ಹನುಮಂತರಾಯಪ್ಪ ಮನವಿ ಮಾಡಿದ್ದಾರೆ. ಪಕ್ಷದಲ್ಲಿ ತಿರ್ಮಾನ ಮಾಡಿ ಹೇಳುತ್ತೇನೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ಸೋಮವಾರ ನಡೆಯುವ ಪಕ್ಷದ ನಾಯಕರ ಸಮ್ಮುಖದಲ್ಲಿ ಕುಸುಮಾ ಕಾಂಗ್ರೆಸ್ ಸೇರ್ಪಡೆಗೆ ಪ್ಲಾನ್ ಸಿದ್ಧಮಾಡಿಕೊಂಡಿರುವ ಮಾಹಿತಿ ಇದೆ.