ಕೈಯಲ್ಲಿ ಶುರುವಾಯ್ತು ಬಣ ರಾಜಕೀಯ: ಸಿದ್ದುಗೆ ತೊಡೆ ತಟ್ಟಿದ ಡಿಕೆಶಿ, ಪರಂ

By Web DeskFirst Published Dec 20, 2018, 4:38 PM IST
Highlights

ಕೈ ಪಾಳೆಯದಲ್ಲಿ ಸಂಕಟ ತಂದ ಸಂಪುಟ ವಿಸ್ತರಣೆ ವಿಚಾರ..! ಸಚಿವ ಸ್ಥಾನಕ್ಕೆ ಹೆಚ್ಚಿನ ಸಂಖ್ಯೆಯ ಶಾಸಕರ ಒತ್ತಡ..! ಬೆಂಬಲಿಗ ಶಾಸಕರಿಗೆ ಸಚಿವ ಸ್ಥಾನ ಕೊಡಿಸಲು ಜೋರಾಗಿದೆ ಬಣ ರಾಜಕೀಯ. ಸಂಪುಟಕ್ಕೆ ಬೆಂಬಲಿಗ ಶಾಸಕರನ್ನ ಸೇರಿಸಲು ನಾಯಕರ ಲಾಬಿ. ಸಿದ್ದು ಬಣಕ್ಕೆ ಸಚಿವ ಸ್ಥಾನಗಳು ಸಿಗದಂತೆ ನೋಡಿಕೊಳ್ತಿದ್ದಾರೆ ಡಿಸಿಎಂ, ಡಿಕೆಶಿ.

ಬೆಂಗಳೂರು,[ಡಿ.20]: ಕೈ ಪಾಳೆಯದಲ್ಲಿ ಈಗ ಸಂಪುಟ ಸಂಕಟ ಆರಂಭವಾಗಿದೆ. ಸಂಪುಟ ವಿಸ್ತರಣೆ ಆದ್ರೆ ಒಂದು ರೀತಿಯ ಸಂಕಟ, ಆಗದಿದ್ರೆ ಶಾಸಕರ ಬಂಡಾಯ ಎನ್ನುವಂತಾಗಿದೆ. 

ಸಂಪುಟ ವಿಸ್ತರಣೆ ಮಾಡದೇ ಲೋಕಸಭೆ ಚುನಾವಣೆ ವರೆಗೆ ವಿಸ್ತರಣೆ ಮುಂದೂಡಿದ್ರೂ, ಕೈ ಪಾಳೆಯಕ್ಕೆ ಸಂಕಟ ತಪ್ಪಿದ್ದಲ್ಲ. ಡಿ. 22 ಕ್ಕೆ ಸಂಪುಟ ವಿಸ್ತರಣೆಗಾಗಿ ಕಾದು ಕುಳಿತಿರುವ ಸಚಿವಾಕಾಂಕ್ಷಿ ಶಾಸಕರು, ವಿಸ್ತರಣೆ ಆಗದಿದ್ರೆ ಬಿಜೆಪಿ ಜೊತೆ ಮಾತುಕತೆಗೆ ಸಿದ್ಧವಾಗಿದ್ದಾರೆ. 

ಸಂಪುಟ ವಿಸ್ತರಣೆ: 5 ಸಚಿವರಿಗೆ ಕೊಕ್, 11 ಹೊಸ ಮುಖಗಳಿಗೆ ಮಣೆ?

ಈ ಹಿನ್ನಲೆಯಲ್ಲಿ ಮೈತ್ರಿ ಸರ್ಕಾರವನ್ನ ಉಳಿಸಿಕೊಳ್ಳುವುದರ ಜೊತೆಗೆ ಬೆಂಬಲಿಗರಿಗೆ ಸ್ಥಾನ ಮಾನ ಕೊಡಿಸಲು ಕೈ ನಾಯಕರು ಸರ್ಕಸ್ ನಲ್ಲಿ ತೊಡಗಿದ್ದಾರೆ.

ಮತ್ತೊಂದೆಡೆ ತಮ್ಮ-ತಮ್ಮ ಬೆಂಬಲಿಗ ಶಾಸಕರಿಗೆ ಸಚಿವ ಸ್ಥಾನ ಕೊಡಿಸಲು ಬಣ ರಾಜಕೀಯ ಶುರವಾಗಿದ್ದು,  ಕೆಪಿಸಿಸಿ ಅಧ್ಯಕ್ಷ ಗುಂಡುರಾವ್, ಸಿದ್ದರಾಮಯ್ಯ ಸಂಪುಟ ವಿಸ್ತರಣೆಯ ಪರವಾಗಿದ್ರೆ, ಹಿರಿಯ ಸಚಿವರಾದ ಡಿ.ಕೆ ಶಿವಕುಮಾರ್, ಡಿಸಿಎಂ ಪರಮೇಶ್ವರ್ ಸಂಪುಟ ವಿಸ್ತರಣೆಗೆ ವಿರೋಧವಾಗಿ ನಿಂತಿದ್ದಾರೆ.

ಟಗರುಗೆ ಟಕ್ಕರ್! ಮೈತ್ರಿ ಸರ್ಕಾರದ ಟ್ರಬಲ್‌ಶೂಟರ್‌ಗೇ ಶುರುವಾಗಿದೆ ಟ್ರಬಲ್!

ಅಷ್ಟೇ ಅಲ್ಲದೇ ಸಧ್ಯಕ್ಕೆ ಸಂಪುಟ ವಿಸ್ತರಣೆ ಬೇಡ. ಒಂದು ವೇಳೆ ಈಗ ಸಂಪುಟ ವಿಸ್ತರಣೆ ಮಾಡಿದರೆ ಸಚಿವ ಸ್ಥಾನ ವಂಚಿತ ಶಾಸಕರು ಬಂಡಾಯ ಹೇಳುವುದು ಖಾತ್ರಿ ಎಂದು ಪರಮೇಶ್ವರ್ ಹಾಗೂ ಡಿ.ಕೆ. ಶಿವಕುಮಾರ್ ಅವರು ಕೈ ಹೈಕಮಾಂಡ್ ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ ಎನ್ನಲಾಗಿದೆ.

ಇನ್ನು ಸಿದ್ದರಾಮಯ್ಯ ಬಣದ ಶಾಸಕರಿಗೆ ಸಚಿವ ಸ್ಥಾನ ಸಿಗದಂತೆ ಪರಮೇಶ್ವರ್ ಡಿ.ಕೆ ಶಿವಕುಮಾರ್ ಬಣ ರಣತಂತ್ರ ರೂಪಿಸ್ತಿರೋದು ಸಿದ್ದು ಬೆಂಬಲಿಗರ ಶಾಸಕರನ್ನ ಸಿಟ್ಟಿಗೆಬ್ಬಿಸಿದೆ.  ಸಿದ್ದರಾಮಯ್ಯಗೆ ಹಿನ್ನೆಡೆ ಆದ್ರೆ ಮೈತ್ರಿ ಸರ್ಕಾರಕ್ಕೆ ಸಿದ್ದರಾಮಯ್ಯ ಬಣದ ಶಾಸಕರೇ ಮುಳುವಾಗಬಹುದು ಎಂಬ ರಾಜಕೀಯ ಲೆಕ್ಕಾಚಾರಗಳು ಸುದ್ದಿಯಲ್ಲಿವೆ.

ಆ ಒಂದು ಭರವಸೆ... ತಣ್ಣಗಾದ ಅತೃಪ್ತ ಶಾಸಕರು!

ಆದ್ರೆ ಯಾರಿಗೆ ಸಚಿವ ಸ್ಥಾನ ಕೊಡೊದು ಎಂಬುದೇ ಕೈ ಪಾಳೆಯಕ್ಕೆ ದೊಡ್ಡ ತಲೆನೋವಾಗಿದೆ. ಒಬ್ಬರಿಗೆ ಕೊಟ್ರೆ ಇನ್ನೊಬ್ಬರು ಬಂಡಾಯ ಏಳ್ತಾರೆ. ಆಪರೇಷನ್ ಕಮಲ ನಡೆದ್ರೆ ಮೈತ್ರಿ ಸರ್ಕಾರ ಬಿದ್ದು ಹೋಗುತ್ತೆ ಅನ್ನೋ ಚಿಂತೆ ಕಾಂಗ್ರೆಸ್ ವರಿಷ್ಠರಲ್ಲಿದೆ. 

click me!